ಟಿ20 ವಿಶ್ವಕಪ್ನ (T20 World Cup) ಆರಂಭದ ಎರಡು ಪಂದ್ಯಗಳಲ್ಲಿ ಅನುಭವಿಸಿದ ಸೋಲಿಗೆ ಭಾರತ (India) ಈಗಲೂ ಪಶ್ಚಾತಾಪ ಪಡುತ್ತಿದೆ. ಅಫ್ಘಾನಿಸ್ತಾನ ಮತ್ತು ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ರನ್ರೇಟ್ನೊಂದಿಗೆ ಗೆದ್ದಿದ್ದು ಈ ಮೂಲಕ ಟೀಮ್ ಇಂಡಿಯಾ (Team India) ಸೆಮಿ ಫೈನಲ್ಗೇರಲು ಎಲ್ಲಿಲ್ಲದ ಸಾಹಸ ನಡೆಸುತ್ತಿದೆ. ಆದರೂ ವಿರಾಟ್ ಕೊಹ್ಲಿ (Virat Kohli) ಪಡೆಯ ಸ್ಥಿತಿ ತೂಗುಯ್ಯಾಲೆಯಲ್ಲಿದೆ. ಭಾರತದ ಮುಂದಿನ ಹಾದಿ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ (New Zealand vs Afghanistan) ಪಂದ್ಯದ ಮೇಲೆ ನಿಂತಿದೆ. ಈ ಮ್ಯಾಚ್ನಲ್ಲಿ ಅಫ್ಘಾನ್ ಕೇನ್ ವಿಲಿಯಮ್ಸನ್ (Kane Williamson) ಪಡೆಯನ್ನು ಸೋಲಿಸಿದರೆ ಮಾತ್ರ ಟೀಮ್ ಇಂಡಿಯಾಕ್ಕೆ ಸೆಮೀಸ್ ಬಾಗಿಲು ತೆರೆಯಲಿದೆ. ನ್ಯೂಜಿಲೆಂಡ್ ಗೆದ್ದರೆ ಭಾರತ ಟೂರ್ನಿಯಿಂದ ಔಟ್. ಇದಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು ಪತ್ರಕರ್ತರೊಬ್ಬರು ರವೀಂದ್ರ ಜಡೇಜಾ (Ravindra Jadeja) ಬಳಿಕ ಕೇಳಿದಾಗ ಅವರು ಕೊಟ್ಟ ಉತ್ತರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಸ್ಕಾಟ್ಲೆಂಡ್ ವಿರುದ್ಧದ ಪಂದ್ಯ ಕೂಡ ಭಾರತಕ್ಕೆ ಮಹತ್ವದ್ದಾಗಿತ್ತು. ಅದೃಷ್ಟ ಎಂಬಂತೆ ವಿರಾಟ್ ಕೊಹ್ಲಿ ಟಾಸ್ ಗೆದ್ದರು, ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೂವರು ಸ್ಪಿನ್ನರ್ಗಳನ್ನು ಕಣಕ್ಕಿಳಿಸಿ ಎದುರಾಳಿಯನ್ನು ಆದಷ್ಟು ಬೇಗ ಆಲೌಟ್ ಮಾಡುವ ಪ್ಲಾನ್ ಭಾರತದ್ದಾಗಿತ್ತು. ಅದರಲ್ಲೂ ಯಶಸ್ಸು ಸಾಧಿಸಿದರು. ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಸ್ಕಾಟ್ಲೆಂಡ್ 85 ರನ್ಗೆ ಸರ್ವಪತನ ಕಂಡಿತು. ಜಡೇಜಾ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಶ್ರೇಷ್ಠ ಪ್ರದರ್ಶನ ನೀಡಿದರು.
ಆದರೆ, ಸವಾಲು ಇದ್ದಿದ್ದು ಬ್ಯಾಟಿಂಗ್ನಲ್ಲಿ. ಅಫ್ಘಾನಿಸ್ತಾನ ತಂಡವನ್ನು ಹಿಂದಿಕ್ಕಿ ರನ್ರೇಟ್ನಲ್ಲಿ ಮೇಲುಗೈ ಸಾಧಿಸಲು ಭಾರತ 86 ರನ್ಗಳ ಟಾರ್ಗೆಟ್ ಅನ್ನು ಕೇವಲ 7.1 ಓವರ್ನಲ್ಲಿ ಮುಗಿಸಬೇಕಿತ್ತು. ಈ ಸವಾಲನ್ನು ಸ್ವೀಕರಿಸಿದವರು ಕೆ. ಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ. ಕೇವಲ 5 ಓವರ್ನಲ್ಲಿ ಇವರಿಬ್ಬರು 70 ರನ್ ಸೇರಿಸಿದರು. ರಾಹುಲ್ 19 ಬಾಲ್ನಲ್ಲಿ ದಾಖಲೆಯ 50 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಭಾರತ ತನ್ನ ಕಡೆಯಿಂದ ಶೇ. 100 ರಷ್ಟು ಪ್ರಯತ್ನಿಸಿ ಯಶಸ್ಸು ಸಾಧಿಸಿದೆ. ಆದರೂ ಭಾರತ ಸೆಮೀಸ್ ತಲುಪಲು ನ್ಯೂಜಿಲೆಂಡ್ ವಿರುದ್ಧ ಅಫ್ಘಾನಿಸ್ತಾನ ಗೆಲ್ಲಲೇ ಬೇಕಿದೆ. ಸ್ಕಾಟ್ಲೆಂಡ್ ವಿರುದ್ಧದ ಪಂದ್ಯ ಗೆದ್ದ ಬಳಿಕ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ರವೀಂದ್ರ ಜಡೇಜಾ ಈ ಕುರಿತ ಪ್ರಶ್ನೆಗೆ ಸಖತ್ ಆಗಿ ಉತ್ತರಿಸಿದ್ದಾರೆ.
Agar New Zealand na Afghanistan ko Hara Dia to phr ..
Ravindra Jadeja: “To phir kia, bag pack kar Kay ghar jaye gai.” ??? #T20WorldCup21 pic.twitter.com/NmOjam8dEE— Abu Bakar Butt (@Abubakarrafibut) November 5, 2021
ಜಡೇಜಾ ಬಳಿಕ ಪತ್ರಕತ್ರರೊಬ್ಬರು, ‘ಭಾನುವಾರದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಅಫ್ಘಾನಿಸ್ತಾನ ಗೆಲುವು ಸಾಧಿಸಲು ಸಾಧ್ಯವಾಗದೆ ಹೋದರೆ ಭಾರತ ತಂಡ ಏನು ಮಾಡುತ್ತದೆ?’ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಜಡೇಜಾ, ‘ನಾವು ನಮ್ಮ ಲಗೇಜ್ ಅನ್ನು ಪ್ಯಾಕ್ ಮಾಡುತ್ತೇವೆ ಮತ್ತು ತವರಿಗೆ ಹಿಂದಿರುಗುತ್ತೇ’ ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ. ಸದ್ಯ ಈ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದೆ.
(Ravindra Jadeja came up with a blunt answer In Press Conference afetr india vs scotland Match)