Stuart Broad: ಮತ್ತೊಮ್ಮೆ ಬ್ರಾಡ್ ಬಲೆಗೆ ಬಿದ್ದ ವಾರ್ನರ್…ಹೊಸ ದಾಖಲೆ

Stuart Broad: ಬ್ಯಾಟರೊಬ್ಬರನ್ನು 19 ಬಾರಿ ಔಟ್ ಮಾಡಿರುವ ಗ್ಲೆನ್ ಮೆಕ್​ಗ್ರಾಥ್ ದಾಖಲೆ ಮುರಿಯಲು ಸ್ಟುವರ್ಟ್ ಬ್ರಾಡ್​ ಇನ್ನು ಡೇವಿಡ್​ ವಾರ್ನರ್ ಅವರನ್ನು ಮೂರು ಬಾರಿ ಔಟ್ ಮಾಡಿದರೆ ಸಾಕು.

Stuart Broad: ಮತ್ತೊಮ್ಮೆ ಬ್ರಾಡ್ ಬಲೆಗೆ ಬಿದ್ದ ವಾರ್ನರ್...ಹೊಸ ದಾಖಲೆ
Stuart Broad-David Warner
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jul 08, 2023 | 3:30 PM

Ashes 2023: ಲೀಡ್ಸ್​ನ ಹೆಡಿಂಗ್ಲಿ ಮೈದಾನದಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ ಮೂರನೇ ಟೆಸ್ಟ್ ಪಂದ್ಯದ 2 ಇನಿಂಗ್ಸ್​ನಲ್ಲೂ ಡೇವಿಡ್ ವಾರ್ನರ್ (David Warner) ಇಂಗ್ಲೆಂಡ್ ಸ್ಟುವರ್ಟ್​ ಬ್ರಾಡ್​ಗೆ (Stuart Broad) ವಿಕೆಟ್ ಒಪ್ಪಿಸಿದ್ದಾರೆ. ಮೊದಲ ಇನಿಂಗ್ಸ್​ನಲ್ಲಿ 4 ರನ್​ಗಳಿಸಿ ಬ್ರಾಡ್ ಎಸೆತದಲ್ಲಿ ಕ್ಯಾಚ್ ನೀಡಿದ್ದ ವಾರ್ನರ್, 2ನೇ ಇನಿಂಗ್ಸ್​ನಲ್ಲಿ 1 ರನ್ ಬಾರಿಸಿ ಔಟಾಗಿದ್ದಾರೆ. ಇದರೊಂದಿಗೆ ಡೇವಿಡ್ ವಾರ್ನರ್ ಅವರನ್ನು 17 ಬಾರಿ ಔಟ್ ಮಾಡಿದ ವಿಶೇಷ ದಾಖಲೆಯೊಂದು ಸ್ಟುವರ್ಟ್ ಬ್ರಾಡ್ ಹೆಸರಿಗೆ ಸೇರ್ಪಡೆಯಾಗಿದೆ.

ಡೇವಿಡ್ ವಾರ್ನರ್ ಹಾಗೂ ಸ್ಟುವರ್ಟ್ ಬ್ರಾಡ್ ಒಟ್ಟು 51 ಇನಿಂಗ್ಸ್​ಗಳಲ್ಲಿ ಮುಖಾಮುಖಿಯಾಗಿದ್ದಾರೆ. ಈ ವೇಳೆ ಬ್ರಾಡ್ ಎಸೆತಗಳಲ್ಲಿ 1 ಸಿಕ್ಸ್ ಹಾಗೂ 52 ಫೋರ್​ಗಳೊಂದಿಗೆ ವಾರ್ನರ್ 424 ರನ್ ಬಾರಿಸಿದ್ದರು. ಆದರೆ ಮತ್ತೊಂದೆಡೆ 17 ಬಾರಿ ಔಟ್ ಮಾಡುವಲ್ಲಿ ಸ್ಟುವರ್ಟ್ ಬ್ರಾಡ್ ಯಶಸ್ವಿಯಾಗಿದ್ದಾರೆ.

ಇನ್ನು ಟೆಸ್ಟ್ ಕ್ರಿಕೆಟ್​ನಲ್ಲಿ ಬ್ಯಾಟರ್​ರೊಬ್ಬರನ್ನು ಅತ್ಯಧಿಕ ಬಾರಿ ಔಟ್ ಮಾಡಿದ ವಿಶ್ವ ದಾಖಲೆ ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್​ಗ್ರಾಥ್ ಹೆಸರಿನಲ್ಲಿದೆ. ಇಂಗ್ಲೆಂಡ್ ಆಟಗಾರ ಮೈಕಲ್ ಅರ್ಥಟನ್ ಅವರನ್ನು ಮೆಕ್​ಗ್ರಾಥ್ ಒಟ್ಟು 19 ಬಾರಿ ಔಟ್ ಮಾಡಿದ್ದರು.

ಹಾಗೆಯೇ ಇಂಗ್ಲೆಂಡ್ ವೇಗಿ ಅಲೆಕ್ ಬೆಡ್ಸರ್ ಆಸ್ಟ್ರೇಲಿಯಾದ ಆರ್ಥರ್ ಮೋರಿಸ್ ಅವರನ್ನು 18 ಬಾರಿ ಔಟ್ ಮಾಡಿದ್ದರು. ಇದಲ್ಲದೆ ವೆಸ್ಟ್ ಇಂಡೀಸ್​ನ ಕರ್ಟ್ಲಿ ಆಂಬ್ರೋಸ್ ಇಂಗ್ಲೆಂಡ್​ನ ಮೈಕೆಲ್ ಅರ್ಥಟನ್​ರನ್ನು 17 ಬಾರಿ ವಜಾಗೊಳಿಸಿದ್ದರು.

ಇದೀಗ ಡೇವಿಡ್ ವಾರ್ನರ್ ಅವರನ್ನು 17 ಸಲ ಔಟ್ ಮಾಡುವ ಮೂಲಕ ಸ್ಟುವರ್ಟ್ ಬ್ರಾಡ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ವಿಶೇಷ ಎಂದರೆ ಆಸ್ಟ್ರೇಲಿಯಾ ವಿರುದ್ಧ ಇನ್ನೂ ಎರಡು ಟೆಸ್ಟ್ ಪಂದ್ಯಗಳು ಬಾಕಿಯಿದ್ದು, ಈ 4 ಇನಿಂಗ್ಸ್​ಗಳಲ್ಲಿ ವಾರ್ನರ್​ ಅವರನ್ನು ಸ್ಟುವರ್ಟ್ ಬ್ರಾಡ್ 3 ಬಾರಿ ಔಟ್ ಮಾಡಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.

ಇದನ್ನೂ ಓದಿ: India T20 Squad: ಟೀಮ್ ಇಂಡಿಯಾದಲ್ಲಿ ಇಬ್ಬರೇ ಆಲ್​ರೌಂಡರ್​ಗಳು..!

ಏಕೆಂದರೆ ಬ್ಯಾಟರೊಬ್ಬರನ್ನು 19 ಬಾರಿ ಔಟ್ ಮಾಡಿರುವ ಗ್ಲೆನ್ ಮೆಕ್​ಗ್ರಾಥ್ ದಾಖಲೆ ಮುರಿಯಲು ಸ್ಟುವರ್ಟ್ ಬ್ರಾಡ್​ ಇನ್ನು ಡೇವಿಡ್​ ವಾರ್ನರ್ ಅವರನ್ನು ಮೂರು ಬಾರಿ ಔಟ್ ಮಾಡಿದರೆ ಸಾಕು. ಹೀಗಾಗಿ ಈ ಬಾರಿಯ ಆ್ಯಶಸ್ ಸರಣಿಯಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಲಿದೆಯಾ ಕಾದು ನೋಡಬೇಕಿದೆ.

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ