AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ, ಇಂಗ್ಲೆಂಡ್​​ಗೆ ಸೋಲುಣಿಸಿ 21ನೇ ಶತಮಾನದಲ್ಲಿ ಇತಿಹಾಸ ಬರೆದ ಲ್ಯಾಥಮ್!

ಟೆಸ್ಟ್​ ಕ್ರಿಕೆಟ್ ಸಾಮ್ರಾಜ್ಯದ ಅತ್ಯಂತ ಕಠಿಣ ಕೋಟೆಗಳೆಂದು ಕರೆಯಲ್ಪಡುವ ಲಾರ್ಡ್ಸ್, ವಾಂಖೆಡೆ, ಟ್ರೆಂಟ್ ಬ್ರಿಡ್ಜ್‌ ಮೈದಾನಗಳನ್ನು ನ್ಯೂಝಿಲೆಂಡ್ ಪಡೆ ಜಯಭೇರಿ ಬಾರಿಸಿದೆ. 2024ರಲ್ಲಿ ಭಾರತಕ್ಕೆ ಸೋಲುಣಿಸಿದ್ದ ಕಿವೀಸ್ ಪಡೆ ಇದೀಗ ಇಂಗ್ಲೆಂಡ್ ತಂಡವನ್ನು ಮಕಾಡೆ ಮಲಗಿಸಿದೆ. ಈ ಮೂಲಕ ನ್ಯೂಝಿಲೆಂಡ್ ತಂಡದ ನಾಯಕ ಟಾಮ್ ಲ್ಯಾಥಮ್ 21ನೇ ಶತಮಾನದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಭಾರತ, ಇಂಗ್ಲೆಂಡ್​​ಗೆ ಸೋಲುಣಿಸಿ 21ನೇ ಶತಮಾನದಲ್ಲಿ ಇತಿಹಾಸ ಬರೆದ ಲ್ಯಾಥಮ್!
Rohit - Latham - StokesImage Credit source: Sports360
ಝಾಹಿರ್ ಯೂಸುಫ್
|

Updated on:Jun 30, 2026 | 8:08 AM

Share

ಭಾರತ ತಂಡವನ್ನು ತವರಿನಲ್ಲಿ ಸೋಲಿಸಲು ಸಾಧ್ಯವೇ? ಇಂಗ್ಲೆಂಡ್​ ತಂಡವನ್ನು ಆಂಗ್ಲರ ಮಣ್ಣಿಸಲು ಸಾಧ್ಯವೇ? ಈ ಎರಡು ಪ್ರಶ್ನೆಗಳಿಗೆ ಸಾಧ್ಯ ಎಂಬ ಸಾಧನೆಯ ಉತ್ತರ ನೀಡಿದ್ದಾರೆ ನ್ಯೂಝಿಲೆಂಡ್ ತಂಡದ ನಾಯಕ ಟಾಮ್ ಲ್ಯಾಥಮ್. ಟ್ರೆಂಟ್ ಬ್ರಿಡ್ಜ್‌ನಲ್ಲಿ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ 160 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ, ನ್ಯೂಝಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ 2-1 ಅಂತರದಲ್ಲಿ ಐತಿಹಾಸಿಕ ಸರಣಿ ಗೆದ್ದುಕೊಂಡಿದೆ.

  • ಈ ಗೆಲುವಿನೊಂದಿಗೆ ಟಾಮ್ ಲ್ಯಾಥಮ್, 21ನೇ ಶತಮಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ಎರಡೂ ದೇಶಗಳಲ್ಲೂ ಟೆಸ್ಟ್ ಸರಣಿ ಗೆದ್ದ ಮೊದಲ ವಿದೇಶಿ ನಾಯಕ ಎಂಬ ಸಾರ್ವಕಾಲಿಕ ದಾಖಲೆ ಬರೆದಿದ್ದಾರೆ.

ಹೊಸ ಇತಿಹಾಸ:

ವಿಶ್ವ ಕ್ರಿಕೆಟ್‌ನಲ್ಲಿ ಭಾರತದಲ್ಲಿ ಸ್ಪಿನ್ ಪಿಚ್‌ಗಳನ್ನು ಎದುರಿಸುವುದು ಮತ್ತು ಇಂಗ್ಲೆಂಡ್‌ನಲ್ಲಿ ಸ್ವಿಂಗ್ ಆಗುವ ಪಿಚ್‌ಗಳನ್ನು ಜಯಿಸುವುದು ಅತ್ಯಂತ ಕಠಿಣ ಸವಾಲು ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಎರಡೂ ಸವಾಲುಗಳನ್ನು ಕಿವೀಸ್ ಪಡೆ ಅದ್ಭುತವಾಗಿ ಮೆಟ್ಟಿ ನಿಂತಿದ್ದಾರೆ. ಅದು ಸಹ ನೂತನ ನಾಯಕ ಟಾಮ್ ಲ್ಯಾಥಮ್ ಸಾರಥ್ಯದಲ್ಲಿ ಎಂಬುದು ವಿಶೇಷ.

  • ಭಾರತಕ್ಕೆ ಬಿಗ್ ಶಾಕ್ (2024): ಭಾರತದ ನೆಲದಲ್ಲಿ ಸತತ 12 ವರ್ಷಗಳ ಕಾಲ ಸೋಲನ್ನೇ ಕಾಣದಿದ್ದ ಬಲಿಷ್ಠ ಟೀಮ್ ಇಂಡಿಯಾವನ್ನು 3-0 ಇಂದ ವೈಟ್‌ವಾಶ್ ಮಾಡಿ ಟಾಮ್ ಲ್ಯಾಥಮ್ ಪಡೆ ಇತಿಹಾಸ ನಿರ್ಮಿಸಿದ್ದರು.
  • ಆಂಗ್ಲರಿಗೆ ಆಘಾತ (2026): ಮೊದಲ ಟೆಸ್ಟ್‌ನಲ್ಲಿ ಸೋತ ಹೊರತಾಗಿಯೂ ಧೃತಿಗೆಡದ ಲ್ಯಾಥಮ್ ಪಡೆ, ನಂತರದ 2 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ ಇಂಗ್ಲೆಂಡ್ ತಂಡವನ್ನು ಅವರದ್ದೇ ತವರಿನಲ್ಲಿ 2-1 ಅಂತರದಿಂದ ಮಣಿಸಿ ಹೊಸ ಇತಿಹಾಸ ಬರೆದಿದ್ದಾರೆ.

ದಿಗ್ಗಜರ ಸಾಲಿಗೆ ಸೇರಿದ ಲ್ಯಾಥಮ್:

ಭಾರತ ಮತ್ತು ಇಂಗ್ಲೆಂಡ್ ಎರಡೂ ದೇಶಗಳಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ಎಷ್ಟು ಅಪರೂಪ ಎಂದರೆ, ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿರುವುದು ಬೆರಳೆಣಿಕೆಯಷ್ಟೇ ನಾಯಕರುಗಳು ಮಾತ್ರ. ಈ ಸಾಧನೆ ಮಾಡಿದ ವಿಶ್ವದ ಅತ್ಯಂತ ಗಣ್ಯ ನಾಯಕರುಗಳ ಪಟ್ಟಿ ಈ ಕೆಳಗಿನಂತಿದೆ.

  • ಟಾಮ್ ಲ್ಯಾಥಮ್ (ನ್ಯೂಝಿಲೆಂಡ್)
  • ಕ್ಲೈವ್ ಲಾಯ್ಡ್ (ವೆಸ್ಟ್ ಇಂಡೀಸ್)
  • ಸರ್ ಗಾರ್ಫೀಲ್ಡ್ ಸೋಬರ್ಸ್ (ವೆಸ್ಟ್ ಇಂಡೀಸ್)
  • ಬಿಲ್ ಲಾರಿ (ಆಸ್ಟ್ರೇಲಿಯಾ)
  • ಲಿಂಡ್ಸೆ ಹ್ಯಾಸೆಟ್ (ಆಸ್ಟ್ರೇಲಿಯಾ)

ಇದನ್ನೂ ಓದಿ: ರಣರೋಚಕ ಪಂದ್ಯ… ಅಂತಿಮ ನಿಮಿಷದಲ್ಲಿ ಗೆದ್ದ ಬ್ರೆಝಿಲ್

ಈ ಗೆಲುವಿನೊಂದಿಗೆ ಟಾಮ್ ಲ್ಯಾಥಮ್ ಕೇವಲ ಒಬ್ಬ ನಾಯಕನಾಗಿ ಮಾತ್ರವಲ್ಲದೆ, ಆಧುನಿಕ ಕ್ರಿಕೆಟ್‌ನ ಅತ್ಯುತ್ತಮ ರಣತಂತ್ರ ರೂಪಿಸುವ ಚತುರ ಕಪ್ತಾನನಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಕೇನ್ ವಿಲಿಯಮ್ಸನ್ ಅವರ ಅನುಪಸ್ಥಿತಿ ಕಾಡದಂತೆ ನ್ಯೂಝಿಲೆಂಡ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

Published On - 7:54 am, Tue, 30 June 26

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ