Virat Kohli: IND vs SL: 71 ನೇ ಶತಕವಲ್ಲ, ವಿರಾಟ್ ಕೊಹ್ಲಿಗೆ 138 ರನ್‌ಗಳೇ ಮುಖ್ಯ..!
IND vs SL: ಕಳೆದ ದಶಕದಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಅಬ್ಬರಿಸಿರುವ ವಿರಾಟ್ ಕೊಹ್ಲಿಗೆ ಈ ಟೆಸ್ಟ್ ಸರಣಿಯು ಅತ್ಯಂತ ಮಹತ್ವದ್ದಾಗಿದೆ. 100 ಟೆಸ್ಟ್‌ಗಳ ಮೈಲಿಗಲ್ಲು ಸಾಧಿಸುವುದರ ಜೊತೆಗೆ ಈ ಸರಣಿಯಲ್ಲಿ ಸಾಕಷ್ಟು ರನ್ ಗಳಿಸುವುದು ಕೂಡ ಅವರಿಗೆ ಮುಖ್ಯವಾಗಿದೆ.
ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿ (IND vs SL) ಮಾರ್ಚ್ 4 ರಿಂದ ಮೊಹಾಲಿಯಲ್ಲಿ ಪ್ರಾರಂಭವಾಗಲಿದೆ . ಈ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಹಲವು ಕಾರಣಗಳಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಈ ಸರಣಿಯು ರೋಹಿತ್ ಶರ್ಮಾ ಅವರ ಟೆಸ್ಟ್ ನಾಯಕತ್ವದ ಮೊದಲ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಹಾಗೆಯೇ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ನೂರನೇ ಟೆಸ್ಟ್ ಪಂದ್ಯ. ಇನ್ನು ಕೊಹ್ಲಿ 100ನೇ ಟೆಸ್ಟ್ ಸಾಧನೆಯೊಂದಿಗೆ 71ನೇ ಶತಕದ ನಿರೀಕ್ಷೆಯೂ ಕೊನೆಗೊಳ್ಳಲಿದೆಯಾ ಎಂಬ ಕಾತುರತೆ ಕೂಟ ಅಭಿಮಾನಿಗಳಲ್ಲಿದೆ. ಆದರೆ ಶತಕಕ್ಕಿಂತ ಈ ಸರಣಿಯಲ್ಲಿ ಕನಿಷ್ಠ 138 ರನ್ ಗಳಿಸುವುದು ಕೊಹ್ಲಿಗೆ ಮುಖ್ಯವಾಗಿದೆ.
ಏಕೆಂದರೆ ಕಳೆದ ದಶಕದಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಅಬ್ಬರಿಸಿರುವ ವಿರಾಟ್ ಕೊಹ್ಲಿಗೆ ಈ ಟೆಸ್ಟ್ ಸರಣಿಯು ಅತ್ಯಂತ ಮಹತ್ವದ್ದಾಗಿದೆ. 100 ಟೆಸ್ಟ್‌ಗಳ ಮೈಲಿಗಲ್ಲು ಸಾಧಿಸುವುದರ ಜೊತೆಗೆ ಈ ಸರಣಿಯಲ್ಲಿ ಸಾಕಷ್ಟು ರನ್ ಗಳಿಸುವುದು ಕೂಡ ಅವರಿಗೆ ಮುಖ್ಯವಾಗಿದೆ. ಕೊಹ್ಲಿಯ ಇತ್ತೀಚಿನ ಫಾರ್ಮ್ ಸ್ವಲ್ಪವೂ ಕಳಪೆಯಾಗಿದೆ. ಹೀಗಾಗಿ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳ ರೇಸ್ಗೆ ಕಂಬ್ಯಾಕ್ ಮಾಡಲು ಕೊಹ್ಲಿಗೆ ಈ ಸರಣಿ ಮುಖ್ಯವಾಗಿದೆ.
138 ರನ್ ಹೆಚ್ಚು ಮುಖ್ಯ: ಸದ್ಯ ಕೊಹ್ಲಿ ಕುರಿತ ಚರ್ಚೆ 71ನೇ ಶತಕ ಮತ್ತು 100ನೇ ಟೆಸ್ಟ್ ಸುತ್ತ ಸುತ್ತುತ್ತಿದೆ, ಇದು ನಿಜ ಕೂಡ, ಆದರೆ ಕೊಹ್ಲಿಗೆ ಈ ಎರಡು ಅಂಕಿ ಅಂಶಗಳ ಹೊರತಾಗಿ ಮೂರನೇ ಪ್ರಮುಖ ಅಂಕಿ ಅಂಶವೆಂದರೆ 138. ಭಾರತದ ಮಾಜಿ ನಾಯಕ ಯಾವುದೇ ಸಂದರ್ಭದಲ್ಲಿ ಈ ಸರಣಿಯಲ್ಲಿ 138 ರನ್ ಗಳಿಸಬೇಕಾಗಿದೆ. ಏಕೆಂದರೆ ವಿರಾಟ್ ಕೊಹ್ಲಿ ಈ ಸರಣಿಯ ಎಲ್ಲಾ ನಾಲ್ಕು ಇನ್ನಿಂಗ್ಸ್‌ಗಳನ್ನು ಆಡಿದರೆ, ನಾಲ್ಕರಲ್ಲೂ ಔಟಾದರೆ ಮತ್ತು 138 ರನ್‌ಗಳಿಗಿಂತ ಕಡಿಮೆ ಸ್ಕೋರ್ ಮಾಡಿದರೆ ಅವರ ಟೆಸ್ಟ್ ಬ್ಯಾಟಿಂಗ್ ಸರಾಸರಿ 50 ಕ್ಕಿಂತ ಕೆಳಗಿಳಿಯುತ್ತದೆ.
ವಿರಾಟ್ ಕೊಹ್ಲಿ ಇದುವರೆಗೆ 99 ಟೆಸ್ಟ್‌ಗಳ 168 ಇನ್ನಿಂಗ್ಸ್‌ಗಳಲ್ಲಿ 7962 ರನ್ ಗಳಿಸಿದ್ದಾರೆ. ಇದರಲ್ಲಿ ಅವರು 50.39 ಸರಾಸರಿ ಹೊಂದಿದ್ದಾರೆ. ನಾಲ್ಕು ಬಾರಿ ಔಟಾದರೂ ಈ ಸರಣಿಯಲ್ಲಿ ಕೊಹ್ಲಿ 138ಕ್ಕೂ ಹೆಚ್ಚು ರನ್ ಗಳಿಸಿದರೆ ಅವರ ಸರಾಸರಿ 50ಕ್ಕಿಂತ ಹೆಚ್ಚಾಗಿರುತ್ತದೆ. ಹೀಗಾಗಿ ಕಳೆದ ಕೆಲ ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ರನ್ ಸರಾಸರಿಯನ್ನು ಉಳಿಸುವುದು ಕೊಹ್ಲಿಗೆ ಅನಿವಾರ್ಯ.
ಇದರಲ್ಲಿ ಕೊಹ್ಲಿ ವಿಫಲರಾದರೆ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಅವರ ಸರಾಸರಿ 50ಕ್ಕಿಂತ ಕೆಳಗಿಳಿಯಲಿದೆ. ಅಂದಹಾಗೆ, 2017ರ ಆಗಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧವೇ ಕೊಹ್ಲಿ ಸರಾಸರಿ 50 ರಿಂದ 49.55ಕ್ಕೆ ಕುಸಿದಿರುವುದು ಕಾಕತಾಳೀಯ. ಅಕ್ಟೋಬರ್ 2019 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪುಣೆ ಟೆಸ್ಟ್‌ನಲ್ಲಿ 254 ರನ್‌ಗಳ ಅಜೇಯ ಇನ್ನಿಂಗ್ಸ್ ಗಳಿಸಿದ ನಂತರ ಕೊಹ್ಲಿ ಅವರ ವೃತ್ತಿಜೀವನದ ಗರಿಷ್ಠ ಸರಾಸರಿ 55.10 ಆಗಿತ್ತು. ಅಲ್ಲಿಂದೀಚೆಗೆ ಕೊಹ್ಲಿಯ ಸರಾಸರಿಯಲ್ಲಿ ನಿರಂತರ ಕುಸಿತ ಕಂಡುಬಂದಿದೆ. ಇದಾಗ್ಯೂ 50 ರ ಸರಾಸರಿಯನ್ನು ಕಾಪಾಡಿಕೊಂಡು ಬಂದಿದ್ದರು. ಇದೀಗ ಶ್ರೀಲಂಕಾ ವಿರುದ್ದದ ಸರಣಿಯ ಮೊದಲ ಪಂದ್ಯದಲ್ಲಿ 138 ರನ್ಗಳಿಸಿದರೆ 50 ಸರಾಸರಿಯನ್ನು ಉಳಿಸಿಕೊಳ್ಳಬಹುದು. ಹೀಗಾಗಿ ಕೊಹ್ಲಿ ಬ್ಯಾಟ್ನಿಂದ ಶತಕದೊಂದಿಗೆ 138 ರನ್ಗಳು ಮೂಡಿಬರಲಿ ಎಂಬುದು ಅಭಿಮಾನಿಗಳ ಆಶಯ.
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?
(IND vs SL: Virat Kohli needs at least 138 runs against Sri Lanka to keep batting average above 50)