AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವಿಷಕಾರಿ ಪಾತ್ರಗಳಿದ್ದವು’; ತಾನಾಡಿದ ಐಪಿಎಲ್ ತಂಡದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಎಬಿ ಡಿವಿಲಿಯರ್ಸ್

AB de Villiers IPL: ಎಬಿ ಡಿವಿಲಿಯರ್ಸ್ ಅವರ ಐಪಿಎಲ್ ವೃತ್ತಿಜೀವನದ ಆರಂಭ ಡೆಲ್ಲಿ ಡೇರ್‌ಡೆವಿಲ್ಸ್‌ನೊಂದಿಗೆ ಆಗಿತ್ತು. ಆದರೆ ಅಲ್ಲಿ ಅವರು ಕೆಲವು ಸವಾಲುಗಳನ್ನು ಎದುರಿಸಿದರು. ತಂಡದಲ್ಲಿ ಕೆಲವು "ವಿಷಕಾರಿ" ಪಾತ್ರಗಳಿದ್ದವು ಎಂದು ಅವರು ಬಹಿರಂಗಪಡಿಸಿದ್ದಾರೆ. ಆದರೆ ಆರ್‌ಸಿಬಿಗೆ ಸೇರಿದ ನಂತರ ನನ್ನ ವೃತ್ತಿಜೀವನವು ಹೊಸ ಉತ್ತುಂಗಕ್ಕೇರಿತು ಎಂದು ಡಿವಿಲಿಯರ್ಸ್​ ಹೇಳಿಕೊಂಡಿದ್ದಾರೆ.

‘ವಿಷಕಾರಿ ಪಾತ್ರಗಳಿದ್ದವು’; ತಾನಾಡಿದ ಐಪಿಎಲ್ ತಂಡದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಎಬಿ ಡಿವಿಲಿಯರ್ಸ್
Ab De Villiers
ಪೃಥ್ವಿಶಂಕರ
|

Updated on:Jun 15, 2025 | 7:08 PM

Share

ಎಬಿ ಡಿವಿಲಿಯರ್ಸ್ (AB de Villiers) ಎಂದೊಡನೆ ನಮಗೆಲ್ಲ ಥಟ್ಟನೆ ನೆನಪಾಗುವುದು ಐಪಿಎಲ್ (IPL) ಹಾಗೂ ಆರ್​ಸಿಬಿ (RCB) ತಂಡ. ಕರುನಾಡ ತಂಡದಲ್ಲಿ ಬಹಳಷ್ಟು ವರ್ಷಗಳ ಕಾಲ ಆಡಿದ್ದ ಡಿವಿಲಿಯರ್ಸ್ ಕನ್ನಡಿಗರ ಮನೆ ಮಾತಾಗಿದ್ದಾರೆ. ಡಿವಿಲಿಯರ್ಸ್ ಐಪಿಎಲ್​ಗೆ ವಿದಾಯ ಹೇಳಿ ವರ್ಷಗಳೇ ಕಳೆದಿದ್ದರೂ ಅವರಿಗಿರುವ ಅಭಿಮಾನಿಗಳ ಬಳಗ ಕಡಿಮೆಯಾಗಿಲ್ಲ. ವಾಸ್ತವವಾಗಿ ಡಿವಿಲಿಯರ್ಸ್ ಅವರ ಐಪಿಎಲ್ ವೃತ್ತಿಜೀವನ ಆರಂಭವಾಗಿದ್ದು, ಆರ್​ಸಿಬಿ ಜೊತೆಗಲ್ಲ. ಬದಲಿಗೆ ಅಂದಿನ ಡೆಲ್ಲಿ ಡೇರ್‌ಡೆವಿಲ್ಸ್ ತಂಡದೊಂದಿಗೆ. 2008 ರಲ್ಲಿ ಈ ತಂಡವನ್ನು ಸೇರಿಕೊಂಡಿದ್ದ ಡಿವಿಲಿಯರ್ಸ್ 2011 ರ ಸೀಸನ್ ಆರಂಭಕ್ಕೂ ಮುನ್ನ ಈ ತಂಡದಿಂದ ಹೊರಬಿದ್ದಿದ್ದರು. ಆ ಬಳಿಕ ಅವರನ್ನು ಆರ್​ಸಿಬಿ ಖರೀದಿ ಮಾಡಿತ್ತು. ಇದೀಗ ಡೆಲ್ಲಿ ತಂಡದೊಂದಿಗಿನ ಅನುಭವದ ಬಗ್ಗೆ ಮಾತನಾಡಿರುವ ಡಿವಿಲಿಯರ್ಸ್ ಕೆಲವು ಸ್ಫೋಟಕ ಮಾಹಿತಿಗಳನ್ನು ಹೊರಹಾಕಿದ್ದಾರೆ.

ಆ ತಂಡದಲ್ಲಿ ಬೆಂಕಿ ಹಚ್ಚುವ ಜನರಿದ್ದರು

cricket.com ಗೆ ನೀಡಿದ ಸಂದರ್ಶನದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದೊಂದಿಗಿನ ಅನುಭವಗಳನ್ನು ಹಂಚಿಕೊಂಡಿರುವ ಡಿವಿಲಿಯರ್ಸ್, ‘ನಿಮಗೆ ಹೆಸರು ಹೇಳಲು ನಾನು ಇಷ್ಟಪಡುವುದಿಲ್ಲ. ಆದರೆ ಆ ತಂಡದಲ್ಲಿ ಬೆಂಕಿ ಹಚ್ಚುವ ಜನರಿದ್ದರು. ಆ ತಂಡದಲ್ಲಿ ಬಹಳಷ್ಟು ವಿಷಕಾರಿ ಪಾತ್ರಗಳಿದ್ದವು. ಡೆಲ್ಲಿ ತಂಡದಲ್ಲಿ ಅನೇಕ ಶ್ರೇಷ್ಠ ಆಟಗಾರರಿದ್ದರು. ಆದ್ದರಿಂದ ಅದು ನನಗೆ ಸಿಹಿ-ಕಹಿ ಅನುಭವವಾಗಿತ್ತು. ನಾನು ಇನ್ನೂ ಆ ಕ್ಷಣಗಳನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ನನ್ನ ಜೀವನ ಮತ್ತು ವೃತ್ತಿಜೀವನದ ಕೆಲವು ಮುಖ್ಯಾಂಶಗಳು ಆ ಸಮಯದಲ್ಲಿ ನಡೆದವು. ವಿಶೇಷವಾಗಿ ಗ್ಲೆನ್ ಮೆಕ್‌ಗ್ರಾತ್ ಮತ್ತು ಡೇನಿಯಲ್ ವೆಟ್ಟೋರಿಯಂತಹ ವ್ಯಕ್ತಿಗಳೊಂದಿಗೆ ಸಮಯ ಕಳೆಯುವುದು. ನನ್ನ ಜೀವನದ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಿದೆ.

ಅಲ್ಲಿ ನಾವಿಬ್ಬರೂ ಹತ್ತಿರವಾದೆವು. ಆದಾಗ್ಯೂ ನಾನು ಅವರಿಗೆ ಹೆದರುತ್ತಿದ್ದೆ. ಮೆಕ್‌ಗ್ರಾತ್ ಬಗ್ಗೆ ಹೇಳುವುದಾದರೆ, ನಾನು 2006 ರಲ್ಲಿ ಅವರ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡಿದೆ ಮತ್ತು ಭಯದಿಂದ ನನಗೆ ಉಸಿರಾಡಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ನಾನು ಅವರೊಂದಿಗೆ ಮಾತನಾಡಿರಲಿಲ್ಲ. ನಂತರ 2008 ರಲ್ಲಿ ನಾವಿಬ್ಬರು ಐಪಿಎಲ್‌ನಲ್ಲಿ ಒಂದೇ ತಂಡದ ಪರವಾಗಿ ಆಡಬೇಕಾದಾಗ ನಾನು ಅವರ ಪಕ್ಕದಲ್ಲಿ ಕುಳಿತಿದ್ದೆ. ಆಗ ಅವರು ನನಗೆ ನಿಮ್ಮ ಆಟದ ರೀತಿ ಇಷ್ಟ ಎಂದು ಹೇಳಿದ್ದರು.

ನನಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ

ಆ ಬಳಿಕ ನಡೆದಿದ್ದ 2009 ರ ಐಪಿಎಲ್​ ತುಂಬಾ ಚೆನ್ನಾಗಿತ್ತು. ಏಕೆಂದರೆ ಆ ಸೀಸನ್​ನ ಬಹುತೇಕ ಪಂದ್ಯಗಳನ್ನು ನಾನು ದಕ್ಷಿಣ ಆಫ್ರಿಕಾದಲ್ಲಿ ಆಡಿದ್ದೆ. ಆ ಸೀಸನ್‌ನಲ್ಲಿ ನಾನು 465 ರನ್ ಕೂಡ ಬಾರಿಸಿದ್ದೆ. ಹೀಗಾಗಿ ನನಗೆ ತಂಡದಲ್ಲಿ ಖಾಯಂ ಸ್ಥಾನ ಸಿಗುತ್ತದೆ ಎಂದು ಭಾವಿಸಿದ್ದೆ. ಆದರೆ 2010 ರ ಆವೃತ್ತಿಯಲ್ಲಿ ನನಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಆದಾಗ್ಯೂ 2011 ರ ಮೆಗಾ ಹರಾಜಿಗೂ ಮುನ್ನ ನನ್ನನ್ನು ತಂಡದಲ್ಲೇ ಉಳಿಸಿಕೊಳ್ಳುವುದಾಗಿ ಹೇಳಿದ್ದರು. ಆದರೆ ಆ ಬಳಿಕ ನನ್ನ ಹೆಸರು ಹರಾಜಿನಲ್ಲಿ ಪಟ್ಟಿಯಲ್ಲಿರುವುದನ್ನು ನೋಡಿ ನನಗೆ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.

ಆರ್‌ಸಿಬಿ ತಂಡ ಸೇರಿದ ಬಗ್ಗೆ ಎಬಿಡಿ ಹೇಳಿದ್ದೇನು?

2011 ರ ಐಪಿಎಲ್‌ನಲ್ಲಿ ಎಬಿ ಡಿವಿಲಿಯರ್ಸ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿತು. ಆ ಬಳಿಕ ಡಿವಿಲಿಯರ್ಸ್ ಐಪಿಎಲ್‌ನಲ್ಲಿ ಮತ್ತೊಂದು ತಂಡದ ಪರ ಆಡುವ ಅವಕಾಶವೇ ಸಿಗಲಿಲ್ಲ. ಏಕೆಂದರೆ ಡಿವಿಲಿಯರ್ಸ್ ಆರ್​ಸಿಬಿಯ ಜೀವಾಳವಾಗಿಬಿಟ್ಟಿದ್ದರು. ಇನ್ನು ಆರ್‌ಸಿಬಿ ತಂಡವನ್ನು ಸೇರುವ ಬಗ್ಗೆ ಮಾತನಾಡಿರುವ ಎಬಿ ಡಿವಿಲಿಯರ್ಸ್, ‘ನಾನು ಆರ್‌ಸಿಬಿ ತಂಡಕ್ಕೆ ಸೇರಿದ ತಕ್ಷಣ, ಮ್ಯಾನೇಜ್​ಮೆಂಟ್ ನಾನು ಪ್ರತಿ ಪಂದ್ಯದಲ್ಲೂ ಆಡಬೇಕೆಂದು ಬಯಸುತ್ತದೆ ಎಂದು ನನಗೆ ಅನಿಸಿತು. ಅಲ್ಲದೆ ನೀವು ನಮ್ಮ ತಂಡದ ಪ್ರಮುಖ ಆಟಗಾರ ಎಂದು ಮ್ಯಾನೇಜ್​ಮೆಂಟ್ ಹೇಳಿದ್ದು ನನಗೆ ತುಂಬಾ ಆಶ್ಚರ್ಯವಾಯಿತು. ಆ ಬಳಿಕ ಏನಾಯಿತು ಎಂಬುದು ನಿಮ್ಮ ಮುಂದಿದೆ ಎಂದಿದ್ದಾರೆ.

WTC Final 2025: ಟೆಸ್ಟ್ ಚಾಂಪಿಯನ್‌ಶಿಪ್‌ ಗೆಲ್ಲುವ ತಂಡವನ್ನು ಹೆಸರಿಸಿದ ಡಿವಿಲಿಯರ್ಸ್- ಫಿಂಚ್

ಡಿವಿಲಿಯರ್ಸ್ ಐಪಿಎಲ್ ವೃತ್ತಿಜೀವನ

ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಪರ ಮೂರು ಆವೃತ್ತಿಗಳನ್ನು ಆಡಿದ್ದ ಡಿವಿಲಿಯರ್ಸ್, ಆಡಿದ್ದ 28 ಪಂದ್ಯಗಳಲ್ಲಿ 31.91 ಸರಾಸರಿಯಲ್ಲಿ 671 ರನ್ ಗಳಿಸಿದ್ದರು. ಇದರಲ್ಲಿ ಮೂರು ಅರ್ಧ ಶತಕ ಮತ್ತು ಒಂದು ಶತಕವೂ ಸೇರಿತ್ತು. ಆ ನಂತರ 2011 ರಲ್ಲಿ ಆರ್​ಸಿಬಿ ಸೇರಿದ ಎಬಿಡಿ, 156 ಪಂದ್ಯಗಳನ್ನಾಡಿ 41.20 ಸರಾಸರಿಯಲ್ಲಿ 4491 ರನ್ ಬಾರಿಸಿದರು. ಇದರಲ್ಲಿ 37 ಅರ್ಧ ಶತಕ ಮತ್ತು ಎರಡು ಶತಕಗಳು ಸೇರಿದ್ದವು. ಒಟ್ಟಾರೆಯಾಗಿ 184 ಐಪಿಎಲ್ ಪಂದ್ಯಗಳನ್ನಾಡಿರುವ ಡಿವಿಲಿಯರ್ಸ್, 39.70 ಸರಾಸರಿ ಮತ್ತು 151.68 ಸ್ಟ್ರೈಕ್ ರೇಟ್​ನಲ್ಲಿ 5162 ರನ್ ಬಾರಿಸಿದ್ದಾರೆ. ಇದರಲ್ಲಿ 40 ಅರ್ಧಶತಕಗಳು ಮತ್ತು 3 ಶತಕಗಳು ಸೇರಿವೆ.

Published On - 6:59 pm, Sun, 15 June 25

ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!