Rahmanullah Gurbaz: 8 ಭರ್ಜರಿ ಸಿಕ್ಸ್, 13 ಫೋರ್: ಸ್ಪೋಟಕ ಶತಕ ಸಿಡಿಸಿದ ಗುರ್ಬಾಝ್

| Updated By: ಝಾಹಿರ್ ಯೂಸುಫ್

Updated on: Jul 08, 2023 | 5:00 PM

Rahmanullah Gurbaz: ಅಫ್ಘಾನ್ ಪರ ಏಕದಿನ ಕ್ರಿಕೆಟ್​ನಲ್ಲಿ ಮೊದಲ ವಿಕೆಟ್​ಗೆ ಅತ್ಯಧಿಕ ರನ್ ಕಲೆಹಾಕಿದ ಜೋಡಿ ಎಂಬ ದಾಖಲೆಯನ್ನು​​ ಇಬ್ರಾಹಿಂ ಝದ್ರಾನ್ ಹಾಗೂ ರಹಮಾನುಲ್ಲಾ ಗುರ್ಬಾಝ್ ನಿರ್ಮಿಸಿದ್ದಾರೆ.

Rahmanullah Gurbaz: 8 ಭರ್ಜರಿ ಸಿಕ್ಸ್, 13 ಫೋರ್: ಸ್ಪೋಟಕ ಶತಕ ಸಿಡಿಸಿದ ಗುರ್ಬಾಝ್
Rahmanullah Gurbaz
Follow us on

Bangladesh vs Afghanistan, 2nd ODI: ಚಟ್ಟೋಗ್ರಾಮ್​ನಲ್ಲಿ ನಡೆಯುತ್ತಿರುವ ಆತಿಥೇಯ ಬಾಂಗ್ಲಾದೇಶ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ರಹಮಾನುಲ್ಲಾ ಗುರ್ಬಾಝ್  (Rahmanullah Gurbaz) ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡದ ಹಂಗಾಮಿ ನಾಯಕ ಲಿಟ್ಟನ್ ದಾಸ್ ಬೌಲಿಂಗ್ ಆಯ್ಕೆ ಮಾಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಅಫ್ಘಾನಿಸ್ತಾನ್ ತಂಡಕ್ಕೆ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಬಿರುಸಿನ ಆರಂಭ ಒದಗಿಸಿದ್ದರು.

ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್​ಗೆ ಒತ್ತು ನೀಡಿದ್ದ ಗುರ್ಬಾಝ್ ಬಾಂಗ್ಲಾ ಬೌಲರ್​ಗಳ ಬೆಂಡೆತ್ತಿದರು. ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ಅಫ್ಘಾನ್ ವಿಕೆಟ್ ಕೀಪರ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿಸಿದರು. ಈ ಮೂಲಕ 100 ಎಸೆತಗಳಲ್ಲಿ ರಹಮಾನುಲ್ಲಾ ಗುರ್ಬಾಝ್ ಶತಕ ಪೂರೈಸಿದರು.

ಭರ್ಜರಿ ಸೆಂಚುರಿ ಬಳಿಕ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಗುರ್ಬಾಝ್ 125 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 13 ಫೋರ್​ಗಳೊಂದಿಗೆ 145 ರನ್ ಬಾರಿಸಿದರು. ಈ ಹಂತದಲ್ಲಿ ಶಕೀಬ್ ಅಲ್ ಹಸನ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ರಹಮಾನುಲ್ಲಾ ಗುರ್ಬಾಝ್ (145) ಎಲ್​ಬಿಡಬ್ಲ್ಯೂ ಆಗಿ ಹೊರನಡೆದರು. ಆದರೆ ಅಷ್ಟರಲ್ಲಾಗಲೇ ಅಫ್ಘಾನಿಸ್ತಾನ್ ತಂಡವು 36 ಓವರ್​ಗಳಲ್ಲಿ 256 ರನ್ ಪೇರಿಸಿತ್ತು.

ಅಫ್ಘಾನ್ ಪರ ಹೊಸ ದಾಖಲೆ:

256 ರನ್​ಗಳ ಜೊತೆಯಾಟದೊಂದಿಗೆ ಅಫ್ಘಾನಿಸ್ತಾನ್ ಪರ ಏಕದಿನ ಕ್ರಿಕೆಟ್​ನಲ್ಲಿ ಮೊದಲ ವಿಕೆಟ್​ಗೆ ಅತ್ಯಧಿಕ ರನ್ ಕಲೆಹಾಕಿದ ಜೋಡಿ ಎಂಬ ದಾಖಲೆಯನ್ನು​​ ಇಬ್ರಾಹಿಂ ಝದ್ರಾನ್ ಹಾಗೂ ರಹಮಾನುಲ್ಲಾ ಗುರ್ಬಾಝ್ ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಮೊಹಮ್ಮದ್ ಶಹಝಾದ್ ಹಾಗೂ ಇಹ್ಸಾನುಲ್ಲ ಜನ್ನತ್ ಹೆಸರಿನಲ್ಲಿತ್ತು.

ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ​ 10 ತಂಡಗಳು ಫೈನಲ್

2018 ರಲ್ಲಿ ಶಹಝಾದ್ ಹಾಗೂ ಜನ್ನತ್ ಝಿಂಬಾಬ್ವೆ ವಿರುದ್ಧ ಮೊದಲ ವಿಕೆಟ್​ಗೆ ಅಜೇಯ 135 ರನ್ ಬಾರಿಸಿದ್ದರು. ಇದೀಗ ಈ ದಾಖಲೆಯನ್ನು ಅಳಿಸಿ ಹಾಕಿ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.