ಕಿಚ್ಚ ಸುದೀಪ್ (Kichcha Sudeep) ಅವರು ಇಂದು (ಸೆಪ್ಟೆಂಬರ್ 2) ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೊವಿಡ್ ಕಾಟ ಜೋರಾಗಿತ್ತು. ಈ ಕಾರಣದಿಂದ ಕಿಚ್ಚನ ಬರ್ತ್ಡೇ ಆಚರಿಸಲು ಸಾಧ್ಯವಾಗಿರಲಿಲ್ಲ. ಆದರೆ, ಈ ವರ್ಷ ಬರ್ತ್ಡೇ ಜೋರಾಗಿದೆ. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಸುದೀಪ್ಗೆ ನಾನಾ ಕಡೆಗಳಿಂದ ಬರ್ತ್ಡೇ ವಿಶ್ ಬರುತ್ತಿದೆ. ವಿವಿಧ ಊರುಗಳಲ್ಲಿ ಸುದೀಪ್ ಫೋಟೋ ಹಾಗೂ ಕಟೌಟ್ ಹಾಕಿ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಜೊತೆಗೆ ಕ್ರಿಕೆಟ್ನಲ್ಲೂ ಸಾಕಷ್ಟು ಹೆಸರು ಮಾಡಿರುವ ಕಿಚ್ಚನಿಗೆ ಐಪಿಎಲ್ನ ಯಶಸ್ವಿ ಫ್ರಾಂಚೈಸಿಯಾದ ರಾಜಸ್ಥಾನ ರಾಯಲ್ಸ್ (Rajastan Royals) ತನ್ನ ಟ್ವಿಟರ್ ಖಾತೆಯಲ್ಲಿ ಜನ್ಮದಿನದ ಶುಭಾಶಯ ತಿಳಿಸಿದೆ.
49ನೇ ವಯಸ್ಸಿಗೆ ಕಾಲಿಟ್ಟಿರುವ ಅಭಿನಯ ಚಕ್ರವರ್ತಿ ಸುದೀಪ್ಗೆ ಕನ್ನಡದಲ್ಲಿ ಜನ್ಮದಿನದ ಶುಭಾಶಯ ತಿಳಿಸಿರುವ ರಾಜಸ್ಥಾನ ರಾಯಲ್ಸ್ ತನ್ನ ಟ್ವೀಟ್ನಲ್ಲಿ, ಸುದೀಪ್ ರಾಜಸ್ಥಾನ ರಾಯಲ್ಸ್ ತಂಡದ ಜೆರ್ಸಿ ಹಿಡಿದಿರುವ ಫೋಟೋ ಹಂಚಿಕೊಂಡಿದೆ. ಜೊತೆಗೆ ಟ್ವೀಟ್ನ ಶೀರ್ಷಿಕೆಯಲ್ಲಿ, ಜನ್ಮದಿನದ ಶುಭಾಶಯಗಳು ದಂತಕಥೆ ಎಂದು ಬರದುಕೊಂಡಿದೆ.
ಜನ್ಮದಿನದ ಶುಭಾಶಯಗಳು ದಂತಕಥೆ! ?
Have a good day, Anna. ?#HappyBirthdayKicchaSudeep | @KicchaSudeep pic.twitter.com/GErZeJUwLd
— Rajasthan Royals (@rajasthanroyals) September 2, 2022
ಸುದೀಪ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ನಂಟು ಇಂದು ನಿನ್ನೆಯದಲ್ಲ. ಈ ಹಿಂದೆಯೂ ರಾಜಸ್ಥಾನ ರಾಯಲ್ಸ್ ತಂಡ ಕಿಚ್ಚ ಸುದೀಪ್ ಬರ್ತ್ ಡೇಗೆ ಶುಭಾಷಯಗಳನ್ನು ತಿಳಿಸಿತ್ತು. ಈ ಹಿಂದೆ ಕಿಚ್ಚನ ಜನ್ಮದಿನಕ್ಕೆ ಜೆರ್ಸಿಯೊಂದನ್ನು ರಾಜಸ್ಥಾನ ರಾಯಲ್ಸ್ ತಂಡ ಗಿಫ್ಟ್ ಆಗಿ ಕಳುಹಿಸಿಕೊಟ್ಟಿತ್ತು. ಜೊತೆಗೆ ವಿಶೇಷ ಸಂದೇಶವನ್ನು ಟ್ವೀಟ್ನಲ್ಲಿ ಬರೆದುಕೊಂಡಿತ್ತು.
ಅಲ್ಲದೆ ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ (IPL 2022) ಅತಿ ಹೆಚ್ಚು ರನ್ ಕಲೆಹಾಕಿ ಆರೆಂಜ್ ಕ್ಯಾಪ್ ತೊಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟರ್ ಜೋಸ್ ಬಟ್ಲರ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ಗೆ ತಮ್ಮ ನೆಚ್ಚಿನ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಐಪಿಎಲ್ 2022 ರಲ್ಲಿ ತಾವು ಆಡಿದ್ದ ಬ್ಯಾಟ್ ಅನ್ನು ಸುದೀಪ್ಗೆ ಬಟ್ಲರ್ ಉಡುಗೊರೆಯಾಗಿ ನೀಡಿದ್ದು, ಅವರ ಸಹಿ ಕೂಡ ಆ ಬ್ಯಾಟ್ ಮೇಲ್ಲಿತ್ತು. ಕಿಚ್ಚ ಸುದೀಪ್ (Kiccha Sudeep) ಕೂಡ ಈ ಕುರಿತಾಗಿ ಟ್ವಿಟರ್ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಖುಷಿ ಹಂಚಿಕೊಂಡಿದ್ದರು.
ಬಟ್ಲರ್ ನೀಡಿದ ಬ್ಯಾಟ್ ಅನ್ನು ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದ ಸುದೀಪ್, “ಇದು ನನಗೆ ಬಹುದೊಡ್ಡ ಅಚ್ಚರಿಯ ಉಡುಗೊರೆ. ಇದನ್ನು ನಾನು ಖಂಡಿತಾ ನಿರೀಕ್ಷೆ ಮಾಡಿರಲಿಲ್ಲ. ಮೊದಲಿಗೆ ರಾಜಸ್ಥಾನ್ ರಾಯಲ್ಸ್ ಮತ್ತು ನನ್ನ ಪ್ರೀತಿಯ ಮಿತ್ರ ಕಾರಿಯಪ್ಪ ಅವರಿಗೆ ಧನ್ಯವಾದ ಹೇಳುತ್ತೇನೆ. ಅವರಿಂದಲೇ ಇದು ಸಾಧ್ಯವಾಗಿರುವುದು,” ಎಂದು ಹೇಳಿಕೊಂಡಿದ್ದರು.
A big hug to this sweet surprise and a sweetest gesture.
Thank you @josbuttler@rajasthanroyals @cariappa14
??❤️ pic.twitter.com/EyXOqyJQY0— Kichcha Sudeepa (@KicchaSudeep) June 9, 2022
Published On - 3:11 pm, Fri, 2 September 22