AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBL 2025: ಅಭಿಮಾನಿಯೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಕಥೆ..!

Mitchell Owen: ಬಿಗ್ ಬ್ಯಾಷ್ ಲೀಗ್ ಫೈನಲ್ ಪಂದ್ಯದಲ್ಲಿ ಸಿಡ್ನಿ ಥಂಡರ್ ವಿರುದ್ಧ ಮಿಚೆಲ್ ಓವನ್ ಭರ್ಜರಿ ಶತಕ ಸಿಡಿಸಿದ್ದಾರೆ. ಹೋಬಾರ್ಟ್ ಹರಿಕೇನ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ಮಿಚೆಲ್ ಓವನ್ 42 ಎಸೆತಗಳಲ್ಲಿ 11 ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 108 ರನ್ ಬಾರಿಸಿದ್ದಾರೆ. ಈ ಶತಕದ ನೆರವಿನಿಂದ ಹೋಬಾರ್ಟ್ ಹರಿಕೇನ್ಸ್ ಬಿಬಿಎಲ್​ನ 14ನೇ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

BBL 2025: ಅಭಿಮಾನಿಯೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಕಥೆ..!
Mitchell Owen
ಝಾಹಿರ್ ಯೂಸುಫ್
|

Updated on: Jan 28, 2025 | 8:22 AM

Share

ಡಿಸೆಂಬರ್ 22, 2015… ಹೊಬಾರ್ಟ್​ನ ಬೆಲ್ಲೆರಿವ್ ಓವಲ್​ ಮೈದಾನದಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್​ನ 7ನೇ ಪಂದ್ಯದಲ್ಲಿ ಹೋಬಾರ್ಟ್ ಹರಿಕೇನ್ಸ್ ಮತ್ತು ಬ್ರಿಸ್ಬೇನ್ ಹೀಟ್ ಮುಖಾಮುಖಿಯಾಗಿದ್ದವು. ಸಾಂಪ್ರದಾಯಿಕ ಎದುರಾಳಿಗಳೆಂದೇ ಗುರುತಿಸಿಕೊಂಡಿರುವ ಈ ತಂಡಗಳ ನಡುವಿನ ಪಂದ್ಯವನ್ನು ವೀಕ್ಷಿಸಲು ಬೆಲ್ಲೆರಿವ್ ಓವಲ್​ ಸ್ಟೇಡಿಯಂನಲ್ಲಿ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೋಬಾರ್ಟ್ ಹರಿಕೇನ್ಸ್ ಪರ ಟಿಮ್ ಪೈನ್ ಅಬ್ಬರಿಸಿದರು. 58 ಎಸೆತಗಳನ್ನು ಎದುರಿಸಿದ ಪೈನ್ 4 ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ ಅಜೇಯ 87 ರನ್ ಬಾರಿಸಿದರು. ಇನ್ನು ಜಾರ್ಜ್ ಬೈಲಿ 40 ರನ್​ ಸಿಡಿಸಿದರೆ, ಕುಮಾರ ಸಂಗಾಕ್ಕರ 43 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಹೋಬಾರ್ಟ್ ಹರಿಕೇನ್ಸ್ ತಂಡವು 20 ಓವರ್​ಗಳಲ್ಲಿ 184 ರನ್ ಕಲೆಹಾಕಿತು.

ಇದಾಗ್ಯೂ ಹೋಬಾರ್ಟ್ ಹರಿಕೇನ್ಸ್ ತಂಡಕ್ಕೆ ಗೆಲ್ಲುವ ಬಗ್ಗೆ ಖಚಿತತೆ ಇರಲಿಲ್ಲ. ಏಕೆಂದರೆ ಬ್ರಿಸ್ಬೇನ್ ಹೀಟ್ ತಂಡದಲ್ಲಿ ಸ್ಪೋಟಕ ದಾಂಡಿಗರ ದಂಡೇ ಇತ್ತು. ಲೆಂಡ್ಲ್ ಸಿಮನ್ಸ್, ಜೇಸನ್ ಫ್ಲೋರೋಸ್, ಕ್ರಿಸ್ ಲಿನ್, ಬೆನ್ ಕಟಿಂಗ್​ನಂತಹ ಹೊಡಿಬಡಿ ದಾಂಡಿಗರಿಗೆ 185 ರನ್​​ಗಳ ಗುರಿ ಸವಾಲಿನ ಮೊತ್ತವಾಗಿರಲಿಲ್ಲ.

ಆದರೆ ಅಂದು ಹೋಬಾರ್ಟ್ ತಂಡಕ್ಕೆ ತವರಿನ ಅಭಿಮಾನಿಗಳ ಭರಪೂರ ಬೆಂಬಲ ವ್ಯಕ್ತವಾಗಿತ್ತು. ಪ್ರತಿಯೊಂದು ಎಸೆತದಲ್ಲೂ ಅಭಿಮಾನಿಗಳು ಹೋಬಾರ್ಟ್ ಹರಿಕೇನ್ಸ್ ತಂಡವನ್ನು ಹುರಿದುಂಬಿಸಿದರು. ಈ ಅಭೂತಪೂರ್ವ ಬೆಂಬಲದೊಂದಿಗೆ ಅದ್ಭುತ ಪ್ರದರ್ಶನ ನೀಡಿದ ಹೋಬಾರ್ಟ್ ಹರಿಕೇನ್ಸ್ ತಂಡವು 20 ರನ್​​ಗಳ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಹೋಬಾರ್ಟ್ ಹರಿಕೇನ್ಸ್ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು.

ಅಂದು ಹೋಬಾರ್ಟ್ ಹರಿಕೇನ್ಸ್ ತಂಡವನ್ನು ಬೆಂಬಲಿಸಿದ ಪ್ರೇಕ್ಷಕರಲ್ಲಿ 13 ವರ್ಷದ ಬಾಲಕನೊಬ್ಬನಿದ್ದ. ತನ್ನ ಪುಟ್ಟ ಗಂಟಲಿನಿಂದ ದೊಡ್ಡ ಶಬ್ದ ಮಾಡುತ್ತಾ ಹೋಬಾರ್ಟ್ ತಂಡವನ್ನು ಪಂದ್ಯದುದಕ್ಕೂ ಹುರಿದುಂಬಿಸುತ್ತಿದ್ದ. ಹೀಗೆ ಹರಿಕೇನ್ಸ್ ತಂಡವನ್ನು ಹುರಿದುಂಬಿಸಿದ ಆ ಬಾಲಕನೇ ಮಿಚೆಲ್ ಓವನ್.

Mitchell Owen

ಮಿಚೆಲ್ ಓವನ್ (ಚಿತ್ರದಲ್ಲಿರುವ ಬಾಲಕ)

ಇದೇ ಮಿಚೆಲ್ ಓವನ್ ಇದೀಗ ಹೋಬಾರ್ಟ್ ಹರಿಕೇನ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಹೌದು, 10 ವರ್ಷಗಳ ಹಿಂದೆ ಸ್ಟೇಡಿಯಂನಲ್ಲಿ ಕೂತು ಹೋಬಾರ್ಟ್ ತಂಡವನ್ನು ಹುರಿದುಂಬಿಸಿದ ಮಿಚೆಲ್ ಈ ಬಾರಿ ಹರಿಕೇನ್ಸ್ ತಂಡದ ಪರ ಕಣಕ್ಕಿಳಿದಿದ್ದರು.

ಅದರಲ್ಲೂ ಅಂತಿಮ ಹಣಾಹಣಿಯಲ್ಲಿ ಹೋಬಾರ್ಟ್ ಹರಿಕೇನ್ಸ್ ಪರ ಆರಂಭಿಕನಾಗಿ ಬ್ಯಾಟ್ ಬೀಸಿದ್ದರು. ಅದು ಕೂಡ 183 ರನ್​ಗಳ ಕಠಿಣ ಗುರಿಯನ್ನು ಬೆನ್ನತ್ತಲು. ಆದರೆ 13 ವರ್ಷಗಳಿಂದ ಹೋಬಾರ್ಟ್ ಹರಿಕೇನ್ಸ್ ತಂಡದ ಅಭಿಮಾನಿಯಾಗಿದ್ದ ಮಿಚೆಲ್ ಓವನ್​ಗೆ ಕಪ್​ ಗೆಲ್ಲಲು ತಾನೇನು ಮಾಡಬೇಕೆಂದು ಚೆನ್ನಾಗಿ ತಿಳಿದಿತ್ತು. ಏನು ಮಾಡಬಲ್ಲೆ ಎಂಬುದರ ಬಗ್ಗೆಯೂ ಆತ್ಮ ವಿಶ್ವಾಸವಿತ್ತು.

ಇದೇ ಆತ್ಮ ವಿಶ್ವಾಸದೊಂದಿಗೆ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದ ಮಿಚೆಲ್ ಓವನ್ ಸಿಕ್ಸ್-ಫೋರ್​​ಗಳ ಸುರಿಮಳೆಯೊಂದಿಗೆ ಇಡೀ ಪ್ರೇಕ್ಷಕರನ್ನು ನಿಬ್ಬೆರಗಾಗಿಸಿದ್ದಾರೆ. ಅಲ್ಲದೆ ಕೇವಲ 39 ಎಸೆತಗಳಲ್ಲಿ ಶತಕ ಪೂರೈಸಿ ದಾಖಲೆ ನಿರ್ಮಿಸಿದ್ದಾರೆ.

ಈ ದಾಖಲೆಯ ಶತಕದೊಂದಿಗೆ ಹೋಬಾರ್ಟ್ ಹರಿಕೇನ್ಸ್ ತಂಡವು 14.1 ಓವರ್​ಗಳಲ್ಲಿ 183 ರನ್​ಗಳ ಗುರಿಯನ್ನು ಚೇಸ್ ಮಾಡಿ ಚಾಂಪಿಯನ್ ಪಟ್ಟಕ್ಕೇರಿದೆ. ಈ ಮೂಲಕ ಕಳೆದ 13 ವರ್ಷಗಳಿಂದ ಅಭಿಮಾನಿಯಾಗಿ ತಾನು ಕಂಡ ಕನಸನ್ನು ತಾನಾಗಿಯೇ ಕಣಕ್ಕಿಳಿದು ನನಸು ಮಾಡಿಕೊಳ್ಳುವಲ್ಲಿ ಮಿಚೆಲ್ ಓವನ್ ಯಶಸ್ವಿಯಾಗಿದ್ದಾರೆ. ಅದು ಕೂಡ ಕೇವಲ 23ನೇ ವಯಸ್ಸಿನಲ್ಲಿ ಎಂಬುದು ವಿಶೇಷ.

Follow Us
ಶಾಸಕರ ಫೋಟೋಶೂಟ್ ಬಗ್ಗೆ ಭಾರೀ ಚರ್ಚೆ: ಕಾಶಪ್ಪನವರ್ ಏನಂದ್ರು ನೋಡಿ
ಶಾಸಕರ ಫೋಟೋಶೂಟ್ ಬಗ್ಗೆ ಭಾರೀ ಚರ್ಚೆ: ಕಾಶಪ್ಪನವರ್ ಏನಂದ್ರು ನೋಡಿ
Video: ಟೆಕ್ ಸ್ಯಾವಿ ಮಂಗನ ಸೆಲ್ಫೀ ಕ್ರೇಜ್! ವಿಡಿಯೋ ವೈರಲ್
Video: ಟೆಕ್ ಸ್ಯಾವಿ ಮಂಗನ ಸೆಲ್ಫೀ ಕ್ರೇಜ್! ವಿಡಿಯೋ ವೈರಲ್
ಈಗ ಬೆಂಗಳೂರಿನ ರಸ್ತೆಗಳ ಡಾಂಬರೀಕರಣ ಮಾಡಲು ಸಾಧ್ಯವಿಲ್ಲ
ಈಗ ಬೆಂಗಳೂರಿನ ರಸ್ತೆಗಳ ಡಾಂಬರೀಕರಣ ಮಾಡಲು ಸಾಧ್ಯವಿಲ್ಲ
ಸಿದ್ದರಾಮಯ್ಯ ಶಾಲು ಬಗ್ಗೆ ಸದನದಲ್ಲಿ ಸ್ವಾರಸ್ಯಕರ ಮಾತು
ಸಿದ್ದರಾಮಯ್ಯ ಶಾಲು ಬಗ್ಗೆ ಸದನದಲ್ಲಿ ಸ್ವಾರಸ್ಯಕರ ಮಾತು
ಯುಗಾದಿ ದಿನವೂ, ಶಿವರಾತ್ರಿ ದಿನವೂ ಮಾಂಸ ತಿಂತೀನಿ, ನನ್ನಿಷ್ಟ: ಸಿದ್ದರಾಮಯ್ಯ
ಯುಗಾದಿ ದಿನವೂ, ಶಿವರಾತ್ರಿ ದಿನವೂ ಮಾಂಸ ತಿಂತೀನಿ, ನನ್ನಿಷ್ಟ: ಸಿದ್ದರಾಮಯ್ಯ
ಬಳಕೆಯ LPG ಸಿಲಿಂಡರ್ ಕೂಡ ಸಿಗ್ತಿಲ್ಲ: ಏಜೆನ್ಸಿಗಳ ಮುಂದೆ ಉದ್ದದ ಕ್ಯೂ!
ಬಳಕೆಯ LPG ಸಿಲಿಂಡರ್ ಕೂಡ ಸಿಗ್ತಿಲ್ಲ: ಏಜೆನ್ಸಿಗಳ ಮುಂದೆ ಉದ್ದದ ಕ್ಯೂ!
ಸಿಎಂ, ಡಿಸಿಎಂ ಜೊತೆ ಸಚಿವರ ಜೊತೆ ಶಾಸಕರ ಫೋಟೋಶೂಟ್ ಹೇಗಿತ್ತು ನೋಡಿ!
ಸಿಎಂ, ಡಿಸಿಎಂ ಜೊತೆ ಸಚಿವರ ಜೊತೆ ಶಾಸಕರ ಫೋಟೋಶೂಟ್ ಹೇಗಿತ್ತು ನೋಡಿ!
ಬೆಂಗಳೂರಿಗರೇ ಪೆಟ್ರೋಲ್-ಡೀಸೆಲ್ ಸಮಸ್ಯೆ ಎದುರಿಸಲು ಸಿದ್ಧರಾಗಿ!
ಬೆಂಗಳೂರಿಗರೇ ಪೆಟ್ರೋಲ್-ಡೀಸೆಲ್ ಸಮಸ್ಯೆ ಎದುರಿಸಲು ಸಿದ್ಧರಾಗಿ!
ಕಾಂಗ್ರೆಸ್​ನಲ್ಲಿ ಮುಸ್ಲಿಮರಿಗೆ ಅನ್ಯಾಯ ಮಾಡವ್ರೆ: ಸಾದಿಕ್ ಪೈಲ್ವಾನ್ ಕಿಡಿ
ಕಾಂಗ್ರೆಸ್​ನಲ್ಲಿ ಮುಸ್ಲಿಮರಿಗೆ ಅನ್ಯಾಯ ಮಾಡವ್ರೆ: ಸಾದಿಕ್ ಪೈಲ್ವಾನ್ ಕಿಡಿ
ಗದಗ: ಬಿರುಗಾಳಿ ಮಳೆಯ ಅಬ್ಬರಕ್ಕೆ ಹಾರಿಹೋದ ಮನೆ ಮೇಲಿನ ಶೀಟ್, ಮೂವರಿಗೆ ಗಾಯ
ಗದಗ: ಬಿರುಗಾಳಿ ಮಳೆಯ ಅಬ್ಬರಕ್ಕೆ ಹಾರಿಹೋದ ಮನೆ ಮೇಲಿನ ಶೀಟ್, ಮೂವರಿಗೆ ಗಾಯ