PBKS vs RR: ಅಂಪೈರ್ಗಳ ಕೆಟ್ಟ ತೀರ್ಪಿನಿಂದ ಪಂಜಾಬ್ ಕಿಂಗ್ಸ್ಗೆ ಸೋಲು?
PBKS vs RR in IPL 2021: ಈ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಮತ್ತು ಕಾಮೆಂಟೇಟರ್ ಆಕಾಶ್ ಚೋಪ್ರಾ ಪ್ರಶ್ನೆಗಳನ್ನೆತ್ತಿದ್ದು, ಕೊನೆಯ ಓವರ್‌ನ ಎರಡು ಎಸೆತಗಳು ನೋ ಬಾಲ್ ಆಗಿದ್ದರೂ ಅಂಪೈರ್ ಮೌನ ಪಂಜಾಬ್ ಪಾಲಿಗೆ ದುಬಾರಿಯಾಯಿತು ಎಂದಿದ್ದಾರೆ.
ಐಪಿಎಲ್ 2021ರ 32 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಪಂಜಾಬ್ ಕಿಂಗ್ಸ್ ತಂಡದ ವಿರುದ್ದ 2 ರನ್ಗಳ ರೋಚಕ ಜಯ ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ 185 ರನ್ ಬಾರಿಸಿತು. 186 ರನ್ ಗಳ ಗುರಿ ಪಡೆದ ಪಂಜಾಬ್ ಕಿಂಗ್ಸ್ ತಂಡ ನಿಗದಿತ ಓವರ್ ನಲ್ಲಿ ಕೇವಲ 183 ರನ್ ಗಳಿಸಲಷ್ಟೇ ಶಕ್ತವಾಯಿತು. ಕೊನೆಯ ಓವರ್‌ನಲ್ಲಿ ಕೇವಲ 4 ರನ್ಗಳ ಗುರಿ ಪಡೆದಿದ್ದ ಪಂಜಾಬ್ ಕಾರ್ತಿಕ್ ತ್ಯಾಗಿ ಕೊನೆಯ ಓವರ್ ನಲ್ಲಿ ಕೇವಲ 1 ರನ್ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ರಾಜಸ್ಥಾನ್ ತಂಡವು 2 ರನ್ಗಳ ರೋಚಕ ಜಯ ಸಾಧಿಸಿತು. ಆದರೆ ಇದಕ್ಕೂ ಮುನ್ನ ಅಂಪೈರ್ ನೀಡಿದ ಕೆಟ್ಟ ತೀರ್ಪಿನಿಂದಾಗಿ ಪಂಜಾಬ್ ತಂಡಕ್ಕೆ 2 ರನ್ಗಳು ಕಳೆದುಕೊಂಡಿತು ಎಂದರೆ ನಂಬಲೇಬೇಕು.
19ನೇ ಓವರ್‌ನಲ್ಲಿ ಅಂಪೈರ್ ಮಾಡಿದ ತಪ್ಪು ಪಂಜಾಬ್ ಸೋಲಿಗೆ ಪ್ರಮುಖ ಕಾರಣವಾಯ್ತು. ಮುಸ್ತಫಿಜುರ್ ರೆಹಮಾನ್ ಎಸೆದ ಈ ಓವರ್‌ನಲ್ಲಿ ಎರಡು ಲೈನ್ ನೋ ಬಾಲ್ಗಳು ಮೂಡಿಬಂದಿದ್ದವು. ಆದರೆ ಅದನ್ನು ಆನ್-ಫೀಲ್ಡ್ ಅಂಪೈರ್ ಮತ್ತು ಮೂರನೇ ಅಂಪೈರ್ ನಿರ್ಲಕ್ಷಿಸಿದರು. ಇತ್ತ ಬ್ಯಾಟ್ಸ್ಮನ್ಗಳಿಗೂ ಅದನ್ನು ಅಪೀಲ್ ಮಾಡುವ ಆಯ್ಕೆ ಇರಲಿಲ್ಲ. ಆ ಎರಡು ನೋಬಾಲ್ಗಳಿಂದ 2 ರನ್ ಕಳೆದುಕೊಂಡ ಪಂಜಾಬ್ ಕಿಂಗ್ಸ್ ಅಂತಿಮದಲ್ಲಿ 2 ರನ್ಗಳಿಂದ ಸೋಲನುಭವಿಸಿದ್ದು ವಿಪರ್ಯಾಸ.
ಈ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಮತ್ತು ಕಾಮೆಂಟೇಟರ್ ಆಕಾಶ್ ಚೋಪ್ರಾ ಪ್ರಶ್ನೆಗಳನ್ನೆತ್ತಿದ್ದು, ಕೊನೆಯ ಓವರ್‌ನ ಎರಡು ಎಸೆತಗಳು ನೋ ಬಾಲ್ ಆಗಿದ್ದರೂ ಅಂಪೈರ್ ಮೌನ ಪಂಜಾಬ್ ಪಾಲಿಗೆ ದುಬಾರಿಯಾಯಿತು ಎಂದಿದ್ದಾರೆ. ಇನ್ನು ಅಂಪೈರ್ ತೀರ್ಪಿಗೆ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ಈ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Virat Kohli: ನಮಗೆ ಸೋಲುಣಿಸಿದ ಆತನೇ ನಮ್ಮ ಪ್ರಮುಖ ಅಸ್ತ್ರ..!
ಇದನ್ನೂ ಓದಿ: Virat Kohli: ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ
ಇದನ್ನೂ ಓದಿ: 90 ಕಿ.ಮೀ ಮೈಲೇಜ್ ನೀಡುವ ಕಡಿಮೆ ಬೆಲೆಯ ಬೈಕ್ಗಳ ಪಟ್ಟಿ ಇಲ್ಲಿದೆ
ಇದನ್ನೂ ಓದಿ: IPL 2021: ಪ್ಲೇ ಆಫ್ ಪ್ರವೇಶಿಸುವ 4 ತಂಡಗಳನ್ನು ಹೆಸರಿಸಿದ ಗೌತಮ್ ಗಂಭೀರ್
(PBKS vs RR in IPL 2021: umpires ignores 2 no balls)