
ಪ್ರಸ್ತುತ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ (Pakistan Super League) ಟಿ20 ಕ್ರಿಕೆಟ್‌ನ ಎಲ್ಲಾ ದಾಖಲೆಗಳು ಉಡೀಸ್ ಆಗಿವೆ. ನಿನ್ನೆ ಅಂದರೆ, ಮಾ.11 ರಂದು ನಡೆದ ಮುಲ್ತಾನ್ ಸುಲ್ತಾನ್ಸ್ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ (Multan Sultans and Quetta Gladiators) ತಂಡಗಳ ನಡುವಿನ ಪಂದ್ಯದಲ್ಲಿ ಒಟ್ಟು 515 ರನ್ ದಾಖಲಾಗಿದ್ದು, ಇದು ಟಿ20 ಕ್ರಿಕೆಟ್‌ನ (T20 cricket) ನೂತನ ವಿಶ್ವ ದಾಖಲೆಯಾಗಿದೆ. ಈ ಪಂದ್ಯದಲ್ಲಿ ಉಭಯ ತಂಡಗಳಿಂದಲೂ ಬೌಂಡರಿ ಹಾಗೂ ಸಿಕ್ಸರ್‌ಗಳ ಮಳೆಯೇ ಸುರಿಯಿತು. ಈ ಪಂದ್ಯದಲ್ಲಿ ಒಟ್ಟು 45 ಬೌಂಡರಿ ಹಾಗೂ 33 ಸಿಕ್ಸರ್‌ಗಳು ದಾಖಲಾದವು.
ಪಂದ್ಯದ ಕುರಿತು ಮಾತನಾಡುವುದಾದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಲ್ತಾನ್ ತಂಡ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಬರೋಬ್ಬರಿ 262 ರನ್ ಗಳಿಸಿತು. ತಂಡದ ಪರ ಬಿರುಸಿನ ಬ್ಯಾಟಿಂಗ್ ಮಾಡಿದ ಉಸ್ಮಾನ್ ಖಾನ್ 43 ಎಸೆತಗಳಲ್ಲಿ 120 ರನ್ ಬಾರಿಸಿದರು. ಅಲ್ಲದೆ ಕೇವಲ 36 ಎಸೆತಗಳಲ್ಲಿ 100 ರನ್ ಪೂರೈಸುವ ಮೂಲಕ ಪಿಎಸ್ಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ದಾಖಲೆ ಕೂಡ ಮಾಡಿದರು. ಇವರ ಹೊರತಾಗಿ ಮೊಹಮ್ಮದ್ ರಿಜ್ವಾನ್ 29 ಎಸೆತಗಳಲ್ಲಿ 55 ರನ್ ಚಚ್ಚಿದರು.
Virat Kohli: ಇಂದು ಕೊಹ್ಲಿ ಬ್ಯಾಟ್ನಿಂದ ಬರುತ್ತಾ ಶತಕ?: ರೋಚಕತೆ ಸೃಷ್ಟಿಸಿದ ಇಂಡೋ-ಆಸೀಸ್ ನಾಲ್ಕನೇ ಟೆಸ್ಟ್
ಈ ಗುರಿ ಬೆನ್ನಟ್ಟಿದ ಗ್ಲಾಡಿಯೇಟರ್ಸ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 253 ರನ್ ಗಳಿಸಲಷ್ಟೇ ಶಕ್ತವಾಯಿತು. ಗ್ಲಾಡಿಯೇಟರ್ಸ್ ಪರ ಉಮರ್ ಯೂಸುಫ್ 67 ರನ್ ಮತ್ತು ಇಫ್ತಿಕರ್ ಅಹ್ಮದ್ 31 ಎಸೆತಗಳಲ್ಲಿ 53 ರನ್ ಬಾರಿಸಿದರು. ಇನ್ನು ಅಬ್ಬಾಸ್ ಅಫ್ರಿದಿ 47 ರನ್ ನೀಡಿ 5 ವಿಕೆಟ್ ಕಬಳಿಸಿ ಮುಲ್ತಾನ್ ತಂಡದ 9 ರನ್ ಗೆಲುವಿಗೆ ಕಾರಣರಾದರು. ಇದರೊಂದಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:34 am, Sun, 12 March 23