AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anvay Dravid: ಭಾರತ ತಂಡಕ್ಕೆ ಆಯ್ಕೆಯಾದ ರಾಹುಲ್ ದ್ರಾವಿಡ್ ಪುತ್ರ

Anvay Dravid India U19 Selection: ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಭಾರತ ಅಂಡರ್-19 ಚಾಲೆಂಜರ್ ಟ್ರೋಫಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಹೈದರಾಬಾದ್‌ನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಅವರು ಸಿ ತಂಡದ ಪರ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಹಾಗೂ ವಿಕೆಟ್‌ಕೀಪರ್ ಆಗಿ ಆಡಲಿದ್ದಾರೆ. ಇತ್ತೀಚೆಗೆ ಕರ್ನಾಟಕ ತಂಡದ ನಾಯಕರಾಗಿದ್ದ ಅನ್ವಯ್, ತಮ್ಮ ಆಕ್ರಮಣಕಾರಿ ಬ್ಯಾಟಿಂಗ್​ನಿಂದ ಹೆಸರುವಾಸಿಯಾಗಿದ್ದಾರೆ. ಯುವ ಆಟಗಾರರ ಪ್ರತಿಭೆಗೆ ವೇದಿಕೆಯಾಗಿರುವ ಈ ಟೂರ್ನಿಯಲ್ಲಿ ಅನ್ವಯ್ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ.

Anvay Dravid: ಭಾರತ ತಂಡಕ್ಕೆ ಆಯ್ಕೆಯಾದ ರಾಹುಲ್ ದ್ರಾವಿಡ್ ಪುತ್ರ
Anvay Dravid
ಪೃಥ್ವಿಶಂಕರ
|

Updated on: Nov 04, 2025 | 5:28 PM

Share

ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಕಿರಿಯ ಮಗ ಅನ್ವಯ್ ದ್ರಾವಿಡ್​ಗೆ (Anvay Dravid) ಭಾರತ ಅಂಡರ್ 19 ತಂಡದಲ್ಲಿ ಸ್ಥಾನ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿರುವ ಅನ್ವಯ್ ಅವರನ್ನು ಇತ್ತೀಚೆಗಷ್ಟೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ​​ತನ್ನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸನ್ಮಾನಿಸಿತ್ತು. ಹಾಗೆಯೇ ಕಳೆದ ತಿಂಗಳು ನಡೆದಿದ್ದ ವಿನೂ ಮಂಕಡ್ ಟ್ರೋಫಿಯಲ್ಲಿ ಕರ್ನಾಟಕ ತಂಡದ ನಾಯಕರಾಗಿದ್ದ ಅನ್ವಯ್ ಅವರನ್ನು ಇದೀಗ ಪ್ರಮುಖ ಟೂರ್ನಮೆಂಟ್‌ಗಾಗಿ ಭಾರತದ ತಂಡದಲ್ಲಿ ಆಯ್ಕೆ ಮಾಡಲಾಗಿದೆ.

ಭಾರತ ತಂಡಕ್ಕೆ ದ್ರಾವಿಡ್ ಪುತ್ರ ಆಯ್ಕೆ

ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಅವರನ್ನು ಬುಧವಾರ ಹೈದರಾಬಾದ್‌ನಲ್ಲಿ ಪ್ರಾರಂಭವಾಗುವ ಪುರುಷರ ಅಂಡರ್-19 ಏಕದಿನ ಚಾಲೆಂಜರ್ ಟ್ರೋಫಿಗೆ ತಂಡದಲ್ಲಿ ಆಯ್ಕೆ ಮಾಡಲಾಗಿದೆ. ಈ ಪಂದ್ಯಾವಳಿಯನ್ನು ವಾರ್ಷಿಕವಾಗಿ ನಡೆಸಲಾಗುತ್ತಿದ್ದು, ಯುವ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವನ್ನು ಒದಗಿಸುತ್ತದೆ. ನಾಲ್ಕು ತಂಡಗಳ ನಡುವೆ ನಡೆಯಲಿರುವ ಈ ಟೂರ್ನಿಯಲ್ಲಿ ಅನ್ವಯ್ ಅವರನ್ನು ಸಿ ತಂಡದಲ್ಲಿ ಸೇರಿಸಲಾಗಿದೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಮತ್ತು ವಿಕೆಟ್ ಕೀಪರ್ ಪಾತ್ರಗಳನ್ನು ನಿರ್ವಹಿಸುವ ಅನ್ವಯ್, ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಈ ಪಂದ್ಯಾವಳಿಯು ನವೆಂಬರ್ 5 ರಿಂದ 11, 2025 ರವರೆಗೆ ಹೈದರಾಬಾದ್‌ನಲ್ಲಿ ನಡೆಯಲಿದೆ.

ಸಿ ತಂಡವನ್ನು ಆರನ್ ಜಾರ್ಜ್ ಮುನ್ನಡೆಸಲಿದ್ದು, ಆರ್ಯನ್ ಯಾದವ್ ಉಪನಾಯಕನಾಗಿದ್ದಾರೆ. ತಂಡದ ಮೊದಲ ಪಂದ್ಯ ಶುಕ್ರವಾರ ವೇದಾಂತ್ ತ್ರಿವೇದಿ ನೇತೃತ್ವದ ಬಿ ತಂಡದ ವಿರುದ್ಧ ನಡೆಯಲಿದೆ. ಈ ಪಂದ್ಯದಲ್ಲಿ ಅನ್ವಯ್ ದ್ರಾವಿಡ್ ಆಡುವುದನ್ನು ಕಾಣಬಹುದು. ರಾಹುಲ್ ದ್ರಾವಿಡ್ ಅವರ ಹಿರಿಯ ಮಗ ಸಮಿತ್ ದ್ರಾವಿಡ್ ಕೂಡ ಬ್ಯಾಟ್ಸ್‌ಮನ್ ಎಂಬುದು ಗಮನಿಸಬೇಕಾದ ಸಂಗತಿ.

ಅಂಡರ್-19 ಏಕದಿನ ಚಾಲೆಂಜರ್ ಟ್ರೋಫಿಗಾಗಿ ಎಲ್ಲಾ ತಂಡಗಳು

ಎ ತಂಡ: ವಿಹಾನ್ ಮಲ್ಹೋತ್ರಾ (ನಾಯಕ), ಅಭಿಜ್ಞಾನ್ ಕುಂದು (ಉಪನಾಯಕ ಮತ್ತು ವಿಕೆಟ್‌ಕೀಪರ್), ವಂಶ್ ಆಚಾರ್ಯ, ಬಾಲಾಜಿ ರಾವ್ (ವಿಕೆಟ್‌ಕೀಪರ್), ಲಕ್ಷ ರಾಯಚಂದನಿ, ವಿನೀತ್ ವಿಕೆ, ಮಾರ್ಕಂಡೇಯ ಪಾಂಚಾಲ್, ಸಾತ್ವಿಕ್ ದೇಸ್ವಾಲ್, ವಿ ಯಶವೀರ್, ಹೇಮಚೂಡೇಶನ್ ಜೆ, ಆರ್.ಎಸ್. ಅಂಬ್ರಿಶ್, ಹನಿ ಪ್ರತಾಪ್ ಸಿಂಗ್, ವಾಸು ದೇವಾನಿ, ಯುಧಾಜಿತ್ ಗುಹಾ, ಇಶಾನ್ ಸೂದ್.

ಬಿ ತಂಡ: ವೇದಾಂತ್ ತ್ರಿವೇದಿ (ನಾಯಕ), ಹರ್ವಂಶ್ ಸಿಂಗ್ (ಉಪನಾಯಕ ಮತ್ತು ವಿಕೆಟ್ ಕೀಪರ್), ವಾಫಿ ಕಚಿ, ಸಾಗರ್ ವಿರ್ಕ್, ಸಯಾನ್ ಪಾಲ್, ವೇದಾಂತ್ ಸಿಂಗ್ ಚೌಹಾಣ್, ಪ್ರಣವ್ ಪಂತ್, ಎಹಿತ್ ಸಲಾರಿಯಾ (ವಿಕೆಟ್ ಕೀಪರ್), ಬಿಕೆ ಕಿಶೋರ್, ಅನ್ಮೋಲ್ಜಿತ್ ಸಿಂಗ್, ನಮನ್ ಪುಷ್ಪಕ್, ಡಿ ದೀಪೇಶ್, ಮೊಹಮ್ಮದ್ ಮಲಿಕ್, ಮಹಮದ್ ಯಾಸೀನ್ ಸೌದಾಗರ್, ವೈಭವ್ ಶರ್ಮಾ.

ಸಿ ತಂಡ: ಆರನ್ ಜಾರ್ಜ್ (ನಾಯಕ), ಆರ್ಯನ್ ಯಾದವ್ (ಉಪನಾಯಕ), ಅನಿಕೇತ್ ಚಟರ್ಜಿ, ಮಣಿಕಾಂತ್ ಶಿವಾನಂದ್, ರಾಹುಲ್ ಕುಮಾರ್, ಯಶ್ ಕಸ್ವಾಂಕರ್, ಅನ್ವಯ್ ದ್ರಾವಿಡ್ (ವಿಕೆಟ್ ಕೀಪರ್), ಯುವರಾಜ್ ಗೋಹಿಲ್ (ವಿಕೆಟ್ ಕೀಪರ್), ಹೆನಿಲ್ ಪಟೇಲ್, ಲಕ್ಷ್ಮಣ್ ಪ್ರುತಿ, ರೋಹಿತ್ ಕುಮಾರ್ ದಾಸ್, ಮೋಹಿತ್ ಉಲ್ವಾ

ಡಿ ತಂಡ: ಚಂದ್ರಹಾಸ್ ದಾಶ್ (ನಾಯಕ), ಮೌಲ್ಯರಾಜ್‌ಸಿಂಗ್ ಚಾವ್ಡಾ (ಉಪನಾಯಕ), ಶಂತನು ಸಿಂಗ್, ಅರ್ನವ್ ಬುಗ್ಗಾ, ಅಭಿನವ್ ಕಣ್ಣನ್, ಕುಶಾಗ್ರ ಓಜಾ, ಆರ್ಯನ್ ಸಕ್ಪಾಲ್, ಎ. ರಾಪೋಲ್, ಇಸಿಎಸ್‌ನಹಮ್, ಅಯಾನ್ ಅಕ್ರಮ್, ಉಧವ್ ಮೋಹನ್, ಅಶುತೋಷ್ ಮಹಿದಾ, ಎಂ ತೋಶಿತ್ ಯಾದವ್, ಸೊಲಿಬ್ ತಾರಿಕ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು