SRH vs KKR Highlights IPL 2023: ಮತ್ತೆ ಎಡವಿದ ಹೈದರಾಬಾದ್; ಕೆಕೆಆರ್ಗೆ 5 ರನ್ ಜಯ
Sunrisers Hyderabad vs Kolkata Knight Riders IPL 2023 Live Score in Kannada: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 5 ರನ್ಗಳಿಂದ ಸೋತ ಸನ್ ರೈಸರ್ಸ್ ಹೈದರಾಬಾದ್ 6 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲೇ ಉಳಿದುಕೊಂಡಿದೆ.
ಐಪಿಎಲ್ 2023ರ 47ನೇ ಪಂದ್ಯದಲ್ಲಿ ಹೈದರಾಬಾದ್ ತಂಡ ಮತ್ತೊಮ್ಮೆ ಎಡವಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 5 ರನ್ಗಳಿಂದ ಸೋತ ಸನ್ ರೈಸರ್ಸ್ ಹೈದರಾಬಾದ್ 6 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಕೋಲ್ಕತ್ತಾ ತಂಡದ ನಾಯಕ ನಿತೀಶ್ ರಾಣಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಕೋಲ್ಕತ್ತಾ ನಿಗದಿತ ಓವರ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಹೈದರಾಬಾದ್ನ ಆರಂಭ ವಿಶೇಷವೇನಲ್ಲ. ಆದಾಗ್ಯೂ, ಕ್ಲಾಸೆನ್ ಮತ್ತು ಮಾರ್ಕ್ರಾಮ್ ಉತ್ತಮ ಜೊತೆಯಾಟ ಆಡಿದರು. ಆದರೆ ಈ ಇಬ್ಬರ ನಂತರ ಮತ್ತ್ಯಾರು ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಆಡಲಿಲ್ಲ. ಹೀಗಾಗಿ ತಂಡ 5 ರನ್ಗಳ ಸೋಲು ಕಂಡಿತು.
LIVE NEWS & UPDATES
-
5 ರನ್ ಜಯ
ಅಂತಿಮ ಓವರ್‌ನಲ್ಲಿ 9 ರನ್ ಟಾರ್ಗೆಟ್ ಪಡೆದಿದ್ದ ಹೈದರಾಬಾದ್ ಕೇವಲ 4 ರನ್ ಮಾತ್ರ ಗಳಿಸಿತು. ಇದರೊಂದಿಗೆ 5 ರನ್ಗಳ ಹೀನಾಯ ಸೋಲು ಕಂಡಿತು.
-
ಅಬ್ದುಲ್ ಸಮದ್ ಔಟ್
20ನೇ ಓವರ್‌ನ ಮೂರನೇ ಎಸೆತದಲ್ಲಿ ಅಬ್ದುಲ್ ಸಮದ್ ಔಟಾದರು. ವರುಣ್ ಚಕ್ರವರ್ತಿ ಎಸೆತದಲ್ಲಿ ಡೀಪ್ ಮಿಡ್‌ವಿಕೆಟ್‌ನಲ್ಲಿ ಅನುಕುಲ್ ರಾಯ್ಗೆ ಕ್ಯಾಚ್ ನೀಡಿದರು.
-
6 ಎಸೆತದಲ್ಲಿ 9 ರನ್ ಬೇಕು
19ನೇ ಓವರ್‌ನಲ್ಲಿ 11 ರನ್ ಬಂತು. ಈ ಓವರ್‌ನಲ್ಲಿ ಭುವಿ 1 ಬೌಂಡರಿ ಹೊಡೆದರೆ ಸಮದ್ ಕೂಡ ಬೌಂಡರಿ ಬಾರಿಸಿದರು. ಕೊನೆಯ ಓವರ್‌ನಲ್ಲಿ 9 ರನ್ ಬೇಕು
ಯಾನ್ಸೆನ್ ಔಟ್
19ನೇ ಓವರ್‌ನ ಮೊದಲ ಎಸೆತದಲ್ಲಿ ಯಾನ್ಸೆನ್ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು.
150 ರನ್ ಪೂರ್ಣ
ವರುಣ್ ಬೌಲ್ ಮಾಡಿದ 18ನೇ ಓವರ್‌ನಲ್ಲಿ ಡಬಲ್ ತೆಗೆದ ಸಮದ್ ಹೈದರಾಬಾದ್ ಮೊತ್ತವನ್ನು 150ರ ಗಡಿ ದಾಟಿಸಿದರು.
ಅರೋರಾಗೆ ವಿಕೆಟ್
16ನೇ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ತಿಂದ ಅರೋರಾ, ಅದೇ ಓವರ್‌ನ 5ನೇ ಎಸೆತದಲ್ಲಿ ಎದುರಾಳಿ ನಾಯಕ ಮಾರ್ಕ್ರಾಮ್ ವಿಕೆಟ್ ಉರುಳಿಸಿದರು.
ಸಮದ್ ಬೌಂಡರಿ
ಶಾರ್ದೂಲ್ ಬೌಲ್ ಮಾಡಿದ 15ನೇ ಓವರ್‌ನಲ್ಲಿ 2 ಬೌಂಡರಿ ಬಂದವು. ಮೊದಲ ಬೌಂಡರಿಯನ್ನು ಮಕ್ರಾಮ್ ಹೊಡೆದರೆ, 2ನೇ ಬೌಂಡರಿಯನ್ನು ಸಮದ್ ಬಾರಿಸಿದರು.
ಹೆನ್ರಿಕ್ ಕ್ಲಾಸೆನ್ ಔಟ್
ಹೆನ್ರಿಕ್ ಕ್ಲಾಸೆನ್ ಔಟಾಗಿದ್ದಾರೆ. ಅವರು 15ನೇ ಓವರ್‌ನ ಮೊದಲ ಎಸೆತದಲ್ಲಿ ಡೀಪ್ ಮಿಡ್‌ವಿಕೆಟ್‌ನಲ್ಲಿ ರಸೆಲ್ ಅವರ ಕೈಗೆ ಕ್ಯಾಚ್ ನೀಡಿದರು.
ಹೆನ್ರಿಕ್ 36 ರನ್, 20 ಎಸೆತಗಳಲ್ಲಿ 1×4 3×6
ಹೈದರಾಬಾದ್ ಶತಕ ಪೂರ್ಣ
12ನೇ ಓವರ್‌ನಲ್ಲಿ 2 ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಮಾರ್ಕ್ರಾಮ್ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದ್ದಾರೆ.
ಕ್ಲಾಸೆನ್ ಸಿಕ್ಸ್
ಹೈದರಾಬಾದ್ ಇನ್ನಿಂಗ್ಸ್ಗೆ ಕ್ಲಾಸೆನ್ ಜೀವ ತುಂಬುತ್ತಿದ್ದಾರೆ. ಅನ್ಕುಲ್ ಬೌಲ್ ಮಾಡಿದ 11ನೇ ಓವರ್‌ನಲ್ಲಿ ಕ್ಲಾಸೆನ್ 2 ಸಿಕ್ಸರ್ ಹೊಡೆದರು.
10 ಓವರ್ ಅಂತ್ಯ
ಹೈದರಾಬಾದ್ ಇನ್ನಿಂಗ್ಸ್ನ 10 ಓವರ್ ಮುಗಿದಿದ್ದು, ತಂಡ 4 ವಿಕೆಟ್ ಕಳೆದುಕೊಂಡು 75 ರನ್ ಬಾರಿಸಿದೆ.
8ನೇ ಓವರ್ ಅಂತ್ಯ
ಸತತವಾಗಿ ವಿಕೆಟ್ ಕಳೆದುಕೊಳ್ಳುತ್ತಿರುವ ಹೈದರಾಬಾದ್ ಇನ್ನಿಂಗ್ಸ್ ತತ್ತರಿಸಿದೆ. ಇನ್ನಿಂಗ್ಸ್ನ 8ನೇ ಓವರ್ ಮುಗಿದಿದ್ದು, ತಂಡ 66 ರನ್ಗಳಿಗೆ 4 ವಿಕಟ್ ಕಳೆದುಕೊಂಡಿದೆ.
ಶೂನ್ಯಕ್ಕೆ ಬ್ರೂಕ್ ಔಟ್
ಸತತ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಹ್ಯಾರಿ ಬ್ರೂಕ್ ಮತ್ತೊಮ್ಮೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.
ತ್ರಿಪಾಠಿ ಔಟ್
ಹೈದರಾಬಾದ್ 3ನೇ ವಿಕೆಟ್ ಕಳೆದುಕೊಂಡಿದೆ. 5ನೇ ಓವರ್‌ನ ಮೊದಲ 3 ಎಸೆತದಲ್ಲಿ ಬೌಂಡರಿ ಬಾರಿಸಿದ ತ್ರಿಪಾಠಿ 3ನೇ ಎಸೆತದಲ್ಲಿ ಕ್ಯಾಚಿತ್ತು ಔಟಾದರು.
ತ್ರಿಪಾಠಿ ಸಿಕ್ಸರ್
ರಸೆಲ್ ಬೌಲ್ ಮಾಡಿದ 5ನೇ ಓವರ್‌ನ ಮೊದಲ ಎಸೆತ ನೋಬಾಲ್ ಆಗಿತ್ತು. ಅದನ್ನು ಬೌಂಡರಿಗಟ್ಟಿದ ತ್ರಿಪಾಠಿ ಫ್ರೀ ಹಿಟ್ ಬಾಲ್ನಲ್ಲಿ ಸಿಕ್ಸರ್ಗಟ್ಟಿದರು. ಮುಂದಿನ ಎಸೆತದಲ್ಲಿ ಬೌಂಡರಿ ಹೊಡೆದರು.
5ನೇ ಓವರ್‌ನಲ್ಲಿ 1 ರನ್
2 ವಿಕೆಟ್ ಉರುಳಿದ ಬಳಿಕ ಹೈದರಾಬಾದ್ ಇನ್ನಿಂಗ್ಸ್ ನಿಧಾನವಾಗಿದೆ. 5ನೇ ಓವರ್‌ನಲ್ಲಿ ಕೇವಲ 1 ರನ್ ಮಾತ್ರ ಬಂತು.
ಅಭಿಷೇಕ್ ಔಟ್
ಶಾರ್ದೂಲ್ ಬೌಲ್ ಮಾಡಿದ 3ನೇ ಓವರ್‌ನ 5ನೇ ಎಸೆತದಲ್ಲಿ ಆರಂಭಿಕ ಅಭಿಷೇಕ್ ಕ್ಯಾಚಿತ್ತು ಔಟಾದರು.
ತ್ರಿಪಾಠಿ ಬೌಂಡರಿ
ನಾಲ್ಕನೇ ಓವರ್‌ನ ಎರಡನೇ ಎಸೆತದಲ್ಲಿ ರಾಹುಲ್ ತ್ರಿಪಾಠಿ ಸ್ಕೂಪ್ ಮಾಡಿ ಬೌಂಡರಿ ಬಾರಿಸಿದರು.
ಮಯಾಂಕ್ ಸಿಕ್ಸ್, ಔಟ್
ರಾಣಾ ಬೌಲ್ ಮಾಡಿದ 3ನೇ ಓವರ್‌ನ 3ನೇ ಎಸೆತದಲ್ಲಿ ಡೀಪ್ ಪಾಯಿಂಟ್ ಮೇಲೆ ಸಿಕ್ಸರ್ ಬಾರಿಸಿದ ಮಯಾಂಕ್, ಕೊನೆಯ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚಿತ್ತು ಔಟಾದರು.
ಮಯಾಂಕ್ ಬೌಂಡರಿ
ವೈಭವ್ ಬೌಲ್ ಮಾಡಿದ 2ನೇ ಓವರ್‌ನಲ್ಲಿ 13 ರನ್ ಬಂದವು. ಈ ಓವರ್‌ನ ಕೊನೆಯ ಎಸೆತದಲ್ಲಿ ಮಯಾಂಕ್ ಥರ್ಡ್ ಮ್ಯಾನ್ನಲ್ಲಿ ಬೌಂಡರಿ ಹೊಡೆದರು.
ಹೈದರಾಬಾದ್ ಇನ್ನಿಂಗ್ಸ್ ಆರಂಭ
ಹೈದರಾಬಾದ್ ಇನ್ನಿಂಗ್ಸ್ ಆರಂಭವಾಗಿದೆ. ಅಭಿಷೇಕ್ ಶರ್ಮಾ ಮತ್ತು ಮಯಾಂಕ್ ಅಗರ್ವಾಲ್ ಇನ್ನಿಂಗ್ಸ್ ಆರಂಭಿಸಲು ಬಂದಿದ್ದಾರೆ.ಇವರ ಮುಂದೆ ಹರ್ಷಿತ್ ರಾಣಾ ಬೌಲಿಂಗ್ ಆರಂಭಿಸುತ್ತಿದ್ದಾರೆ. ಅಭಿಷೇಕ್ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದರು.
171 ರನ್ ಟಾರ್ಗೆಟ್
20ನೇ ಓವರ್‌ನಲ್ಲಿ 2 ವಿಕೆಟ್ ಉರುಳಿಸಿದ ನಟರಾಜನ್ ಕೇವಲ 3 ರನ್ ನೀಡಿದರು. ಇದರೊಂದಿಗೆ ಕೆಕೆಆರ್ 9 ವಿಕೆಟ್ ಕಳೆದುಕೊಂಡು 171 ರನ್ ಬಾರಿಸಿದೆ.
ರಾಯ್ ಬೌಂಡರಿ
ಭುವಿ ಬೌಲ್ ಮಾಡಿದ 19ನೇ ಓವರ್‌ನಲ್ಲಿ ಅನ್ಕುಲ್ ರಾಯ್ 2 ಬೌಂಡರಿ ಹೊಡೆದರು. ಈ ಒವರ್ನಲ್ಲಿ 13 ರನ್ ಬಂದವು.
ಶಾರ್ದೂಲ್ ಔಟ್
6 ಬಾಲ್ಗಳಲ್ಲಿ 8 ರನ್ ಬಾರಿಸಿದ್ದ ಶಾರ್ದೂಲ್ ನಟರಾಜನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.
150 ರನ್ ಪೂರ್ಣ
18ನೇ ಓವರ್‌ನ ಮೊದಲ ಎಸೆತದಲ್ಲಿ ಡಬಲ್ ತೆಗೆದುಕೊಂಡ ರಿಂಕು ಕೆಕೆಆರ್ ಮೊತ್ತವನ್ನು 150ರ ಗಡಿ ದಾಟಿಸಿದರು.
ರಿಂಕು ಸಿಕ್ಸ್, 17 ಓವರ್ ಅಂತ್ಯಕ್ಕೆ 148/6
ಮಯಾಂಕ್ ಬೌಲ್ ಮಾಡಿದ 17ನೇ ಓವರ್‌ನ 5ನೇ ಎಸೆತದಲ್ಲಿ ರಿಂಕು ಲಾಂಗ್ ಆನ್ನಲ್ಲಿ ಸಿಕ್ಸರ್ ಹೊಡೆದರು.
ನರೈನ್ ಔಟ್
ರಸೆಲ್ ವಿಕೆಟ್ ಬಳಿಕ ಬಂದ ನರೈನ್ ಕೂಡ ಕೇವಲ 2 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
ರಸೆಲ್ ಔಟ್
15ನೇ ಓವರ್‌ನ 2ನೇ ಎಸೆತದಲ್ಲೇ ರಸೆಲ್ ವಿಕೆಟ್ ಒಪ್ಪಿಸಿದ್ದಾರೆ.
14 ಓವರ್ ಅಂತ್ಯ, ಕೆಕೆಆರ್ 127/4
ನಟರಾಜನ್ ಬೌಲ್ ಮಾಡಿದ 14ನೇ ಓವರ್‌ನ 4ನೇ ಎಸೆತದಲ್ಲಿ ರಸೆಲ್ ಡೀಪ್ ಮಿಡ್ ವಿಕೆಟ್ ಕಡೆ ಬೌಂಡರಿ ಹೊಡೆದರು.
ರಸೆಲ್ ಸಿಕ್ಸ್
ಮಯಾಂಕ್ ಬೌಲ್ ಮಾಡಿದ 13ನೇ ಓವರ್‌ನ 2ನೇ ಎಸೆತವನ್ನು ರಸೆಲ್ ಲಾಂಗ್ ಆನ್ನಲ್ಲಿ ಸಿಕ್ಸರ್ಗಟ್ಟಿದರೆ, ಕೊನೆಯ ಎಸೆತವನ್ನು ರಿಂಕು ಬೌಂಡರಿಗಟ್ಟಿದರು.
ಕೋಲ್ಕತ್ತಾದ ಶತಕ ಪೂರ್ಣ
ನಾಯಕ ರಾಣಾ ವಿಕೆಟ್ ಬಳಿಕ ಬಂದ ರಸೆಲ್ 11ನೇ ಓವರ್‌ನ 5ನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿ, ತಂಡವನ್ನು 100ರ ಗಡಿ ದಾಟಿಸಿದ್ದಾರೆ.
ರಾಣಾ ಔಟ್
31 ಬಾಲ್ಗಳಲ್ಲಿ 42 ರನ್ ಬಾರಿಸಿದ್ದ ಕೆಕೆಆರ್ ನಾಯಕ ನಿತೀಶ್ ರಾಣಾ ಎದುರಾಳಿ ನಾಯಕನ ಬೌಲಿಂಗ್ನಲ್ಲಿ ಅವರಿಗೆ ಕ್ಯಾಚಿತ್ತು ಔಟಾಗಿದ್ದಾರೆ. ಇದರೊಂದಿಗೆ ಕೆಕೆಆರ್ 4ನೇ ವಿಕೆಟ್ ಕಳೆದುಕೊಂಡಿದೆ.
ತ್ಯಾಗಿ ದುಬಾರಿ
ರಾಯ್ ವಿಕೆಟ್ ಉರುಳಿಸಿದ್ದ ತ್ಯಾಗಿ 10ನೇ ಓವರ್‌ನಲ್ಲಿ ತುಂಬಾ ದುಬಾರಿಯಾಗಿದ್ದಾರೆ. ಈ ಓವರ್‌ನಲ್ಲಿ ಒಟ್ಟು 3 ಬೌಂಡರಿ ಬಂದವು. ಅದರಲ್ಲಿ 2 ಸಿಕ್ಸರ್ ಆದರೆ, 1 ಭರ್ಜರಿ ಫೋರ್ ಆಗಿತ್ತು.
ರಿಂಕು ಬೌಂಡರಿ
9ನೇ ಓವರ್‌ನಲ್ಲಿ ರಿಂಕು 2 ಬ್ಯಾಕ್ ಟು ಬ್ಯಾಕ್ ಬೌಂಡರಿ ಹೊಡೆದರು. ಮೊದಲ ಬೌಂಡರಿ ಡೀಪ್ ಕವರ್ಸ್ನಲ್ಲಿ ಬಂದರೆ, 2ನೇ ಬೌಂಡರಿ ಡೀಪ್ ಕವರ್ಸ್ ಪಾಯಿಂಟ್ನಲ್ಲಿ ಬಂತು.
ರಾಣಾ ಸಿಕ್ಸ್
ನಟರಾಜ್ ಬೌಲ್ ಮಾಡಿದ 8ನೇ ಓವರ್‌ನ 2ನೇ ಎಸೆತವನ್ನು ಡೀಪ್ ಸ್ಕ್ವೇರ್ ಲೆಗ್ನಲ್ಲಿ ರಾಣಾ ಸಿಕ್ಸರ್ಗಟ್ಟಿದರು.
8 ಓವರ್ ಅಂತ್ಯಕ್ಕೆ 61/3
ರಾಯ್ ಔಟ್, 5 ಓವರ್ ಅಂತ್ಯಕ್ಕೆ 40/3
5ನೇ ಓವರ್ ಬೌಲ್ ಮಾಡಿದ ತ್ಯಾಗಿ 3ನೇ ಎಸೆತದಲ್ಲಿ ಬೌಂಡರಿ ನೀಡಿದರೆ, ಆ ನಂತರದ ಎಸೆತದಲ್ಲಿ ಡೇಂಜರಸ್ ರಾಯ್ ವಿಕೆಟ್ ಉರುಳಿಸಿದ್ದಾರೆ.
ಯಾನ್ಸೆನ್ ನೋ ಬಾಲ್
4ನೇ ಓವರ್ ಬೌಲ್ ಮಾಡಿದ ಯಾನ್ಸೆನ್ ಓವೆರ್ನ ಮೊದಲ ಎಸೆತವನ್ನೇ ನೋ ಬಾಲ್ ಹಾಕಿದರು. ಈ ಬಾಲ್ನಲ್ಲಿ ಬೌಂಡರಿ ಕೂಡ ಸಿಕ್ಕಿತ್ತು. ಆದರೆ ಫ್ರೀ ಹಿಟ್ ಬಾಲ್ನಲ್ಲಿ ಯಾವುದೇ ರನ್ ಬರಲಿಲ್ಲ.
ರಾಯ್ ಬೌಂಡರಿ
ಭುವಿ ಬೌಲ್ ಮಾಡಿದ 3ನೇ ಓವರ್‌ನ 3ನೇ ಎಸೆತದಲ್ಲಿ ರಾಯ್ ಪಾಯಿಂಟ್ ದಿಕ್ಕಿನಲ್ಲಿ ಬೌಂಡರಿ ಹೊಡೆದರು.
ಅಯ್ಯರ್ ಔಟ್
2ನೇ ಓವರ್‌ನಲ್ಲಿ 2 ವಿಕೆಟ್ ಉರುಳಿದವು. ಓವರ್‌ನ ಮೊದಲ ಎಸೆತದಲ್ಲೇ ವಿಕೆಟ್ ಬಿದ್ದರೆ, ಕೊನೆಯ ಎಸೆತದಲ್ಲಿ ವೆಂಕಟೇಶ್ ಅಯ್ಯರ್ ವಿಕೆಟ್ ಕೀಪರ್ಗೆ ಕ್ಯಾಚಿತ್ತು ಔಟಾದರು.
ಮೊದಲ ವಿಕೆಟ್ ಪತನ
ಕೆಕೆಆರ್ ತಂಡದ ಮೊದಲ ವಿಕೆಟ್ ಪತನವಾಗಿದೆ. 2ನೇ ಓವರ್‌ನ ಮೊದಲ ಎಸೆತದಲ್ಲಿ ಆರಂಭಿಕ ಗುರ್ಭಾಜ್ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು.
ಕೋಲ್ಕತ್ತಾದ ಬ್ಯಾಟಿಂಗ್ ಆರಂಭ
ಕೋಲ್ಕತ್ತಾ ಬ್ಯಾಟಿಂಗ್ ಆರಂಭಿಸಿದೆ. ಸ್ಫೋಟಕ ಆರಂಭಿಕ ಜೋಡಿ ಜೇಸನ್ ರಾಯ್ ಮತ್ತು ರಹಮಾನುಲ್ಲಾ ಗುರ್ಬಾಜ್ ಕ್ರೀಸ್‌ನಲ್ಲಿದ್ದಾರೆ. ಭುವನೇಶ್ವರ್ ಅವರ ಓವರ್‌ನಲ್ಲಿ ರಾಯ್ ಬೌಂಡರಿ ಬಾರಿಸಿದರು.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ
ನಿತೀಶ್ ರಾಣಾ (ನಾಯಕ), ಜೇಸನ್ ರಾಯ್, ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನಿಲ್ ನರೈನ್, ರಿಂಕು ಸಿಂಗ್, ವೈಭವ್ ಅರೋರಾ, ಶಾರ್ದೂಲ್ ಠಾಕೂರ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.
ಸನ್ ರೈಸರ್ಸ್ ಹೈದರಾಬಾದ್
ಏಡನ್ ಮಾರ್ಕ್ರಾಮ್ (ನಾಯಕ), ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್, ಹ್ಯಾರಿ ಬ್ರೂಕ್, ಅಬ್ದುಲ್ ಸಮದ್, ಮಾರ್ಕೊ ಯಾನ್ಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಕಾರ್ತಿಕ್ ತ್ಯಾಗಿ ಮತ್ತು ಟಿ ನಟರಾಜನ್.
ಟಾಸ್ ಗೆದ್ದ ಕೋಲ್ಕತ್ತಾ
ಟಾಸ್ ಗೆದ್ದ ಕೋಲ್ಕತ್ತಾ ನಾಯಕ ನಿತಿಶ್ ರಾಣಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - May 04,2023 7:02 PM