ಯಶಸ್ವಿ ಜೈಸ್ವಾಲ್ ಸ್ಫೋಟಕ ಶತಕ ಸಿಡಿಸಿದಾಗ ಕೋಚ್ ರಾಹುಲ್ ದ್ರಾವಿಡ್ ಏನು ಮಾಡಿದ್ರು ನೋಡಿ

|

Updated on: Aug 13, 2023 | 9:36 AM

Rahul Dravid Reaction WI vs IND 4th T20I: ವೆಸ್ಟ್ ಇಂಡೀಸ್ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅವರು 11 ನೇ ಓವರ್‌ನ 4ನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ತಮ್ಮ ಚೊಚ್ಚಲ ಅರ್ಧಶತಕ ಗಳಿಸಿದರು. ಈ ಸಂದರ್ಭ ಕೋಚ್ ರಾಹುಲ್ ದ್ರಾವಿಡ್ ಏನು ಮಾಡಿದರು ನೋಡಿ.

ಯಶಸ್ವಿ ಜೈಸ್ವಾಲ್ ಸ್ಫೋಟಕ ಶತಕ ಸಿಡಿಸಿದಾಗ ಕೋಚ್ ರಾಹುಲ್ ದ್ರಾವಿಡ್ ಏನು ಮಾಡಿದ್ರು ನೋಡಿ
Yashasvi Jaiswal and Rahul Dravid
Follow us on

ಶನಿವಾರ ವೆಸ್ಟ್ ಇಂಡೀಸ್ ವಿರುದ್ಧ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಯಶಸ್ವಿ ಜೈಸ್ವಾಲ್ (Yashasvi Jaiswal) ಇತಿಹಾಸ ಸೃಷ್ಟಿಸಿದರು. ರೋಹಿತ್ ಶರ್ಮಾ ಅವರ 14 ವರ್ಷಗಳ ಹಳೆಯ ದಾಖಲೆಯನ್ನು ಮುರಿಯುವ ಮೂಲಕ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅರ್ಧಶತಕ ಗಳಿಸಿದ ಅತಿ ಕಿರಿಯ ಭಾರತೀಯ ಆರಂಭಿಕ ಬ್ಯಾಟರ್ ಎನಿಸಿಕೊಂಡರು. 21ರ ಹರೆಯದ ಎಡಗೈ ಬ್ಯಾಟರ್ ಜೈಸ್ವಾಲ್ 51 ಎಸೆತಗಳಲ್ಲಿ 84 ರನ್ ಗಳಿಸಿ ಔಟಾಗದೆ ಉಳಿದು, ಭಾರತ ಕೇವಲ 17 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ 179 ರನ್‌ಗಳ ಗುರಿಯನ್ನು ಬೆನ್ನಟ್ಟಲು ಸಹಾಯ ಮಾಡಿದರು.

ತನ್ನ ಎರಡನೇ ಟಿ20 ಪಂದ್ಯವನ್ನಾಡಿದ ಜೈಸ್ವಾಲ್ ಅವರು ಮೊದಲ ವಿಕೆಟ್‌ಗೆ ಶುಭ್​ಮನ್ ಗಿಲ್ ಜೊತೆ 165 ರನ್ ಸೇರಿಸಿದರು. ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿರುವ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಕೆರಿಬಿಯನ್ ತಂಡ ಹಾಕಿದ ದೊಡ್ಡ ಮೊತ್ತವನ್ನು ಬೆನ್ನಟ್ಟಲು ಬಂದ ಜೈಸ್ವಾಲ್ ಒಟ್ಟು 11 ಬೌಂಡರಿಗಳು ಮತ್ತು ಮೂರು ಸಿಕ್ಸರ್‌ಗಳನ್ನು ಸಿಡಿಸಿ ಅಜೇಯ 84 ರನ್ ಚಚ್ಚಿದರು.

ಇದನ್ನೂ ಓದಿ
IND vs WI: 4ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬರೆದ ಪ್ರಮುಖ ದಾಖಲೆಗಳಿವು
ಪಂದ್ಯ ಮುಗಿದ ಬಳಿಕ ಹಾರ್ದಿಕ್ ಪಾಂಡ್ಯ ಆಡಿದ ಮಾತು ವೈರಲ್: ಯಾರ ಬಗ್ಗೆ ಏನಂದ್ರು ನೋಡಿ
IND vs WI: ಇಂದೇ ಕೊನೆಯ ಟಿ20 ಪಂದ್ಯ, ಗೆದ್ದವರಿಗೆ ಸರಣಿ; ನಿರ್ಣಾಯಕ ಪಂದ್ಯ ಎಷ್ಟು ಗಂಟೆಗೆ ಆರಂಭ? ಇಲ್ಲಿದೆ ವಿವರ
IND vs WI: ಯಶಸ್ವಿ- ಗಿಲ್ ಜೊತೆಯಾಟಕ್ಕೆ ರೋಹಿತ್- ರಾಹುಲ್ ದಾಖಲೆ ಉಡೀಸ್..!

ಇಂದು ಭಾರತ-ವೆಸ್ಟ್ ಇಂಡೀಸ್ ನಿರ್ಣಾಯಕ ಕದನ: ಗೆದ್ದವರಿಗೆ ಟಿ20 ಸರಣಿ

ಜೈಸ್ವಾಲ್ ಅವರು 11 ನೇ ಓವರ್‌ನ 4ನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ತಮ್ಮ ಚೊಚ್ಚಲ ಅರ್ಧಶತಕ ಗಳಿಸಿದರು. ಜೈಸ್ವಾಲ್ ಸ್ಫೋಟಕ ಅರ್ಧಶತಕ ಸಿಡಿಸುತ್ತಿದ್ದಂತೆ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಡಗೌಟ್​​ನಲ್ಲಿ ಕೂತಲ್ಲಿಂದ ಎದ್ದು ನಿಂತು ಚಪ್ಪಾಳೆ ತಟ್ಟಿದರು. ದ್ರಾವಿಡ್ ಜೊತೆಗೆ ಟೀಮ್ ಇಂಡಿಯಾದ ಸಿಬ್ಬಂದಿಗಳೆಲ್ಲ ಎದ್ದು ನಿಂತು ಜೈಸ್ವಾಲ್ ಆಟಕ್ಕೆ ಮನಸೋತರು.

ಯಶಸ್ವಿ ಜೈಸ್ವಾಲ್‌ಗೆ ರಾಹುಲ್ ದ್ರಾವಿಡ್ ಎದ್ದು ನಿಂತು ಚಪ್ಪಾಳೆ ನೀಡಿದ ವಿಡಿಯೋ ಇಲ್ಲಿದೆ:

 

ಇಂದು ನಿರ್ಣಾಯಕ ಟಿ20 ಪಂದ್ಯ:

ಬಹಳಷ್ಟು ರೋಚಕತೆ ಸೃಷ್ಟಿಸಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಟಿ20 ಸರಣಿಯ ಅಂತಿಮ ಐದನೇ ಪಂದ್ಯ ಇಂದು ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್​ನಲ್ಲಿ ನಡೆಯಲಿದೆ. ಸದ್ಯ ಸರಣಿ 2-2 ಅಂಕಗಳ ಅಂತರದಿಂದ ಸಮಬಲ ಸಾಧಿಸಿರುವ ಕಾರಣ ಇಂದಿನ ಪಂದ್ಯ ಉಭಯ ತಂಡಗಳಿಗೆ ಮಹತ್ವದ್ದಾಗಿದೆ. ಟೀಮ್ ಇಂಡಿಯಾದಲ್ಲಿ ಐದನೇ ಟಿ20ಗೆ ಬದಲಾವಣೆ ಅನುಮಾನ. ನಾಲ್ಕನೇ ಪಂದ್ಯದಲ್ಲಿ ಕಣಕ್ಕಿಳಿದ ಆಟಗಾರರೇ ಆಡುವ ಸಾಧ್ಯತೆ ಹೆಚ್ಚಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ