South Africa vs India: ಐತಿಹಾಸಿಕ ಟೆಸ್ಟ್ ಗೆದ್ದ ಖಷಿಯಲ್ಲಿ ಕೋಚ್ ದ್ರಾವಿಡ್ ಮಾಡಿದ ಸ್ಪೆಷಲ್ ಡ್ಯಾನ್ಸ್​ ನೋಡಿದ್ರಾ?: ವಿಡಿಯೋ ವೈರಲ್

| Updated By: Vinay Bhat

Updated on: Jan 01, 2022 | 11:15 AM

Rahul Dravid Dance Video Viral: ಸೌತ್ ಆಫ್ರಿಕಾದ ಪ್ರಸಿದ್ಧ ಝುಲು ಡ್ಯಾನ್ಸ್ ಮಾಡಿ ಟೀಮ್ ಇಂಡಿಯಾದವರನ್ನು ಹೋಟೆಲ್ ಒಳಗಡೆ ಸಿಬ್ಬಂದಿಗಳು ವೆಲ್​ಕಮ್ ಮಾಡಿದರು. ಈ ಸಂದರ್ಭ ಕೊಹ್ಲಿ ಭರ್ಜರಿ ಹೆಜ್ಜೆ ಹಾಕಿ ಸಂಭ್ರಮಿಸಿದರು. ಕೋಚ್ ರಾಹುಲ್ ದ್ರಾವಿಡ್ ಕೂಡ ಬೊಂಬಾಟ್ ಆಗಿ ಸ್ಟೆಪ್ ಹಾಕಿರುವುದು ಕಂಡು ಬಂತು.

South Africa vs India: ಐತಿಹಾಸಿಕ ಟೆಸ್ಟ್ ಗೆದ್ದ ಖಷಿಯಲ್ಲಿ ಕೋಚ್ ದ್ರಾವಿಡ್ ಮಾಡಿದ ಸ್ಪೆಷಲ್ ಡ್ಯಾನ್ಸ್​ ನೋಡಿದ್ರಾ?: ವಿಡಿಯೋ ವೈರಲ್
Rahul Dravid Dance IND vs SA
Follow us on

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ (India vs South Africa) ಐತಿಹಾಸಿಕ ಗೆಲುವು ಸಾಧಿಸಿದ್ದು ಇದೀಗ ಜೊಹಾನ್ಸ್​ಬರ್ಗ್​ನಲ್ಲಿ ಎರಡನೇ ಫೈಟ್​ಗೆ ಸಜ್ಜಾಗುತ್ತಿದೆ. ಇದರ ನಡುವೆ ಟೀಮ್ ಇಂಡಿಯಾ ಆಟಗಾರರು ಹೊಸ ವರ್ಷವನ್ನು ಭರ್ಜರಿ ಆಗಿ ಆಚರಣೆ ಮಾಡಿದರು. ಮೊದಲ ಟೆಸ್ಟ್​ನಲ್ಲಿ ಭಾರತದ ತ್ರಿವಳಿ ವೇಗಿಗಳಾದ ಜಸ್‌ಪ್ರೀತ್ ಬುಮ್ರಾ (jasprit Bumrah), ಮೊಹಮ್ಮದ್ ಶಮಿ (Shami) ಮತ್ತು ಮೊಹಮ್ಮದ್ ಸಿರಾಜ್ ಅವರ ಬೆಂಕಿ ಚೆಂಡಿಗೆ ತರಗೆಲೆಯಂತೆ ಉರುಳಿದ ಆಫ್ರಿಕಾ ಬ್ಯಾಟರ್​ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು. ಬಾಕ್ಸಿಂಗ್‌ ಡೇ ಟೆಸ್ಟ್‌ (Boxing Day Test) ಪಂದ್ಯದಲ್ಲಿ ಹರಿಣಗಳ ವಿರುದ್ದ 113 ರನ್‌ಗಳ ಭರ್ಜರಿ ಗೆಲುವು ಪಡೆದು ಸೆಂಚೂರಿಯನ್‌ನಲ್ಲಿ ಟೆಸ್ಟ್‌ ಗೆದ್ದ ಏಷ್ಯಾದ ಮೊದಲ ತಂಡ ಎಂಬ ಕೀರ್ತಿಗೆ ವಿರಾಟ್ ಕೊಹ್ಲಿ (Virat Kohli) ಪಡೆ ಭಾಜನವಾಯಿತು. ಬೊಂಬಾಟ್ ಗೆಲುವಿನ ಖುಷಿಯಲ್ಲಿ ಮೈದಾನದಿಂದ ಹೋಟೆಲ್​ಗೆ ಬಂದ ಟೀಮ್ ಇಂಡಿಯಾ ಆಟಗಾರರಿಗೆ ಅಲ್ಲಿನ ಹೋಟೆಲ್ ಸಿಬ್ಬಂದಿಗಳು ಭರ್ಜರಿ ಆಗಿ ಸ್ವಾಗತಿಸಿದರು. ಕೋಚ್ ರಾಹುಲ್ ದ್ರಾವಿಡ್ (Rahul Dravid) ಅಂತೂ ಫುಲ್ ಮಸ್ತಿ ಮಾಡದರು.

ಹೌದು, ವರುಣನ ಭಯದ ನಡುವೆ ಐದನೇ ದಿನದಾಟ ಆರಂಭಿಸಿದ ಭಾರತಕ್ಕೆ ಯಾವುದೇ ಅಡೆತಡೆ ಸಿಗಲಿಲ್ಲ. ಮಳೆಯಂತು ಸೆಂಚುರಿಯನ್ ಕಡೆ ತಲೆಹಾಕಿಯೂ ಮಲಗಲಿಲ್ಲ. ಈ ಅಮೋಘ ಗೆಲುವಿನೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಯಿಂದ ಮುನ್ನಡೆ ಪಡೆದುಕೊಂಡಿತು. ಮೈದಾನದಲ್ಲಿ ಎಲ್ಲ ಕಾರ್ಯಕ್ರಮ ಮುಗಿಸಿ ತಾವು ತಂಗುತ್ತಿದ್ದ ಇರೇಲಾ ಲಾಡ್ಜ್ ಹೋಟೆಲ್​ಗೆ ಬಂದಾಗ ಹೋಟೆಲ್​ನ ಎಲ್ಲ ಸಿಬ್ಬಂದಿಗಳು ಭಾರತದ ಆಟಗಾರರಿಗೆ ವಿಶೇಷವಾಗಿ ಸ್ವಾಗತಿಸಲು ಸಜ್ಜಾಗಿ ನಿಂತಿದ್ದರು.

ಸೌತ್ ಆಫ್ರಿಕಾದ ಪ್ರಸಿದ್ಧ ಝುಲು ಡ್ಯಾನ್ಸ್ ಮಾಡಿ ಟೀಮ್ ಇಂಡಿಯಾದವರನ್ನು ಹೋಟೆಲ್ ಒಳಗಡೆ ಸಿಬ್ಬಂದಿಗಳು ವೆಲ್​ಕಮ್ ಮಾಡಿದರು. ಈ ಸಂದರ್ಭ ಕೊಹ್ಲಿ ಭರ್ಜರಿ ಹೆಜ್ಜೆ ಹಾಕಿ ಸಂಭ್ರಮಿಸಿದರು. ಕೊಹ್ಲಿ ವಿಡಿಯೋದ ಹಿಂಬದಿಯಲ್ಲಿ ಕೋಚ್ ರಾಹುಲ್ ದ್ರಾವಿಡ್ ಕೂಡ ಬೊಂಬಾಟ್ ಆಗಿ ಸ್ಟೆಪ್ ಹಾಕಿರುವುದು ಕಂಡು ಬಂತು. ಇವರ ಜೊತೆ ಚೇತೇಶ್ವರ್ ಪೂಜಾರ, ಮೊಹಮ್ಮದ್ ಸಿರಾಜ್ ಮತ್ತು ಆರ್. ಅಶ್ವಿನ್ ಕೂಡ ಒಂದೆರಡು ಹೆಜ್ಜೆ ಹಾಕಿ ಖುಷಿ ಪಟ್ಟರು.

 

ಗುರುವಾರ ಬೆಳಗ್ಗೆ 4 ವಿಕೆಟ್‌ ಕಳೆದುಕೊಂಡು ಪಂದ್ಯದ ಐದನೇ ದಿನದಾಟ ಶುರು ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ ಗೆಲುವಿಗೆ 211 ರನ್‌ ಅಗತ್ಯವಿತ್ತು. ಆದರೆ, ಭಾರತದ ಬೌಲಿಂಗ್‌ ದಾಳಿಯನ್ನು ಮೆಟ್ಟಿನಿಲ್ಲುವಲ್ಲಿ ವಿಫಲವಾದ ದಕ್ಷಿಣ ಆಫ್ರಿಕಾ ತಂಡ 68 ಓವರ್‌ಗಳಿಗೆ 191 ರನ್‌ಗಳಿಗೆ ಆಲ್‌ಔಟ್‌ ಆಗಿ ಸೋಲು ಒಪ್ಪಿಕೊಂಡಿತು. ದಕ್ಷಿಣ ಆಫ್ರಿಕಾದಲ್ಲಿ ಭಾರತಕ್ಕೆ ನಾಲ್ಕನೇ ಟೆಸ್ಟ್ ಗೆಲುವು ಇದಾಯಿತು.

ಈ ಪಂದ್ಯದಲ್ಲಿ ಭಾರತದ ಮಧ್ಯಮವೇಗಿಗಳು ಒಟ್ಟು 18 ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ ಕೆ.ಎಲ್. ರಾಹುಲ್ ಪಂದ್ಯಶ್ರೇಷ್ಠ ಗೌರವ ಗಳಿಸಿದರು. ಭಾರತ ಈ ಗೆಲುವಿನೊಂದಿಗೆ ಸರಣಿಯಲ್ಲಿ ಮುನ್ನಡೆ ಪಡೆಯುವುದರ ಜೊತೆಗೆ ವಿಶ್ವ ವರ್ಲ್ಡ್ ಟೆಸ್ಟ್ ಚಾಂಪಿಯನ್​ಶಿಪ್​ಗೆ ಅಮೂಲ್ಯ 12 ಅಂಕಗಳನ್ನೂ ಬಾಚಿಕೊಂಡಿತು.

KL Rahul: ಟೀಮ್ ಇಂಡಿಯಾ ನಾಯಕನಾಗುವ ಈ ಸ್ಟಾರ್ ಆಟಗಾರನ ಕನಸು ಭಗ್ನ: ಬಿಸಿಸಿಐಯಿಂದ ದೊಡ್ಡ ಶಾಕ್

New Year 2022: ಒಬ್ಬ ಆಟಗಾರ ಮಾತ್ರ ಮಿಸ್: ಟೀಮ್ ಇಂಡಿಯಾದ ಹೊಸ ವರ್ಷದ ಆಚರಣೆ ಹೇಗಿತ್ತು ನೋಡಿ

(Rahul Dravid was seen breaking into a dance step Background As Virat Kohli after winning Test against South Africa)