ICC ODI World Cup Final: ಪಿಚ್-ಸ್ವಾಪಿಂಗ್ನಿಂದ ಕೋಪಗೊಂಡು ಭಾರತ ತೊರೆದ ಪಿಚ್ ಸಲಹೆಗಾರ?: ಐಸಿಸಿಯಿಂದ ಬಂತು ಸ್ಪಷ್ಟನೆ
India vs Australia Pitch Report: ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಸೆಮಿಫೈನಲ್‌ಗೆ ಆತಿಥೇಯ ರಾಷ್ಟ್ರವು ಹೊಸ ಟ್ರ್ಯಾಕ್ ಅನ್ನು ಉಪಯೋಗಿಸದೆ ಹಳೆಯ ಪಿಚ್ನಲ್ಲೇ ಆಡಿದೆ ಎಂದು ಅಟ್ಕಿನ್ಸನ್ ಆರೋಪಿಸಿದ್ದರು. ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ನಂತರ ಐಸಿಸಿ, ''ನಾಕ್-ಔಟ್ ಪಂದ್ಯಗಳನ್ನು ತಾಜಾ ಟ್ರ್ಯಾಕ್‌ನಲ್ಲೇ ನಡೆಸ ಬೇಕು ಎಂಬ ಯಾವುದೇ ನಿಯಮವಿಲ್ಲ. ಅಟ್ಕಿನ್ಸನ್ಗೆ ಬೆಳವಣಿಗೆಯ ಬಗ್ಗೆ ತಿಳಿಸಲಾಗಿದೆ'', ಎಂದು ಹೇಳಿತು.

ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ (ICC ODI World Cup) ಭಾರತ ತಂಡ ತನಗೆ ಬೇಕಾದಂತೆ ಪಿಚ್ ಅನ್ನು ತಯಾರು ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದರ ನಡುವೆ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯ ನಡುವಿನ ವಿಶ್ವಕಪ್ ಫೈನಲ್‌ಗೆ ಕೆಲವೇ ಗಂಟೆಗಳ ಮೊದಲು ಐಸಿಸಿ ಪಿಚ್ ಸಲಹೆಗಾರ ಆಂಡಿ ಅಟ್ಕಿನ್ಸನ್ ತಮ್ಮ ದೇಶಕ್ಕೆ ಹಿಂತಿರುಗಿದ್ದಾರೆ ಎಂಬ ಸುದ್ದಿ ಹೊರಬಿತ್ತು. ಭಾರತ ಮತ್ತು ನ್ಯೂಝಿಲೆಂಡ್ ಸೆಮಿಫೈನಲ್‌ಗೆ ಬಿಸಿಸಿಐ ಪಿಚ್ ಅನ್ನು ಬದಲಾಯಿಸಿದೆ ಎಂದು ಆರೋಪಿಸಿ ಆಂಡಿ ತವರಿಗೆ ಮರಳಿದ್ದಾರೆ ಎನ್ನಲಾಗಿತ್ತು. ಆದರೆ, ಇದೀಗ ಐಸಿಸಿ ಈ ಬಗ್ಗೆ ಸ್ಪಷ್ಟನೆ ನೀಡಿದೆ.
”ಐಸಿಸಿ ಪಿಚ್ ಸಲಹೆಗಾರ ಆಂಡಿ ಅಟ್ಕಿನ್ಸನ್ ಅಹ್ಮದಾಬಾದ್ಗೆ ಶುಕ್ರವಾರ ಸಂಜೆಯಷ್ಟೇ ಆಗಮಿಸಿದ್ದು, ಶನಿವಾರದಂದು ಪಿಚ್ ಅನ್ನು ಗಮನಿಸಲಿದ್ದಾರೆ. ಆಂಡಿ ಮನೆಗೆ ಹಿಂತಿರುಗಿಲ್ಲ. ಅವರು ಶುಕ್ರವಾರ ಮಧ್ಯಾಹ್ನ ಐಸಿಸಿ ನಿಯೋಗದೊಂದಿಗೆ ಬಂದಿದ್ದಾರೆ. ಹೀಗಾಗಿ ಮೈದಾನಕ್ಕೆ ಭೇಟಿ ನೀಡಿಲ್ಲ. ಟ್ರ್ಯಾಕ್‌ನ ಸಿದ್ಧತೆಯನ್ನು ಪರಿಶೀಲಿಸಲು ಅವರು ಶನಿವಾರ ಲಭ್ಯವಿರುತ್ತಾರೆ, ”ಎಂದು ಪಿಟಿಐಗೆ ಐಸಿಸಿ ಮೂಲಗಳು ತಿಳಿಸಿದೆ.
‘ನಮ್ಮಲ್ಲೇ ತಪ್ಪಿದೆ’; ರಣತುಂಗ ಆರೋಪಕ್ಕೆ ಜಯ್ ಶಾ ಬಳಿ ಕ್ಷಮೆಯಾಚಿಸಿದ ಶ್ರೀಲಂಕಾ ಸರ್ಕಾರ
ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಸೆಮಿಫೈನಲ್‌ಗೆ ಆತಿಥೇಯ ರಾಷ್ಟ್ರವು ಹೊಸ ಟ್ರ್ಯಾಕ್ ಅನ್ನು ಉಪಯೋಗಿಸದೆ ಹಳೆಯ ಪಿಚ್ನಲ್ಲೇ ಆಡಿದೆ ಎಂದು ಅಟ್ಕಿನ್ಸನ್ ಆರೋಪಿಸಿದ್ದರು. ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ನಂತರ ಐಸಿಸಿ, ”ನಾಕ್-ಔಟ್ ಪಂದ್ಯಗಳನ್ನು ತಾಜಾ ಟ್ರ್ಯಾಕ್‌ನಲ್ಲೇ ನಡೆಸ ಬೇಕು ಎಂಬ ಯಾವುದೇ ನಿಯಮವಿಲ್ಲ. ಅಟ್ಕಿನ್ಸನ್ಗೆ ಬೆಳವಣಿಗೆಯ ಬಗ್ಗೆ ತಿಳಿಸಲಾಗಿದೆ”, ಎಂದು ಹೇಳಿತು.
ಸದ್ಯ ಅಹ್ಮದಾಬಾದ್ ಪಿಚ್ ಅನ್ನು ಸಿದ್ಧಪಡಿಸುವ ಜವಾಬ್ದಾರಿ ಭಾರತೀಯ ಕ್ಯುರೇಟರ್ಗೆ ವಹಿಸಲಾಗಿದೆ. ಬಿಸಿಸಿಐನ ಗ್ರೌಂಡ್ ಸ್ಟಾಫ್ ಮುಖ್ಯಸ್ಥ ಆಶಿಶ್ ಭೌಮಿಕ್ ಮತ್ತು ಅವರ ಸಹವರ್ತಿ ತಪೋಶ್ ಚಟರ್ಜಿ ಜೊತೆಗೆ ಬಿಸಿಸಿಐನ ದೇಶೀಯ ಕ್ರಿಕೆಟ್‌ನ ಪ್ರಧಾನ ವ್ಯವಸ್ಥಾಪಕ ಅಬ್ಬೆ ಕುರುವಿಲ್ಲಾ ಅವರು ಪಿಚ್ ಸಿದ್ಧತೆಗಳನ್ನು ಮೇಲ್ವಿಚಾರಣೆ ಮಾಡಿದ್ದಾರೆ.
ನಿಧಾನಗತಿಯ ಅಹ್ಮಮದಾಬಾದ್ ಪಿಚ್?
ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್‌ಗಾಗಿ ಅಹ್ಮದಾಬಾದ್ ಪಿಚ್‌ನಲ್ಲಿ ರೋಲರ್ ಹರಿಸಲಾಗಿದೆ. ಹೀಗೆ ಮಾಡುವುದರಿಂದ ಪಿಚ್ ನಿಧಾನವಾಗುವ ಸಾಧ್ಯತೆಯಿದೆ. ಇಲ್ಲಿಯವರೆಗೆ, ಅಹ್ಮದಾಬಾದ್ ಪಿಚ್ ಚೇಸಿಂಗ್ಗೆ ಹೆಚ್ಚು ಹೆಸರುವಾಸಿಯಾಗಿದೆ. ಲೀಗ್ ಹಂತದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಮಾತ್ರ ಮೊದಲು ಬ್ಯಾಟಿಂಗ್ ಮಾಡಿ ಗೆದ್ದಿತ್ತು.
- ಪಂದ್ಯ 1: ಇಂಗ್ಲೆಂಡ್ 282/9 (50)- ನ್ಯೂಜಿಲೆಂಡ್ 283/1 (36.2)
- ಪಂದ್ಯ 2: ಪಾಕಿಸ್ತಾನ 191 (42.5)- ಭಾರತ 192/3 (30.3)
- ಪಂದ್ಯ 3: ಆಸ್ಟ್ರೇಲಿಯಾ 286 (49.3) – ಇಂಗ್ಲೆಂಡ್ 253 (48.1)
- ಪಂದ್ಯ 4: ಅಫ್ಘಾನಿಸ್ತಾನ 244 (50) – ದಕ್ಷಿಣ ಆಫ್ರಿಕಾ 247/5 (47.3)
ಗುಜರಾತ್ ರಾಜ್ಯ ಕ್ಯುರೇಟರ್ ಪ್ರಕಾರ, ”ಹೆವಿ ರೋಲರ್ ಬಳಸಿದರೆ ಅಹ್ಮದಾಬಾದ್ ಪಿಚ್ ನಿಧಾನವಾಗುತ್ತದೆ. ಮೊದಲು ಬ್ಯಾಟಿಂಗ್ ಮಾಡುವ ತಂಡವು 300 ಅಥವಾ ಅದಕ್ಕಿಂತ ಹೆಚ್ಚು ಸ್ಕೋರ್ ಮಾಡಿದರೆ, ಗೆಲ್ಲುವ ಸಾಧ್ಯತೆ ಹೆಚ್ಚಿರುತ್ತದೆ. ಕಪ್ಪು ಮಣ್ಣಿನ ಪಟ್ಟಿಯ ಮೇಲೆ ರೋಲರ್ ಅನ್ನು ಬಳಸುತ್ತಿದ್ದೇವೆ. ನಿಧಾನಗತಿಯ ಬ್ಯಾಟಿಂಗ್ ಟ್ರ್ಯಾಕ್ ರಚಿಸುವುದು ಇದರ ಉದ್ದೇಶ. ಹೀಗೆ ಮಾಡಿದರೆ ನೀವು ದೊಡ್ಡ ಸ್ಕೋರ್ ಮಾಡಬಹುದು. 315 ಕಠಿಣ ಸ್ಕೋರ್. ಇಲ್ಲಿ ಎರಡನೇ ಬ್ಯಾಟಿಂಗ್ಗೆ ಕಷ್ಟಕರವಾಗಿರುತ್ತದೆ,” ಎಂದು ಪಿಟಿಐಗೆ ತಿಳಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:01 pm, Sat, 18 November 23