IPL 2023: RCB ವಿರುದ್ಧ ಅತೀ ಹೆಚ್ಚು ರನ್​ ಕಲೆಹಾಕಿದ ಬ್ಯಾಟರ್​ ಯಾರು ಗೊತ್ತಾ?

IPL 2023 RCB Kannada: ಆರ್​ಸಿಬಿ ತಂಡದ ಪ್ಲೇಆಫ್ ಹಾದಿ ಸುಗಮವಲ್ಲ. ಏಕೆಂದರೆ ಆರ್​ಸಿಬಿ ಗೆದ್ದಿರುವುದು ಹೋಮ್​ ಗ್ರೌಂಡ್​ನಲ್ಲಿ. ಅಂದರೆ ಏಳು ಪಂದ್ಯಗಳನ್ನು ವಿವಿಧ ತಂಡಗಳ ತವರು ಮೈದಾನದಲ್ಲಿ ಆಡಬೇಕಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: May 07, 2023 | 6:33 PM

IPL 2023: ಐಪಿಎಲ್ ಶುರುವಾಗಿ 15 ವರ್ಷಗಳೇ ಕಳೆದಿವೆ. ಆದರೆ ಆರ್​ಸಿಬಿ ತಂಡದ ಕಪ್ ಗೆಲ್ಲುವ ಕನಸು ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ. ಇದೀಗ 16ನೇ ಸೀಸನ್ ಆಡುತ್ತಿರುವ ಆರ್​ಸಿಬಿ 10 ಪಂದ್ಯಗಳಲ್ಲಿ 5 ರಲ್ಲಿ ಜಯ ಸಾಧಿಸಿದೆ. ಇನ್ನುಳಿದಿರುವುದು ಕೇವಲ 4 ಪಂದ್ಯಗಳು ಮಾತ್ರ. ಈ ಪಂದ್ಯಗಳಲ್ಲಿ ಜಯ ಸಾಧಿಸಿದರೆ ಮಾತ್ರ ಪ್ಲೇಆಫ್​ಗೆ ನೇರ ಎಂಟ್ರಿ ಕೊಡಬಹುದು.

1 / 10
ಆದರೆ ಆರ್​ಸಿಬಿ ತಂಡದ ಪ್ಲೇಆಫ್ ಹಾದಿ ಸುಗಮವಲ್ಲ. ಏಕೆಂದರೆ ಆರ್​ಸಿಬಿ 5 ರಲ್ಲಿ 3 ಪಂದ್ಯ ಗೆದ್ದಿರುವುದು ಹೋಮ್​ ಗ್ರೌಂಡ್​ನಲ್ಲಿ. ಅಂದರೆ ಇನ್ನುಳಿದ 4 ರಲ್ಲಿ 3 ಪಂದ್ಯಗಳನ್ನು ವಿವಿಧ ತಂಡಗಳ ತವರು ಮೈದಾನದಲ್ಲಿ ಆಡಬೇಕಿದೆ. ಆದರೆ ಆ ಪಂದ್ಯಗಳಲ್ಲಿ ಗೆಲ್ಲಲು ಆರ್​ಸಿಬಿ ತಂಡವು ಕೆಲ ಆಟಗಾರರ ವಿರುದ್ಧ ಪ್ರತಿತಂತ್ರಗಳನ್ನು ರೂಪಿಸಲೇಬೇಕು.

2 / 10
ಇನ್ನು ಪ್ಲೇಆಫ್ ಪ್ರವೇಶಿಸಿದರೂ ಆರ್​ಸಿಬಿ ಕೆಲ ಆಟಗಾರರ ಬಗ್ಗೆ ಎಚ್ಚರಿಕೆಯಿಂದರಬೇಕಾಗುತ್ತದೆ. ಏಕೆಂದರೆ ಐಪಿಎಲ್ ಆರಂಭದಿಂದಲೂ 6 ಆಟಗಾರರು ಆರ್​ಸಿಬಿ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಇವರಲ್ಲಿ ಐವರು ಆಟಗಾರರು ಈಗಲೂ ಐಪಿಎಲ್​ನ ಭಾಗವಾಗಿದ್ದಾರೆ. ಹಾಗಿದ್ರೆ ಆರ್​ಸಿಬಿ ವಿರುದ್ಧ ಅತೀ ಹೆಚ್ಚು ರನ್​ ಕಲೆಹಾಕಿದ ಬ್ಯಾಟರ್​ಗಳು ಯಾರೆಲ್ಲಾ ಎಂದು ನೋಡೋಣ...

3 / 10
1- ಡೇವಿಡ್ ವಾರ್ನರ್: ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಆರ್​ಸಿಬಿ ಪಾಲಿನ ಸಿಂಹಸ್ವಪ್ನ ಎಂದರೆ ತಪ್ಪಾಗಲಾರದು. ಏಕೆಂದರೆ ಆರ್​ಸಿಬಿ ವಿರುದ್ಧ 23 ಇನಿಂಗ್ಸ್ ಆಡಿರುವ ವಾರ್ನರ್ 2 ಭರ್ಜರಿ ಶತಕ ಹಾಗೂ 9 ಅರ್ಧಶತಕಗಳೊಂದಿಗೆ ಒಟ್ಟು 984 ರನ್​ ಕಲೆಹಾಕಿದ್ದಾರೆ. ಹೀಗಾಗಿಯೇ ಆರ್​ಸಿಬಿ ಪಾಲಿಗೆ ಡೇವಿಡ್ ವಾರ್ನರ್ ಡೇಂಜರಸ್ ಆಟಗಾರ.

4 / 10
2- ಎಂಎಸ್ ಧೋನಿ: ಸಿಎಸ್​ಕೆ ತಂಡದ ನಾಯಕ ಧೋನಿ ಕೂಡ ಆರ್​ಸಿಬಿ ವಿರುದ್ಧ ಅಬ್ಬರಿಸುತ್ತಾ ಬಂದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಇದುವರೆಗೆ 33 ಇನಿಂಗ್ಸ್ ಆಡಿರುವ ಧೋನಿ 4 ಅರ್ಧಶತಕಗಳೊಂದಿಗೆ ಒಟ್ಟು 850 ರನ್​ ಕಲೆಹಾಕಿದ್ದಾರೆ.

5 / 10
3- ರೋಹಿತ್ ಶರ್ಮಾ: ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ಆರ್​ಸಿಬಿ ವಿರುದ್ಧ 30 ಇನಿಂಗ್ಸ್​ಗಳಲ್ಲಿ 786 ರನ್​ ಕಲೆಹಾಕಿದ್ದಾರೆ. ಈ ವೇಳೆ 7 ಅರ್ಧಶತಕಗಳನ್ನು ಬಾರಿಸಿದ್ದರು.

6 / 10
4- ಅಂಬಾಟಿ ರಾಯುಡು: ಸಿಎಸ್​ಕೆ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಅಂಬಾಟಿ ರಾಯುಡು ಕೂಡ ಆರ್​ಸಿಬಿ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಾ ಬಂದಿದ್ದಾರೆ. ಆರ್​ಸಿಬಿ ವಿರುದ್ಧ ಇದುವರೆಗೆ 27 ಇನಿಂಗ್ಸ್ ಆಡಿರುವ ರಾಯುಡು ಒಟ್ಟು 753 ರನ್​ ಕಲೆಹಾಕಿದ್ದಾರೆ.

7 / 10
5- ಶಿಖರ್ ಧವನ್: ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಕೂಡ ಆರ್​ಸಿಬಿ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ ದಾಖಲೆ ಹೊಂದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 26 ಇನಿಂಗ್ಸ್ ಆಡಿರುವ ಧವನ್ 6 ಅರ್ಧಶತಕಗಳೊಂದಿಗೆ ಒಟ್ಟು 753 ರನ್​ ಕಲೆಹಾಕಿದ್ದಾರೆ. ಹೀಗಾಗಿ ಆರ್​ಸಿಬಿ ಪಾಲಿಗೆ ಧವನ್ ಕೂಡ ಮುಳುವಾಗಬಹುದು.

8 / 10
ಸುರೇಶ್ ರೈನಾ- ಇನ್ನು ಈ ಪಟ್ಟಿಯಲ್ಲಿ ಸಿಎಸ್​ಕೆ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಕೂಡ ಇದ್ದು, ಅವರು 30 ಇನಿಂಗ್ಸ್​ಗಳಲ್ಲಿ 796 ರನ್ ಬಾರಿಸಿದ್ದಾರೆ. ಇದಾಗ್ಯೂ ರೈನಾ ಐಪಿಎಲ್​ಗೆ ವಿದಾಯ ಹೇಳಿರುವ ಕಾರಣ ಆರ್​ಸಿಬಿಗೆ ಎಡಗೈ ದಾಂಡಿಗನ ಚಿಂತೆಯಿಲ್ಲ ಎನ್ನಬಹುದು.

9 / 10
ಅಂದರೆ ಇಲ್ಲಿ ಆರ್​ಸಿಬಿ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿರುವ ಆಟಗಾರರನ್ನು ಹೊಂದಿರುವ ತಂಡಗಳಿಗೆ ಪ್ಲೇಆಫ್ ಪ್ರವೇಶಿಸುವ ಅವಕಾಶವಿದೆ. ಅದರಲ್ಲೂ ಮುಂಬೈ ಇಂಡಿಯನ್ಸ್ ಹಾಗೂ ಆರ್​ಸಿಬಿ ನಡುವಣ ಪಂದ್ಯವು ಉಭಯ ತಂಡಗಳಿಗೂ ನಿರ್ಣಾಯಕ. ಇತ್ತ ಆರ್​ಸಿಬಿ ವಿರುದ್ಧ ಉತ್ತಮ ಪ್ರದರ್ಶನ ನೀಡಿದರೂ ರೋಹಿತ್ ಶರ್ಮಾ ತಂಡದಲ್ಲಿದ್ದಾರೆ. ಹೀಗಾಗಿ ಹಿಟ್​ಮ್ಯಾನ್​ನ ನಿಯಂತ್ರಿಸಲು ಆರ್​ಸಿಬಿ ವಿಶೇಷ ರಣತಂತ್ರ ರೂಪಿಸಬೇಕಾದ ಅನಿವಾರ್ಯತೆ ಇದೆ.

10 / 10
Follow us