AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಕೆಟ್ ಪಡೆಯದ ಬುಮ್ರಾ.. ಸಿರಾಜ್, ಅರ್ಷ್​ದೀಪ್ ದುಬಾರಿ; ಭಾರತಕ್ಕೆ ಟೆನ್ಷನ್ ಶುರು

Team India's Intra-Squad Game: ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತಯಾರಿಯಾಗಿ ಅಂತರ-ತಂಡ ಪಂದ್ಯವನ್ನು ಆಡಿತು. ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಿದರೂ, ಬೌಲರ್‌ಗಳು ನಿರಾಶೆ ಮೂಡಿಸಿದರು. ಬುಮ್ರಾ ಅವರಿಗೆ ವಿಕೆಟ್ ಸಿಗದಿರುವುದು ಹಾಗೂ ಸಿರಾಜ್ ಮತ್ತು ಅರ್ಷ್‌ದೀಪ್ ಅವರು ರನ್‌ಗಳನ್ನು ತಡೆಯಲು ವಿಫಲರಾದದ್ದು ಕಳವಳಕಾರಿ ವಿಷಯವಾಗಿದೆ.

ವಿಕೆಟ್ ಪಡೆಯದ ಬುಮ್ರಾ.. ಸಿರಾಜ್, ಅರ್ಷ್​ದೀಪ್ ದುಬಾರಿ; ಭಾರತಕ್ಕೆ ಟೆನ್ಷನ್ ಶುರು
Team India
ಪೃಥ್ವಿಶಂಕರ
|

Updated on: Jun 15, 2025 | 10:02 PM

Share

ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಟೀಂ ಇಂಡಿಯಾ ತನ್ನ ಸಿದ್ಧತೆಗಳನ್ನು ಅಂತಿಮಗೊಳಿಸುವ ಸಲುವಾಗಿಯೇ ತನ್ನೊಳಗೆಯೇ ಇಂಟ್ರಾ-ಸ್ಕ್ವಾಡ್ ಪಂದ್ಯವನ್ನು (India’s Intra-Squad Match) ಆಡಿತು. ಈ ಪಂದ್ಯದಲ್ಲಿ ಆಟಗಾರರ ಪ್ರದರ್ಶನದ ಆಧಾರದ ಮೇಲೆ ಆಯ್ಕೆದಾರರು ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಗೆ ಬಲಿಷ್ಠ ಪ್ಲೇಯಿಂಗ್ 11 ಕಟ್ಟುವ ಲೆಕ್ಕಾಚಾರ ಹಾಕಿಕೊಂಡಿದ್ದರು. ಆಯ್ಕೆದಾರರ ನಿರೀಕ್ಷೆಯಂತೆ ತಂಡದ ಬ್ಯಾಟಿಂಗ್ ವಿಭಾಗ ನಿರೀಕ್ಷಿತ ಪ್ರದರ್ಶನ ನೀಡಿತು. ನಾಯಕ ಗಿಲ್, ಅನುಭವಿ ಕೆಎಲ್ ರಾಹುಲ್ (KL Rahul), ಯುವ ಆಟಗಾರ ಸರ್ಫರಾಜ್ ಹಾಗೂ ಆಲ್‌ರೌಂಡರ್ ಶಾರ್ದೂಲ್ ಠಾಕೂರ್​ ಬ್ಯಾಟಿಂಗ್​ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದರು. ಆದರೆ ಆಯ್ಕೆದಾರರ ಚಿಂತೆ ಹೆಚ್ಚಿಸಿರುವುದು ತಂಡದ ಬೌಲಿಂಗ್ ವಿಭಾಗ. ಏಕೆಂದರೆ ತಂಡದ ಬೌಲಿಂಗ್ ಜೀವಾಳ ಎನಿಸಿಕೊಂಡಿರುವ ಬುಮ್ರಾಗೆ ಯಾವುದೇ ವಿಕೆಟ್ ಸಿಗಲಿಲ್ಲ. ಇನ್ನು ವಿಕೆಟ್ ಪಡೆಯಲು ಯಶಸ್ವಿಯಾದ ಸಿರಾಜ್ ಹಾಗೂ ಅರ್ಷ್​ದೀಪ್ ರನ್​ಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ.

ಬ್ಯಾಟ್ಸ್‌ಮನ್‌ಗಳ ಉತ್ತಮ ಪ್ರದರ್ಶನ

ಇಂಟ್ರಾ-ಸ್ಕ್ವಾಡ್ ಪಂದ್ಯದ ಎರಡನೇ ದಿನದಂದು ಬ್ಯಾಟಿಂಗ್ ಮಾಡಿದ ಆರಂಭಿಕ ಆಟಗಾರ ಅಭಿಮನ್ಯು ಈಶ್ವರನ್ 39 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಇದಾದ ನಂತರ, ಸಾಯಿ ಸುದರ್ಶನ್ ಏಳು ಬೌಂಡರಿಗಳನ್ನು ಒಳಗೊಂಡಂತೆ 38 ರನ್ ಗಳಿಸಿದರು. ಯುವ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ 15 ಬೌಂಡರಿ ಮತ್ತು 2 ಸಿಕ್ಸರ್‌ ಸಹಿತ 101 ರನ್ ಕಲೆಹಾಕಿದರು. ವಾಷಿಂಗ್ಟನ್ ಸುಂದರ್ 35 ರನ್, ಇಶಾನ್ ಕಿಶನ್ (45*) ಮತ್ತು ಶಾರ್ದೂಲ್ ಠಾಕೂರ್ (19*) ಅಜೇಯರಾಗಿ ಉಳಿದು ತಂಡವನ್ನು 51 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 299 ರನ್​ಗಳಿಗೆ ಕೊಂಡೊಯ್ದರು.

ಬೌಲರ್‌ಗಳ ಕಳಪೆ ಪ್ರದರ್ಶನ

ಮತ್ತೊಂದೆಡೆ, ಭಾರತೀಯ ಬೌಲರ್‌ಗಳ ಪ್ರದರ್ಶನ ಸಂಪೂರ್ಣವಾಗಿ ನೀರಸವಾಗಿತ್ತು. ಮೊಹಮ್ಮದ್ ಸಿರಾಜ್ 12 ಓವರ್‌ಗಳಲ್ಲಿ 86 ರನ್‌ಗಳನ್ನು ಬಿಟ್ಟುಕೊಟ್ಟು ಕೇವಲ 2 ವಿಕೆಟ್‌ಗಳನ್ನು ಪಡೆದರೆ, ಅರ್ಷ್​ದೀಪ್ ಸಿಂಗ್ 12 ಓವರ್‌ಗಳಲ್ಲಿ 52 ರನ್‌ಗಳನ್ನು ಬಿಟ್ಟುಕೊಟ್ಟರಾದರೂ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಜಸ್ಪ್ರೀತ್ ಬುಮ್ರಾ 7 ಓವರ್‌ಗಳಲ್ಲಿ 36 ರನ್‌ಗಳನ್ನು ಬಿಟ್ಟುಕೊಟ್ಟು ವಿಕೆಟ್ ಪಡೆಯುವಲ್ಲಿ ವಿಫಲರಾದರು. ಇದ್ದುದ್ದರಲ್ಲಿ ಉತ್ತಮ ಪ್ರದರ್ಶನ ನೀಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ 10 ಓವರ್‌ಗಳಲ್ಲಿ 41 ರನ್‌ ನೀಡಿ 2 ವಿಕೆಟ್‌ಗಳನ್ನು ಪಡೆದರು. ಇವರ ಹೊರತಾಗಿ, ಕೆ.ಎನ್. ರೆಡ್ಡಿ 9 ಓವರ್‌ಗಳಲ್ಲಿ 68 ರನ್‌ಗಳಿಗೆ 1 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಕೇವಲ ಒಂದು ಓವರ್ ಬೌಲ್ ಮಾಡಿ 3 ರನ್‌ ಬಿಟ್ಟುಕೊಟ್ಟರು. ಬೌಲರ್‌ಗಳ ಈ ಕಳಪೆ ಬೌಲಿಂಗ್ ಬ್ಯಾಟ್ಸ್‌ಮನ್‌ಗಳಿಗೆ ರನ್‌ಗಳ ಮಳೆಗರೆಯುವ ಅವಕಾಶವನ್ನು ನೀಡಿತು.

ಇಂಗ್ಲೆಂಡ್‌ ನೆಲದಲ್ಲಿ ಅಜೇಯ ಶತಕ ಸಿಡಿಸಿದ ಲಾರ್ಡ್ ಶಾರ್ದೂಲ್ ಠಾಕೂರ್

ಈ ಅಂತರ್-ತಂಡದ ಪಂದ್ಯವು ಜೂನ್ 20, 2025 ರಂದು ಪ್ರಾರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಸರಣಿಗೆ ಟೀಂ ಇಂಡಿಯಾದ ಸಿದ್ಧತೆಗಳ ಒಂದು ಭಾಗವಾಗಿದೆ. ಆದರೆ ಬೌಲರ್‌ಗಳ ಈ ಕಳಪೆ ಪ್ರದರ್ಶನವು ಕಳವಳವನ್ನು ಹುಟ್ಟುಹಾಕಿದೆ. ವಿಶೇಷವಾಗಿ ಸಿರಾಜ್ ಮತ್ತು ಬುಮ್ರಾ ಅವರಂತಹ ಅನುಭವಿಗಳಿಂದ ಹೆಚ್ಚಿನ ನಿರೀಕ್ಷೆಗಳಿದ್ದವು. ಆದರೆ ಇವರಿಬ್ಬರು ನಿರೀಕ್ಷೆಗೆ ತಕ್ಕಂತ ಪ್ರದರ್ಶನ ನೀಡಿಲ್ಲ. ಮತ್ತೊಂದೆಡೆ, ಬ್ಯಾಟ್ಸ್‌ಮನ್‌ಗಳ ಫಾರ್ಮ್ ತಂಡಕ್ಕೆ ಸಕಾರಾತ್ಮಕ ಸಂಕೇತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಇಂಗ್ಲೆಂಡ್‌ನ ಸವಾಲನ್ನು ಎದುರಿಸಲು ಕೋಚ್ ಮತ್ತು ನಾಯಕ ಈಗ ಬೌಲರ್‌ಗಳ ಫಿಟ್‌ನೆಸ್ ಮತ್ತು ಕಾರ್ಯತಂತ್ರದ ಬಗ್ಗೆ ಕೆಲಸ ಮಾಡಬೇಕಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ