ಪಾಕಿಸ್ತಾನ್ ತಂಡದಲ್ಲಿ 38 ವರ್ಷದ ಅಫ್ರಿದಿಗೆ ಸ್ಥಾನ..!
Pakistan vs South Africa: ಪಾಕಿಸ್ತಾನ್ ಮತ್ತು ಸೌತ್ ಆಫ್ರಿಕಾ ನಡುವಣ ಸರಣಿಯು ಅಕ್ಟೋಬರ್ 12 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಒಟ್ಟು 8 ಪಂದ್ಯಗಳನ್ನಾಡಲಾಗುತ್ತದೆ. ಮೊದಲಿಗೆ 2 ಪಂದ್ಯಗಳ ಟೆಸ್ಟ್ ಸರಣಿಯ ನಡೆಯಲಿದ್ದು, ಇದಾದ ಬಳಿಕ ಮೂರು ಪಂದ್ಯಗಳ ಏಕದಿನ ಹಾಗೂ ಟಿ20 ಸರಣಿಗಳು ಜರುಗಲಿದೆ.

ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ಪಾಕಿಸ್ತಾನ್ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ 38 ವರ್ಷದ ಆಸಿಫ್ ಅಫ್ರಿದಿ ಕಾಣಿಸಿಕೊಂಡಿರುವುದು ವಿಶೇಷ. ಅಂದರೆ ಇದೇ ಮೊದಲ ಬಾರಿಗೆ ಆಸಿಫ್ ಅಫ್ರಿದಿ ಪಾಕ್ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ದೇಶೀಯ ಟೂರ್ನಿಗಳಲ್ಲಿ ಕಣಕ್ಕಿಳಿಯುತ್ತಿರುವ ಅತ್ಯಂತ ಹಿರಿಯ ಆಟಗಾರನನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಅಚ್ಚರಿ ಮೂಡಿಸಿದ್ದಾರೆ.
ಆಸಿಫ್ ಅಫ್ರಿದಿ ಅಲ್ಲದೆ ಫೈಸಲ್ ಅಕ್ರಮ್ ಮತ್ತು ರೋಹೈಲ್ ನಝೀರ್ ಕೂಡ ಚೊಚ್ಚಲ ಬಾರಿ ಪಾಕ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು 18 ಸದಸ್ಯರುಗಳ ಈ ತಂಡವನ್ನು ಶಾನ್ ಮಸೂದ್ ಮುನ್ನಡೆಸಲಿದ್ದಾರೆ.
ಹಾಗೆಯೇ ಈ ತಂಡದಲ್ಲಿ ಸ್ಟಾರ್ ಆಟಗಾರರಾಗಿ ಬಾಬರ್ ಆಝಂ, ಇಮಾಮ್ ಉಲ್ ಹಕ್, ಮೊಹಮ್ಮದ್ ರಿಝ್ವಾನ್, ಹಸನ್ ಅಲಿ, ಸೌದಿ ಶಕೀಲ್ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಪಾಕ್ ಟಿ20 ತಂಡದ ನಾಯಕ ಸಲ್ಮಾನ್ ಅಲಿ ಅಘಾ ಕೂಡ ಟೆಸ್ಟ್ ಟೀಮ್ನಲ್ಲಿ ಸ್ತಾನ ಪಡೆದಿದ್ದಾರೆ. ಅದರಂತೆ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಪಾಕಿಸ್ತಾನ್ ತಂಡ ಈ ಕೆಳಗಿನಂತಿದೆ…
ಪಾಕಿಸ್ತಾನ್ ಟೆಸ್ಟ್ ತಂಡ: ಶಾನ್ ಮಸೂದ್ (ನಾಯಕ), ಅಮೀರ್ ಜಮಾಲ್, ಅಬ್ದುಲ್ಲಾ ಶಫೀಕ್, ಅಬ್ರಾರ್ ಅಹ್ಮದ್, ಆಸಿಫ್ ಅಫ್ರಿದಿ, ಬಾಬರ್ ಆಝಂ, ಫೈಸಲ್ ಅಕ್ರಮ್, ಹಸನ್ ಅಲಿ, ಇಮಾಮ್-ಉಲ್-ಹಕ್, ಕಮ್ರಾನ್ ಗುಲಾಮ್, ಖುರ್ರಾಮ್ ಷಹಝಾದ್, ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ನೊಮಾನ್ ಅಲಿ, ರೊಹೈಲ್ ನಝೀರ್ (ವಿಕೆಟ್ ಕೀಪರ್), ಸಾಜಿದ್ ಖಾನ್, ಸಲ್ಮಾನ್ ಅಲಿ ಅಘಾ, ಸೌದ್ ಶಕೀಲ್, ಶಾಹೀನ್ ಶಾ ಅಫ್ರಿದಿ.
ಇದನ್ನೂ ಓದಿ: IND vs PAK: ಟೀಮ್ ಇಂಡಿಯಾದಿಂದ ಟಾಸ್ ಫಿಕ್ಸಿಂಗ್: ಗಂಭೀರ ಆರೋಪ..!
ಪಾಕಿಸ್ತಾನ್ vs ಸೌತ್ ಆಫ್ರಿಕಾ ಸರಣಿ ವೇಳಾಪಟ್ಟಿ:
ಪಾಕಿಸ್ತಾನ್ ಮತ್ತು ಸೌತ್ ಆಫ್ರಿಕಾ ನಡುವಣ ಟೆಸ್ಟ್ ಸರಣಿಯು ಅಕ್ಟೋಬರ್ 12 ರಿಂದ ಶುರುವಾಗಲಿದೆ. ಪಾಕ್ನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಒಪಟ್ಟು 2 ಟೆಸ್ಟ್ ಪಂದ್ಯಗಳನ್ನಾಡಲಾಗುತ್ತದೆ. ಇದಾದ ಬಳಿಕ ಉಭಯ ತಂಡಗಳ ನಡುವೆ ಟಿ20 ಮತ್ತು ಏಕದಿನ ಸರಣಿಗಳು ನಡೆಯಲಿದೆ. ಈ ಸರಣಿಗಳ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…
- ಅಕ್ಟೋಬರ್ 12: ಪಾಕಿಸ್ತಾನ್ vs ಸೌತ್ ಆಫ್ರಿಕಾ ಮೊದಲ ಟೆಸ್ಟ್ ಪಂದ್ಯ (ಗಡಾಫಿ ಕ್ರೀಡಾಂಗಣ, ಲಾಹೋರ್)
- ಅಕ್ಟೋಬರ್ 20: ಪಾಕಿಸ್ತಾನ್ vs ಸೌತ್ ಆಫ್ರಿಕಾ ಎರಡನೇ ಟೆಸ್ಟ್ ಪಂದ್ಯ (ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣ)
- ಅಕ್ಟೋಬರ್ 28: ಪಾಕಿಸ್ತಾನ್ vs ಸೌತ್ ಆಫ್ರಿಕಾ ಮೊದಲ ಟಿ20 ಪಂದ್ಯ (ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣ)
- ಅಕ್ಟೋಬರ್ 31: ಪಾಕಿಸ್ತಾನ್ vs ಸೌತ್ ಆಫ್ರಿಕಾ ಎರಡನೇ ಟಿ20 ಪಂದ್ಯ( ಗಡಾಫಿ ಕ್ರೀಡಾಂಗಣ, ಲಾಹೋರ್)
- ನವೆಂಬರ್ 1: ಪಾಕಿಸ್ತಾನ್ vs ಸೌತ್ ಆಫ್ರಿಕಾ ಮೂರನೇ ಟಿ20 ಪಂದ್ಯ (ಗಡಾಫಿ ಕ್ರೀಡಾಂಗಣ, ಲಾಹೋರ್)
- ನವೆಂಬರ್ 4: ಪಾಕಿಸ್ತಾನ್ vs ಸೌತ್ ಆಫ್ರಿಕಾ ಮೊದಲ ಏಕದಿನ ಪಂದ್ಯ (ಇಕ್ಬಾಲ್ ಕ್ರೀಡಾಂಗಣ, ಫೈಸಲಾಬಾದ್)
- ನವೆಂಬರ್ 6: ಪಾಕಿಸ್ತಾನ್ vs ಸೌತ್ ಆಫ್ರಿಕಾ ಎರಡನೇ ಏಕದಿನ ಪಂದ್ಯ (ಇಕ್ಬಾಲ್ ಕ್ರೀಡಾಂಗಣ, ಫೈಸಲಾಬಾದ್)
- ನವೆಂಬರ್ 8: ಪಾಕಿಸ್ತಾನ್ vs ಸೌತ್ ಆಫ್ರಿಕಾ ಮೂರನೇ ಏಕದಿನ ಪಂದ್ಯ (ಇಕ್ಬಾಲ್ ಕ್ರೀಡಾಂಗಣ, ಫೈಸಲಾಬಾದ್)
