16 ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಂದು (IPL 2023) ಮಹತ್ವದ ಪಂದ್ಯ ನಡೆಯಲಿದೆ. ಕೋಲ್ಕತ್ತಾದ ಈಡನ್ ಗಾರ್ಡರ್ನ್ಸ್ ಮೈದಾನದಲ್ಲಿ ನಿತೀಶ್ ರಾಣ (Nitish Rana) ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ (KKR vs PBKS) ಮುಖಾಮುಖಿ ಆಗಲಿದೆ. ಕೆಕೆಆರ್ ಆಡಿರುವ 10 ಪಂದ್ಯಗಳಲ್ಲಿ 4 ಗೆಲುವು, 6 ಸೋಲು ಕಂಡು 8 ಅಂಕ ಪಡೆದು 8ನೇ ಸ್ಥಾನದಲ್ಲಿದ್ದರೆ, ಪಂಜಾಬ್ 10 ಪಂದ್ಯಗಳಲ್ಲಿ ತಲಾ 5 ಗೆಲುವು, ಸೋಲು ಅನುಭವಿಸಿ ಏಳನೇ ಸ್ಥಾನದಲ್ಲಿದೆ. ಪಾಯಿಂಟ್ ಟೇಬಲ್ನಲ್ಲಿ ಮೇಲೇರಲು ಉಭಯ ತಂಡಗಳಿಗೆ ಈ ಪಂದ್ಯ ಮುಖ್ಯವಾಗಿರುವ ಕಾರಣ ಹೈವೋಲ್ಟೇಜ್ ಮ್ಯಾಚ್ ನಿರೀಕ್ಷಿಸಲಾಗಿದೆ.
ಕೆಕೆಆರ್ ಕಳೆದ ಪಂದ್ಯದಲ್ಲಿ ಎಸ್ಆರ್ಹೆಚ್ ವಿರುದ್ಧ 5 ರನ್ಗಳ ರೋಚಕ ಜಯ ಸಾಧಿಸಿ ಗೆಲುವಿನ ಲಯಕ್ಕೆ ಮರಳಿದೆ. ಕೆಕೆಆರ್ ತಂಡದಲ್ಲಿ ಸ್ಟಾರ್ ಬ್ಯಾಟರ್-ಬೌಲರ್ಗಳಿದ್ದರೂ ತಂಡಕ್ಕೆ ಕೊಡುಗೆ ಸಲ್ಲುತ್ತಿಲ್ಲ. ಜೇಸನ್ ರಾಯ್ ಹಾಗೂ ರಹಮಾನುಲ್ಲಾ ಗುರ್ಬಾಜ್ ಜೋಡಿ ಉತ್ತಮ ಆರಂಭ ನೀಡುತ್ತಿಲ್ಲ. ನಾಯಕ ನಿತೀಶ್ ರಾಣ ಹಾಗೂ ರಿಂಕು ಸಿಂಗ್ ಮಾತ್ರ ರನ್ಗಾಗಿ ಹೋರಾಡುತ್ತಿದ್ದಾರೆ.
ಎನ್. ಜಗದೀಸನ್ ಹಾಗೂ ವೆಂಕಟೇಶ್ ಅಯ್ಯರ್ ಕಡೆಯಿಂದ ಒಂದೊಳ್ಳೆ ಆಟ ಬರಬೇಕು. ಕೊನೆಯ ಹಂತದಲ್ಲಿ ಆಂಡ್ರೆ ರಸೆಲ್ ಮತ್ತು ಶಾರ್ದೂಲ್ ಥಾಕೂರ್ ಬ್ಯಾಟಿಂಗ್ನಲ್ಲಿ ಬಲ ತುಂಬಿದರೆ ತಂಡದ ಮೊತ್ತ 200+ ಆಗುವುದು ಖಚಿತ. ಸುನಿಲ್ ನರೈನ್, ವರುಣ್ ಚಕ್ರವರ್ತಿ ಮಾರಕವಾಗಿದ್ದರೆ ಹರ್ಷಿತ್ ರಾನ, ಸುಯೇಶ್ ಶರ್ಮಾ ಭರವಸೆ ಮೂಡಿಸಿದ್ದಾರೆ.
IPL 2023: ಮೊದಲು ಜಗಳ..ಆಮೇಲೆ ಅಪ್ಪುಗೆ..!
ಇತ್ತ ಪಂಜಾಬ್ ಹಿಂದಿನ ಪಂದ್ಯದಲ್ಲಿ ಮುಂಬೈ ವಿರುದ್ಧ ಸೋತಿತ್ತು. ನಾಯಕ ಶಿಖರ್ ಧವನ್ ಇಂಜುರಿಯಿಂದ ಕಮ್ಬ್ಯಾಕ್ ಮಾಡಿದ ಬಳಿಕ ಮಂಕಾಗಿದ್ದಾರೆ. ಇವರ ಬ್ಯಾಟ್ ಸದ್ದು ಮಾಡಬೇಕಿದೆ. ಪ್ರಭುಸಿಮ್ರಾನ್ ಸಿಂಗ್ ಕೂಡ ಧವನ್ ಜೊತೆ ಉತ್ತಮ ಆರಂಭ ಒದಗಿಸಬೇಕಿದೆ. ಸಿಖಂದರ್ ರಾಜಾ ಹಾಗೂ ಅಥರ್ವ ತೈಡೆ ಕಡೆಯಿಂದ ಉತ್ತಮ ಆಟ ಬರಬೇಕಿದೆ. ಹಿಂದಿನ ಪಂದ್ಯದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದರು. ಜಿತೇಶ್ ಶರ್ಮಾ ಕೂಡ ಸಾಥ್ ನೀಡುತ್ತಿದ್ದಾರೆ.
ಸ್ಯಾಮ್ ಕುರ್ರನ್ ಹಾಗೂ ಶಾರುಖಕ್ ಖಾನ್ ಅಬ್ಬರಿಸಬೇಕು. ಬೌಲಿಂಗ್ನಲ್ಲಿ ಪಂಜಾಬ್ ದುರ್ಬಲವಾಗಿದೆ. ಹಿಂದಿನ ಪಂದ್ಯದಲ್ಲಿ ಮುಂಬೈ ಬ್ಯಾಟರ್ಗಳು 216 ರನ್ ಚೇಸ್ ಮಾಡಿದ್ದರು. ಅರ್ಶ್‌ದೀಪ್ ಸಿಂಗ್, ನೇಥನ್ ಎಲಿಸ್, ರಾಹುಲ್ ಚಹರ್, ಹರ್ಪ್ರೀತ್ ಬ್ರರ್ ಇದ್ದರೂ ಮಾರಕವಾಗುತ್ತಿಲ್ಲ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ರಹಮಾನುಲ್ಲಾ ಗುರ್ಬಾಜ್, ಜೇಸನ್ ರಾಯ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ಸುನಿಲ್ ನರೈನ್, ಶಾರ್ದೂಲ್ ಥಾಕೂರ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಅನುಕುಲ್ ರಾಯ್, ಸುಯೇಶ್ ಶರ್ಮಾ, ಎನ್ ಜಗದೀಸನ್, ಕುಲ್ವಂತ್ ಖೆಜ್ರೋಲಿಯಾ, ಮನ್ದೀಪ್ ಸಿಂಗ್, ಟಿಮ್ ಸೌಥಿ, ಡೇವಿಡ್ ವೈಸ್, ಉಮೇಶ್ ಯಾದವ್, ಆರ್ಯ ದೇಸಾಯಿ.
ಪಂಜಾಬ್ ಕಿಂಗ್ಸ್ ತಂಡ: ಪ್ರಭಾಸಿಮ್ರಾನ್ ಸಿಂಗ್, ಶಿಖರ್ ಧವನ್ (ನಾಯಕ), ಮ್ಯಾಥ್ಯೂ ಶಾರ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಸ್ಯಾಮ್ ಕುರ್ರನ್, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್, ನೇಥನ್ ಎಲಿಸ್, ಸಿಖಂದರ್ ರಾಜಾ, ಅಥರ್ವ ತೈಡೆ, ಮೋಹಿತ್ ರಾಠೀ, ಶಿವಂ ಸಿಂಗ್, ಕಗಿಸೊ ರಬಾಡ, ಹರ್‌ಪ್ರೀತ್ ಸಿಂಗ್ ಭಾಟಿಯಾ, ಭಾನುಕಾ ರಾಜಪಕ್ಸೆ, ಬಲ್ತೇಜ್ ಸಿಂಗ್, ವಿಧ್ವತ್ ಕಾವೇರಪ್ಪ, ಗುರ್ನೂರ್ ಬ್ರಾರ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ