ಪಾಕಿಸ್ತಾನ ಪ್ರೀಮಿಯರ್​​ ಲೀಗ್​​ಗೆ ಇದೆಂಥ ಗತಿ; ಬೆವರಿಗೆ ಬಿಡ್ತು ಜೆರ್ಸಿ ಬಣ್ಣ, ಬಾಲ್​ ಕಲರೇ ಚೇಂಜ್

ಪಾಕಿಸ್ತಾನ ಸೂಪರ್ ಲೀಗ್ (PSL) ಆರ್ಥಿಕ ಸಂಕಷ್ಟದಲ್ಲಿದ್ದು, ಈ ಬಾರಿ ಅಭಿಮಾನಿಗಳಿಗೆ ಪ್ರವೇಶವಿಲ್ಲ. ಲೀಗ್‌ನ ಕಳಪೆ ಗುಣಮಟ್ಟ ಎದ್ದು ಕಾಣುತ್ತಿದೆ. ಆಟಗಾರರ ಜೆರ್ಸಿ ಬೆವರಿನಿಂದ ಬಣ್ಣ ಬಿಟ್ಟರೆ, ಬಾಲ್ ಕೂಡ ಬಟ್ಟೆಗೆ ಉಜ್ಜಿದಾಗ ಬಣ್ಣ ಕಳೆದುಕೊಂಡಿದೆ. ಈ ಘಟನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಟ್ರೋಲ್‌ಗೆ ಕಾರಣವಾಗಿವೆ.

ಪಾಕಿಸ್ತಾನ ಪ್ರೀಮಿಯರ್​​ ಲೀಗ್​​ಗೆ ಇದೆಂಥ ಗತಿ; ಬೆವರಿಗೆ ಬಿಡ್ತು ಜೆರ್ಸಿ ಬಣ್ಣ, ಬಾಲ್​ ಕಲರೇ ಚೇಂಜ್
ಪಿಎಸ್​ಎಲ್

Updated on: Mar 27, 2026 | 1:15 PM

ಪಾಕಿಸ್ತಾನ ಪ್ರೀಮಿಯರ್ ಲೀಗ್ ಸದ್ಯ ಚರ್ಚೆಯಲ್ಲಿದೆ. ಈ ಸೀಸನ್​ ಅಲ್ಲಿ ಫ್ಯಾನ್ಸ್​​ಗೆ ಎಂಟ್ರಿ ಇಲ್ಲ. ಕಾಸ್ಟ್ ಕಟಿಂಗ್ ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ. ಇಸ್ರೇಲ್​, ಅಮೆರಿಕ-ಇರಾನ್ ಯುದ್ಧದಿಂದ ಪೆಟ್ರೋಲ್ ಹಾಗೂ ಡೀಸೆಲ್ ಕೊರತೆ ಕಾಣಿಸಿದ್ದು, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬೆನ್ನಲ್ಲೇ ಒಂದು ಪಿಎಸ್​ಎಲ್​ ಎಷ್ಟು ಬಡ ಲೀಗ್ ಎಂಬುದು ಸಾಬೀತಾಗಿದೆ. ಆಟಗಾರರ ಬೆವರಿಗೆ ಶರ್ಟ್ ಬಣ್ಣ ಬಿಟ್ಟುಕೊಂಡಿದೆ.

2008ರ ಐಪಿಎಲ್​​​ನಲ್ಲಿ ಪಾಕ್ ಆಟಗಾರರು ಕೂಡ ಇದ್ದರು. ಆದರೆ, ಅದೇ ವರ್ಷ ಪಾಕ್ ಬೆಂಬಲಿತ ಉಗ್ರರು ಮುಂಬೈ ಮೇಲೆ ದಾಳಿ ಮಾಡಿದ ಬಳಿಕ ಪಾಕಿಸ್ತಾನ ಆಟಗಾರರನ್ನು ಐಪಿಎಲ್​​ನಿಂದ ಹೊರಕ್ಕೆ ಇಡಲಾಯಿತು. ವರ್ಷ ಕಳೆದಂತೆ ಐಪಿಎಲ್ ತನ್ನ ಖ್ಯಾತಿ ಹೆಚ್ಚಿಸಿಕೊಳ್ಳುತ್ತಾ ಹೋಯಿತು. ಈ ಸಂದರ್ಭದಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುತ್ತಿರಲಿಲ್ಲ. ಈ ಅವಧಿಯಲ್ಲಿ ಪಾಕ್ ಆಟಗಾರರು ಖಾಲಿ ಕೂರಬೇಕಿತ್ತು ಅಥವಾ ಜಿಂಬಾಬ್ವೆ ಜೊತೆ ಸರಣಿ ಆಡಬೇಕಿತ್ತು. ಹೀಗಾಗಿ, 2016ರಲ್ಲಿ ಪಾಕಿಸ್ತಾನ್ ಸೂಪರ್ ಲೀಗ್ ಆರಂಭಿಸಲಾಯಿತು.

ಇದನ್ನೂ ಓದಿ: ಪಾಕಿಸ್ತಾನ್ ಸೂಪರ್ ಲೀಗ್ ಉದ್ಘಾಟನಾ ಪಂದ್ಯ ನೋಡಲು ಒಬ್ಬರೂ ಬರಲಿಲ್ಲ

ಐಪಿಎಲ್​​​ನಲ್ಲಿ ಅವಕಾಶ ಸಿಗದ ಕೆಲ ವಿದೇಶಿ ಆಟಗಾರರು ಹಾಗೂ ಪಾಕಿಸ್ತಾನ ಆಟಗಾರರು ಇದರಲ್ಲಿ ಆಡುತ್ತಿದ್ದಾರೆ. ವರ್ಷ ಕಳೆದಂತೆ ಪಾಕಿಸ್ತಾನ ಸೂಪರ್ ಲೀಗ್ ಸಂಕಷ್ಟ ಅನುಭವಿಸುತ್ತಿದೆ. ಈ ಬಾರಿ ಫ್ಯಾನ್ಸ್​​ಗಳಿಗೂ ಅವಕಾಶ ನೀಡಿಲ್ಲ. ಹೀಗಿರುವಾಗಲೇ ಆಟಗಾರರಿಗೆ ನೀಡಲಾದ ಜೆರ್ಸಿ ಗುಣಮಟ್ಟದ ಬಗ್ಗೆ ಚರ್ಚೆ ನಡೆದಿದೆ.

ಮಾರ್ಚ್ 26ರ ಉದ್ಘಾಟನಾ ಪಂದ್ಯದಲ್ಲಿ ಲಾಹೋರ್ ಹಾಗೂ ಹೈದರಾಬಾದ್ ಕಿಂಗ್ಸ್​​ಮನ್ ಮುಖಾಮುಖಿ ಆಗಿದ್ದವು. ಆಗ ಇದ್ದಕ್ಕಿಂದ ಬಿಳಿ ಬಾಲ್ ಬಣ್ಣ ಬದಲಿಸಿದೆ. ಇದನ್ನು ನೋಡಿ ಅಂಪೈರ್​​​ಗಳು ಶಾಕ್ ಆದರು. ಆ ಬಳಿಕ ತಿಳಿದು ಬಂದಿದ್ದೇನೆಂದರೆ ಬಾಲ್​​​ನ ಆಟಗಾರರು ಬಟ್ಟೆಗೆ ಉಜ್ಜಿದಾಗ ಅದು ಬಣ್ಣ ಬಿಟ್ಟಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಟ್ರೋಲ್ ಆಗುತ್ತಿದೆ.

ಇನ್ನಷ್ಟು ಕ್ರಿಕೆಟ್​​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us