IPL 2022: ಐಪಿಎಲ್​ನಲ್ಲಿ 100 ಕೋಟಿಗೂ ಅಧಿಕ ಹಣ ಸಂಪಾಧಿಸಿದ ಆಟಗಾರರ ಬಗ್ಗೆ ನಿಮಗೆಷ್ಟು ಗೊತ್ತು?

| Updated By: ಪೃಥ್ವಿಶಂಕರ

Updated on: Mar 25, 2022 | 3:08 PM

IPL 2022: ಕೊಹ್ಲಿ ಇದುವರೆಗೆ ರೂ. 1,58,20,00,000 (ರೂ. 150 ಕೋಟಿಗೂ ಹೆಚ್ಚು) ಹಣ ಸಂಪಾದಿಸಿದ್ದಾರೆ. ಆರ್‌ಸಿಬಿಯಲ್ಲಿ ಕಳೆದ 4 ಸೀಸನ್‌ಗಳಿಂದ ಕೊಹ್ಲಿ 17 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು.

IPL 2022: ಐಪಿಎಲ್​ನಲ್ಲಿ 100 ಕೋಟಿಗೂ ಅಧಿಕ ಹಣ ಸಂಪಾಧಿಸಿದ ಆಟಗಾರರ ಬಗ್ಗೆ ನಿಮಗೆಷ್ಟು ಗೊತ್ತು?
ಧೋನಿ, ಕೊಹ್ಲಿ
Follow us on

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಬಿಸಿಸಿಐಗೆ ಮಾತ್ರವಲ್ಲದೆ ಆಟಗಾರರಿಗೂ ಅದೃಷ್ಟ ತಂದುಕೊಟ್ಟಿದೆ. ಪ್ರತಿಭೆಯಿದ್ದರೂ ಅವಕಾಶಗಳಿಲ್ಲದೆ ಕೊರಗುತ್ತಿದ್ದ ಅದೆಷ್ಟೋ ಯುವ ಪ್ರತಿಭೆಗಳನ್ನು ರಾತ್ರೋರಾತ್ರಿ ಕೋಟಿ ವೀರರನ್ನಾಗಿಸಿದೆ. ಇದಕ್ಕೆ ಪ್ರಮುಖ ಕಾರಣ ಐಪಿಎಲ್‌ಗಿರುವ ಜನಪ್ರಿಯತೆ. ಈ ಪಂದ್ಯಾವಳಿಯಲ್ಲಿರುವ ಲಾಭದಿಂದಲೇ ಹೊಸ ತಂಡಗಳು ಹುಟ್ಟಿಕೊಳ್ಳುತ್ತಿವೆ. ಇದಕ್ಕೆ ಪೂರಕವಾಗಿ ಈ ಆವೃತ್ತಿಯಿಂದ 10 ತಂಡಗಳು ಸ್ಪರ್ಧಿಸಲಿವೆ. IPL ಪ್ರಪಂಚದಾದ್ಯಂತ ಆಟಗಾರರಿಗೆ ಅತ್ಯಂತ ಲಾಭದಾಯಕ ಲೀಗ್ ಆಗಿದೆ. ಈ ಲೀಗ್‌ನ ಆಟಗಾರರ ಮೇಲೆ ಹಣದ ಮಳೆಯೇ ಸುರಿಯುತ್ತದೆ. ಆದರೆ, ಐಪಿಎಲ್ ಇತಿಹಾಸದಲ್ಲಿ ಹೆಚ್ಚು ಹಣ ಗಳಿಸಿದವರು ಯಾರು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಐಪಿಎಲ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮೂಲಕ ಶತಕೋಟಿ ವೀರರಾದ ಟಾಪ್ 5 ಆಟಗಾರರು ಯಾರು ಎಂಬುದರ ಬಗ್ಗೆ ಇಲ್ಲಿದೆ ವಿವರ.

ಎಬಿ ಡಿವಿಲಿಯರ್ಸ್: ದಕ್ಷಿಣ ಆಫ್ರಿಕಾದ ಗ್ರೇಟ್ ಎಬಿ ಡಿವಿಲಿಯರ್ಸ್ ಐಪಿಎಲ್‌ನಿಂದ ಅತಿ ಹೆಚ್ಚು ಗಳಿಸಿದವರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಡಿವಿಲಿಯರ್ಸ್ ಒಟ್ಟು ರೂ. 1,02,51,65,000 (100 ಕೋಟಿಗೂ ಹೆಚ್ಚು) ಹಣ ಸಂಪಾದನೆ ಮಾಡಿದ್ದಾರೆ. ಸುಮಾರು ವರ್ಷಗಳಿಂದ ಆರ್​ಸಿಬಿಯ ಬೆನ್ನೇಲುಬಾಗಿದ್ದ ಎಬಿಡಿ ಕಳೆದ ವರ್ಷ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಅವರ ಕೊನೆಯ ಸಂಭಾವನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ 11 ಕೋಟಿ ರೂ. ಆಗಿತ್ತು.

ಸುರೇಶ್ ರೈನಾ: ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಐಪಿಎಲ್‌ನಿಂದ ಅತಿ ಹೆಚ್ಚು ಸಂಭಾವನೆ ಪಡೆಯುವವರಲ್ಲಿ ಸುರೇಶ್ ರೈನಾ 4ನೇ ಸ್ಥಾನದಲ್ಲಿದ್ದಾರೆ. ರೈನಾ ಇದುವರೆಗೆ ಐಪಿಎಲ್​ನಿಂದ ರೂ. 1,10,74,00,00 (ರೂ. 110 ಕೋಟಿಗೂ ಹೆಚ್ಚು) ಹಣ ಸಂಪಾದನೆ ಮಾಡಿದ್ದಾರೆ. ರೈನಾ ತಮ್ಮ ಐಪಿಎಲ್ ವೃತ್ತಿಜೀವನದ ಬಹುಪಾಲು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ಆದರೆ ಈ ಆವೃತ್ತಿಯಿಂದ ರೈನಾ ಮೈದಾನದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ. ರೈನಾ ಅವರ ಕೊನೆಯ ಸಂಭಾವನೆ 11 ಕೋಟಿ ರೂ.ಆಗಿದೆ.

ವಿರಾಟ್ ಕೊಹ್ಲಿ: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತಿ ಹೆಚ್ಚು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಇದುವರೆಗೆ ರೂ. 1,58,20,00,000 (ರೂ. 150 ಕೋಟಿಗೂ ಹೆಚ್ಚು) ಹಣ ಸಂಪಾದಿಸಿದ್ದಾರೆ. ಆರ್‌ಸಿಬಿಯಲ್ಲಿ ಕಳೆದ 4 ಸೀಸನ್‌ಗಳಿಂದ ಕೊಹ್ಲಿ 17 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಈ ಆವೃತ್ತಿಯಿಂದ ಕೊಹ್ಲಿ ಅವರು ರೂ. 15 ಕೋಟಿ ತೆಗೆದುಕೊಳ್ಳಲ್ಲಿದ್ದಾರೆ.

ರೋಹಿತ್ ಶರ್ಮಾ: ರೋಹಿತ್ ಶರ್ಮಾ ಐಪಿಎಲ್ ಟಿ20 ಲೀಗ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಆಟಗಾರ. ಈ ಪಟ್ಟಿಯಲ್ಲಿ ರೋಹಿತ್​ಗೆ ಎರಡನೇ ಸ್ಥಾನ ನೀಡಲಾಗಿದೆ. ಇಲ್ಲಿಯವರೆಗೆ ರೋಹಿತ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 62,60,00,000 (ರೂ. 160 ಕೋಟಿಗೂ ಹೆಚ್ಚು) ಹಣ ಗಳಿಸಿದ್ದಾರೆ. ರೋಹಿತ್ ತಮ್ಮ ವೃತ್ತಿ ಜೀವನದ ಬಹುಪಾಲು ಮುಂಬೈ ಇಂಡಿಯನ್ಸ್ ಪರ ಆಡಿದ್ದಾರೆ. ರೋಹಿತ್ ಪ್ರತಿ ಆವೃತ್ತಿಗೂ ಪಡೆಯುವ ಸಂಭಾವನೆ 16 ಕೋಟಿ ಆಗಿದೆ. ಇದು ಐಪಿಎಲ್ ಸೀಸನ್‌ನಲ್ಲಿ ರೋಹಿತ್‌ಗೆ ನೀಡುತ್ತಿರುವ ಗರಿಷ್ಠ ಮೊತ್ತವಾಗಿದೆ.

ಎಂಎಸ್ ಧೋನಿ: ಮಿಸ್ಟರ್ ಕೂಲ್, ಭಾರತ ತಂಡದ ಮಾಜಿ ನಾಯಕ, ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಎಂಎಸ್ ಧೋನಿ ಅತಿ ಹೆಚ್ಚು ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಐಪಿಎಲ್ 2022 ರವರೆಗಿನ ಐಪಿಎಲ್‌ನಲ್ಲಿ ಅವರ ಒಟ್ಟು ಗಳಿಕೆ ರೂ. 1,64,84,00,000 (ರೂ. 164 ಕೋಟಿಗೂ ಹೆಚ್ಚು) ಆಗಿದೆ. ಸಿಎಸ್‌ಕೆಯಲ್ಲಿ ಕಳೆದ 4 ಸೀಸನ್‌ಗಳಲ್ಲಿ ಧೋನಿಗೆ 15 ಕೋಟಿ ರೂ. ಸಂಭಾವನೆ ನೀಡಲಾಗುತ್ತಿದೆ.

ಇದನ್ನೂ ಓದಿ:IPL 2022, CSK vs KKR, LIVE Streaming: 15ನೇ ಆವೃತ್ತಿಯ ಮೊದಲ ಪಂದ್ಯದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಸಂಗತಿಗಳಿವು