‘ಕೊಹ್ಲಿ ನನ್ನೊಂದಿಗೆ ಮಾತು ಬಿಟ್ಟಿದ್ದರು’; ಕೊಹ್ಲಿ- ಡಿವಿಲಿಯರ್ಸ್ ಸ್ನೇಹದಲ್ಲಿ ಬಿರುಕು ಮೂಡಲು ಕಾರಣವೇನು?
Kohli-De Villiers Rift:ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರ ಸ್ನೇಹದ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಇತ್ತೀಚೆಗೆ ಅವರಿಬ್ಬರ ಸ್ನೇಹದಲ್ಲಿ ಬಿರುಕು ಮೂಡಿತ್ತು ಎಂದು ಡಿವಿಲಿಯರ್ಸ್ ಹೇಳಿಕೊಂಡಿದ್ದಾರೆ. ಎಬಿ ಡಿವಿಲಿಯರ್ಸ್ ಅವರು ಕೊಹ್ಲಿಯ ಗೌಪ್ಯತೆಯನ್ನು ಉಲ್ಲಂಘಿಸಿದ್ದರಿಂದಾಗಿ ಈ ಬಿರುಕು ಉಂಟಾಯಿತು ಎಂದು ಹೇಳಿದ್ದಾರೆ. ಕೊಹ್ಲಿ ಅವರು 2024ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ವೈಯಕ್ತಿಕ ಕಾರಣಗಳಿಗಾಗಿ ವಿರಾಮ ತೆಗೆದುಕೊಂಡಿದ್ದರು. ಈ ಸಮಯದಲ್ಲಿ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಎರಡನೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಡಿವಿಲಿಯರ್ಸ್ ಹೇಳಿದ್ದರು.

ವಿರಾಟ್ ಕೊಹ್ಲಿ (Virat Kohli) ಹಾಗೂ ಎಬಿ ಡಿವಿಲಿಯರ್ಸ್ (AB de Villiers) ಎಂತಾ ಸ್ನೇಹಿತರು ಎಂಬುದನ್ನು ನಾನು ಹೊಸದಾಗಿ ಹೇಳಬೇಕಿಲ್ಲ. ಕ್ರಿಕೆಟ್ ಪ್ರೀತಿಸುವ ಪ್ರತಿಯೊಬ್ಬರಿಗೂ ಇವರಿಬ್ಬರ ಸ್ನೇಹದ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ. ಐಪಿಎಲ್‌ನಲ್ಲಿ (IPL) ವರ್ಷಗಳ ಕಾಲ ಒಟ್ಟಿಗೆ ಒಂದೇ ತಂಡದ ಪರವಾಗಿ ಆಡಿದ್ದ ಈ ಇಬ್ಬರು ಲೆಜೆಂಡರಿ ಆಟಗಾರರು ತಂಡದ ಗೆಲುವನ್ನು ಒಟ್ಟಿಗೆ ಸಂಭ್ರಮದಿಂದ ಆಚರಿಸಿದ್ದಾರೆ. ಹಾಗೆಯೇ ಸೋಲಲ್ಲು ಕೂಡ ಒಟ್ಟಿಗೆ ಕಣ್ಣಿರಿಟ್ಟಿದ್ದಾರೆ. ಇವರಿಬ್ಬರ ಸ್ನೇಹವನ್ನು ನೋಡಿದವರು ನಾವು ಕೂಡ ಇಂತಹ ಸ್ನೇಹ ಬೆಳೆಸಬೇಕು ಎಂದುಕೊಂಡಿದ್ದರಲ್ಲಿ ಯಾವ ಸುಳ್ಳಿಲ್ಲ. ಆದಾಗ್ಯೂ ಇವರಿಬ್ಬರ ಸ್ನೇಹಕ್ಕೆ ಕೆಲವು ದಿನಗಳ ಹಿಂದೆ ಗ್ರಹಣ ಹಿಡಿತ್ತು ಎಂದರೆ ನೀವು ನಂಬುತ್ತೀರ?. ನೀವು ನಂಬಲೇಬೇಕು, ಏಕೆಂದರೆ ಇದನ್ನು ಹೇಳಿದ್ದು ಬೇರೆ ಯಾರು ಅಲ್ಲ, ಸ್ವತಃ ಎಬಿ ಡಿವಿಲಿಯರ್ಸ್ ಅವರೇ ನಮ್ಮಿಬ್ಬರ ನಡುವೆ ಮಾತುಕತೆ ನಿಂತು ಹೋಗಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ವಾಸ್ತವವಾಗಿ ಇವರಿಬ್ಬರ ಸ್ನೇಹದಲ್ಲಿ ಬಿರುಕು ಮೂಡಲು ಹೊರಗಿನವರು ಕಾರಣರಾಗಿರಲಿಲ್ಲ. ಬದಲಿಗೆ ತಾನು ಮಾಡಿದ ಅದೊಂದು ಅಜಾಗರುಕತೆಯ ತಪ್ಪಿನಿಂದಾಗಿ ವಿರಾಟ್ ಕೊಹ್ಲಿ ಹಲವಾರು ತಿಂಗಳುಗಳ ಕಾಲ ತಮ್ಮೊಂದಿಗೆ ಮಾತನಾಡಲಿಲ್ಲ ಎಂದು ಎಬಿ ಡಿವಿಲಿಯರ್ಸ್ ಬಹಿರಂಗಪಡಿಸಿದ್ದಾರೆ. ಕೊಹ್ಲಿ, ಡಿವಿಲಿಯರ್ಸ್ ಜೊತೆಗೆ ಮಾತು ಬಿಡಲು ಕಾರಣವಾದಂತಹ ತಪ್ಪಾದರೂ ಏನು ಎಂಬುದನ್ನು ನೋಡಿದರೆ, ಆ ಘಟನೆ ನಿಮ್ಮನ್ನು ಒಂದು ವರ್ಷ ಹಿಂದಕ್ಕೆ ಕರೆದೊಯ್ಯುತ್ತದೆ.
ಕೊಹ್ಲಿ ಗೌಪ್ಯತೆಗೆ ದಕ್ಕೆ
ವಾಸ್ತವವಾಗಿ, 2024 ರ ಆರಂಭದಲ್ಲಿ ವಿರಾಟ್ ಕೊಹ್ಲಿ ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ವೈಯಕ್ತಿಕ ಕಾರಣಗಳನ್ನು ನೀಡಿ ವಿರಾಮ ತೆಗೆದುಕೊಂಡರು. ಆ ಸಮಯದಲ್ಲಿ, ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅದಕ್ಕಾಗಿಯೇ ಕೊಹ್ಲಿ ಈ ಸರಣಿಯಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಿಕೊಂಡಿದ್ದರು. ಈ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಆದರೆ ಕೊಹ್ಲಿಯಾಗಲಿ ಅಥವಾ ಅನುಷ್ಕಾ ಆಗಲಿ ಈ ವಿಚಾರದ ಬಗ್ಗೆ ಎಲ್ಲೂ ಏನನ್ನು ಹೇಳಿಕೊಂಡಿರಲಿಲ್ಲ. ಆದರೆ ಡಿವಿಲಿಯರ್ಸ್ ಈ ವಿಚಾರನ್ನು ಬಹಿರಂಗಪಡಿಸಿದ್ದು, ಇವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗಿತ್ತು.
ಆದಾಗ್ಯೂ ಡಿವಿಲಿಯರ್ಸ್ ತಾನು ಅಜಾಗರೂಕತೆಯಿಂದ ಮಾಡಿದ ತಪ್ಪಿಗೆ ಬಹಿರಂಗವಾಗಿಯೇ ಕ್ಷಮೆಯಾಚಿಸಿದರು ಮತ್ತು ನಾನು ತಪ್ಪು ಮಾಹಿತಿ ನೀಡಿರುವುದಾಗಿಯೂ ಹೇಳಿಕೊಂಡಿದ್ದರು. ಆದರೆ ಫೆಬ್ರವರಿ 15, 2024 ರಂದು ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದಾಗ ಡಿವಿಲಿಯರ್ಸ್ ಹೇಳಿದ್ದು ನಿಜ ಎಂಬುದು ಜಗಜ್ಜಾಹೀರಾಗಿತ್ತು. ಆದರೆ ಡಿವಿಲಿಯರ್ಸ್ ಅವರ ಈ ಹೇಳಿಕೆಯು ಆ ಸಮಯದಲ್ಲಿ ಕೊಹ್ಲಿಯ ಗೌಪ್ಯತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.
‘ವಿಷಕಾರಿ ಪಾತ್ರಗಳಿದ್ದವು’; ತಾನಾಡಿದ ಐಪಿಎಲ್ ತಂಡದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಎಬಿ ಡಿವಿಲಿಯರ್ಸ್
ಡಿವಿಲಿಯರ್ಸ್ ಹೇಳಿದ್ದೇನು?
ತನ್ನ ತಪ್ಪಿನ ನಂತರ ಕೊಹ್ಲಿ ಹಲವಾರು ತಿಂಗಳುಗಳ ಕಾಲ ನನ್ನನ್ನು ಸಂಪರ್ಕಿಸಿರಲಿಲ್ಲ. ಆದರೆ ಕಳೆದ ಆರು ತಿಂಗಳಿನಿಂದ ಕೊಹ್ಲಿ ಅವರೊಂದಿಗೆ ಮಾತನಾಡಲು ನನಗೆ ಅವಕಾಶ ಸಿಕ್ಕಿದೆ. ದೇವರಿಗೆ ಧನ್ಯವಾದಗಳು! ಏಕೆಂದರೆ ಅವರು ಅಷ್ಟು ಗೌಪ್ಯವಾಗಿ ಇಟ್ಟಿದ್ದ ವಿಚಾರವನ್ನು ನಾನು ಆಕಸ್ಮಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ದೊಡ್ಡ ತಪ್ಪು ಮಾಡಿದ್ದೆ. ಆದರೀಗ ನಾವಿಬ್ಬರು ಅದೆಲ್ಲವನ್ನು ಮರೆತುಬಿಟ್ಟಿದ್ದೇವೆ. ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ನಿರ್ಧಾರವನ್ನು ಕೊಹ್ಲಿ ಇತ್ತೀಚೆಗೆ ತಮ್ಮೊಂದಿಗೆ ಚರ್ಚಿಸಿದ್ದರು ಎಂದು ಡಿವಿಲಿಯರ್ಸ್ ಹೇಳಿಕೊಂಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:02 pm, Sun, 15 June 25
