PSL vs IPL Prize Money: ಪಾಕಿಸ್ತಾನ್ ಸೂಪರ್ ಲೀಗ್ ಗೆದ್ರೆ ಸಿಗುವ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ?

| Updated By: ಝಾಹಿರ್ ಯೂಸುಫ್

Updated on: Mar 01, 2022 | 10:58 PM

PSL vs IPL Prize Money: ಐಪಿಎಲ್​ನಲ್ಲಿ ಇಶಾನ್ ಕಿಶನ್ ಪಡೆಯುವ ಮೊತ್ತಕ್ಕಿಂತ 4 ಪಟ್ಟು ಕಡಿಮೆ. ಇಶಾನ್ ಕಿಶನ್ ಈ ಬಾರಿಯ ಐಪಿಎಲ್​ನಲ್ಲಿ 15 ಕೋಟಿಗಿಂತ ಅಧಿಕ ಮೊತ್ತ ಪಡೆಯುತ್ತಿದ್ದಾರೆ.

PSL vs IPL Prize Money: ಪಾಕಿಸ್ತಾನ್ ಸೂಪರ್ ಲೀಗ್ ಗೆದ್ರೆ ಸಿಗುವ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ?
PSL vs IPL Prize Money
Follow us on

ಪಾಕಿಸ್ತಾನ್ ಸೂಪರ್ ಲೀಗ್​ ಸೀಸನ್​ 7ಗೆ ತೆರೆಬಿದ್ದಿದೆ. ಫೈನಲ್ ಪಂದ್ಯದಲ್ಲಿ ಮುಲ್ತಾನ್ ಸುಲ್ತಾನ್ಸ್ ತಂಡವನ್ನು ಮಣಿಸುವ ಮೂಲಕ ಇದೇ ಮೊದಲ ಬಾರಿಗೆ ಲಾಹೋರ್ ಖಲಂದರ್ಸ್​ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಟ್ರೋಫಿಯೊಂದಿಗೆ ನಗದು ಮೊತ್ತವನ್ನು ತನ್ನದಾಗಿಸಿಕೊಂಡಿದೆ. ಆದರೆ PSL ನಲ್ಲಿ ಚಾಂಪಿಯನ್ ತಂಡ ಪಡೆದಿರುವ ಮೊತ್ತವು ಐಪಿಎಲ್​ನ ಸಾಮಾನ್ಯ ಆಟಗಾರನಿಗೆ ನೀಡುವ ಮೊತ್ತಗಿಂತ ಕಡಿಮೆ ಎಂಬುದು ವಿಶೇಷ. ಅಂದರೆ ಐಪಿಎಲ್​ನಲ್ಲಿ ಆಟಗಾರನೊಬ್ಬ ಪಡೆಯುವ ಮೊತ್ತಕ್ಕಿಂತ ಕಡಿಮೆ ಮೊತ್ತವನ್ನು ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಚಾಂಪಿಯನ್​ ತಂಡಕ್ಕೆ ನೀಡಲಾಗುತ್ತೆ ಎಂದರೆ ನಂಬಲೇಬೇಕು.

ಹೌದು, ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಚಾಂಪಿಯನ್​ ಪಟ್ಟವನ್ನು ಅಲಂಕರಿಸಿದ ತಂಡಕ್ಕೆ ಸಿಗುವ ಮೊತ್ತ ಕೇವಲ 3 ಕೋಟಿ 40 ಲಕ್ಷ ರೂ. ಮಾತ್ರ. ಅಂದರೆ ಐಪಿಎಲ್​ನಲ್ಲಿ ಇಶಾನ್ ಕಿಶನ್ ಪಡೆಯುವ ಮೊತ್ತಕ್ಕಿಂತ 4 ಪಟ್ಟು ಕಡಿಮೆ. ಇಶಾನ್ ಕಿಶನ್ ಈ ಬಾರಿಯ ಐಪಿಎಲ್​ನಲ್ಲಿ 15 ಕೋಟಿಗಿಂತ ಅಧಿಕ ಮೊತ್ತ ಪಡೆಯುತ್ತಿದ್ದಾರೆ. ಇನ್ನು ಐಪಿಎಲ್​ನ ಚಾಂಪಿಯನ್​ ತಂಡಕ್ಕೆ 20 ಕೋಟಿ ನೀಡಲಾಗುತ್ತೆ. ಅಂದರೆ ಐಪಿಎಲ್ ಪ್ರಶಸ್ತಿ ಮೊತ್ತದ ನಾಲ್ಕನೇ ಒಂದು ಭಾಗ ಕೂಡ ಪಿಎಸ್​ಎಲ್​ನಲ್ಲಿ ನೀಡಲಾಗುತ್ತಿಲ್ಲ.

ಇನ್ನು ಪಾಕಿಸ್ತಾನ್ ಸೂಪರ್ ಲೀಗ್​​ನಲ್ಲಿ ರನ್ನರ್ಸ್ ತಂಡಕ್ಕೆ ಸಿಗುವ ಮೊತ್ತ ಕೇವಲ 1 ಕೋಟಿ 36 ಲಕ್ಷ ರೂ. ಮಾತ್ರ. ಅಂದರೆ ಐಪಿಎಲ್​ನಲ್ಲಿ ಬಹುತೇಕ ಆಟಗಾರರು ಪಡೆಯುವ ಮೊತ್ತಕ್ಕಿಂತ ಕಡಿಮೆ. ಅದೇ ಐಪಿಎಲ್​ನಲ್ಲಿ ರನ್ನರ್ಸ್​ ತಂಡಕ್ಕೆ ಮೊತ್ತ 12 ಕೋಟಿ 50 ಲಕ್ಷ ಕೋಟಿ ರೂ. ನೀಡಲಾಗುತ್ತದೆ. ಇನ್ನು ಐಪಿಎಲ್​ನಲ್ಲಿ ಮೂರನೇ ಸ್ಥಾನ ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡಗಳಿಗೆ 8.75 ಕೋಟಿ ನೀಡಲಾಗುತ್ತದೆ. ಅಂದರೆ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಚಾಂಪಿಯನ್ ತಂಡಕ್ಕೆ ನೀಡುವ ಮೊತ್ತಕ್ಕಿಂತ ಹೆಚ್ಚು ಮೊತ್ತವನ್ನು ಐಪಿಎಲ್​ನಲ್ಲಿ ಪ್ಲೇಆಫ್ ಆಡಿದ ತಂಡಗಳಿಗೆ ನೀಡುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ಐಪಿಎಲ್​ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿಕೊಂಡಿದೆ.

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?

Published On - 10:57 pm, Tue, 1 March 22