T20 World Cup 2021: ವಿಚಿತ್ರವಾಗಿ ಔಟಾದ ಕ್ವಿಂಟನ್ ಡಿಕಾಕ್

| Updated By: ಝಾಹಿರ್ ಯೂಸುಫ್

Updated on: Oct 23, 2021 | 7:01 PM

Quinton decock: ಆಸ್ಟ್ರೇಲಿಯಾ ಬೌಲರ್ ಹ್ಯಾಝಲ್​ವುಡ್​ ಕೂಡ ಹೀಗೊಂದು ವಿಕೆಟ್ ನಿರೀಕ್ಷಿಸಿರಲಿಲ್ಲ. ವಿಭಿನ್ನ ಹೊಡೆತಕ್ಕೆ ಮುಂದಾಗಿ ಡಿಕಾಕ್ ವಿಕೆಟ್ ಒಪ್ಪಿಸಿ ಹೊರನಡೆದರು. ಡಿಕಾಕ್ ಅವರು ವಿಚಿತ್ರವಾಗಿ ಔಟ್ ಆಗಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

T20 World Cup 2021: ವಿಚಿತ್ರವಾಗಿ ಔಟಾದ ಕ್ವಿಂಟನ್ ಡಿಕಾಕ್
Quinton decock
Follow us on

ಐಸಿಸಿ ವಿಶ್ವಕಪ್-2021ರ ಸೂಪರ್-12 ಹಂತದ ಪಂದ್ಯಗಳು ಶುರುವಾಗಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಮೊದಲು ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್​ ಆರಂಭಿಸಿದ ದಕ್ಷಿಣ ಆಫ್ರಿಕಾ ವಿರುದ್ದ ಆಸ್ಟ್ರೇಲಿಯಾದ ಬೌಲರ್‌ಗಳು ಆರಂಭದಲ್ಲೇ ಪ್ರಾಬಲ್ಯ ಸಾಧಿಸಿದರು. ಸ್ಪೋಟಕ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್​ ಅವರನ್ನು ಕಟ್ಟಿಹಾಕಿದರು. ಇತ್ತ ರನ್​ಗಳಿಸಲು ಪರದಾಡಿದ ಡಿಕಾಕ್ ಔಟಾಗಿ ನಡೆದಿದ್ದು ಕೂಡ ವಿಚಿತ್ರವಾಗಿ ಎಂಬುದು ವಿಶೇಷ.

3ನೇ ಓವರ್​ ವೇಳೆಗಾಗಲೇ ಮೊದಲೆರೆಡು ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾವನ್ನು ಆರಂಭಿಕ ಆಘಾತದಿಂದ ಪಾರು ಮಾಡುವ ಜವಾಬ್ದಾರಿ ಡಿಕಾಕ್ ಮೇಲಿತ್ತು. ಆದರೆ ಐದನೇ ಓವರ್‌ನಲ್ಲಿ ಹ್ಯಾಝಲ್​ವುಡ್​ ಎಸೆತದಲ್ಲಿ ವಿಭಿನ್ನ ಶಾಟ್​ಗೆ ಮುಂದಾದ ಡಿಕಾಕ್ ಔಟ್ ಆದರು. ಆಫ್-ಸ್ಟಂಪ್‌ನ ಹೊರಗೆ ಬಂದ ಚೆಂಡನ್ನು ಡಿ ಕಾಕ್ ಸ್ಕೂಪ್ ಮಾಡಲು ಪ್ರಯತ್ನಿಸಿದರು. ಆ ಮೂಲಕ ಫೈನ್ ಲೆಗ್​ನತ್ತ ಬಾರಿಸಲು ಯತ್ನಿಸಿದ್ದರು. ಆದರೆ ಚೆಂಡು ಅವರ ಥಾಯ್ ಪ್ಯಾಡ್‌ಗೆ ಬಡಿದು ಗಾಳಿಯಲ್ಲಿ ಜಿಗಿದು ಸ್ಟಂಪ್‌ಗೆ ಹೋಗಿ ಬಡಿಯಿತು. ಆದರೆ ಇದನ್ನು ಗಮನಿಸದ ಡಿಕಾಕ್ ರನ್​ ಕದಿಯುವ ಆತುರದಲ್ಲಿದ್ದರು.

ಇತ್ತ ಆಸ್ಟ್ರೇಲಿಯಾ ಬೌಲರ್ ಹ್ಯಾಝಲ್​ವುಡ್​ ಕೂಡ ಹೀಗೊಂದು ವಿಕೆಟ್ ನಿರೀಕ್ಷಿಸಿರಲಿಲ್ಲ. ವಿಭಿನ್ನ ಹೊಡೆತಕ್ಕೆ ಮುಂದಾಗಿ ಡಿಕಾಕ್ ವಿಕೆಟ್ ಒಪ್ಪಿಸಿ ಹೊರನಡೆದರು. ಡಿಕಾಕ್ ಅವರು ವಿಚಿತ್ರವಾಗಿ ಔಟ್ ಆಗಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೊತ್ತವನ್ನು ಆಸ್ಟ್ರೇಲಿಯಾ 19.4 ಓವರ್​ನಲ್ಲಿ 5 ವಿಕೆಟ್​ ನಷ್ಟದೊಂದಿಗೆ ಚೇಸ್ ಮಾಡುವ ಮೂಲಕ ಟಿ20 ವಿಶ್ವಕಪ್​ 2021ರ ಮೊದಲ ಗೆಲುವನ್ನು ತನ್ನದಾಗಿಸಿಕೊಂಡಿತು.

ಇದನ್ನೂ ಓದಿ: India vs Pakistan, T20 World cup 2021: ಒಂದು ದಿನ ಮೊದಲೇ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ್

ಇದನ್ನೂ ಓದಿ: T20 World cup 2021: ಪಾಕ್ ವಿರುದ್ದದ ಪಂದ್ಯದೊಂದಿಗೆ ಹೊಸ ಸಾಧನೆ ಮಾಡಲಿದ್ದಾರೆ ಕೆಎಲ್ ರಾಹುಲ್, ಪಾಂಡ್ಯ

ಇದನ್ನೂ ಓದಿ: T20 World Cup 2021: ಟಿ20 ರ‍್ಯಾಂಕಿಂಗ್‌​ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?

(Quinton decock hilarious out against australia in t20 world cup 2021)