ದೇಶೀಯ ಅಂಗಳದ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿ 2022ರ ಸೀಸನ್ ಅಂತಿಮ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಕ್ವಾರ್ಟರ್ ಫೈನಲ್ ಹಂತವು ಮುಗಿದಿದ್ದು, ಅದರಂತೆ ನಾಲ್ಕು ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಿದೆ. ಬೆಂಗಳೂರಿನ ಆಲೂರಿನ ಕೆಎಸ್ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಕ್ವಾರ್ಟರ್ ಫೈನಲ್ನಲ್ಲಿ ಬೆಂಗಾಲ್ ತಂಡವು ಜಾರ್ಖಂಡ್ ವಿರುದ್ದ ಡ್ರಾ ಸಾಧಿಸಿ ಸೆಮಿಫೈನಲ್ಗೆ ಎಂಟ್ರಿ ಕೊಟ್ಟಿದೆ. ಇನ್ನು 2ನೇ ಕ್ವಾರ್ಟರ್ ಫೈನಲ್ನಲ್ಲಿ ಉತ್ತರಾಖಂಡ್ ವಿರುದ್ದ ಮುಂಬೈ ತಂಡವು 725 ರನ್ಗಳ ದಾಖಲೆಯ ಜಯ ಸಾಧಿಸಿ ಸೆಮೀಸ್ಗೆ ಅರ್ಹತೆ ಪಡೆದುಕೊಂಡಿದೆ. ಹಾಗೆಯೇ ಮೂರನೇ ಸೆಮಿಫೈನಲ್ನಲ್ಲಿ ಕರ್ನಾಟಕ ತಂಡವನ್ನು 5 ವಿಕೆಟ್ಗಳಿಂದ ಮಣಿಸಿ ಉತ್ತರ ಪ್ರದೇಶ ತಂಡವು ನಿರ್ಣಾಯಕ ಹಂತಕ್ಕೇರಿದೆ. ನಾಲ್ಕನೇ ಸೆಮೀಸ್ನಲ್ಲಿ ಪಂಜಾಬ್ ವಿರುದ್ದ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿರುವ ಮಧ್ಯಪ್ರದೇಶ ತಂಡವು ಈ ಬಾರಿ ಸೆಮಿಫೈನಲ್ ಆಡಲಿದೆ.
ಸೆಮಿ ಫೈನಲ್ ಪಂದ್ಯವಾಳಿಯು ಜೂನ್ 14 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಬಲಿಷ್ಠ ಬೆಂಗಾಲ್ ಹಾಗೂ ಮಧ್ಯಪ್ರದೇಶ ತಂಡಗಳು ಮುಖಾಮುಖಿಯಾಗಲಿದೆ. ಇನ್ನು 2ನೇ ಸೆಮಿ ಫೈನಲ್ನಲ್ಲಿ ಮುಂಬೈ ತಂಡವು ಉತ್ತರ ಪ್ರದೇಶ ತಂಡವನ್ನು ಎದುರಿಸಲಿದೆ. ಈ ಎಲ್ಲಾ ಪಂದ್ಯಗಳು ಆಲೂರಿನ ಕ್ರಿಕೆಟ್ ಮೈದಾನದಲ್ಲೇ ನಡೆಯಲಿರುವುದು ವಿಶೇಷ.
ಆದರೆ ಈ ಬಾರಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದ ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ತಂಡವು ಕ್ವಾರ್ಟರ್ ಫೈನಲ್ನಲ್ಲಿ ಉತ್ತರ ಪ್ರದೇಶದ ವಿರುದ್ದ ಮುಗ್ಗರಿಸುವ ಮೂಲಕ ತವರಿನಲ್ಲಿ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕೈತಪ್ಪಿಸಿಕೊಂಡಿದೆ. ಏಕೆಂದರೆ ಈ ಬಾರಿಯ ಫೈನಲ್ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಹೀಗಾಗಿ ತವರಿನ ಪಿಚ್ನ ಸಂಪೂರ್ಣ ಲಾಭ ಪಡೆದುಕೊಳ್ಳುವ ಅವಕಾಶ ಕರ್ನಾಟಕ ತಂಡದ ಆಟಗಾರರಿಗಿತ್ತು. ಆದರೆ ಕ್ವಾರ್ಟರ್ ಫೈನಲ್ನಲ್ಲಿ ಬ್ಯಾಟ್ಸ್ಮನ್ಗಳ ಕಳಪೆ ಪ್ರದರ್ಶನದಿಂದಾಗಿ ಉತ್ತರ ಪ್ರದೇಶ ವಿರುದ್ದ 5 ವಿಕೆಟ್ಗಳ ಹೀನಾಯ ಸೋಲನುಭವಿಸಿತು.
ಸದ್ಯ ಸೆಮಿ ಫೈನಲ್ಗೇರಿರುವ ನಾಲ್ಕು ತಂಡಗಳು ಟೂರ್ನಿಯುದ್ದಕ್ಕೂ ಭರ್ಜರಿ ಪ್ರದರ್ಶನ ನೀಡುತ್ತಾ ಬಂದಿದ್ದು, ಹೀಗಾಗಿ ನಿರ್ಣಾಯಕ ಹಂತದ ಹೋರಾಟದಲ್ಲಿ ರೋಚಕತೆಯನ್ನು ನಿರೀಕ್ಷಿಸಬಹುದು.
ರಣಜಿ ಟ್ರೋಫಿ ಸೆಮಿ ಫೈನಲ್ ವೇಳಾಪಟ್ಟಿ:
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.