SRH: ನಟರಾಜನ್, ವಿಜಯ್ ಶಂಕರ್ ಔಟ್: ಸನ್​ರೈಸರ್ಸ್ ಹೈದರಾಬಾದ್​​ ತಂಡದಲ್ಲಿ ಯಾರಿಗೆ ಸಿಗಲಿದೆ ಚಾನ್ಸ್​?

IPL 2021 SRH: ಸನ್​ರೈಸರ್ಸ್​ ಹೈದರಾಬಾದ್​ ಸಂಪೂರ್ಣ ತಂಡ ಹೀಗಿದೆ: ವೃದ್ಧಿಮಾನ್ ಸಾಹಾ , ಕೇನ್ ವಿಲಿಯಮ್ಸನ್ (ನಾಯಕ) , ಡೇವಿಡ್ ವಾರ್ನರ್ , ಮನೀಶ್ ಪಾಂಡೆ , ಅಬ್ದುಲ್ ಸಮದ್ , ಜೇಸನ್ ಹೋಲ್ಡರ್.

SRH: ನಟರಾಜನ್, ವಿಜಯ್ ಶಂಕರ್ ಔಟ್: ಸನ್​ರೈಸರ್ಸ್ ಹೈದರಾಬಾದ್​​ ತಂಡದಲ್ಲಿ ಯಾರಿಗೆ ಸಿಗಲಿದೆ ಚಾನ್ಸ್​?
SRH
Follow us
TV9 Web
| Updated By: ಝಾಹಿರ್ ಯೂಸುಫ್

Updated on:Sep 22, 2021 | 4:41 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2021)​ ಮೇಲೆ ಮತ್ತೊಮ್ಮೆ ಕೊರೋನಾ ಕಾರ್ಮೋಡ ಕವಿದಿದೆ. ಐಪಿಎಲ್​ ಸೀಸನ್​ 14 ಮೊದಲಾರ್ಧದ ವೇಳೆ ಆಟಗಾರರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟೂರ್ನಿಯನ್ನು ಮುಂದೂಡಲಾಗಿತ್ತು. ಇದೀಗ ಟೂರ್ನಿಯ ದ್ವಿತಿಯಾರ್ಧ ಆರಂಭವಾಗಿ ಎರಡು ದಿನಗಳಲ್ಲೇ ಸನ್​ರೈಸರ್ಸ್​ ಹೈದರಾಬಾದ್ (SRH) ಆಟಗಾರ ಟಿ ನಟರಾಜನ್ (T. Natarajan) ಅವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇದೀಗ ನಟರಾಜನ್​ ಅವರನ್ನು ತಂಡದ ಉಳಿದ ಆಟಗಾರರಿಂದ ಪತ್ಯೇಕಿಸಲಾಗಿದ್ದು, ಹಾಗೆಯೇ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಹೈದರಾಬಾದ್‌ನ ಆರು ಸದಸ್ಯರನ್ನು ಕೂಡ ಪ್ರತ್ಯೇಕವಾಗಿ ಇರಿಸಲಾಗಿದೆ.

ಅದರಂತೆ ಎಸ್​ಆರ್​ಹೆಚ್ ತಂಡದ ಆಲ್​ರೌಂಡರ್ ವಿಜಯ್ ಶಂಕರ್, ತಂಡದ ಮ್ಯಾನೇಜರ್ ವಿಜಯ್ ಕುಮಾರ್, ಫಿಸಿಯೋಥೆರಪಿಸ್ಟ್ ಶ್ಯಾಮ್ ಸುಂದರ್, ಡಾ ಅಂಜನಾ ವನನ್, ಲಾಜಿಸ್ಟಿಕ್ಸ್ ಮ್ಯಾನೇಜರ್ ತುಷಾರ್ ಖೇಡ್ಕರ್ ಮತ್ತು ನೆಟ್ ಬೌಲರ್ ಪೆರಿಯಸ್ವಾಮಿ ಗಣೇಶನ್ ಅವರನ್ನು ಪತ್ಯೇಕವಾಗಿ ಇರಿಸಲಾಗಿದೆ. ಇದಾಗ್ಯೂ ಇಂದಿನ ಪಂದ್ಯವನ್ನು ನಡೆಸಲಾಗುವುದು ಎಂದು ಐಪಿಎಲ್ ಆಡಳಿತ ಮಂಡಳಿ ತಿಳಿಸಿದೆ.

ಹೀಗಾಗಿ ಇಂದಿನ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ಪರ ವಿಜಯ್ ಶಂಕರ್ ಹಾಗೂ ಟಿ ನಟರಾಜನ್ ಕಣಕ್ಕಿಳಿಯುವುದಿಲ್ಲ. ಇವರ ಬದಲಿಗೆ ಯುವ ಆಟಗಾರರಿಗೆ ಚಾನ್ಸ್ ಸಿಗುವ ಸಾಧ್ಯತೆಯಿದೆ. ಏಕೆಂದರೆ ಎಸ್​ಆರ್​ಹೆಚ್​ ತಂಡದಲ್ಲಿ ಭಾರತೀಯ ಆಟಗಾರರ ದಂಡೇ ಇದೆ. ಆಲ್​ರೌಂಡರ್​ಗಳಾಗಿ ಅಭಿಷೇಕ್ ಶರ್ಮಾ, ಜೆ ಸುಚಿತ್, ಅಬ್ದುಲ್ ಸಮದ್, ಕೇದರ್ ಜಾಧವ್ ಇದ್ದು, ಇವರಲ್ಲಿ ಒಬ್ಬರು ವಿಜಯ್ ಶಂಕರ್ ಸ್ಥಾನದಲ್ಲಿ ಕಣಕ್ಕಿಳಿಯಲಿದ್ದಾರೆ. ಕಳೆದ ಬಾರಿಯ ಫಾರ್ಮ್​ ಹಾಗೂ ಈ ಪ್ರದರ್ಶನಕ್ಕೆ ಒತ್ತು ನೀಡುವುದಾದರೆ ವಿಜಯ್ ಶಂಕರ್ ಸ್ಥಾನದಲ್ಲಿ ಅಭಿಷೇಕ್ ಶರ್ಮಾ ಅಥವಾ ಜೆ ಸುಚಿತ್ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚು.

ಇನ್ನು ಬೌಲಿಂಗ್ ವಿಭಾಗದಲ್ಲಿ ನಟರಾಜನ್ ಅಲಭ್ಯರಾಗಲಿದ್ದು, ಅದರಂತೆ ತಂಡದಲ್ಲಿರುವ ಮತ್ತೋರ್ವ ಎಡಗೈ ವೇಗಿ ಖಲೀಲ್ ಅಹ್ಮದ್ ಸ್ಥಾನ ಪಡೆಯಬಹುದು. ಇದಾಗ್ಯೂ ಸಿದ್ಧಾರ್ಥ್ ಕೌಲ್, ಬಾಸಿಲ್ ಥಂಪಿ ಕೂಡ ಅನುಭವಿ ವೇಗಿಗಳಾಗಿ ತಂಡದಲ್ಲಿದ್ದು, ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು.

ಸನ್​ರೈಸರ್ಸ್​ ಹೈದರಾಬಾದ್​ ಸಂಪೂರ್ಣ ತಂಡ ಹೀಗಿದೆ: ವೃದ್ಧಿಮಾನ್ ಸಾಹಾ , ಕೇನ್ ವಿಲಿಯಮ್ಸನ್ (ನಾಯಕ) , ಡೇವಿಡ್ ವಾರ್ನರ್ , ಮನೀಶ್ ಪಾಂಡೆ , ಅಬ್ದುಲ್ ಸಮದ್ , ಜೇಸನ್ ಹೋಲ್ಡರ್ , ರಶೀದ್ ಖಾನ್ , ಭುವನೇಶ್ವರ್ ಕುಮಾರ್ , ಸಂದೀಪ್ ಶರ್ಮಾ , ಶ್ರೀವತ್ಸ ಗೋಸ್ವಾಮಿ , ಸಿದ್ದಾರ್ಥ್ ಕೌಲ್ , ಕೇದರ್ ಜಾಧವ್ , ಮೊಹಮ್ಮದ್ ನಬಿ , ಜೇಸನ್ ರಾಯ್ , ಶಹಬಾಜ್ ನದೀಮ್ , ವಿರಾಟ್ ಸಿಂಗ್ , ಬಾಸಿಲ್ ಥಂಪಿ , ಜಗದೀಶ ಸುಚಿತ್ , ಖಲೀಲ್ ಅಹ್ಮದ್, ಮುಜೀಬ್ ಉರ್ ರೆಹಮಾನ್ , ಅಭಿಷೇಕ್ ಶರ್ಮಾ , ಪ್ರಿಯಂ ಗರ್ಗ್ , ಶೆರ್ಫೇನ್ ರುದರ್‌ಫೋರ್ಡ್. ಹೊರಗುಳಿದಿರುವ ಆಟಗಾರರು: ವಿಜಯ್ ಶಂಕರ್ , ಟಿ ನಟರಾಜನ್

Published On - 4:36 pm, Wed, 22 September 21

ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್