AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranji Trophy 2025: ಸೆಮಿಫೈನಲ್​ಗೇರಿದ ಮೂರು ತಂಡಗಳು

RANJI TROPHY 2025: ರಣಜಿ ಟ್ರೋಫಿ 2025ರ ಪಂದ್ಯಗಳು ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಸೆಮಿ ಫೈನಲ್ ಸುತ್ತಿಗೆ ಒಟ್ಟು 3 ತಂಡಗಳು ಅರ್ಹತೆ ಪಡೆದುಕೊಂಡಿದೆ. ಈ ತಂಡಗಳು ಫೆಬ್ರವರಿ 17 ರಿಂದ ಶುರುವಾಗಲಿರುವ ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗಲಿದೆ. ಅಲ್ಲದೆ ಸೆಮಿಫೈನಲ್​ನಲ್ಲಿ ಗೆಲ್ಲುವ 2 ತಂಡಗಳು ಫೆಬ್ರವರಿ 26 ರಂದು ಜರುಗಲಿರುವ ಅಂತಿಮ ಹಣಾಹಣಿಯಲ್ಲಿ ಮುಖಾಮುಖಿಯಾಗಲಿದೆ.

Ranji Trophy 2025: ಸೆಮಿಫೈನಲ್​ಗೇರಿದ ಮೂರು ತಂಡಗಳು
Ranji Trophy 2025
ಝಾಹಿರ್ ಯೂಸುಫ್
|

Updated on: Feb 12, 2025 | 7:12 AM

Share

ರಣಜಿ ಟೂರ್ನಿಯು ಮುಕ್ತಾಯದ ಹಂತಕ್ಕೆ ತಲುಪಿದೆ. ನಾಕೌಟ್ ಸುತ್ತಿನಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಮೂರು ತಂಡಗಳು ಜಯ ಸಾಧಿಸಿ ಸೆಮಿಫೈನಲ್​ಗೆ ಪ್ರವೇಶಿಸಿದೆ. ಎರಡನೇ ಕ್ವಾರ್ಟರ್ ಫೈನಲ್​ನಲ್ಲಿ ತಮಿಳುನಾಡು ತಂಡವನ್ನು ಮಣಿಸಿ ವಿದರ್ಭ ತಂಡದ ಸೆಮಿಫೈನಲ್​ ಹಂತಕ್ಕೇರಿದರೆ, ಮೂರನೇ ಕ್ವಾರ್ಟರ್ ಫೈನಲ್​ನಲ್ಲಿ ಹರ್ಯಾಣ ವಿರುದ್ಧ ಮುಂಬೈ ಜಯ ಸಾಧಿಸಿದೆ. ಇನ್ನು ಕ್ವಾರ್ಟರ್ ಫೈನಲ್​ನಲ್ಲಿ ಸೌರಾಷ್ಟ್ರ ವಿರುದ್ಧ ಗುಜರಾತ್ ತಂಡವು ಜಯಭೇರಿ ಬಾರಿಸಿದೆ.

ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಗ್ರೌಂಡ್​ನಲ್ಲಿ ನಡೆದ ಎರಡನೇ ಕ್ವಾರ್ಟರ್ ಫೈನಲ್​ನಲ್ಲಿ ತಮಿಳುನಾಡು ತಂಡವನ್ನು 198 ರನ್​ಗಳಿಂದ ಮಣಿಸಿ ವಿದರ್ಭ ಮುಂದಿನ ಹಂತಕ್ಕೇರಿದೆ. ಈ ಪಂದ್ಯದಲ್ಲಿ 122 ರನ್​ಗಳ ಭರ್ಜರಿ ಶತಕ ಸಿಡಿಸಿದ ವಿದರ್ಭ ತಂಡದ ನಾಯಕ ಕರುಣ್ ನಾಯರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಮೂರನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹರ್ಯಾಣ ತಂಡವನ್ನು ಮುಂಬೈ 152 ರನ್​ಗಳಿಂದ ಮಣಿಸಿದೆ. ಈ ಮ್ಯಾಚ್​ನಲ್ಲಿ ಒಟ್ಟು 9 ವಿಕೆಟ್​ ಕಬಳಿಸಿ ಮಿಂಚಿದ್ದ ಶಾರ್ದೂಲ್ ಠಾಕೂರ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ರಾಜ್​ಕೋಟ್​ನ ನಿರಂಜನ್ ಶಾ ಮೈದಾನದಲ್ಲಿ ಜರುಗಿದ ನಾಲ್ಕನೇ ಕ್ವಾರ್ಟರ್ ಫೈನಲ್​ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಗುಜರಾತ್ ಇನಿಂಗ್ಸ್​ ಹಾಗೂ 98 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮ್ಯಾಚ್​ನಲ್ಲಿ ಶತಕ ಸಿಡಿಸಿದ ಜಯಮೀತ್ ಪಟೇಲ್ (103) ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಇತಿಹಾಸ ನಿರ್ಮಿಸಿದ ಜೇಕಬ್ ಬೆಥೆಲ್

ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಕೇರಳ ಮತ್ತು ಜಮ್ಮು ಕಾಶ್ಮೀರ ನಡುವೆ ಮೊದಲ ಕ್ವಾರ್ಟರ್ ಫೈನಲ್ ಪಂದ್ಯ ಮುಂದುವರೆದಿದ್ದು, ಈ ಪಂದ್ಯದಲ್ಲಿ ಜಯ ಸಾಧಿಸಲು ಕೇರಳ ತಂಡಕ್ಕೆ ಇನ್ನೂ 299 ರನ್​ಗಳ ಅವಶ್ಯಕತೆಯಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ನಾಲ್ಕನೇ ತಂಡವಾಗಿ ಸೆಮಿಫೈನಲ್​ಗೆ ಎಂಟ್ರಿ ಕೊಡಲಿದೆ.

ರಣಜಿ ಟೂರ್ನಿ ಸೆಮಿಫೈನಲ್ ವೇಳಾಪಟ್ಟಿ:

  • ಫೆಬ್ರವರಿ 17: ಗುಜರಾತ್ vs TBC
  • ಫೆಬ್ರವರಿ 17: ವಿದರ್ಭ vs ಮುಂಬೈ
  • ಫೆಬ್ರವರಿ 26: ಫೈನಲ್ ಪಂದ್ಯ