IPL 2025: 9 ಸಿಕ್ಸರ್, 39 ಎಸೆತಗಳಲ್ಲಿ ತೂಫಾನ್ ಶತಕ..! ಸಿಎಸ್ಕೆ ಬೌಲರ್‌ಗಳ ನಿದ್ರೆಗೆಡಿಸಿದ ಪ್ರಿಯಾಂಶ್ ಆರ್ಯ
Priyansh Arya's Blazing IPL Century: ಮುಲ್ಲನ್‌ಪುರದಲ್ಲಿ ನಡೆದ ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದಲ್ಲಿ ಯುವ ಆಟಗಾರ ಪ್ರಿಯಾಂಶ್ ಆರ್ಯ ಕೇವಲ 39 ಎಸೆತಗಳಲ್ಲಿ ಅವರು ಐಪಿಎಲ್‌ನಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿದರು. ಇದು 2025 ರ ಐಪಿಎಲ್‌ನ ಅತಿ ವೇಗದ ಮತ್ತು ಐಪಿಎಲ್ ಇತಿಹಾಸದ ನಾಲ್ಕನೇ ವೇಗದ ಶತಕವಾಗಿದೆ. ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ ಪ್ರಿಯಾಂಶ್ ಆ ಬಳಿಕ, ಅಶ್ವಿನ್ ಮತ್ತು ಜಡೇಜಾ ಅವರಂತಹ ಅನುಭವಿ ಬೌಲರ್‌ಗಳನ್ನು ಕಾಡಿದರು.

ಪಂಜಾಬ್‌ನ ತವರು ಮೈದಾನವಾದ ಮುಲ್ಲನ್‌ಪುರದಲ್ಲಿ ನಡೆಯುತ್ತಿರುವ ಪಂಜಾಬ್ ಕಿಂಗ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (PBKS vs CSK) ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿತ್ತಿರುವ ಪಂಜಾಬ್ ಪರ ತಂಡದ ಯುವ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ (Priyansh Arya) ಕೇವಲ 39 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಇದು ಐಪಿಎಲ್‌ನಲ್ಲಿ ಪ್ರಿಯಾಂಶ್ ಅವರ ಚೊಚ್ಚಲ ಐಪಿಎಲ್ (IPL 2025) ಶತಕವಾಗಿದ್ದರೆ, 2025 ರ ಐಪಿಎಲ್‌ನಲ್ಲಿ ದಾಖಲಾದ ಅತಿ ವೇಗದ ಶತಕವಾಗಿದೆ. ಅಲ್ಲದೆ ಐಪಿಎಲ್ ಇತಿಹಾಸದಲ್ಲಿ ದಾಖಲಾದ ನಾಲ್ಕನೇ ವೇಗದ ಶತಕ ಎಂಬ ದಾಖಲೆಯೂ ಪ್ರಿಯಾಂಶ್ ಅವರ ಪಾಲಾಗಿದೆ.
ಹ್ಯಾಟ್ರಿಕ್ ಸಿಕ್ಸ್, ಶತಕ
ಐಪಿಎಲ್‌ನಲ್ಲಿ ಮೊದಲ ಸೀಸನ್ ಆಡುತ್ತಿರುವ 24 ವರ್ಷದ ಪ್ರಿಯಾಂಶ್, ಮುಲ್ಲನ್‌ಪುರ ಮೈದಾನದಲ್ಲಿ ಸಿಎಸ್ಕೆ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಅಶ್ವಿನ್, ಜಡೇಜಾರಂತಹ ಲೆಜೆಂಡರಿ ಬೌಲರ್ಗಳು ಕೂಡ ಪ್ರಿಯಾಂಶ್ ಅವರ ಅಬ್ಬರಕ್ಕೆ ದಂಗಾಗಿ ಹೋದರು. ಐಪಿಎಲ್‌ನಲ್ಲಿ ಕೇವಲ ನಾಲ್ಕನೇ ಪಂದ್ಯವನ್ನು ಆಡಿದ ಪ್ರಿಯಾಂಶ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಇನ್ನಿಂಗ್ಸ್ ಆರಂಭಿಸಿ ಪಂದ್ಯದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದರು. ನಂತರ 13 ನೇ ಓವರ್‌ನಲ್ಲಿ ಸತತ 3 ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಬಾರಿಸುವ ಮೂಲಕ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಇದು ಈ ಸೀಸನ್ನ ಅತ್ಯಂತ ವೇಗದ ಶತಕವಾಗಿದ್ದು, ಶತಕ ಬಾರಿಸಿದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Saving this to our 'Special Moments' folder 📂 😌
A knock of the highest caliber from Priyansh Arya as he scores 1️⃣0️⃣3️⃣(42) 💥
Updates ▶ https://t.co/HzhV1Vtl1S #TATAIPL | #PBKSvCSK | @PunjabKingsIPL pic.twitter.com/BsPfEoKhiB
— IndianPremierLeague (@IPL) April 8, 2025
ಜೀವದಾನದ ಲಾಭ ಪಡೆದ ಪ್ರಿಯಾಂಶ್
ಗುಜರಾತ್ ಟೈಟಾನ್ಸ್ ವಿರುದ್ಧ ತಮ್ಮ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದ್ದ ಪ್ರಿಯಾಂಶ್ ಆ ಪಂದ್ಯದಲ್ಲಿ 47 ರನ್ ಗಳ ಇನ್ನಿಂಗ್ಸ್ ಆಡಿದ್ದರು. ಕಳೆದ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದ ಅವರು ಮೊದಲ ಎಸೆತದಲ್ಲೇ ಜೋಫ್ರಾ ಆರ್ಚರ್ ಎಸೆತದಲ್ಲಿ ಬೌಲ್ಡ್ ಆಗಿದ್ದರು. ಆದರೀಗ ಸಿಎಸ್ಕೆ ವಿರುದ್ಧ ಅಬ್ಬರದ ಬ್ಯಾಟಿಂಗ್ ಮಾಡಿದ ಪ್ರಿಯಾಂಶ್ ಈ ಪಂದ್ಯದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದರು. ಆದರೆ ನಂತರದ ಎಸೆತದಲ್ಲೇ ಪ್ರಿಯಾಂಶ್ಗೆ ಖಲೀಲ್ ಅವರಿಂದ ಜೀವದಾನ ಸಿಕ್ಕಿತು. ಸಿಕ್ಕ ಜೀವದಾನವನ್ನು ಸದುಪಯೋಗಪಡಿಸಿಕೊಂಡ ಪ್ರಿಯಾಂಶ್ ಆ ಓವರ್‌ನ ಐದನೇ ಎಸೆತದಲ್ಲಿ ಮತ್ತೆ ಸಿಕ್ಸರ್ ಬಾರಿಸಿದಲ್ಲದೆ, ಪ್ರತಿ ಓವರ್ನಲ್ಲೂ ಬೌಂಡರಿಗಳ ಮಳೆಗರೆದರು.
PBKS vs CSK Live Score, IPL 2025: 39 ಎಸೆತಗಳಲ್ಲಿ ಶತಕ ಸಿಡಿಸಿದ ಪ್ರಿಯಾಂಶ್
19 ಎಸೆತಗಳಲ್ಲಿ ಅರ್ಧಶತಕ
ಇದಾದ ನಂತರ, ಪ್ರಿಯಾಂಶ್ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸೇರಿದಂತೆ ಚೆನ್ನೈನ ಪ್ರತಿಯೊಬ್ಬ ಬೌಲರ್ಗೂ ಬೌಂಡರಿಗಳ ಉಡುಗೊರೆ ನೀಡಿದರು. ಹೀಗಾಗಿ ಪ್ರಿಯಾಂಶ್ ಆರನೇ ಓವರ್‌ನಲ್ಲಿ ಅಶ್ವಿನ್ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಈ ಆವೃತ್ತಿಯಲ್ಲಿ ಭಾರತೀಯ ಆಟಗಾರನೊಬ್ಬ ಗಳಿಸಿದ ಅತ್ಯಂತ ವೇಗದ ಅರ್ಧಶತಕವಾಗಿತು. ಇಲ್ಲಿಗೆ ನಿಲ್ಲದ ಪ್ರಿಯಾಂಶ್, ಅಶ್ವಿನ್ ವಿರುದ್ಧ ಸತತ 2 ಸಿಕ್ಸರ್‌ಗಳನ್ನು ಬಾರಿಸಿದರು. ಮಥೀಶ ಪತಿರಾನ ಎಸೆದ 13ನೇ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದ ಪ್ರಿಯಾಂಶ್, ಆ ಓವರ್‌ನ ಎರಡನೇ, ಮೂರನೇ ಮತ್ತು ನಾಲ್ಕನೇ ಎಸೆತಗಳಲ್ಲಿ ಸಿಕ್ಸರ್ ಸಿಡಿಸಿದರು. ನಂತರ ಅವರು ಮುಂದಿನ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ತಮ್ಮ ಮೊದಲ ಐಪಿಎಲ್ ಶತಕವನ್ನು ಪೂರ್ಣಗೊಳಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:54 pm, Tue, 8 April 25