
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ನಟನೆಯ ಪುಷ್ಪ: ದಿ ರೈಸ್ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಈವರೆಗೆ 300 ಕೋಟಿಗೂ ಅಧಿಕ ರೂಪಾಯಿಯನ್ನು ಬಾಜಿಕೊಂಡಿದೆ. ಈ ಸಿನಿಮಾದಲ್ಲಿನ ಅಲ್ಲು ಅರ್ಜುನ್ ಡೈಲಾಗ್, ಹಾಡುಗಳು ಸಾಕಷ್ಟು ಪಾಪ್ಯುಲರ್ ಆಗಿದೆ. ಇದರಿಂದ ಸೆಲೆಬ್ರೆಟಿಗಳು ಕೂಡ ದೂರ ಉಳಿದಿಲ್ಲ. ಅವರು ಕೂಡ ಅಲ್ಲು ಶೈಲಿಯಲ್ಲೇ ಡೈಲಾಗ್ ಹೊಡೆದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಪುಷ್ಪ (Pushpa: The Rise) ಲುಕ್ನಲ್ಲಿ ಟೀಮ್ ಇಂಡಿಯಾ ಸ್ಟಾರ್ ಆಲ್ರೌಂಡರ್ ರವೀಂದ್ರಾ ಜಡೇಜಾ ಕಾಣಿಸಿಕೊಂಡಿದ್ದರು. ವಿದೇಶದಲ್ಲೂ ಪುಷ್ಪ ಹವಾ ಜೋರಾಗಿದ್ದು ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ (David Warner) ಶ್ರೀವಲ್ಲಿ ಹಾಡಿಗೆ ಮಸ್ತ್ ಹೆಜ್ಜೆ ಹಾಕಿದ್ದರು. ಅಲ್ಲು ಅರ್ಜುನ್ ಈ ಹಾಡಿನಲ್ಲಿ ಮಾಡಿದ ಸ್ಟೆಪ್ ಅನ್ನು ಅವರು ಅನುಕರಿಸಿದ್ದರು. ಕೇವಲ ಹಾಡು ಮಾತ್ರವಲ್ಲದೆ ಈ ಸಿನಿಮಾದಲ್ಲಿನ ಅಲ್ಲು ಅರ್ಜುನ್ ಅವರ “ತಗ್ಗೆದೆ ಲೇ” ಡೈಲಾಗ್, ಈ ಡೈಲಾಗ್ನ ಆ್ಯಕ್ಷನ್ ಸಾಕಷ್ಟು ಪ್ರಸಿದ್ದಿ ಪಡೆದಿದೆ. ಇದೀಗ ಬಾಂಗ್ಲಾ ಪ್ರೀಮಿಯರ್ ಲೀಗ್ನಲ್ಲೂ ಪುಷ್ಪ ಟ್ರೆಂಡ್ ಆಗಿದೆ.
ಹೌದು, ಬಾಂಗ್ಲಾದೇಶದಲ್ಲಿ ಬಾಂಗ್ಲಾ ಪ್ರೀಮಿಯರ್ ಲೀಗ್ಗೆ ಎರಡು ದಿನಗಳ ಹಿಂದೆ ಅದ್ಧೂರಿ ಚಾಲನೆ ಸಿಕ್ಕಿದೆ. ಭಾನುವಾರ ನಡೆದ ಪಂದ್ಯದಲ್ಲಿ ವಿಕೆಟ್ ಕಿತ್ತಾಗ ಬಾಂಗ್ಲಾ ಬೌಲರ್ ಪುಷ್ಪ ಚಿತ್ರದಲ್ಲಿ ‘ತಗ್ಗೆದೆ ಲೇ’ ಡೈಲಾಗ್ ಹೊಡೆದಾಗ ಅಲ್ಲು ಅರ್ಜುನ್ ಮಾಡುವ ಆ್ಯಕ್ಷನ್ ರೀತಿಯಲ್ಲೇ ಸಂಭ್ರಮಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಹಿಂದೆ ಪುಷ್ಪ ಚಿತ್ರದ ‘ತಗ್ಗೆದೆ ಲೇ’ ಡೈಲಾಗಿಗೆ ಡೇವಿಡ್ ವಾರ್ನರ್ ವಿಡಿಯೋ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು. ಹಾಗೂ ಇದಕ್ಕೂ ಮುನ್ನ ಇದೇ ಸಂಭಾಷಣೆಗೆ ರವೀಂದ್ರ ಜಡೇಜಾ ಕೂಡ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಅಲ್ಲು ಅರ್ಜುನ್ ರೀತಿಯೇ ರವೀಂದ್ರ ಜಡೇಜಾ ಕೂಡ ಸದ್ಯ ಗಡ್ಡಧಾರಿಯಾಗಿದ್ದು ಆ ಸಂಭಾಷಣೆ ರವೀಂದ್ರ ಜಡೇಜಾಗೆ ಅಚ್ಚುಕಟ್ಟಾಗಿ ಹೊಂದಿಕೊಂಡಿತ್ತು. ಹಾಗೂ ರವೀಂದ್ರ ಜಡೇಜಾರ ಆ ವಿಡಿಯೋ ಸಾಮಾಜಿಕ ಜಾಲ ತಾಣದ ತುಂಬಾ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಈ ಟ್ರೆಂಡ್ ಸೃಷ್ಟಿಸಿದ್ದೆ ಡೇವಿಡ್ ವಾರ್ನರ್:
ಈ ಟ್ರೆಂಡ್ ಮೊದಲಿಗೆ ಹುಟ್ಟುಹಾಕಿದ ಕೀರ್ತಿ ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರಿಗೆ ಸಲ್ಲಬೇಕು. ಮೊದಲಿಗೆ ತೆಲುಗು ಚಿತ್ರಗಳ ಸಂಭಾಷಣೆ ಹಾಗೂ ಹಾಡುಗಳಿಗೆ ವಿಡಿಯೋಗಳನ್ನು ಮಾಡುತ್ತಿದ್ದ ಡೇವಿಡ್ ವಾರ್ನರ್ ತೆಲುಗು ನಟ ಅಲ್ಲು ಅರ್ಜುನ್ ಅಭಿನಯದ ಅಲಾ ವೈಕುಂಠಪುರಮುಲೋ ಚಿತ್ರದ ಬುಟ್ಟ ಬೊಮ್ಮ ಹಾಡಿಗೆ ತನ್ನ ಪತ್ನಿ ಜತೆ ನೃತ್ಯವನ್ನು ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದರು. ಈ ವಿಡಿಯೋಗಳು ಕೂಡ ಸಾಕಷ್ಟು ವೈರಲ್ ಆಗಿತ್ತು.
ಸದ್ಯ ಕ್ರಿಕೆಟ್ ಜಗತ್ತಿಗೆ ಸಿನಿಮಾ ಸಾಕಷ್ಟು ಹತ್ತಿರವಾಗಿದೆ. ವಿಶೇಷವಾಗಿ ದಕ್ಷಿಣ ಭಾರತ ಚಿತ್ರರಂಗದ ಚಿತ್ರಗಳ ಹಾಡುಗಳಿಗೆ ಮತ್ತು ಸಂಭಾಷಣೆಗಳಿಗೆ ಖ್ಯಾತ ಕ್ರಿಕೆಟಿಗರು ವಿಡಿಯೋ ಮಾಡಿ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಳ್ಳುವುದು ಇತ್ತೀಚೆಗಿನ ಟ್ರೆಂಡ್ ಆಗಿಬಿಟ್ಟಿದೆ. ಕ್ರಿಕೆಟ್ ದಿಗ್ಗಜರ ಜೀವನ ಬರೋಪಿಕ್ ಆಗಿ ಮೂಡಿಬರುತ್ತಿರುವುದರಿಂದ ಸಿನಿಮಾ ಮತ್ತು ಕ್ರೀಡೆ ಎರಡು ಜಗತ್ತಿನ ನಂಟು ಮತ್ತಷ್ಟು ಮತ್ತಷ್ಟು ಗಟ್ಟಿಯಾಗಿದೆ.
Deepak Chahar: ಪಂದ್ಯ ಸೋತ ದುಃಖದಲ್ಲಿ ಬೌಂಡರಿ ಲೈನ್ ಬಳಿಯೇ ಕಣ್ಣೀರಿಟ್ಟ ದೀಪಕ್ ಚಹರ್
Virat Kohli: ಭಾರತದ ರಾಷ್ಟ್ರಗೀತೆ ವೇಳೆ ವಿರಾಟ್ರಿಂದ ಅಸಭ್ಯ ವರ್ತನೆ: ವೈರಲ್ ಆಗುತ್ತಿದೆ ಕೊಹ್ಲಿಯ ವಿಡಿಯೋ
Published On - 12:00 pm, Mon, 24 January 22