PBKS vs RR: ಅಂಪೈರ್​ಗಳ ಕೆಟ್ಟ ತೀರ್ಪಿನಿಂದ​ ಪಂಜಾಬ್ ಕಿಂಗ್ಸ್​ಗೆ ಸೋಲು?

| Updated By: ಝಾಹಿರ್ ಯೂಸುಫ್

Updated on: Sep 22, 2021 | 6:02 PM

PBKS vs RR in IPL 2021: ಈ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಮತ್ತು ಕಾಮೆಂಟೇಟರ್ ಆಕಾಶ್ ಚೋಪ್ರಾ ಪ್ರಶ್ನೆಗಳನ್ನೆತ್ತಿದ್ದು, ಕೊನೆಯ ಓವರ್‌ನ ಎರಡು ಎಸೆತಗಳು ನೋ ಬಾಲ್ ಆಗಿದ್ದರೂ ಅಂಪೈರ್​ ಮೌನ ಪಂಜಾಬ್ ಪಾಲಿಗೆ ದುಬಾರಿಯಾಯಿತು ಎಂದಿದ್ದಾರೆ.

PBKS vs RR: ಅಂಪೈರ್​ಗಳ ಕೆಟ್ಟ ತೀರ್ಪಿನಿಂದ​ ಪಂಜಾಬ್ ಕಿಂಗ್ಸ್​ಗೆ ಸೋಲು?
PBKS vs RR
Follow us on

ಐಪಿಎಲ್ 2021ರ 32 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಪಂಜಾಬ್ ಕಿಂಗ್ಸ್ ತಂಡದ ವಿರುದ್ದ 2 ರನ್​ಗಳ ರೋಚಕ ಜಯ ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್​ 185 ರನ್​ ಬಾರಿಸಿತು. 186 ರನ್ ಗಳ ಗುರಿ ಪಡೆದ ಪಂಜಾಬ್ ಕಿಂಗ್ಸ್​ ತಂಡ ನಿಗದಿತ ಓವರ್ ನಲ್ಲಿ ಕೇವಲ 183 ರನ್ ಗಳಿಸಲಷ್ಟೇ ಶಕ್ತವಾಯಿತು. ಕೊನೆಯ ಓವರ್​ನಲ್ಲಿ ಕೇವಲ 4 ರನ್​ಗಳ ಗುರಿ ಪಡೆದಿದ್ದ ಪಂಜಾಬ್ ಕಾರ್ತಿಕ್ ತ್ಯಾಗಿ ಕೊನೆಯ ಓವರ್ ನಲ್ಲಿ ಕೇವಲ 1 ರನ್​ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ರಾಜಸ್ಥಾನ್ ತಂಡವು 2 ರನ್​ಗಳ ರೋಚಕ ಜಯ ಸಾಧಿಸಿತು. ಆದರೆ ಇದಕ್ಕೂ ಮುನ್ನ ಅಂಪೈರ್ ನೀಡಿದ ಕೆಟ್ಟ ತೀರ್ಪಿನಿಂದಾಗಿ ಪಂಜಾಬ್​ ತಂಡಕ್ಕೆ 2 ರನ್​ಗಳು ಕಳೆದುಕೊಂಡಿತು ಎಂದರೆ ನಂಬಲೇಬೇಕು.

19ನೇ ಓವರ್‌ನಲ್ಲಿ ಅಂಪೈರ್‌ ಮಾಡಿದ ತಪ್ಪು ಪಂಜಾಬ್‌ ಸೋಲಿಗೆ ಪ್ರಮುಖ ಕಾರಣವಾಯ್ತು. ಮುಸ್ತಫಿಜುರ್ ರೆಹಮಾನ್ ಎಸೆದ ಈ ಓವರ್​ನಲ್ಲಿ ಎರಡು ಲೈನ್​ ನೋ ಬಾಲ್​ಗಳು ಮೂಡಿಬಂದಿದ್ದವು. ಆದರೆ ಅದನ್ನು ಆನ್-ಫೀಲ್ಡ್ ಅಂಪೈರ್ ಮತ್ತು ಮೂರನೇ ಅಂಪೈರ್ ನಿರ್ಲಕ್ಷಿಸಿದರು. ಇತ್ತ ಬ್ಯಾಟ್ಸ್​ಮನ್​ಗಳಿಗೂ ಅದನ್ನು ಅಪೀಲ್ ಮಾಡುವ ಆಯ್ಕೆ ಇರಲಿಲ್ಲ. ಆ ಎರಡು ನೋಬಾಲ್​ಗಳಿಂದ 2 ರನ್​ ಕಳೆದುಕೊಂಡ ಪಂಜಾಬ್ ಕಿಂಗ್ಸ್​ ಅಂತಿಮದಲ್ಲಿ 2 ರನ್​ಗಳಿಂದ ಸೋಲನುಭವಿಸಿದ್ದು ವಿಪರ್ಯಾಸ.

ಈ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಮತ್ತು ಕಾಮೆಂಟೇಟರ್ ಆಕಾಶ್ ಚೋಪ್ರಾ ಪ್ರಶ್ನೆಗಳನ್ನೆತ್ತಿದ್ದು, ಕೊನೆಯ ಓವರ್‌ನ ಎರಡು ಎಸೆತಗಳು ನೋ ಬಾಲ್ ಆಗಿದ್ದರೂ ಅಂಪೈರ್​ ಮೌನ ಪಂಜಾಬ್ ಪಾಲಿಗೆ ದುಬಾರಿಯಾಯಿತು ಎಂದಿದ್ದಾರೆ. ಇನ್ನು ಅಂಪೈರ್ ತೀರ್ಪಿಗೆ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ಈ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Virat Kohli: ನಮಗೆ ಸೋಲುಣಿಸಿದ ಆತನೇ ನಮ್ಮ ಪ್ರಮುಖ ಅಸ್ತ್ರ..!

ಇದನ್ನೂ ಓದಿ: Virat Kohli: ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ

ಇದನ್ನೂ ಓದಿ: 90 ಕಿ.ಮೀ ಮೈಲೇಜ್ ನೀಡುವ ಕಡಿಮೆ ಬೆಲೆಯ ಬೈಕ್​ಗಳ ಪಟ್ಟಿ ಇಲ್ಲಿದೆ

ಇದನ್ನೂ ಓದಿ: IPL 2021: ಪ್ಲೇ ಆಫ್​ ಪ್ರವೇಶಿಸುವ 4 ತಂಡಗಳನ್ನು ಹೆಸರಿಸಿದ ಗೌತಮ್ ಗಂಭೀರ್

(PBKS vs RR in IPL 2021: umpires ignores 2 no balls)