IPL 2022: ಐಪಿಎಲ್ ಸೀಸನ್ 15 ರ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ (RCB) ತಂಡದ ಯುವ ಬ್ಯಾಟ್ಸ್ಮನ್ ರಜತ್ ಪಾಟಿದಾರ್ (Rajat Patidar) ಅಬ್ಬರಿಸಿ ಬೊಬ್ಬಿರಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ (KL Rahul) ಬೌಲಿಂಗ್ ಆಯ್ದುಕೊಂಡಿದ್ದರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ಮಾಡಿದ ಲಕ್ನೋ ತಂಡದ ಯುವ ಬೌಲರ್ ಮೊಹ್ಸಿನ್ ಖಾನ್ ಮೊದಲ ಓವರ್ನಲ್ಲೇ ಫಾಫ್ ಡುಪ್ಲೆಸಿಸ್ ವಿಕೆಟ್ ಪಡೆದು ಮೊದಲ ಯಶಸ್ಸು ತಂದುಕೊಟ್ಟರು. ಈ ಹಂತದಲ್ಲಿ ಕಣಕ್ಕಿಳಿದ ರಜತ್ ಪಾಟಿದಾರ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
ಒಂದೆಡೆ ವಿರಾಟ್ ಕೊಹ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರೆ, ಮತ್ತೊಂದೆಡೆ ರಜತ್ ಪಾಟಿದಾರ್ ಬಿರುಸಿನ ಇನಿಂಗ್ಸ್ ಆಡಿದರು. ಅದರಂತೆ ಲಕ್ನೋ ಸೂಪರ್ ಜೈಂಟ್ಸ್ ಬೌಲರ್ಗಳ ಬೆಂಡೆತ್ತಿದ ಪಾಟಿದಾರ್ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಅದರಲ್ಲೂ ರವಿ ಬಿಷ್ಣೋಯ್ ಓವರ್ನಲ್ಲಿ 27 ರನ್ ಸಿಡಿಸುವ ಮೂಲಕ ಅಬ್ಬರಿಸಿದರು. ಈ ನಡುವೆ ದೀಪಕ್ ಹೂಡಾ ಹಾಗೂ ಮನನ್ ವೋಹ್ರಾ ಕೈಬಿಟ್ಟ ಕ್ಯಾಚ್ನಿಂದ ಸಿಕ್ಕ ಜೀವದಾನವನ್ನು ಬಳಸಿಕೊಂಡ ಪಾಟಿದಾರ್ ಬ್ಯಾಟಿಂಗ್ ಅಬ್ಬರ ಮುಂದುವರೆಸಿದರು.
ಅದರಂತೆ ಮೊಹ್ಸಿನ್ ಖಾನ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ 49 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಎಲಿಮಿನೇಟರ್ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟ್ಸ್ಮನ್ ದಾಖಲೆ ಬರೆದರು. ಅಷ್ಟೇ ಅಲ್ಲದೆ ಪ್ಲೇಆಫ್ ಹಂತದಲ್ಲಿ ಸೆಂಚುರಿ ಸಿಡಿಸಿದ 5ನೇ ಆಟಗಾರ ಎಂಬ ದಾಖಲೆಯನ್ನೂ ಸಹ ತಮ್ಮದಾಗಿಸಿಕೊಂಡರು.
Cometh the hour, cometh the man! ???
Maiden IPL century for our #3️⃣. ❤️ #PlayBold #WeAreChallengers #IPL2022 #Mission2022 #RCB #ನಮ್ಮRCB #LSGvRCB #PlayOffs pic.twitter.com/akI5RdymuI
— Royal Challengers Bangalore (@RCBTweets) May 25, 2022
ಇದಲ್ಲದೆ ನಾಕೌಟ್/ಪ್ಲೇಆಫ್ ಹಂತದಲ್ಲಿ ಆರ್ಸಿಬಿ ಪರ ಶತಕ ಸಿಡಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆ ಕೂಡ ರಜತ್ ಪಾಟಿದಾರ್ ಪಾಲಾಗಿದೆ. ಅಂದರೆ ಕಳೆದ 14 ಸೀಸನ್ ಐಪಿಎಲ್ನಲ್ಲಿ ಪ್ಲೇಆಫ್ ಹಂತದಲ್ಲಿ ಆರ್ಸಿಬಿ ಪರ ಯಾವುದೇ ಬ್ಯಾಟ್ಸ್ಮನ್ ಮೂರಂಕಿ ರನ್ ಕಲೆಹಾಕಿಲ್ಲ. ಇದೇ ಮೊದಲ ಬಾರಿಗೆ ಶತಕ ಸಿಡಿಸುವ ಮೂಲಕ ಆರ್ಸಿಬಿ ಪರ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ರಜತ್ ಪಾಟಿದಾರ್ ತಮ್ಮದಾಗಿಸಿಕೊಂಡಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಅಜೇಯರಾಗಿ ಉಳಿದ ರಜತ್ ಪಾಟಿದಾರ್ 7 ಭರ್ಜರಿ ಸಿಕ್ಸ್ ಹಾಗೂ 12 ಬೌಂಡರಿಗಳೊಂದಿಗೆ 54 ಎಸೆತಗಳಲ್ಲಿ 112 ರನ್ ಗಳಿಸಿದರು. ಈ ಮೂಲಕ ಆರ್ಸಿಬಿ ತಂಡದ ಮೊತ್ತವನ್ನು ನಿಗದಿತ 20 ಓವರ್ಗಳಲ್ಲಿ 207 ರನ್ಗಳಿಗೆ ತಲುಪಿಸುವಲ್ಲಿ ರಜತ್ ಪಾಟಿದಾರ್ ಪ್ರಮುಖ ಪಾತ್ರವಹಿಸಿದರು.
4s: 1️⃣2️⃣
6s: 7️⃣
S/r: 2️⃣0️⃣7️⃣.4️⃣0️⃣?An innings we’ll never forget. ?
Take a bow, Rajat! ??#PlayBold #WeAreChallengers #IPL2022 #Mission2022 #RCB #ನಮ್ಮRCB #LSGvRCB #PlayOffs pic.twitter.com/5QG0ls3tdM— Royal Challengers Bangalore (@RCBTweets) May 25, 2022
ಆರ್ಸಿಬಿ ಪ್ಲೇಯಿಂಗ್ 11: ಫಾಫ್ ಡು ಪ್ಲೆಸಿಸ್ (ನಾಯಕ) , ವಿರಾಟ್ ಕೊಹ್ಲಿ , ರಜತ್ ಪಾಟಿದಾರ್ , ಗ್ಲೆನ್ ಮ್ಯಾಕ್ಸ್‌ವೆಲ್ , ಮಹಿಪಾಲ್ ಲೊಮ್ರೋರ್ , ದಿನೇಶ್ ಕಾರ್ತಿಕ್ , ಶಹಬಾಜ್ ಅಹ್ಮದ್ , ವನಿಂದು ಹಸರಂಗ , ಹರ್ಷಲ್ ಪಟೇಲ್ , ಜೋಶ್ ಹ್ಯಾಜಲ್‌ವುಡ್ , ಮೊಹಮ್ಮದ್ ಸಿರಾಜ್
ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11: ಕ್ವಿಂಟನ್ ಡಿ ಕಾಕ್, KL ರಾಹುಲ್ (ನಾಯಕ) , ಎವಿನ್ ಲೂಯಿಸ್ , ದೀಪಕ್ ಹೂಡಾ , ಮನನ್ ವೋಹ್ರಾ , ಮಾರ್ಕಸ್ ಸ್ಟೋನಿಸ್ , ಕೃನಾಲ್ ಪಾಂಡ್ಯ , ದುಷ್ಮಂತ ಚಮೀರಾ , ಮೊಹ್ಸಿನ್ ಖಾನ್ , ಅವೇಶ್ ಖಾನ್ , ರವಿ ಬಿಷ್ಣೋಯ್
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.