Ranji Trophy 2024: ಚಂಡೀಗಢ್ ವಿರುದ್ಧದ ಪಂದ್ಯ ಡ್ರಾ: ಮುಂದಿನ ಸುತ್ತಿಗೆ ಕರ್ನಾಟಕ

| Updated By: ಝಾಹಿರ್ ಯೂಸುಫ್

Updated on: Feb 20, 2024 | 8:00 AM

Ranji Trophy 2024: ರಣಜಿ ಟ್ರೋಫಿಯ ಗ್ರೂಪಿ-ಸಿ ನಲ್ಲಿ ನಡೆದ ಕರ್ನಾಟಕ ಮತ್ತು ಚಂಡೀಗಢ್ ನಡುವಣ ಪಂದ್ಯವು ಡ್ರಾನಲ್ಲಿ ಕೊನೆಗೊಂಡಿದೆ. ಈ ಡ್ರಾನ ಹೊರತಾಗಿಯೂ ಕರ್ನಾಟಕ ತಂಡ ಕ್ವಾರ್ಟರ್​ ಫೈನಲ್​ಗೆ ಪ್ರವೇಶಿಸಿದ್ದು, ಮುಂದಿನ ಪಂದ್ಯದಲ್ಲಿ ವಿದರ್ಭ ತಂಡವನ್ನು ಎದುರಿಸಲಿದೆ. ಈ ಪಂದ್ಯವು ನಾಗ್​ಪುರದ ವಿಸಿಎ ಮೈದಾನದಲ್ಲಿ ನಡೆಯಲಿದೆ.

Ranji Trophy 2024: ಚಂಡೀಗಢ್ ವಿರುದ್ಧದ ಪಂದ್ಯ ಡ್ರಾ: ಮುಂದಿನ ಸುತ್ತಿಗೆ ಕರ್ನಾಟಕ
Karnataka Team
Follow us on

ಹುಬ್ಬಳ್ಳಿಯ ಕೆಎಸ್​ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ಚಂಡೀಗಢ್-ಕರ್ನಾಟಕ ನಡುವಣ ರಣಜಿ ಪಂದ್ಯವು (Ranji Trophy 2024) ಡ್ರಾನಲ್ಲಿ ಅಂತ್ಯ ಕಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚಂಡೀಗಢ ತಂಡವು ಕರಣ್ ಕೈಲಾ (79) ಅವರ ಅರ್ಧಶತಕದ ನೆರವಿನಿಂದ ಮೊದಲ ಇನಿಂಗ್ಸ್​ನಲ್ಲಿ 267 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್​ ಆಡಿದ ಕರ್ನಾಟಕ ತಂಡದ ಪರ ಮಯಾಂಕ್ ಅಗರ್ವಾಲ್ (57), ಹಾರ್ದಿಕ್ ರಾಜ್ (82) ಅರ್ಧಶತಕ ಬಾರಿಸಿದರೆ, ಮನೀಶ್ ಪಾಂಡೆ (148), ಶ್ರೀನಿವಾಸ್ ಶರತ್ (100) ಹಾಗೂ ವಿಜಯಕುಮಾರ್ ವೈಶಾಕ್ (103) ಭರ್ಜರಿ ಶತಕ ಸಿಡಿಸಿದರು. ಈ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡವು ಮೊದಲ ಇನಿಂಗ್ಸ್​ನಲ್ಲಿ 5 ವಿಕೆಟ್ ನಷ್ಟಕ್ಕೆ 563 ರನ್​ ಕಲೆಹಾಕಿ ಡಿಕ್ಲೇರ್ ಘೋಷಿಸಿತು.

ದ್ವಿತೀಯ ಇನಿಂಗ್ಸ್​ ಆರಂಭಿಸಿದ ಚಂಡೀಗಢ್ ತಂಡದ ಪರ ಅರ್ಸ್ಲಾನ್ ಖಾನ್ (63) ಅರ್ಧಶತಕ ಬಾರಿಸಿದರೆ, ಮಯಾಂಕ್ ಸಿಧು (56) ಹಾಗೂ ಕರಣ್ ಕೈಲಾ (25) ಕ್ರೀಸ್ ಕಚ್ಚಿ ನಿಂತರು. ಪರಿಣಾಮ ಕರ್ನಾಟಕ ತಂಡವು 236 ರನ್​ಗಳಿಗೆ 5 ವಿಕೆಟ್ ಕಬಳಿಸಿದರೂ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಈ ಪಂದ್ಯವು ಡ್ರಾನಲ್ಲಿ ಅಂತ್ಯ ಕಂಡಿತು.

ಕರ್ನಾಟಕ ಪ್ಲೇಯಿಂಗ್ ಇಲೆವೆನ್: ರವಿಕುಮಾರ್ ಸಮರ್ಥ್ , ಮಯಾಂಕ್ ಅಗರ್ವಾಲ್ (ನಾಯಕ) , ನಿಕಿನ್ ಜೋಸ್ , ಮನೀಶ್ ಪಾಂಡೆ , ಹಾರ್ದಿಕ್ ರಾಜ್ , ಶ್ರೀನಿವಾಸ್ ಶರತ್ (ವಿಕೆಟ್ ಕೀಪರ್) , ಅನೀಶ್ ಕೆ ವಿ , ಮುರಳೀಧರ ವೆಂಕಟೇಶ್ , ವಿಜಯ್ ಕುಮಾರ್ ವೈಶಾಕ್ , ಶಶಿ ಕುಮಾರ್ ಕೆ , ವಾಸುಕಿ ಕೌಶಿಕ್.

ಇದನ್ನೂ ಓದಿ: Yashasvi Jaiswal: ಸಿಕ್ಸ್ ಸಿಡಿಸಿಯೇ ವಿಶ್ವ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

ಚಂಡೀಗಢ್ ಪ್ಲೇಯಿಂಗ್ ಇಲೆವೆನ್: ಮನನ್ ವೋಹ್ರಾ (ನಾಯಕ) , ಶಿವಂ ಭಾಂಬ್ರಿ , ಅರ್ಸ್ಲಾನ್ ಖಾನ್ , ಕುನಾಲ್ ಮಹಾಜನ್ , ಅಂಕಿತ್ ಕೌಶಿಕ್ , ಮಯಾಂಕ್ ಸಿಧು (ವಿಕೆಟ್ ಕೀಪರ್) , ಗುರಿಂದರ್ ಸಿಂಗ್ , ರೋಹಿತ್ ಧಂಡಾ , ಕರಣ್ ಕೈಲಾ , ಜಗಜಿತ್ ಸಿಂಗ್ , ಹರ್ತೇಜಸ್ವಿ ಕಪೂರ್.

ಕ್ವಾರ್ಟರ್​ ಫೈನಲ್​ಗೆ ಕರ್ನಾಟಕ:

ಈ ಡ್ರಾ ಹೊರತಾಗಿಯೂ ಕರ್ನಾಟಕ ತಂಡವು ರಣಜಿ ಟ್ರೋಫಿ 2024 ರಲ್ಲಿ ಕ್ವಾರ್ಟರ್​ ಫೈನಲ್​ಗೆ ಪ್ರವೇಶಿಸಿದೆ. ಆಡಿರುವ 7 ಪಂದ್ಯಗಳಲ್ಲಿ 3 ಜಯ, 3 ಡ್ರಾ ಹಾಗೂ 1 ಸೋಲಿನೊಂದಿಗೆ ಕರ್ನಾಟಕ ತಂಡವು ಗ್ರೂಪ್-ಸಿ ಪಾಯಿಂಟ್ಸ್​ ಟೇಬಲ್​ನಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದು, ಈ ಮೂಲಕ ಮುಂದಿನ ಹಂತಕ್ಕೇರಿದೆ. ಕ್ವಾರ್ಟರ್​ ಫೈನಲ್​ನಲ್ಲಿ ಕರ್ನಾಟಕ ತಂಡ ವಿದರ್ಭ ತಂಡವನ್ನು ಎದುರಿಸಲಿದೆ.