ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನಕ್ಕೆ (Pakistan Team) ಮೊದಲ ಪಂದ್ಯದಲ್ಲೇ ಶಾಕ್ ಸಿಕ್ಕಿದೆ. ಈಗತಾನೇ ಕ್ರಿಕೆಟ್ ಜಗತ್ತಲ್ಲಿ ಅಂಬೆಗಾಲಿಡುತ್ತಿರುವ ಅಮೆರಿಕ ತಂಡವು ಪಾಕಿಸ್ತಾನವನ್ನು ರೋಚಕ ಪಂದ್ಯದಲ್ಲಿ ಸೋಲಿಸಿದೆ. ಈ ಮೂಲಕ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಹಾಗೂ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಸೂಪರ್ 8ಗೆ ಅರ್ಹತೆ ಪಡೆಯಬೇಕು ಎಂಬ ಕನಸು ಕಾಣುತ್ತಿರುವ ಪಾಕಿಸ್ತಾನಕ್ಕೆ ಈ ಸೋಲು ಶಾಕ್ ತಂದಿದೆ. ಸೂಪರ್ 8ಗೆ ಪಾಕ್ ಅರ್ಹತೆ ಪಡೆಯೋದು ಅನುಮಾನ ಎಂದು ಹೇಳಲು ಕಾರಣಗಳು ಇಲ್ಲಿವೆ.
ಗ್ರೂಪ್ Aನಲ್ಲಿ ಇರೋದು ಅಮೆರಿಕ, ಭಾರತ, ಪಾಕಿಸ್ತಾನ, ಕೆನಡಾ ಹಾಗೂ ಐರ್ಲೆಂಡ್. ಈ ಪೈಕಿ ಭಾರತ ಹಾಗೂ ಪಾಕಿಸ್ತಾನ ಸ್ಟ್ರಾಂಗ್ ತಂಡ ಎನಿಸಿಕೊಂಡಿದ್ದವು. ಆದರೆ, ಅಮೆರಿಕ ಯಾರೂ ಊಹಿಸದ ರೀತಿಯಲ್ಲಿ ಪರ್ಫಾರ್ಮೆನ್ಸ್ ನೀಡಿದೆ. ಈ ಸೀಸನ್ನಲ್ಲಿ ಅಮೆರಿಕ ಆಡಿದ ಎರಡು ಪಂದ್ಯಗಳಲ್ಲಿ ಎರಡಕ್ಕೆ ಎರಡೂ ಗೆದ್ದಿದೆ. ಇದು ಪಾಕಿಸ್ತಾನಕ್ಕೆ ಮುಳುವಾಗುವ ಸಾಧ್ಯತೆ ಇದೆ.
The Craze of Cricket Match in USA 🤯
Americans Celebrating Historic Win of their team against #Pakistan #PakvsUSA #USAvsPAK
— Vivek Singh (@VivekSi85847001) June 6, 2024
ಪಾಕಿಸ್ತಾನ ಜೂನ್ 9ರಂದು ಭಾರತ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಪಾಕ್ ಸೋತರೆ ‘ಸೂಪರ್ 8’ರ ಹಾದಿ ಮತ್ತಷ್ಟು ದುರ್ಗಮ ಆಗಲಿದೆ. ಭಾರತದ ಜೊತೆ ಪಾಕ್ ಸೋತು, ಮುಂದೆ ಬರುವ ಕೆನಡಾ ಹಾಗೂ ಐರ್ಲೆಂಡ್ ಮ್ಯಾಚ್ಗಳಲ್ಲಿ ಗೆದ್ದರೂ ಸೂಪರ್ 8ಗೆ ಅರ್ಹತೆ ಪಡೆಯೋ ಸಾಧ್ಯತೆ ಕಡಿಮೆಯೇ ಇರುತ್ತದೆ. ಅಮೆರಿಕ ತಂಡಕ್ಕೆ ಭಾರತ ಹಾಗೂ ಐರ್ಲೆಂಡ್ ಜೊತೆ ಪಂದ್ಯಗಳಿವೆ. ಭಾರತದ ಜೊತೆ ಸೋತು, ಐರ್ಲೆಂಡ್ ಜೊತೆ ಗೆದ್ದರೆ ಪಾಕ್ ಬದಲು ಅಮೆರಿಕ ತಂಡ ಸೂಪರ್ 8ಗೆ ಅರ್ಹತೆ ಪಡೆಯಲಿದೆ. ಇದು ಪಾಕ್ ಕ್ರಿಕೆಟ್ ಪ್ರೇಮಿಗಳಿಗೆ ಆತಂಕ ಮೂಡಿಸಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್ ಆಡಲು ಹೋಗಿ ದಂಧೆಗಿಳಿದ ಪಾಕಿಸ್ತಾನ್ ತಂಡ
ಭಾರತ ಹಾಗೂ ಪಾಕಿಸ್ತಾನದ ಪಂದ್ಯಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಈ ಪಂದ್ಯ ಸಾಕಷ್ಟು ಹೈ ವೋಲ್ಟೇಜ್ ಪಡೆದುಕೊಳ್ಳಲಿದೆ. ಜೂನ್ 9ರಂದು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಈ ಪಂದ್ಯ ಆರಂಭ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.