ಐಪಿಎಲ್ ಮೆಗಾ ಹರಾಜಿಗೆ ದಿನಗಳು ಮಾತ್ರ ಉಳಿದಿವೆ. ಅತ್ತ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಆಡುತ್ತಿರುವ ಕೆಲ ವಿದೇಶಿ ಆಟಗಾರರು ಈ ಬಾರಿ ಮೆಗಾ ಹರಾಜಿಗೆ ಹೆಸರು ನೀಡಿದ್ದಾರೆ. ಅದರಲ್ಲೊಬ್ಬರು ಇಂಗ್ಲೆಂಡ್ ಆಟಗಾರ ಜೇಸನ್ ರಾಯ್. ಇದೀಗ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಸ್ಪೋಟಕ ಶತಕ ಸಿಡಿಸುವ ಮೂಲಕ ರಾಯ್ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ. ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ಲಾಹೋರ್ ಖಲಂದರ್ಸ್ ನಡುವಣ ಈ ಪಂದ್ಯದಲ್ಲಿ ಮೊದಲು ಮಾಡಿದ ಖಲಂದರ್ಸ್ 5 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಗ್ಲಾಡಿಯೇಟರ್ಸ್ ಪರ ಜೇಸನ್ ರಾಯ್ ಇನಿಂಗ್ಸ್ ಆರಂಭಿಸಿದ್ದರು.
ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ರಾಯ್ ಜೇಸನ್ ರಾಯ್ ಎಹ್ಸಾನ್ ಅಲಿ ಜೊತೆಗೂಡಿ ಮೊದಲ ವಿಕೆಟ್‌ಗೆ 5.2 ಓವರ್‌ಗಳಲ್ಲಿ 71 ರನ್ ಪೇರಿಸಿದರು. ಈ 71 ರನ್ನಲ್ಲಿ ಎಹ್ಸಾನ್ ಕಲೆಹಾಕಿದ್ದು ಕೇವಲ 7 ರನ್ ಮಾತ್ರ. ಉಳಿದ ರನ್ಗಳು ಮೂಡಿಬಂದಿದ್ದು ಜೇಸನ್ ರಾಯ್ ಬ್ಯಾಟ್ನಿಂದ ಎಂಬುದು ವಿಶೇಷ. ಅದರಂತೆ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಾಯ್, ತನ್ನ ಅಬ್ಬರವನ್ನು ಮುಂದುವರೆಸಿದರು. ಪರಿಣಾಮ 49 ಎಸೆತಗಳಲ್ಲಿ 8 ಬೌಂಡರಿ ಹಾಗೂ 8 ಸಿಕ್ಸರ್‌ಗಳ ನೆರವಿನಿಂದ ಶತಕ ಪೂರೈಸಿದರು. ಅಂತಿಮವಾಗಿ 57 ಎಸೆತಗಳಲ್ಲಿ 11 ಫೋರ್ ಹಾಗೂ 8 ಸಿಕ್ಸ್ನೊಂದಿಗೆ 116 ರನ್ ಗಳಿಸಿ ಔಟಾದರು. ಆ ಬಳಿಕ ಬಂದ ಜೇಮ್ಸ್ ವಿನ್ಸ್ (49) ಹಾಗೂ ಮೊಹಮ್ಮದ್ ನವಾಜ್ (25) 19.3 ಓವರ್‌ಗಳಲ್ಲಿ 207 ರನ್ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಕ್ವೆಟ್ಟಾ ಗ್ಲಾಡಿಯೇಟರ್ಸ್ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
*punches the air* ?? #HBLPSL7 l #LevelHai l #QGvLQ pic.twitter.com/CxQG89oFen
— PakistanSuperLeague (@thePSLt20) February 7, 2022
7 ಸಾವಿರ ರನ್ ಮತ್ತು 4 ಶತಕ:
ಈ ಭರ್ಜರಿ ಇನಿಂಗ್ಸ್ಗೂ ಮುನ್ನ ಜೇಸನ್ ರಾಯ್ 261 ಇನ್ನಿಂಗ್ಸ್‌ಗಳಲ್ಲಿ 28 ರ ಸರಾಸರಿಯಲ್ಲಿ 6972 ರನ್ ಗಳಿಸಿದ್ದರು. ಈ ವೇಳೆ 4 ಶತಕ ಮತ್ತು 47 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಈ ಪಂದ್ಯದ ನಂತರ ಅವರ ಟಿ20ಯಲ್ಲಿ 7 ಸಾವಿರ ರನ್ ಕೂಡ ಪೂರೈಸಿದರು. ಇದು ಅವರ ಒಟ್ಟಾರೆ 5ನೇ ಶತಕ. ಅಂತರಾಷ್ಟ್ರೀಯ ಟಿ20ಯಲ್ಲಿ ಶತಕ ಗಳಿಸಲು ಸಾಧ್ಯವಾಗದಿದ್ದರೂ, 58 ಇನ್ನಿಂಗ್ಸ್‌ಗಳಲ್ಲಿ 25ರ ಸರಾಸರಿಯಲ್ಲಿ 1446 ರನ್ ಗಳಿಸಿದ್ದಾರೆ. ಈ ವೇಳೆ 8 ಅರ್ಧಶತಕ ಬಾರಿಸಿದ್ದಾರೆ. ಇನ್ನು ಕಳೆದ ಸೀಸನ್ ಐಪಿಎಲ್ನಲ್ಲಿ ಎಸ್ಆರ್ಹೆಚ್ ತಂಡದಲ್ಲಿದ್ದ ಜೇಸನ್ ರಾಯ್ ಈ ಬಾರಿ ಮೆಗಾ ಹರಾಜಿಗೆ ಹೆಸರು ನೀಡಿದ್ದಾರೆ. ಇನ್ನೇನು ಮೆಗಾ ಹರಾಜಿಗೆ ದಿನಗಳು ಮಾತ್ರ ಬಾಕಿಯಿರುವಾಗ ಅಬ್ಬರಿಸುವ ಮೂಲಕ ಇದೀಗ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ
ಇದನ್ನೂ ಓದಿ: Yuzvendra Chahal: ವಿಕೆಟ್ಗಳ ಶತಕ ಪೂರೈಸಿದ ಚಹಾಲ್
ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್ಮ್ಯಾನ್ ರೋಹಿತ್ ಶರ್ಮಾ
ಇದನ್ನೂ ಓದಿ: Lata Mangeshkar: ಎಲ್ಲರೂ ಕೈಬಿಟ್ಟಾಗ ಟೀಮ್ ಇಂಡಿಯಾ ಕೈ ಹಿಡಿದಿದ್ದ ಲತಾ ಮಂಗೇಶ್ಕರ್..!