PAK vs SL ICC World Cup 2023: ಲಂಕಾ ತಂಡಕ್ಕೆ ಸೋಲುಣಿಸಿದ ಪಾಕ್ ಪಡೆ
Pakistan vs Sri Lanka: ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಪರ ಕುಸಾಲ್ ಮೆಂಡಿಸ್ (122) ಹಾಗೂ ಸದೀರ ಸಮರವಿಕ್ರಮ (108) ಶತಕ ಸಿಡಿಸಿದರು. ಈ ಶತಕಗಳೊಂದಿಗೆ ಲಂಕಾ ತಂಡವು 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 344 ರನ್ ಕಲೆಹಾಕಿತು. 345 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡದ ಪರ ಆರಂಭಿಕ ಆಟಗಾರ ಅಬ್ದುಲ್ಲ ಶಫೀಕ್ (113) ಭರ್ಜರಿ ಶತಕ ಬಾರಿಸಿದರು.
ಏಕದಿನ ವಿಶ್ವಕಪ್ನ 8ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ್ ಭರ್ಜರಿ ಜಯ ಸಾಧಿಸಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಪರ ಕುಸಾಲ್ ಮೆಂಡಿಸ್ (122) ಹಾಗೂ ಸದೀರ ಸಮರವಿಕ್ರಮ (108) ಶತಕ ಸಿಡಿಸಿದರು. ಈ ಶತಕಗಳೊಂದಿಗೆ ಲಂಕಾ ತಂಡವು 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 344 ರನ್ ಕಲೆಹಾಕಿತು.
345 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡದ ಪರ ಆರಂಭಿಕ ಆಟಗಾರ ಅಬ್ದುಲ್ಲ ಶಫೀಕ್ (113) ಭರ್ಜರಿ ಶತಕ ಸಿಡಿಸಿದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೊಹಮ್ಮದ್ ರಿಝ್ವಾನ್ ಅಜೇಯ 134 ರನ್ ಬಾರಿಸುವ ಮೂಲಕ 48.2 ಓವರ್ಗಳಲ್ಲಿ ಪಾಕಿಸ್ತಾನ್ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಬಾಬರ್ ಆಝಂ ಪಡೆ ಶ್ರೀಲಂಕಾ ವಿರುದ್ಧ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಾಲ್ ಮೆಂಡಿಸ್(ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಮತೀಶ ಪತಿರಣ, ದಿಲ್ಶನ್ ಮಧುಶಂಕ.
ಪಾಕಿಸ್ತಾನ್ (ಪ್ಲೇಯಿಂಗ್ XI): ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್.
LIVE Cricket Score & Updates
-
PAK vs SL ICC World Cup 2023 Live Score: ಪಾಕಿಸ್ತಾನ್ ತಂಡಕ್ಕೆ ಭರ್ಜರಿ ಜಯ
ದಿಲ್ಶನ್ ಮಧುಶಂಕ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ರಿಝ್ವಾನ್.
ಈ ಫೋರ್ನೊಂದಿಗೆ ಗೆಲುವಿನ ಗುರಿ ಮುಟ್ಟಿದ ಪಾಕಿಸ್ತಾನ್.
ಶ್ರೀಲಂಕಾ– 344/9 (50)
ಪಾಕಿಸ್ತಾನ್– 348/4 (48.2)
ಪಾಕಿಸ್ತಾನ್ ತಂಡಕ್ಕೆ 6 ವಿಕೆಟ್ಗಳ ಭರ್ಜರಿ ಜಯ.
-
PAK vs SL ICC World Cup 2023 Live Score: ಹ್ಯಾಟ್ರಿಕ್ ಫೋರ್
ಮತೀಶ ಪತಿರಾಣ ಎಸೆದ 48ನೇ ಓವರ್ನ ಮೊದಲ ಮೂರು ಎಸೆತಗಳಲ್ಲೂ ಫೋರ್ ಬಾರಿಸಿದ ಇಫ್ತಿಕರ್ ಅಹ್ಮದ್.
ಐದನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಬೌಂಡರಿ ಬಾರಿಸಿದ ಮೊಹಮ್ಮದ್ ರಿಝ್ವಾನ್.
ಪಾಕಿಸ್ತಾನ್ ತಂಡಕ್ಕೆ ಗೆಲ್ಲಲು ಕೇವಲ 1 ರನ್ ಅವಶ್ಯಕತೆ.
SL 344/9 (50)
PAK 344/4 (48)
-
PAK vs SL ICC World Cup 2023 Live Score: ಕೊನೆಯ 3 ಓವರ್ಗಳು ಬಾಕಿ
47 ಓವರ್ಗಳ ಮುಕ್ತಾಯದ ವೇಳೆಗೆ ಪಾಕಿಸ್ತಾನ್ ತಂಡದ ಸ್ಕೋರ್ 325 ರನ್ಗಳು.
ಕ್ರೀಸ್ ನಲ್ಲಿ ಮೊಹಮ್ಮದ್ ರಿಝ್ವಾನ್ ಹಾಗೂ ಇಫ್ತಿಕರ್ ಅಹ್ಮದ್ ಬ್ಯಾಟಿಂಗ್.
ಇನ್ನು ಪಾಕಿಸ್ತಾನ್ ತಂಡಕ್ಕೆ 18 ಎಸೆತಗಳಲ್ಲಿ ಕೇವಲ 20 ರನ್ ಗಳ ಅವಶ್ಯಕತೆ.
SL 344/9 (50)
PAK 325/4 (47)
PAK vs SL ICC World Cup 2023 Live Score: ಪಾಕ್ ತಂಡದ 4ನೇ ವಿಕೆಟ್ ಪತನ
ಮಹೀಶ್ ತೀಕ್ಷಣ ಎಸೆದ 45ನೇ ಓವರ್ನ 3ನೇ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಸೌದ್ ಶಕೀಲ್.
30 ಎಸೆತಗಳಲ್ಲಿ 31 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗ ಸೌದ್.
ಕ್ರೀಸ್ನಲ್ಲಿ ರಿಝ್ವಾನ್ ಹಾಗೂ ಇಫ್ತಿಕರ್ ಬ್ಯಾಟಿಂಗ್.
PAK 314/4 (45)
PAK vs SL ICC World Cup 2023 Live Score: ತ್ರಿಶತಕ ಪೂರೈಸಿದ ಪಾಕಿಸ್ತಾನ್
ದುನಿಲ್ ವೆಲ್ಲಲಾಗೆ ಎಸೆದ 44ನೇ ಓವರ್ನ 4ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಸಿಕ್ಸ್ ಬಾರಿಸಿದ ಮೊಹಮ್ಮದ್ ರಿಝ್ವಾನ್.
ಕ್ರೀಸ್ನಲ್ಲಿ ಸೌದ್ ಶಕೀಲ್ ಹಾಗೂ ಮೊಹಮ್ಮದ್ ರಿಝ್ವಾನ್ ಬ್ಯಾಟಿಂಗ್.
36 ಎಸೆತಗಳಲ್ಲಿ 39 ರನ್ಗಳ ಅವಶ್ಯಕತೆ.
PAK 306/3 (44)
PAK vs SL ICC World Cup 2023 Live Score: ಸೌದ್ ಸ್ವೀಪ್ ಶಾಟ್ ಫೋರ್
ಮಹೀಶ್ ತೀಕ್ಷಣ ಎಸೆದ 43ನೇ ಓವರ್ನ ಕೊನೆಯ ಎಸೆತದಲ್ಲಿ ಸ್ವೀಪ್ ಶಾಟ್ ಮೂಲಕ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಸೌದ್ ಶಕೀಲ್.
ಕ್ರೀಸ್ನಲ್ಲಿ ಸೌದ್ ಶಕೀಲ್ ಹಾಗೂ ರಿಝ್ವಾನ್ ಬ್ಯಾಟಿಂಗ್.
ಕೊನೆಯ 7 ಓವರ್ಗಳಲ್ಲಿ 51 ರನ್ಗಳ ಅವಶ್ಯಕತೆ
PAK 294/3 (43)
PAK vs SL ICC World Cup 2023 Live Score: ಶತಕ ಸಿಡಿಸಿದ ರಿಝ್ವಾನ್
97 ಎಸೆತಗಳಲ್ಲಿ ಶತಕ ಪೂರೈಸಿದ ಮೊಹಮ್ಮದ್ ರಿಝ್ವಾನ್.
ಕ್ರೀಸ್ನಲ್ಲಿ ರಿಝ್ವಾನ್ ಹಾಗೂ ಸೌದ್ ಶಕೀಲ್ ಬ್ಯಾಟಿಂಗ್.
ಪಾಕ್ ತಂಡಕ್ಕೆ ಗೆಲ್ಲಲು 53 ಎಸೆತಗಳಲ್ಲಿ 69 ರನ್ ಗಳ ಅವಶ್ಯಕತೆ.
PAK 276/3 (41.1)
PAK vs SL ICC World Cup 2023 Live Score: ಭರ್ಜರಿ ಸಿಕ್ಸ್ ಸಿಡಿಸಿದ ರಿಝ್ವಾನ್
ಧನಂಜಯ ಡಿಸಿಲ್ವಾ ಎಸೆದ 37ನೇ ಓವರ್ನ 3ನೇ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಮೊಹಮ್ಮದ್ ರಿಝ್ವಾನ್.
37 ಓವರ್ಗಳ ಮುಕ್ತಾಯದ ವೇಳೆಗೆ 251 ರನ್ ಕಲೆಹಾಕಿದ ಪಾಕಿಸ್ತಾನ್.
78 ಎಸೆತಗಳಲ್ಲಿ 94 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ರಿಝ್ವಾನ್ ಹಾಗೂ ಸೌದ್ ಶಕೀಲ್ ಬ್ಯಾಟಿಂಗ್.
PAK 251/3 (37)
PAK vs SL ICC World Cup 2023 Live Score: ಪಾಕ್ ತಂಡದ 3ನೇ ವಿಕೆಟ್ ಪತನ
ಪತಿರಾಣ ಎಸೆತದಲ್ಲಿ ಸ್ಕ್ವೇರ್ನತ್ತ ಬಾರಿಸಿದ ಅಬ್ದುಲ್ಲ ಶಫೀಕ್…ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಹೇಮಂತ.
103 ಎಸೆತಗಳಲ್ಲಿ 113 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಅಬ್ದುಲ್ಲ ಶಫೀಕ್.
ಕ್ರೀಸ್ನಲ್ಲಿ ಮೊಹಮ್ಮದ್ ರಿಝ್ವಾನ್ ಹಾಗೂ ಸೌದ್ ಶಕೀಲ್ ಬ್ಯಾಟಿಂಗ್
PAK 223/3 (34)
PAK vs SL ICC World Cup 2023 Live Score: ಶತಕ ಸಿಡಿಸಿದ ಅಬ್ದುಲ್ಲ ಶಫೀಕ್
ದಿಲ್ಶನ್ ಮಧುಶಂಕ ಎಸೆದ 32ನೇ ಓವರ್ನ 2ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಶಫೀಕ್.
ಈ ಫೋರ್ನೊಂದಿಗೆ 97 ಎಸೆತಗಳಲ್ಲಿ ಶತಕ ಪೂರೈಸಿದ ಅಬ್ದುಲ್ಲ ಶಫೀಕ್.
ಇದು ಏಕದಿನ ಕ್ರಿಕೆಟ್ನಲ್ಲಿ ಅಬ್ದುಲ್ಲ ಶಫೀಕ್ ಅವರ ಮೊದಲ ಶತಕ.
PAK 207/2 (32)
PAK vs SL ICC World Cup 2023 Live Score: 30 ಓವರ್ಗಳು ಮುಕ್ತಾಯ
30 ಓವರ್ಗಳ ಮುಕ್ತಾಯದ ವೇಳೆಗೆ 182 ರನ್ ಕಲೆಹಾಕಿದ ಪಾಕಿಸ್ತಾನ್.
ಇನ್ನು 20 ಓವರ್ಗಳಲ್ಲಿ ಪಾಕಿಸ್ತಾನ್ ತಂಡಕ್ಕೆ ಗೆಲ್ಲಲು 163 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಅಬ್ದುಲ್ಲ ಶಫೀಕ್ (96) ಹಾಗೂ ಮೊಹಮ್ಮದ್ ರಿಝ್ವಾನ್ (55) ಬ್ಯಾಟಿಂಗ್.
PAK 182/2 (30)
PAK vs SL ICC World Cup 2023 Live Score: ಅರ್ಧಶತಕ ಪೂರೈಸಿದ ರಿಝ್ವಾನ್
ಮತೀಶ ಪತಿರಾಣ ಎಸೆದ 29ನೇ ಓವರ್ನ ಮೊದಲ ಎಸೆತದಲ್ಲೇ ಆಫ್ ಸೈಡ್ನತ್ತ ಫೋರ್ ಬಾರಿಸಿದ ಮೊಹಮ್ಮದ್ ರಿಝ್ವಾನ್.
ಈ ಫೋರ್ನೊಂದಿಗೆ 58 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಿಝ್ವಾನ್.
ಕ್ರೀಸ್ನಲ್ಲಿ ಮೊಹಮ್ಮದ್ ರಿಝ್ವಾನ್ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.
PAK 170/2 (29)
PAK vs SL ICC World Cup 2023 Live Score: ಪಾಕಿಸ್ತಾನ್ ಉತ್ತಮ ಬ್ಯಾಟಿಂಗ್
25 ಓವರ್ಗಳಲ್ಲಿ 138 ರನ್ ಕಲೆಹಾಕಿದ ಪಾಕಿಸ್ತಾನ್ ತಂಡ.
ಇನ್ನು 25 ಓವರ್ಗಳಲ್ಲಿ ಪಾಕ್ ತಂಡಕ್ಕೆ ಗೆಲ್ಲಲು 207 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಅಬ್ದುಲ್ಲ ಶಫೀಕ್ (68) ಹಾಗೂ ಮೊಹಮ್ಮದ್ ರಿಝ್ವಾನ್ (39) ಉತ್ತಮ ಬ್ಯಾಟಿಂಗ್.
ಇಮಾಮ್ ಉಲ್ ಹಕ್ (12) ಹಾಗೂ ಬಾಬರ್ ಆಝಂ (10) ಔಟ್.
ಪಾಕಿಸ್ತಾನ್- 138/2 (25)
ಶ್ರೀಲಂಕಾ- 344/9 (50)
PAK vs SL ICC World Cup 2023 Live Score: 20 ಓವರ್ಗಳು ಮುಕ್ತಾಯ
20 ಓವರ್ಗಳ ಮುಕ್ತಾಯದ ವೇಳೆಗೆ 110 ರನ್ ಕಲೆಹಾಕಿದ ಪಾಕಿಸ್ತಾನ್.
59 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅಬ್ದುಲ್ಲ ಶಫೀಕ್ ಉತ್ತಮ ಬ್ಯಾಟಿಂಗ್.
ಇನ್ನು 30 ಓವರ್ಗಳಲ್ಲಿ ಪಾಕಿಸ್ತಾನ್ ತಂಡಕ್ಕೆ 235 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಅಬ್ದುಲ್ಲ ಶಫೀಕ್ (51) ಹಾಗೂ ಮೊಹಮ್ಮದ್ ರಿಝ್ವಾನ್ (28) ಬ್ಯಾಟಿಂಗ್.
PAK 110/2 (20)
PAK vs SL ICC World Cup 2023 Live Score: 15 ಓವರ್ಗಳು ಮುಕ್ತಾಯ
15 ಓವರ್ಗಳಲ್ಲಿ 71 ರನ್ ಕಲೆಹಾಕಿದ ಪಾಕಿಸ್ತಾನ್ ಬ್ಯಾಟರ್ಗಳು.
ಇಮಾಮ್ ಉಲ್ ಹಕ್ (12) ಹಾಗೂ ಬಾಬರ್ ಆಝಂ (10) ವಿಕೆಟ್ ಪಡೆದ ಶ್ರೀಲಂಕಾ ತಂಡ.
2 ವಿಕೆಟ್ ಕಬಳಿಸಿ ಮಿಂಚಿರುವ ಎಡಗೈ ವೇಗಿ ದಿಲ್ಶನ್ ಮಧುಶಂಕ.
ಕ್ರೀಸ್ನಲ್ಲಿ ಮೊಹಮ್ಮದ್ ರಿಝ್ವಾನ್ (10) ಹಾಗೂ ಅಬ್ದುಲ್ಲ ಶಫೀಕ್ (37) ಬ್ಯಾಟಿಂಗ್.
PAK 71/2 (15)
PAK vs SL ICC World Cup 2023 Live Score: ಅರ್ಧಶತಕ ಪೂರೈಸಿದ ಪಾಕ್ ತಂಡ
12 ಓವರ್ಗಳಲ್ಲಿ ಅರ್ಧಶತಕ ಪೂರೈಸಿರುವ ಪಾಕಿಸ್ತಾನ್ ತಂಡ.
ಬಾಬರ್ ಆಝಂ (10) ಹಾಗೂ ಇಮಾಮ್ ಉಲ್ ಹಕ್ (12) ಔಟ್.
ಕ್ರೀಸ್ನಲ್ಲಿ ಮೊಹಮ್ಮದ್ ರಿಝ್ವಾನ್ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.
PAK 55/2 (12)
PAK vs SL ICC World Cup 2023 Live Score: 10 ಓವರ್ಗಳು ಮುಕ್ತಾಯ
ದಿಲ್ಶನ್ ಮಧುಶಂಕ ಎಸೆದ 10ನೇ ಓವರ್ನ 2ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಅಬ್ದುಲ್ಲ ಶಫೀಕ್.
10 ಓವರ್ಗಳ ಮುಕ್ತಾಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 48 ರನ್ ಕಲೆಹಾಕಿದ ಪಾಕಿಸ್ತಾನ್.
ಕ್ರೀಸ್ನಲ್ಲಿ ಮೊಹಮ್ಮದ್ ರಿಝ್ವಾನ್ (3) ಹಾಗೂ ಅಬ್ದುಲ್ಲ ಶಫೀಕ್ (22) ಬ್ಯಾಟಿಂಗ್.
PAK 48/2 (10)
PAK vs SL ICC World Cup 2023 Live Score: ಪಾಕ್ ತಂಡದ 2ನೇ ವಿಕೆಟ್ ಪತನ
ಎಡಗೈ ವೇಗಿ ದಿಲ್ಶನ್ ಮಧುಶಂಕ ಎಸೆದ 8ನೇ ಓವರ್ನ 2ನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಬಾಬರ್ ಆಝಂ.
15 ಎಸೆತಗಳಲ್ಲಿ 10 ರನ್ ಬಾರಿಸಿ ಔಟಾದ ಪಾಕ್ ತಂಡದ ನಾಯಕ.
PAK 37/2 (8)
PAK vs SL ICC World Cup 2023 Live Score: ಆಕರ್ಷಕ ಬೌಂಡರಿ
ದಸುನ್ ಶಾನಕ ಎಸೆದ 7ನೇ ಓವರ್ನ 5ನೇ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಅಬ್ದುಲ್ಲ ಶಫೀಕ್.
ಕ್ರೀಸ್ನಲ್ಲಿ ಬಾಬರ್ ಆಝಂ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.
PAK 36/1 (7)
ಇಮಾಮ್ ಉಲ್ ಹಕ್ (12) ಔಟ್.
PAK vs SL ICC World Cup 2023 Live Score: 5 ಓವರ್ಗಳು ಮುಕ್ತಾಯ
5 ಓವರ್ಗಳ ಮುಕ್ತಾಯದ ವೇಳೆಗೆ 22 ರನ್ ಕಲೆಹಾಕಿದ ಪಾಕಿಸ್ತಾನ್.
ಕ್ರೀಸ್ನಲ್ಲಿ ಬಾಬರ್ ಆಝಂ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.
ಇಮಾಮ್ ಉಲ್ ಹಕ್ (12) ವಿಕೆಟ್ ಪಡೆದ ಶ್ರೀಲಂಕಾ ತಂಡದ ಎಡಗೈ ವೇಗಿ ದಿಲ್ಶನ್ ಮಧುಶಂಕ.
PAK 22/1 (5)
PAK vs SL ICC World Cup 2023 Live Score: ಪಾಕ್ ತಂಡದ ಮೊದಲ ವಿಕೆಟ್ ಪತನ
ದಿಲ್ಶನ್ ಮಧುಶಂಕ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಇಮಾಮ್ ಉಲ್ ಹಕ್. ಥರ್ಡ್ ಮ್ಯಾನ್ ಬೌಂಡರಿಯಲ್ಲಿ ಅತ್ಯುತ್ತಮ ಕ್ಯಾಚ್ ಹಿಡಿದ ಕುಸಾಲ್ ಪೆರೇರಾ.
12 ಎಸೆತಗಳಲ್ಲಿ 12 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಇಮಾಮ್ ಉಲ್ ಹಕ್.
PAK 20/1 (4)
PAK vs SL ICC World Cup 2023 Live Score: ಮೊದಲ ಬೌಂಡರಿ
ದಿಲ್ಶನ್ ಮಧುಶಂಕ ಎಸೆದ 2ನೇ ಓವರ್ನ 4ನೇ ಎಸೆತವನ್ನು ಸ್ಟ್ರೈಟ್ ಡ್ರೈವ್ ಮೂಲಕ ಬೌಂಡರಿಗಟ್ಟಿದ ಇಮಾಮ್ ಉಲ್ ಹಕ್.
ಇದು ಪಾಕ್ ಇನಿಂಗ್ಸ್ನ ಮೊದಲ ಫೋರ್.
ಕ್ರೀಸ್ನಲ್ಲಿ ಇಮಾಮ್ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.
PAK 10/0 (2)
PAK vs SL ICC World Cup 2023 Live Score: ಪಾಕ್ ಇನಿಂಗ್ಸ್ ಆರಂಭ
ಮೊದಲ ಓವರ್ ನಲ್ಲಿ ಕೇವಲ 6 ರನ್ ನೀಡಿದ ಸ್ಪಿನ್ನರ್ ಮಹೀಶ್ ತೀಕ್ಷಣ.
ಕ್ರೀಸ್ನಲ್ಲಿ ಇಮಾಮ್ ಉಲ್ ಹಕ್ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.
PAK 6/0 (1)
ಪಾಕಿಸ್ತಾನ್ ತಂಡಕ್ಕೆ 345 ರನ್ ಗಳ ಗುರಿ ನೀಡಿರುವ ಶ್ರೀಲಂಕಾ.
PAK vs SL ICC World Cup 2023 Live Score: ಶ್ರೀಲಂಕಾ ತಂಡದ ಇನಿಂಗ್ಸ್ ಅಂತ್ಯ
ಹ್ಯಾರಿಸ್ ರೌಫ್ ಎಸೆದ ಕೊನೆಯ ಓವರ್ನ 2ನೇ ಎಸೆತದಲ್ಲಿ ಮಹೀಶ್ ತೀಕ್ಷಣ (0) ಕ್ಲೀನ್ ಬೌಲ್ಡ್.
ಅಂತಿಮ ಎಸೆತದಲ್ಲಿ ದುನಿತ್ ವೆಲ್ಲಲಾಗೆ (10) ಕ್ಯಾಚ್ ಔಟ್.
ಕೊನೆಯ ಓವರ್ನಲ್ಲಿ ಕೇವಲ 1 ರನ್ ನೀಡಿ 2 ವಿಕೆಟ್ ಪಡೆದ ಹ್ಯಾರಿಸ್ ರೌಫ್.
ಶ್ರೀಲಂಕಾ- 344/9 (50)
PAK vs SL ICC World Cup 2023 Live Score: ಲಂಕಾ ತಂಡದ 7ನೇ ವಿಕೆಟ್ ಪತನ
ಹಸನ್ ಅಲಿ ಎಸೆದ 48ನೇ ಓವರ್ನ ಕೊನೆಯ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಸದೀರ ಸಮರವಿಕ್ರಮ.
89 ಎಸೆತಗಳಲ್ಲಿ 108 ರನ್ ಬಾರಿಸಿದ ವಿಕೆಟ್ ಒಪ್ಪಿಸಿದ ಸದೀರ.
ಕ್ರೀಸ್ನಲ್ಲಿ ದುನಿತ್ ವೆಲ್ಲಲಾಗೆ ಹಾಗೂ ಮಹೀಶ್ ತೀಕ್ಷಣ ಬ್ಯಾಟಿಂಗ್.
SL 335/7 (48)
PAK vs SL ICC World Cup 2023 Live Score: ಪಾಕ್ ತಂಡಕ್ಕೆ 6ನೇ ಯಶಸ್ಸು
ಶಾಹೀನ್ ಅಫ್ರಿದಿ ಎಸೆದ 47ನೇ ಓವರ್ನ 3ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಲಾಂಗ್ ಆನ್ನಲ್ಲಿ ಕ್ಯಾಚ್ ನೀಡಿದ ದಸುನ್ ಶಾನಕ.
18 ಎಸೆತಗಳಲ್ಲಿ 12 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಶ್ರೀಲಂಕಾ ತಂಡದ ನಾಯಕ ಶಾನಕ.
ಕ್ರೀಸ್ನಲ್ಲಿ ಸದೀರ ಸಮರವಿಕ್ರಮ ಹಾಗೂ ದುನಿತ್ ವೆಲ್ಲಲಾಗೆ ಬ್ಯಾಟಿಂಗ್.
SL 331/6 (47)
PAK vs SL ICC World Cup 2023 Live Score: ಸದೀರ ಭರ್ಜರಿ ಶತಕ
82 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ ಶತಕ ಪೂರೈಸಿದ ಸದೀರ ಸಮರವಿಕ್ರಮ.
46 ಓವರ್ಗಳಲ್ಲಿ 321 ರನ್ ಕಲೆಹಾಕಿದ ಶ್ರೀಲಂಕಾ.
ಕ್ರೀಸ್ನಲ್ಲಿ ದಸುನ್ ಶಾನಕ ಹಾಗೂ ಸದೀರ ಸಮರವಿಕ್ರಮ ಬ್ಯಾಟಿಂಗ್.
SL 321/5 (46)
PAK vs SL ICC World Cup 2023 Live Score: 45 ಓವರ್ಗಳು ಮುಕ್ತಾಯ
45 ಓವರ್ಗಳ ಮುಕ್ತಾಯದ ವೇಳೆಗೆ 315 ರನ್ ಕಲೆಹಾಕಿದ ಶ್ರೀಲಂಕಾ.
ಕ್ರೀಸ್ನಲ್ಲಿ ಸದೀರ ಸಮರವಿಕ್ರಮ (98) ಹಾಗೂ ದಸುನ್ ಶಾನಕ ಬ್ಯಾಟಿಂಗ್.
ಪಾಕಿಸ್ತಾನ್ ತಂಡದ ಕೊನೆಯ ಐದು ಓವರ್ಗಳು ಮಾತ್ರ ಬಾಕಿ.
SL 315/5 (45)
PAK vs SL ICC World Cup 2023 Live Score: ಭರ್ಜರಿ ಸಿಕ್ಸ್ ಸಿಡಿಸಿದ ಸದೀರ
ಮೊಹಮ್ಮದ್ ನವಾಝ್ ಎಸೆದ 44ನೇ ಓವರ್ನ 3ನೇ ಎಸೆತದಲ್ಲಿ ಡೀಪ್ ಕವರ್ನತ್ತ ಸಿಕ್ಸ್ ಸಿಡಿಸಿದ ಸದೀರ ಸಮರವಿಕ್ರಮ.
ಈ ಸಿಕ್ಸ್ನೊಂದಿಗೆ 300 ರನ್ ಪೂರೈಸಿದ ಶ್ರೀಲಂಕಾ.
ಕ್ರೀಸ್ನಲ್ಲಿ ಸದೀರ ಸಮರವಿಕ್ರಮ (96) ಹಾಗೂ ದಸುನ್ ಶಾನಕ (3) ಬ್ಯಾಟಿಂಗ್.
SL 309/5 (44)
PAK vs SL ICC World Cup 2023 Live Score: ಪಾಕ್ ತಂಡಕ್ಕೆ 5ನೇ ಯಶಸ್ಸು
42ನೇ ಓವರ್ನ ಮೊದಲ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಧನಂಜಯ ಡಿಸಿಲ್ವಾ…ಬೌಂಡರಿ ಲೈನ್ನಲ್ಲಿ ಶಾಹೀನ್ ಅಫ್ರಿದಿ ಉತ್ತಮ ಕ್ಯಾಚ್.
34 ಎಸೆತಗಳಲ್ಲಿ 25 ರನ್ ಬಾರಿಸಿ ಔಟಾದ ಧನಂಜಯ ಡಿಸಿಲ್ವಾ .
SL 294/5 (41.1)
PAK vs SL ICC World Cup 2023 Live Score: 40 ಓವರ್ಗಳು ಮುಕ್ತಾಯ
ಮೊಹಮ್ಮದ್ ನವಾಝ್ ಎಸೆದ 40ನೇ ಓವರ್ನ 5ನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಸದೀರ ಸಮರವಿಕ್ರಮ.
40 ಓವರ್ಗಳ ಮುಕ್ತಾಯದ ವೇಳೆಗೆ 283 ರನ್ ಕಲೆಹಾಕಿದ ಶ್ರೀಲಂಕಾ.
ಕ್ರೀಸ್ನಲ್ಲಿ ಸದೀರ ಸಮರವಿಕ್ರಮ (76) ಹಾಗೂ ಧನಂಜಯ ಡಿಸಿಲ್ವಾ (24)
SL 283/4 (40)
PAK vs SL ICC World Cup 2023 Live Score: 35 ಓವರ್ಗಳು ಮುಕ್ತಾಯ
35 ಓವರ್ಗಳ ಮುಕ್ತಾಯದ ವೇಳೆ 247 ರನ್ ಕಲೆಹಾಕಿದ ಶ್ರೀಲಂಕಾ ತಂಡ.
ಕ್ರೀಸ್ನಲ್ಲಿ ಸದೀರ ಸಮರವಿಕ್ರಮ (54) ಹಾಗೂ ಧನಂಜಯ ಡಿಸಿಲ್ವಾ (9) ಬ್ಯಾಟಿಂಗ್.
SL 247/4 (35)
ಪಾತುಮ್ ನಿಸ್ಸಂಕಾ, ಕುಸಾಲ್ ಪರೇರಾ, ಕುಸಾಲ್ ಮೆಂಡಿಸ್ ಹಾಗೂ ಚರಿತ್ ಅಸಲಂಕಾ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಪಾಕ್ ಬೌಲರ್ಗಳು.
PAK vs SL ICC World Cup 2023 Live Score: ಸದೀರ ಅರ್ಧಶತಕ
43 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಪೂರೈಸಿದ ಸದೀರ ಸಮರ ವಿಕ್ರಮ.
34 ಓವರ್ಗಳ ಮುಕ್ತಾಯದ ವೇಳೆಗೆ 244 ರನ್ ಕಲೆಹಾಕಿದ ಶ್ರೀಲಂಕಾ.
ಕ್ರೀಸ್ನಲ್ಲಿ ಸದೀರ ಸಮರವಿಕ್ರಮ ಹಾಗೂ ಧನಂಜಯ ಡಿಸಿಲ್ವಾ ಬ್ಯಾಟಿಂಗ್.
SL 244/4 (34)
PAK vs SL ICC World Cup 2023 Live Score: 30 ಓವರ್ಗಳು ಮುಕ್ತಾಯ
ಹಸನ್ ಅಲಿ ಎಸೆದ 31ನೇ ಓವರ್ನ ಮೊದಲ ಎಸೆತದಲ್ಲೇ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಚರಿತ್ ಅಸಲಂಕಾ.
30 ಓವರ್ಗಳ ಮುಕ್ತಾಯದ ವೇಳೆಗೆ 229 ರನ್ ಕಲೆಹಾಕಿರುವ ಶ್ರೀಲಂಕಾ ತಂಡ.
ಕ್ರೀಸ್ನಲ್ಲಿ ಸದೀರ ಸಮರ ವಿಕ್ರಮ ಹಾಗೂ ಧನಂಜಯ ಡಿಸಿಲ್ವಾ ಬ್ಯಾಟಿಂಗ್.
SL 229/4 (30.1)
PAK vs SL ICC World Cup 2023 Live Score: ಶ್ರೀಲಂಕಾದ 3ನೇ ವಿಕೆಟ್ ಪತನ
ಹಸನ್ ಅಲಿ ಎಸೆದ 29ನೇ ಓವರ್ನ 3ನೇ ಮತ್ತು 4ನೇ ಎಸೆತಗಳಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಕುಸಾಲ್ ಮೆಂಡಿಸ್.
5ನೇ ಎಸೆತದಲ್ಲಿ ಮತ್ತೊಂದು ಭರ್ಜರಿ ಸಿಕ್ಸ್ಗೆ ಯತ್ನ…ಬೌಂಡರಿ ಲೈನ್ನಲ್ಲಿ ಇಮಾಮ್ ಅತ್ಯುತ್ತಮ ಕ್ಯಾಚ್.
77 ಎಸೆತಗಳಲ್ಲಿ 122 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಕುಸಾಲ್ ಮೆಂಡಿಸ್.
SL 218/3 (28.5)
PAK vs SL ICC World Cup 2023 Live Score: ದ್ವಿಶತಕ ಪೂರೈಸಿದ ಶ್ರೀಲಂಕಾ
ಕೇವಲ 28 ಓವರ್ ಗಳಲ್ಲಿ ದ್ವಿಶತಕ ಪೂರೈಸಿದ ಶ್ರೀಲಂಕಾ.
ಕ್ರೀಸ್ ನಲ್ಲಿ ಕುಸಾಲ್ ಮೆಂಡಿಸ್ (110) ಹಾಗೂ ಸದೀರ ಸಮರ ವಿಕ್ರಮ (35) ಬ್ಯಾಟಿಂಗ್
SL 204/2 (28)
ಪಾತುಮ್ ನಿಸ್ಸಂಕಾ (51) ಹಾಗೂ ಕುಸಾಲ್ ಪೆರೇರಾ (0) ಔಟ್.
PAK vs SL ICC World Cup 2023 Live Score: ಶತಕ ಸಿಡಿಸಿದ ಮೆಂಡಿಸ್
ಹಸನ್ ಅಲಿ ಎಸೆದ 27ನೇ ಓವರ್ನ ಮೊದಲ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಸಿಕ್ಸ್ ಬಾರಿಸಿದ ಕುಸಾಲ್ ಮೆಂಡಿಸ್.
ಈ ಭರ್ಜರಿ ಸಿಕ್ಸ್ನೊಂದಿಗೆ ಕೇವಲ 65 ಎಸೆತಗಳಲ್ಲಿ ಶತಕ ಪೂರೈಸಿದ ಮೆಂಡಿಸ್.
ಈ ಮೂಲಕ ಏಕದಿನ ವಿಶ್ವಕಪ್ನಲ್ಲಿ ಅತೀ ವೇಗದ ಶತಕ ಸಿಡಿಸಿದ ಶ್ರೀಲಂಕಾ ಬ್ಯಾಟರ್ ಎನಿಸಿಕೊಂಡ ಕುಸಾಲ್ ಮೆಂಡಿಸ್.
SL 192/2 (26.1)
PAK vs SL ICC World Cup 2023 Live Score: 25 ಓವರ್ಗಳು ಮುಕ್ತಾಯ
25 ಓವರ್ಗಳ ಮುಕ್ತಾಯದ ವೇಳೆಗೆ 181 ರನ್ ಕಲೆಹಾಕಿದ ಶ್ರೀಲಂಕಾ.
ಭರ್ಜರಿ ಬ್ಯಾಟಿಂಗ್ ಮುಂದುವರೆಸಿರುವ ಕುಸಾಲ್ ಮೆಂಡಿಸ್ (92) ಹಾಗೂ ಸದೀರ ಸಮರವಿಕ್ರಮ (30)
3ನೇ ವಿಕೆಟ್ಗೆ ಕೇವಲ 48 ಎಸೆತಗಳಲ್ಲಿ 75 ರನ್ಗಳ ಜೊತೆಯಾಟವಾಡಿದ ಸದೀರ-ಮೆಂಡಿಸ್.
SL 181/2 (25)
PAK vs SL ICC World Cup 2023 Live Score: ಸಿಕ್ಸರ್ ಸಮರವಿಕ್ರಮ
ಹ್ಯಾರಿಸ್ ರೌಫ್ ಎಸೆದ 21ನೇ ಓವರ್ನ 5ನೇ ಎಸೆತದಲ್ಲಿ ಲಾಂಗ್ ಆಫ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸದೀರ ಸಮರವಿಕ್ರಮ.
6ನೇ ಎಸೆತದಲ್ಲಿ ಆಫ್ ಸೈಡ್ನತ್ತ ಮತ್ತೊಂದು ಫೋರ್.
ಕ್ರೀಸ್ನಲ್ಲಿ ಕುಸಾಲ್ ಮೆಂಡಿಸ್ ಹಾಗೂ ಸದೀರ ಸಮರವಿಕ್ರಮ ಬ್ಯಾಟಿಂಗ್.
SL 147/2 (21)
PAK vs SL ICC World Cup 2023 Live Score: 20 ಓವರ್ಗಳು ಮುಕ್ತಾಯ
20 ಓವರ್ಗಳ ಮುಕ್ತಾಯದ ವೇಳೆಗೆ 127 ರನ್ ಕಲೆಹಾಕಿದ ಶ್ರೀಲಂಕಾ ತಂಡ.
ಕ್ರೀಸ್ನಲ್ಲಿ ಸದೀರ ಸಮರವಿಕ್ರಮ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್
SL 127/2 (20)
ಕುಸಾಲ್ ಪೆರೇರಾ (0) ಹಾಗೂ ಪಾತುಮ್ ನಿಸ್ಸಂಕಾ (51) ಔಟ್.
PAK vs SL ICC World Cup 2023 Live Score: ಶ್ರೀಲಂಕಾ ತಂಡದ 2ನೇ ವಿಕೆಟ್ ಪತನ
ಶಾದಾಬ್ ಖಾನ್ ಎಸೆದ 18ನೇ ಓವರ್ನ 2ನೇ ಎಸೆತದಲ್ಲಿ ಆಫ್ ಸೈಡ್ ಫ್ರಂಟ್ ಫೀಲ್ಡರ್ಗೆ ಕ್ಯಾಚ್ ನೀಡಿದ ಪಾತುಮ್ ನಿಸ್ಸಂಕಾ.
61 ಎಸೆತಗಳಲ್ಲಿ 51 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ನಿಸ್ಸಂಕಾ.
ಕ್ರೀಸ್ನಲ್ಲಿ ಕುಸಾಲ್ ಮೆಂಡಿಸ್ ಹಾಗೂ ಸದೀರ ಸಮರವಿಕ್ರಮ ಬ್ಯಾಟಿಂಗ್.
SL 112/2 (18)
PAK vs SL ICC World Cup 2023 Live Score: ಶತಕ ಪೂರೈಸಿದ ಶ್ರೀಲಂಕಾ
16.2 ಓವರ್ಗಳಲ್ಲಿ ಶತಕ ಪೂರೈಸಿದ ಶ್ರೀಲಂಕಾ.
58 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಪಾತುಮ್ ನಿಸ್ಸಂಕಾ.
ನವಾಝ್ ಎಸೆದ 17ನೇ ಓವರ್ನ ಕೊನೆಯ ಎಸೆತದಲ್ಲಿ ಫೋರ್ ಬಾರಿಸಿ 40 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕುಸಾಲ್ ಮೆಂಡಿಸ್.
2ನೇ ವಿಕೆಟ್ಗೆ 102 ರನ್ಗಳ ಜೊತೆಯಾಟದೊಂದಿಗೆ ಉತ್ತಮ ಬ್ಯಾಟಿಂಗ್.
SL 107/1 (17)
PAK vs SL ICC World Cup 2023 Live Score: ಶ್ರೀಲಂಕಾ ಉತ್ತಮ ಬ್ಯಾಟಿಂಗ್
15 ಓವರ್ಗಳ ಮುಕ್ತಾಯದ ವೇಳೆಗೆ 90 ರನ್ ಕಲೆಹಾಕಿದ ಶ್ರೀಲಂಕಾ ತಂಡ.
ಕ್ರೀಸ್ನಲ್ಲಿ ಕುಸಾಲ್ ಮೆಂಡಿಸ್ (37) ಹಾಗೂ ಪಾತುಮ್ ನಿಸ್ಸಂಕಾ (47) ಬ್ಯಾಟಿಂಗ್.
2ನೇ ವಿಕೆಟ್ಗೆ 85 ರನ್ಗಳ ಜೊತೆಯಾಟದೊಂದಿಗೆ ಉತ್ತಮ ಬ್ಯಾಟಿಂಗ್.
SL 90/1 (15)
ಕುಸಾಲ್ ಪೆರೇರಾ (0) ಔಟ್.
PAK vs SL ICC World Cup 2023 Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ
ಮೊಹಮ್ಮದ್ ನವಾಝ್ ಎಸೆದ 12ನೇ ಓವರ್ನ ಕೊನೆಯ 2 ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಪಾತುಮ್ ನಿಸ್ಸಂಕಾ.
ಶ್ರೀಲಂಕಾ ತಂಡದಿಂದ ಉತ್ತಮ ಬ್ಯಾಟಿಂಗ್.
ಕ್ರೀಸ್ನಲ್ಲಿ ಪಾತುಮ್ ನಿಸ್ಸಂಕಾ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್
SL 73/1 (12)
PAK vs SL ICC World Cup 2023 Live Score: 10 ಓವರ್ಗಳು ಮುಕ್ತಾಯ
ಹ್ಯಾರಿಸ್ ರೌಫ್ ಎಸೆದ 10ನೇ ಓವರ್ನ ಮೊದಲ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಪಾತುಮ್ ನಿಸ್ಸಂಕಾ.
10 ಓವರ್ಗಳ ಮುಕ್ತಾಯದ ವೇಳೆಗೆ 58 ರನ್ ಕಲೆಹಾಕಿದ ಶ್ರೀಲಂಕಾ.
ಕ್ರೀಸ್ನಲ್ಲಿ ಪಾತುಮ್ ನಿಸ್ಸಂಕಾ (29) ಹಾಗೂ ಕುಸಾಲ್ ಮೆಂಡಿಸ್ (23) ಬ್ಯಾಟಿಂಗ್.
SL 58/1 (10)
PAK vs SL ICC World Cup 2023 Live Score: ಅರ್ಧಶತಕ ಪೂರೈಸಿದ ಶ್ರೀಲಂಕಾ
9 ಓವರ್ಗಳಲ್ಲಿ ಅರ್ಧಶತಕ ಪೂರೈಸಿದ ಶ್ರೀಲಂಕಾ.
2ನೇ ಓವರ್ನಲ್ಲಿ ಮೊದಲ ವಿಕೆಟ್ ಕಳೆದುಕೊಂಡ ಬಳಿಕ ಲಂಕಾ ತಂಡದಿಂದ ಉತ್ತಮ ಬ್ಯಾಟಿಂಗ್.
ಕ್ರೀಸ್ನಲ್ಲಿ ಪಾತುಮ್ ನಿಸ್ಸಂಕಾ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್.
SL 53/1 (9)
PAK vs SL ICC World Cup 2023 Live Score: ಭರ್ಜರಿ ಸಿಕ್ಸ್ ಸಿಡಿಸಿದ ಪಾತುಮ್
ಹಸನ್ ಅಲಿ ಎಸೆದ 8ನೇ ಓವರ್ನ 5ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಪಾತುಮ್ ನಿಸ್ಸಂಕಾ.
ಶ್ರೀಲಂಕಾ ತಂಡದ ಉತ್ತಮ ಬ್ಯಾಟಿಂಗ್.
ಕ್ರೀಸ್ನಲ್ಲಿ ಪಾತುಮ್ ನಿಸ್ಸಂಕಾ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್.
SL 48/1 (8)
PAK vs SL ICC World Cup 2023 Live Score: ಆಕರ್ಷಕ ಬೌಂಡರಿ
ಹಸನ್ ಅಲಿ ಎಸೆದ 6ನೇ ಓವರ್ನ ಕೊನೆಯ ಎಸೆತದಲ್ಲಿ ಮಿಡ್ ಆಫ್ನತ್ತ ಫೋರ್ ಬಾರಿಸಿದ ಕುಸಾಲ್ ಮೆಂಡಿಸ್.
6 ಓವರ್ಗಳ ಮುಕ್ತಾಯದ ವೇಳೆಗೆ ಶ್ರೀಲಂಕಾ ತಂಡದ ಸ್ಕೋರ್ 34.
ಕ್ರೀಸ್ನಲ್ಲಿ ಪಾತುಮ್ ನಿಸ್ಸಂಕಾ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್.
SL 34/1 (6)
PAK vs SL ICC World Cup 2023 Live Score: 5 ಓವರ್ಗಳು ಮುಕ್ತಾಯ
ಶಾಹೀನ್ ಶಾ ಅಫ್ರಿದಿ ಎಸೆದ 5ನೇ ಓವರ್ನ 5ನೇ ಎಸೆತದಲ್ಲಿ ಥರ್ಡ್ಮ್ಯಾನ್ ಫೀಲ್ಡರ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕುಸಾಲ್ ಮೆಂಡಿಸ್.
ಕ್ರೀಸ್ನಲ್ಲಿ ಕುಸಾಲ್ ಮೆಂಡಿಸ್ ಹಾಗೂ ಪಾತುಮ್ ನಿಸ್ಸಂಕಾ ಬ್ಯಾಟಿಂಗ್.
SL 29/1 (5)
PAK vs SL ICC World Cup 2023 Live Score: ಶ್ರೀಲಂಕಾ ತಂಡದ ಮೊದಲ ವಿಕೆಟ್ ಪತನ
ಹಸನ್ ಅಲಿ ಎಸೆದ 2ನೇ ಓವರ್ನ 4ನೇ ಎಸೆತದಲ್ಲಿ ಪಾಕ್ ತಂಡಕ್ಕೆ ಮೊದಲ ಯಶಸ್ಸು.
ವಿಕೆಟ್ ಕೀಪರ್ ರಿಝ್ವಾನ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ ಕುಸಾಲ್ ಪೆರೇರಾ (0).
2 ಓವರ್ಗಳ ಮುಕ್ತಾಯಕ್ಕೆ 1 ವಿಕೆಟ್ ಕಳೆದುಕೊಂಡು 6 ರನ್ ಗಳಿಸಿದ ಶ್ರೀಲಂಕಾ.
SL 6/1 (2)
PAK vs SL ICC World Cup 2023 Live Score: ಪಾಕಿಸ್ತಾನ್ ಉತ್ತಮ ಆರಂಭ
ಮೊದಲ ಓವರ್ನಲ್ಲಿ ಕೇವಲ 4 ರನ್ ನೀಡಿದ ಶಾಹೀನ್ ಶಾ ಅಫ್ರಿದಿ.
ಶ್ರೀಲಂಕಾ ಪರ ಆರಂಭಿಕರಾಗಿ ಕಣಕ್ಕಿಳಿದ ಪಾತುಮ್ ನಿಸ್ಸಂಕಾ ಹಾಗೂ ಕುಸಾಲ್ ಪರೇರಾ.
ಪಾಕಿಸ್ತಾನ್ ತಂಡದಿಂದ ಉತ್ತಮ ಆರಂಭ
SL 4/0 (1)
PAK vs SL ICC World Cup 2023 Live Score: ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್ ಹೀಗಿದೆ
ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಾಲ್ ಮೆಂಡಿಸ್(ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಮತೀಶ ಪತಿರಣ, ದಿಲ್ಶನ್ ಮಧುಶಂಕ.
PAK vs SL ICC World Cup 2023 Live Score: ಪಾಕಿಸ್ತಾನ್ ಪ್ಲೇಯಿಂಗ್ ಇಲೆವೆನ್ ಹೀಗಿದೆ
ಪಾಕಿಸ್ತಾನ್ (ಪ್ಲೇಯಿಂಗ್ XI): ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್.
PAK vs SL ICC World Cup 2023 Live Score: ಟಾಸ್ ಗೆದ್ದ ಶ್ರೀಲಂಕಾ
ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
Published On - Oct 10,2023 1:33 PM