ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗಾಗಿ ಪಾಕಿಸ್ತಾನ್ (Pakistan) ತಂಡವು ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ. ಲಾಹೋರ್ನಲ್ಲಿ ನಡೆದ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ನ (PCB) ಕಾರ್ಯಕ್ರಮದಲ್ಲಿ ಪಾಕ್ ತಂಡದ ವರ್ಲ್ಡ್ ಕಪ್ ಜೆರ್ಸಿಯನ್ನು ಪ್ರದರ್ಶಿಸಲಾಗಿದೆ. ಈ ಹಿಂದಿನಂತೆ ಈ ಬಾರಿ ಕೂಡ ಬಾಬರ್ ಪಡೆ ಕಡು ಹಸಿರು ಬಣ್ಣದ ಜೆರ್ಸಿಯಲ್ಲೇ ಕಣಕ್ಕಿಳಿಯಲಿದೆ. ಆದರೆ 1999 ರ ಏಕದಿನ ವಿಶ್ವಕಪ್ ಜೆರ್ಸಿಯಲ್ಲಿ ಕಾಣಿಸಿಕೊಂಡಂತೆ ನೂತನ ಕಿಟ್ ಮುಂಭಾಗದಲ್ಲಿ ನಕ್ಷತ್ರದ ವಿನ್ಯಾಸವನ್ನು ಬಳಸಲಾಗಿದೆ. ಅಲ್ಲದೆ ಹೊಸ ಜೆರ್ಸಿಗೆ ‘ಸ್ಟಾರ್ ನೇಷನ್ ಜೆರ್ಸಿ’ ಎಂದು ಹೆಸರಿಡಲಾಗಿದೆ.
ಆಗಸ್ಟ್ 30 ರಿಂದ ಏಷ್ಯಾಕಪ್ ಶುರುವಾಗಲಿದ್ದು, ಅದಕ್ಕೂ ಮುನ್ನ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಏಕದಿನ ವಿಶ್ವಕಪ್ ಜೆರ್ಸಿಯನ್ನು ಅನಾವರಣಗೊಳಿಸಿರುವುದು ಅಚ್ಚರಿ. ಅದರಲ್ಲೂ ಇದೇ ಮಾದರಿಯ ಜೆರ್ಸಿಯಲ್ಲಿ ಪಾಕ್ ತಂಡ ಏಷ್ಯಾಕಪ್ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಇದಕ್ಕಾಗಿಯೇ ಹೊಸ ಜೆರ್ಸಿ ವಿನ್ಯಾಸವನ್ನು ಪಿಸಿಬಿ ಪ್ರದರ್ಶಿಸಿದೆ.
Introducing the Star Nation Jersey’23 🇵🇰🌟
Pre-order now at https://t.co/TWU32Ta9wL#WearYourPassion pic.twitter.com/kEd44pZXQh
— Pakistan Cricket (@TheRealPCB) August 28, 2023
ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಶುರುವಾಗಲಿದೆ. 10 ದೇಶಗಳ ನಡುವಣ ಈ ಕ್ರಿಕೆಟ್ ಮಹಾಸಮರದ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ.
ಇನ್ನು ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ಅಭಿಯಾನ ಆರಂಭಿಸುವುದು ಅಕ್ಟೋಬರ್ 8 ರಂದು. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
ಹಾಗೆಯೇ ಭಾರತ-ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯವು ಅಕ್ಟೋಬರ್ 14 ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜರುಗಲಿದೆ. ಅಲ್ಲದೆ ಫೈನಲ್ ಪಂದ್ಯ ಕೂಡ ಇದೇ ಮೈದಾನದಲ್ಲಿ ನಡೆಯಲಿದ್ದು, ನವೆಂಬರ್ 19 ರಂದು ಈ ಟೂರ್ನಿಗೆ ತೆರೆ ಬೀಳಲಿದೆ. ಏಕದಿನ ವಿಶ್ವಕಪ್ನ ಸಂಪೂರ್ಣ ವೇಳಾಪಟ್ಟಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.
ಏಷ್ಯನ್ ರಾಷ್ಟ್ರಗಳ ಕ್ರಿಕೆಟ್ ಕದನ ಏಷ್ಯಾಕಪ್ಗಾಗಿ ಕೌಂಟ್ ಡೌನ್ ಶುರುವಾಗಿದೆ. ಆಗಸ್ಟ್ 30 ರಿಂದ ಶುರುವಾಗಲಿರುವ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 2 ರಂದು ಪಾಕಿಸ್ತಾನ್ ವಿರುದ್ಧ ಆಡಲಿದೆ.
ಇದನ್ನೂ ಓದಿ: Asia Cup 2023 Schedule: ಏಷ್ಯಾಕಪ್ ವೇಳಾಪಟ್ಟಿ ಪ್ರಕಟ
ಈ ಬಾರಿಯ ಏಷ್ಯಾಕಪ್ ಹೈಬ್ರೀಡ್ ಮಾದರಿಯಲ್ಲಿ ನಡೆಯಲಿದ್ದು, ಅಂದರೆ 4 ಪಂದ್ಯಗಳು ಪಾಕಿಸ್ತಾನದಲ್ಲಿ ಇನ್ನುಳಿದ ಪಂದ್ಯಗಳು ಶ್ರೀಲಂಕಾದಲ್ಲಿ ಜರುಗಲಿದೆ. ಇಲ್ಲಿ ಭಾರತದ ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯವಹಿಸಲಿದೆ. ಹಾಗೆಯೇ ಫೈನಲ್ ಪಂದ್ಯವು ಸೆಪ್ಟೆಂಬರ್ 17 ರಂದು ಶ್ರೀಲಂಕಾದಲ್ಲೇ ನಡೆಯಲಿದೆ.
Published On - 3:49 pm, Mon, 28 August 23