IND vs ENG: ರಾಜ್‌ಕೋಟ್‌ ಪಿಚ್ ಯಾರಿಗೆ ಸಹಕಾರಿ? ಹವಾಮಾನ ಹೇಗಿರಲಿದೆ? ಇಲ್ಲಿದೆ ವಿವರ

|

Updated on: Jan 27, 2025 | 10:39 PM

India vs England 3rd T20I: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟಿ20 ಪಂದ್ಯ ರಾಜ್​ಕೋಟ್​ನಲ್ಲಿ ನಡೆಯಲಿದೆ. ರಾಜ್‌ಕೋಟ್ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿದೆ. ಭಾರತ ತಂಡ ಈ ಮೈದಾನದಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದು, 5 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದಿದ್ದರೆ, ಒಂದು ಪಂದ್ಯದಲ್ಲಿ ಸೋಲು ಕಂಡಿದೆ. ಹವಾಮಾನ ಸ್ಪಷ್ಟವಾಗಿರುವ ನಿರೀಕ್ಷೆಯಿದೆ.

IND vs ENG: ರಾಜ್‌ಕೋಟ್‌ ಪಿಚ್ ಯಾರಿಗೆ ಸಹಕಾರಿ? ಹವಾಮಾನ ಹೇಗಿರಲಿದೆ? ಇಲ್ಲಿದೆ ವಿವರ
ರಾಜ್​ಕೋಟ್ ಮೈದಾನ
Follow us on

ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯಲಿರುವ ಐದು ಪಂದ್ಯಗಳ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲು ಸಿದ್ಧವಾಗಿವೆ. ಭಾರತ ತಂಡ ತನ್ನ ಸಾಂಘಿಕ ಪ್ರದರ್ಶನದ ಮೂಲಕ ಮೊದಲ ಎರಡು ಪಂದ್ಯಗಳಲ್ಲಿ ಆಂಗ್ಲ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ. ಇದರಿಂದಾಗಿ ಸರಣಿಯಲ್ಲಿ 2-0 ಮುನ್ನಡೆಯಲ್ಲಿದೆ ಇದೀಗ ಸೂರ್ಯಕುಮಾರ್ ಪಡೆ ರಾಜ್‌ಕೋಟ್‌ನಲ್ಲಿಯೂ ಗೆಲ್ಲುವ ಮೂಲಕ ಸರಣಿಯನ್ನು ಗೆಲ್ಲುವತ್ತ ಕಣ್ಣಿಟ್ಟಿದೆ. ಆದರೆ ಅದಕ್ಕೂ ಮುನ್ನ ರಾಜ್‌ಕೋಟ್‌ ಪಿಚ್ ಯಾರಿಗೆ ಹೆಚ್ಚು ಸಹಕಾರಿ? ಈ ಪಿಚ್​ನಲ್ಲಿ ಟೀಂ ಇಂಡಿಯಾದ ಪ್ರದರ್ಶನ ಹೇಗಿದೆ? ಪಂದ್ಯದ ದಿನ ಹವಾಮಾನ ವರದಿ ಏನು ಎಂಬುದರ ಪೂರ್ಣ ವಿವರವನ್ನು ನೋಡೋಣ.

ರಾಜ್‌ಕೋಟ್‌ ಪಿಚ್ ಯಾರಿಗೆ ಸಹಕಾರಿ?

ರಾಜ್‌ಕೋಟ್‌ನ ನಿರಂಜನ್ ಶಾ ಸ್ಟೇಡಿಯಂನ ಪಿಚ್ ಬ್ಯಾಟ್ಸ್‌ಮನ್ ಸ್ನೇಹಿಯಾಗಿದೆ. ಈ ಮೈದಾನದಲ್ಲಿ ಬ್ಯಾಟ್ಸ್‌ಮನ್‌ಗಳು ಸಾಕಷ್ಟು ರನ್ ಗಳಿಸುವುದನ್ನು ಕಾಣಬಹುದು. ಈ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡುವ ತಂಡಕ್ಕೆ ಹೆಚ್ಚಿನ ಲಾಭ ಸಿಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಟಾಸ್ ಗೆದ್ದ ತಂಡದ ನಾಯಕ ಮೊದಲು ಬ್ಯಾಟಿಂಗ್ ಮಾಡುವ ಸಾಧ್ಯತೆಗಳು ಹೆಚ್ಚಿವೆ.

ರಾಜ್‌ಕೋಟ್‌ನ ನಿರಂಜನ್ ಷಾ ಸ್ಟೇಡಿಯಂನಲ್ಲಿ ಭಾರತ ತಂಡ ಒಟ್ಟು 5 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದಿದ್ದರೆ, ಒಂದು ಪಂದ್ಯದಲ್ಲಿ ಸೋಲು ಕಂಡಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ತಂಡದ ಈ ದಾಖಲೆ ಖಂಡಿತವಾಗಿಯೂ ಅದರ ಮನೋಬಲವನ್ನು ಹೆಚ್ಚಿಸುತ್ತದೆ. ಈ ಪಂದ್ಯದೊಂದಿಗೆ, ಇಂಗ್ಲೆಂಡ್ ತಂಡವು ಈ ಮೈದಾನದಲ್ಲಿ ಮೊದಲ ಬಾರಿಗೆ ಟಿ20 ಅಂತರರಾಷ್ಟ್ರೀಯ ಪಂದ್ಯವನ್ನು ಆಡಲಿದೆ.

ಹವಾಮಾನ ಹೇಗಿರಲಿದೆ?

ಅಕ್ಯುವೆದರ್ ವರದಿಯ ಪ್ರಕಾರ, ರಾಜ್‌ಕೋಟ್‌ನ ಹವಾಮಾನವು ಸ್ಪಷ್ಟವಾಗಿರುತ್ತದೆ. ಅಂದರೆ 28 ಜನವರಿ 2025 ರಂದು ರಾಜ್‌ಕೋಟ್‌ನಲ್ಲಿ ಮಳೆಯಾಗುವ ಸಾಧ್ಯತೆಯಿಲ್ಲ. ಗರಿಷ್ಠ ತಾಪಮಾನವು 32 ಡಿಗ್ರಿ ಸೆಲ್ಸಿಯಸ್ ಆಗಿರಲಿದ್ದು, ಕನಿಷ್ಠ ತಾಪಮಾನವು 15 ಡಿಗ್ರಿಗಳವರೆಗೆ ಇರುತ್ತದೆ.

ಸರಣಿಗೆ ಭಾರತ ಮತ್ತು ಇಂಗ್ಲೆಂಡ್ ತಂಡ

ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಂಕು ಸಿಂಗ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಅಭಿಷೇಕ್ ಶರ್ಮಾ, ವರುಣ್ ಚಕ್ರವರ್ತಿ, ತಿಲಕ್ ವರ್ಮಾ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಶಿವಂ ದುಬೆ, ರಮಣದೀಪ್ ಸಿಂಗ್, ಹರ್ಷಿತ್ ರಾಣಾ.

ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ), ಹ್ಯಾರಿ ಬ್ರೂಕ್, ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಸಾಕಿಬ್ ಮಹಮೂದ್, ಜೇಮೀ ಓವರ್ಟನ್, ಬೆನ್ ಡಕೆಟ್, ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಮಾರ್ಕ್ ವುಡ್, ಬ್ರೈಡನ್ ಕಾರ್ಸೆ, ಗಸ್ ಅಟ್ಕಿನ್ಸನ್, ಜೇಮೀ ಸ್ಮಿತ್ (ವಿಕೆಟ್ ಕೀಪರ್), ಆದಿಲ್ ರಶೀದ್, ಜಾಕೋಬ್ ಬೆಥೆಲ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:38 pm, Mon, 27 January 25