IPL 2023: ನಾ ನೋಡಿದ ಅದ್ಭುತ ಕ್ಯಾಚ್…ರಶೀದ್ ಖಾನ್ ಫೀಲ್ಡಿಂಗ್ಗೆ ಕಿಂಗ್ ಕೊಹ್ಲಿ ಬಹುಪರಾಕ್
IPL 2023 Kannada: ಈ ಪಂದ್ಯದಲ್ಲಿ 228 ರನ್ಗಳ ಟಾರ್ಗೆಟ್ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಗುಜರಾತ್ ಟೈಟಾನ್ಸ್ ತಂಡವು 56 ರನ್ಗಳ ಭರ್ಜರಿ ಜಯ ಸಾಧಿಸಿತು.
IPL 2023: ಐಪಿಎಲ್ನ 51ನೇ ಪಂದ್ಯದಲ್ಲಿ ರಶೀದ್ ಖಾನ್ (Rashid Khan) ಹಿಡಿದ ಅತ್ಯದ್ಭುತ ಕ್ಯಾಚ್ಗೆ ಆರ್ಸಿಬಿ (RCB) ಆಟಗಾರ ವಿರಾಟ್ ಕೊಹ್ಲಿ (Virat Kohli) ತಲೆದೂಗಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಶುಭ್ಮನ್ ಗಿಲ್ ಹಾಗೂ ವೃದ್ಧಿಮಾನ್ ಸಾಹ ಗುಜರಾತ್ ಟೈಟಾನ್ಸ್ಗೆ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 142 ರನ್ಗಳ ಜೊತೆಯಾಟವಾಡಿದ ಸಾಹ (81) ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಹಾರ್ದಿಕ್ ಪಾಂಡ್ಯ 25 ರನ್ ಬಾರಿಸಿದರು. ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಶುಭ್ಮನ್ ಗಿಲ್ 51 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 2 ಫೋರ್ನೊಂದಿಗೆ ಅಜೇಯ 94 ರನ್ಗಳಿಸಿದರು. ಪರಿಣಾಮ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗುಜರಾತ್ ಟೈಟಾನ್ಸ್ ತಂಡವು 227 ರನ್ ಕಲೆಹಾಕಿತು.
228 ರನ್ಗಳ ಬೃಹತ್ ಗುರಿ ಪಡೆದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಸ್ಪೋಟಕ ಆರಂಭ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ಎಡಗೈ ದಾಂಡಿಗರಾದ ಕೈಲ್ ಮೇಯರ್ಸ್ ಹಾಗೂ ಕ್ವಿಂಟನ್ ಡಿಕಾಕ್ ಗುಜರಾತ್ ಟೈಟಾನ್ಸ್ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ 8 ಓವರ್ಗಳ ವೇಳೆ ತಂಡದ ಮೊತ್ತ 80 ರನ್ಗಳ ಗಡಿದಾಟಿತು.
ಇತ್ತ ವಿಕೆಟ್ಗಳ ಹುಡುಕಾಟದಲ್ಲಿದ್ದ ಹಾರ್ದಿಕ್ ಪಾಂಡ್ಯ ಚೆಂಡನ್ನು ಮೋಹಿತ್ ಶರ್ಮಾ ಕೈಗೆ ನೀಡಿದರು. 9ನೇ ಓವರ್ನ ಮೊದಲ ಎಸೆತವನ್ನು ಕೈಲ್ ಮೇಯರ್ಸ್ ಲೆಗ್ ಸೈಡ್ನತ್ತ ಬಾರಿಸಿದರು. ಆದರೆ ಬೌಂಡರಿ ಲೈನ್ನಿಂದ ಶರವೇಗದಲ್ಲಿ ಓಡಿ ಬಂದ ರಶೀದ್ ಖಾನ್ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದರು.
ಈ ಅತ್ಯದ್ಭುತ ಕ್ಯಾಚ್ ವೀಕ್ಷಿಸಿದ ವಿರಾಟ್ ಕೊಹ್ಲಿ ಕೂಡ ವಿಸ್ಮಿತರಾಗಿದ್ದಾರೆ. ನಾನು ನೋಡಿದ ಅತ್ಯುತ್ತಮ ಕ್ಯಾಚ್‌ಗಳಲ್ಲಿ ಇದು ಕೂಡ ಒಂದು. ಬ್ರಿಲಿಯಂಟ್…ಎಂದು ರಶೀದ್ ಖಾನ್ ಫೀಲ್ಡಿಂಗ್ ಅನ್ನು ಕಿಂಗ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ ಹಾಡಿ ಹೊಗಳಿದ್ದಾರೆ.
Exceptional grab ?
The @gujarat_titans needed a special effort to break the opening partnership & @rashidkhan_19 does exactly that ?#TATAIPL | #GTvLSG pic.twitter.com/ldRQ5OUae8
— IndianPremierLeague (@IPL) May 7, 2023
ಇದೀಗ ರಶೀದ್ ಖಾನ್ ಅವರ ಬ್ರಿಲಿಯಂಟ್ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗುಜರಾತ್ ಟೈಟಾನ್ಸ್ ಆಟಗಾರ ಈ ಡೈವಿಂಗ್ ಕ್ಯಾಚ್ಗೆ ಕ್ರಿಕೆಟ್ ಪ್ರೇಮಿಗಳು ಮನಸೋತಿದ್ದಾರೆ.
ಇನ್ನು ಈ ಪಂದ್ಯದಲ್ಲಿ 228 ರನ್ಗಳ ಟಾರ್ಗೆಟ್ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಗುಜರಾತ್ ಟೈಟಾನ್ಸ್ ತಂಡವು 56 ರನ್ಗಳ ಭರ್ಜರಿ ಜಯ ಸಾಧಿಸಿತು.
ಇದನ್ನೂ ಓದಿ: IPL 2023: ವಿರಾಟ್ ಕೊಹ್ಲಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಖ್ಯಾತ ಕ್ರಿಕೆಟಿಗನ ಪುತ್ರರು
ಇನ್ನು ಈ ಪಂದ್ಯದಲ್ಲಿ 228 ರನ್ಗಳ ಟಾರ್ಗೆಟ್ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಗುಜರಾತ್ ಟೈಟಾನ್ಸ್ ತಂಡವು 56 ರನ್ಗಳ ಭರ್ಜರಿ ಜಯ ಸಾಧಿಸಿತು.