AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಗ್ಲೆಂಡ್‌ ನೆಲದಲ್ಲಿ ಅಜೇಯ ಶತಕ ಸಿಡಿಸಿದ ಲಾರ್ಡ್ ಶಾರ್ದೂಲ್ ಠಾಕೂರ್

Shardul Thakur's Unbeaten Century: ಟೀಂ ಇಂಡಿಯಾದ ಅಂತರ್‌ ತಂಡದ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಅವರು ಅಜೇಯ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಮುನ್ನ ಇದು ಭಾರತಕ್ಕೆ ಒಳ್ಳೆಯ ಸುದ್ದಿಯಾಗಿದೆ. ಶುಭ್‌ಮನ್ ಗಿಲ್ ಮತ್ತು ಕೆ.ಎಲ್. ರಾಹುಲ್ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ. ಸರ್ಫರಾಜ್ ಖಾನ್ ಕೂಡ ಶತಕ ಸಿಡಿಸಿದ್ದಾರೆ. ಈ ಪ್ರದರ್ಶನಗಳು ಇಂಗ್ಲೆಂಡ್ ವಿರುದ್ಧದ ಸವಾಲಿಗೆ ಸಿದ್ಧತೆಗಳನ್ನು ಬಲಪಡಿಸುತ್ತವೆ.

ಇಂಗ್ಲೆಂಡ್‌ ನೆಲದಲ್ಲಿ ಅಜೇಯ ಶತಕ ಸಿಡಿಸಿದ ಲಾರ್ಡ್ ಶಾರ್ದೂಲ್ ಠಾಕೂರ್
Shardul Thakur
ಪೃಥ್ವಿಶಂಕರ
|

Updated on: Jun 15, 2025 | 9:26 PM

Share

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ, ಟೀಂ ಇಂಡಿಯಾ (IND vs ENG) ತನ್ನ ಸಿದ್ಧತೆಗಳನ್ನು ಬಲಪಡಿಸಲು ಅಂತರ್-ತಂಡದ ಪಂದ್ಯವನ್ನು ಆಡಿತು. ಈ ಪಂದ್ಯದಲ್ಲಿ ಭಾರತ ಎ ಮತ್ತು ಭಾರತೀಯ ಹಿರಿಯ ತಂಡದ ಆಟಗಾರರು ಭಾಗವಹಿಸಿದ್ದರು. ಈ ಪಂದ್ಯದಲ್ಲಿ ನಾಯಕ ಶುಭ್​ಮನ್ ಗಿಲ್, ಕೆ ಎಲ್ ರಾಹುಲ್ ಗಮನಾರ್ಹ ಪ್ರದರ್ಶನ ನೀಡಿದ್ದರು. ಇವರ ಜೊತೆಗೆ ಯುವ ಬ್ಯಾಟರ್ ಸರ್ಫರಾಜ್ ಕೂಡ ಶತಕ ಸಿಡಿಸಿ ಮಿಂಚಿದ್ದರು. ಇದೀಗ ಸರ್ಫರಾಜ್ ಮಾತ್ರವಲ್ಲದೆ ತಂಡದ ಸ್ಟಾರ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ (Shardul Thakur) ಆಂಗ್ಲರ ನೆಲದಲ್ಲಿ ಅಬ್ಬರಿಸಿದ್ದು, ಅಜೇಯ ಶತಕ ಬಾರಿಸಿದ್ದಾರೆ.

ಶಾರ್ದೂಲ್ ಠಾಕೂರ್ ಅಜೇ ಶತಕ

ಇಂಟ್ರಾ-ಸ್ಕ್ವಾಡ್ ಪಂದ್ಯದಲ್ಲಿ ತಮ್ಮ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿರುವ ಶಾರ್ದೂಲ್ ಠಾಕೂರ್ 122 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಪ್ರದರ್ಶನವು ತಂಡಕ್ಕೆ ಮಾತ್ರವಲ್ಲದೆ ಇಂಗ್ಲೆಂಡ್ ವಿರುದ್ಧದ ಮುಂಬರುವ ಸವಾಲಿಗೂ ಸಕಾರಾತ್ಮಕ ಸಂಕೇತವಾಗಿದೆ. ಇದು ಮಾತ್ರವಲ್ಲದೆ ಶಾರ್ದೂಲ್ ಠಾಕೂರ್ ಈ ಶತಕದ ಮೂಲಕ ತಮಗೂ ತಂಡದಲ್ಲಿ ಸ್ಥಾನ ನೀಡಬೇಕು ಎಂಬುದನ್ನು ಆಯ್ಕೆದಾರರ ಗಮನಕ್ಕೆ ತಂದಿದ್ದಾರೆ. ವಾಸ್ತವವಾಗಿ ಶಾರ್ದೂಲ್ ಠಾಕೂರ್ 2023 ರಿಂದ ಟೀಂ ಇಂಡಿಯಾ ಪರ ಯಾವುದೇ ಟೆಸ್ಟ್ ಪಂದ್ಯವನ್ನು ಆಡಿಲ್ಲ. ಆದರೆ ಇಂಗ್ಲೆಂಡ್‌ನಲ್ಲಿ ಅಜೇಯ ಶತಕ ಸಿಡಿಸಿರುವ ಶಾರ್ದೂಲ್​ಗೆ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆಗಳು ಹೆಚ್ಚಿವೆ.

ಪಂದ್ಯದ ಎರಡನೇ ದಿನದಂದು ಬ್ಯಾಟಿಂಗ್‌ಗೆ ಇಳಿದ ಶಾರ್ದೂಲ್ ಠಾಕೂರ್ 10 ಎಸೆತಗಳಲ್ಲಿ 19 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಇದಾದ ನಂತರ ಪಂದ್ಯದ ಕೊನೆಯ ದಿನದಂದು ತಮ್ಮ ಇನ್ನಿಂಗ್ಸ್ ಮುಂದುವರಿಸಿದ ಶಾರ್ದೂಲ್ ಎಲ್ಲಾ ಬೌಲರ್‌ಗಳ ವಿರುದ್ಧ ಮುಕ್ತವಾಗಿ ಬ್ಯಾಟ್ ಬೀಸಿ ಶತಕ ಸಿಡಿಸಿದರು. ಅವರ ಅಜೇಯ ಇನ್ನಿಂಗ್ಸ್ ಬೌಲಿಂಗ್‌ನಲ್ಲಿ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಉಪಯುಕ್ತವೆಂದು ಸಾಬೀತುಪಡಿಸಿತು.

IND vs ENG Test: ಇಂಟ್ರಾ ಸ್ಕ್ವಾಡ್ ಮ್ಯಾಚ್​ನಲ್ಲೂ ರಾಹುಲ್ ಆರ್ಭಟ: ಗಿಲ್-ಶಾರ್ದೂಲ್ ಕೂಡ ಭರ್ಜರಿ ಆಟ

ಟೀಂ ಇಂಡಿಯಾಗೆ ಹೊಸ ಆರಂಭ

ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಸರಣಿಯು ಭಾರತ ತಂಡಕ್ಕೆ ಕಠಿಣ ಪರೀಕ್ಷೆಯಾಗಲಿದೆ. ಕಳೆದ ಕೆಲವು ವರ್ಷಗಳಿಂದ, ಉಭಯ ತಂಡಗಳ ನಡುವಿನ ಪಂದ್ಯಗಳು ಯಾವಾಗಲೂ ರೋಮಾಂಚಕಾರಿಯಾಗಿರುತ್ತವೆ. ಹೀಗಾಗಿ ಈ ಬಾರಿಯೂ ಅಭಿಮಾನಿಗಳು ರೋಮಾಂಚಕಾರಿ ಕ್ರಿಕೆಟ್ ಅನ್ನು ನಿರೀಕ್ಷಿಸುತ್ತಿದ್ದಾರೆ. 2007 ರಿಂದ ಭಾರತ ಈ ದೇಶದಲ್ಲಿ ಯಾವುದೇ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಶುಭ್​ಮನ್ ಗಿಲ್ ಈ ಬರವನ್ನು ಕೊನೆಗೊಳಿಸುವ ಜವಾಬ್ದಾರಿಯನ್ನು ಸಹ ಹೊಂದಿರುತ್ತಾರೆ. ಅದೇ ಸಮಯದಲ್ಲಿ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಆರ್ ಅಶ್ವಿನ್ ಇಲ್ಲದೆ ಟೀಂ ಇಂಡಿಯಾ ಈ ಸರಣಿಗೆ ಪ್ರವೇಶಿಸಲಿದ್ದು, ಇದು ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಯುಗದ ಆರಂಭ ಎಂದು ಪರಿಗಣಿಸಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ