AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC 2025-27: ಪಾಕಿಸ್ತಾನ ನಾಲ್ಕನೇ ಬಾರಿಯೂ ಡಬ್ಲ್ಯುಟಿಸಿ ಫೈನಲ್​ಗೇರುವುದು ಅನುಮಾನ

Pakistan's WTC 2025-27 Schedule: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025-27ರ ವೇಳಾಪಟ್ಟಿ ಬಿಡುಗಡೆಯಾಗಿದೆ. ಆ ಪ್ರಕಾರ ಈ ಸೀಸನ್​ನಲ್ಲಿ ಪಾಕಿಸ್ತಾನ 13 ಪಂದ್ಯಗಳನ್ನು ಆಡಲಿದ್ದು, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್‌ನಂತಹ ತಂಡಗಳನ್ನು ಎದುರಿಸಲಿದೆ. ಸ್ವದೇಶದಲ್ಲಿ ಸೋತಿರುವ ಪಾಕಿಸ್ತಾನ ವಿದೇಶಿ ಪ್ರವಾಸಗಳಲ್ಲಿ ಗೆಲ್ಲುವುದು ಕಷ್ಟಕರವಾಗಿದೆ. ಹೀಗಾಗಿ, ಈ ಬಾರಿಯ ಫೈನಲ್ ತಲುಪುವುದು ಪಾಕಿಸ್ತಾನಕ್ಕೆ ಕಠಿಣ ಸವಾಲಾಗಿದೆ.

WTC 2025-27: ಪಾಕಿಸ್ತಾನ ನಾಲ್ಕನೇ ಬಾರಿಯೂ ಡಬ್ಲ್ಯುಟಿಸಿ ಫೈನಲ್​ಗೇರುವುದು ಅನುಮಾನ
Pak Team
ಪೃಥ್ವಿಶಂಕರ
|

Updated on:Jun 15, 2025 | 10:55 PM

Share

ದಕ್ಷಿಣ ಆಫ್ರಿಕಾ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ( World Test Championship) ಕಿರೀಟವನ್ನು ಮುಡಿಗೇರಿಸಿಕೊಳ್ಳುವುದರೊಂದಿಗೆ 2023-25 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ಗೆ ಅಂತ್ಯ ಹಾಡಲಾಗಿದೆ. ಇದೀಗ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ಗೆ ಇದೇ ತಿಂಗಳಿಂದ ನಾಂದಿ ಹಾಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಐಸಿಸಿ ಕೂಡ ಮುಂದಿನ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಐಸಿಸಿ (ICC) ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ, ಈ ಬಾರಿಯೂ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ತಂಡಗಳು ಗರಿಷ್ಠ ಪಂದ್ಯಗಳನ್ನು ಆಡಿದರೆ, ಟೀಂ ಇಂಡಿಯಾ 18 ಪಂದ್ಯಗಳನ್ನು ಆಡಲಿದೆ. ಇನ್ನು ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನದ ವಿಚಾರಕ್ಕೆ ಬಂದರೆ, ಸದಾ ವಿವಾದಗಳಿಂದಲೇ ಚರ್ಚೆಯಲ್ಲಿರುವ ಪಾಕ್ ತಂಡ ಈ ಆವೃತ್ತಿಯಲ್ಲಿ 13 ಪಂದ್ಯಗಳನ್ನು ಆಡಲಿದೆ. ಆದರೆ ಪಾಕ್ ತಂಡ ಎದುರಿಸುವ ತಂಡಗಳ ಪಟ್ಟಿಯನ್ನು ನೋಡಿದಾಗ, ಈ ಬಾರಿಯೂ ಪಾಕ್ ಪಡೆ ಡಬ್ಲ್ಯುಟಿಸಿ ಫೈನಲ್​ ಆಡುವುದು ಅಸಾಧ್ಯದ ಮಾತು ಎನ್ನಬಹುದು.

ಡಬ್ಲ್ಯುಟಿಸಿಯ ನಾಲ್ಕನೇ ಆವೃತ್ತಿ ಜೂನ್ 17 ರಿಂದ ಪ್ರಾರಂಭವಾಗಲಿದ್ದು, ಮೊದಲ ಸರಣಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ನಡೆಯಲಿದೆ. ಇದಾದ ನಂತರ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯೂ ಜೂನ್ 20 ರಿಂದ ಪ್ರಾರಂಭವಾಗಲಿದೆ. ಪಾಕಿಸ್ತಾನದ ಮಟ್ಟಿಗೆ ಹೇಳುವುದಾದರೆ, ಈ ತಂಡದ ಮೊದಲ ಸರಣಿಯು ವಿಶ್ವ ಚಾಂಪಿಯನ್ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲ್ಲಿದ್ದು, ಇದು ಅಕ್ಟೋಬರ್‌ನಲ್ಲಿ ನಡೆಯಲಿದೆ. ಇಲ್ಲಿಂದ ಪಾಕಿಸ್ತಾನ ತಂಡದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನ ಕಠಿಣ ಪ್ರಯಾಣ ಪ್ರಾರಂಭವಾಗುತ್ತದೆ.

ಪಾಕಿಸ್ತಾನ ಈ ತಂಡಗಳನ್ನು ಎದುರಿಸಲಿದೆ

ಕಳೆದ 3 ಆವೃತ್ತಿಗಳಂತೆ, ಈ ಬಾರಿಯೂ ಸಹ ಡಬ್ಲ್ಯುಟಿಸಿಯಲ್ಲಿ ಕೇವಲ 9 ತಂಡಗಳು ಮಾತ್ರ ಭಾಗವಹಿಸುತ್ತಿವೆ. ಪ್ರತಿ ತಂಡವು ತಲಾ 6 ಸರಣಿಗಳನ್ನು ಆಡಲಿವೆ. ಇದರಲ್ಲಿ, 3 ಸರಣಿಗಳನ್ನು ತವರಿನಲ್ಲಿ ಮತ್ತು 3 ಸರಣಿಗಳನ್ನು ಇತರ ತಂಡದ ತವರಿನಲ್ಲಿ ಆಡಬೇಕಾಗುತ್ತದೆ. ಪಾಕಿಸ್ತಾನ ತಂಡದ ವೇಳಾಪಟ್ಟಿಯೂ ಇದೇ ಆಧಾರದ ಮೇಲೆ ಇರಲಿದ್ದು, ಅದರಂತೆ ಪಾಕ್ ಪಡೆ ತನ್ನ ನೆಲದಲ್ಲಿ ದಕ್ಷಿಣ ಆಫ್ರಿಕಾ (2 ಟೆಸ್ಟ್), ಶ್ರೀಲಂಕಾ (2) ಮತ್ತು ನ್ಯೂಜಿಲೆಂಡ್ (2) ತಂಡಗಳನ್ನು ಎದುರಿಸಬೇಕಾಗುತ್ತದೆ. ಮತ್ತೊಂದೆಡೆ, ವಿದೇಶಿ ಪ್ರವಾಸದಲ್ಲಿ ಬಾಂಗ್ಲಾದೇಶ (2), ವೆಸ್ಟ್ ಇಂಡೀಸ್ (2) ಮತ್ತು ಇಂಗ್ಲೆಂಡ್ (3) ತಂಡಗಳನ್ನು ಎದುರಿಸಬೇಕಾಗುತ್ತದೆ.

ಈ ಆವೃತ್ತಿಯಲ್ಲಿ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾವನ್ನು ಎದುರಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಪಾಕಿಸ್ತಾನ ತಂಡದ ವೇಳಾಪಟ್ಟಿ ಮೊದಲ ನೋಟದಲ್ಲಿ ಸುಲಭವಾಗಿ ಕಾಣುತ್ತದೆ. ಪಾಕಿಸ್ತಾನ ತಂಡವು ತನ್ನ ನೆಲದಲ್ಲಿ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ತಂಡವನ್ನು ಎದುರಿಸುವುದರಿಂದ ಈ ಎರಡು ತಂಡಗಳ ವಿರುದ್ಧ ಕೊಂಚ ಮೇಲುಗೈ ಸಾಧಿಸುವ ಸಾಧ್ಯತೆಗಳಿರಬಹುದು. ಆದರೆ ಹಾಲಿ ಚಾಂಪಿಯನ್ ದಕ್ಷಿಣ ಆಫ್ರಿಕಾವನ್ನು ಜಯಿಸುವುದು ತುಂಬಾ ಕಷ್ಟಕರವಾಗಿರುತ್ತದೆ. ಏಕೆಂದರೆ ವೇಗಿಗಳ ಹೊರತಾಗಿ, ಈ ತಂಡವು ಉತ್ತಮ ಸ್ಪಿನ್ನರ್‌ಗಳನ್ನು ಸಹ ಹೊಂದಿದ್ದು, ಬ್ಯಾಟಿಂಗ್ ವಿಭಾಗ ಕೂಡ ಬಲಿಷ್ಠವಾಗಿದೆ.

ಈ ಬಾರಿಯೂ WTC ಫೈನಲ್ಸ್ ಆಡುವುದು ಕಷ್ಟ

ಪಾಕಿಸ್ತಾನದ ನಿಜವಾದ ಸವಾಲು ವಿದೇಶಿ ಪ್ರವಾಸದಿಂದ ಶುರುವಾಗುತ್ತದೆ. ಅದರಲ್ಲೂ ಮುಖ್ಯವಾಗಿ ಇಂಗ್ಲೆಂಡ್ ಪ್ರವಾಸ ಪಾಕಿಗಳಿಗೆ ಬಿಸಿ ತುಪ್ಪವಾಗಿರಲಿದೆ. ಆಂಗ್ಲರ ನಾಡಲ್ಲಿ ಪಾಕ್ ತಂಡ 3 ಟೆಸ್ಟ್‌ಗಳನ್ನು ಆಡಲ್ಲಿದ್ದು, ಆ ಬಳಿಕ ಬಾಂಗ್ಲಾ ನೆಲದಲ್ಲೂ ಸರಣಿ ಆಡಬೇಕಿದೆ. ವಿಶೇಷವಾಗಿ ಕಳೆದ ವರ್ಷ ಪಾಕಿಸ್ತಾನ ತನ್ನ ಸ್ವಂತ ಮನೆಯಲ್ಲಿ ಬಾಂಗ್ಲಾದೇಶದ ವಿರುದ್ಧ 2-0 ಅಂತರದಿಂದ ಸೋಲನ್ನು ಎದುರಿಸಿದ ರೀತಿಯನ್ನು ಪರಿಗಣಿಸಿದರೆ, ಬಾಂಗ್ಲಾದೇಶದ ನೆಲದಲ್ಲಿ ಪಾಕ್ ತಂಡ ಮಕಾಡೆ ಮಲಗುವುದರಲ್ಲಿ ಯಾವುದೇ ಅನುಮಾನವಿಲ್ಲ.

WTC 2025-27 ವೇಳಾಪಟ್ಟಿ ಪ್ರಕಟ; ಟೀಂ ಇಂಡಿಯಾ ಯಾವಾಗ, ಯಾರ ವಿರುದ್ಧ ಎಷ್ಟು ಪಂದ್ಯಗಳನ್ನು ಆಡಲಿದೆ ಗೊತ್ತಾ?

ಆ ಬಳಿಕ ವೆಸ್ಟ್ ಇಂಡೀಸ್ ಪ್ರವಾಸ ಮಾಡಲಿರುವ ಪಾಕ್ ತಂಡಕ್ಕೆ ಇಲ್ಲೂ ಸಹ ಗೆಲುವು ಸಿಗುವುದು ಕಷ್ಟಕರ. ಏಕೆಂದರೆ ಈ ವರ್ಷ ತನ್ನ ಸ್ವಂತ ನೆಲದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ವಿಂಡೀಸ್ ವಿರುದ್ಧ ಸೋತಿತ್ತು. ಅಂತಹ ಪರಿಸ್ಥಿತಿಯಲ್ಲಿ, ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ತವರಿನಲ್ಲಿ ಯಾವುದೇ ರೀತಿಯ ಅವಕಾಶವನ್ನು ನೀಡುವ ಸಾಧ್ಯತೆಯಿಲ್ಲ. ಒಟ್ಟಾರೆಯಾಗಿ, ಪಾಕಿಸ್ತಾನ ತಂಡವು ಈ ಆವೃತ್ತಿಯಲ್ಲಿ 13 ಟೆಸ್ಟ್‌ಗಳನ್ನು ಆಡಲಿದ್ದು, ಪ್ರತಿ ಪಂದ್ಯವು ಸವಾಲಿನಿಂದ ಕೂಡಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪಾಕ್ ತಂಡವು ನಾಲ್ಕನೇ ಬಾರಿಗೆ ಡಬ್ಲ್ಯುಟಿಸಿ ಫೈನಲ್ ತಲುಪಲು ಸಾಧ್ಯವಾಗದಿದ್ದರೆ ಅದು ಆಶ್ಚರ್ಯವೇನಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:52 pm, Sun, 15 June 25

ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ