IND vs ENG 1st Test: ಜಡೇಜಾ ಮಾಡಿದ ಈ ಒಂದು ತಪ್ಪು ಟೀಮ್ ಇಂಡಿಯಾ ಸೋಲಿಗೆ ಕಾರಣವಾಗುತ್ತ?
Ravindra Jadeja Catch drop: ಜಸ್ಪ್ರೀತ್ ಬುಮ್ರಾ ಎಸೆದ ಇನ್ನಿಂಗ್ಸ್‌ನ 7 ನೇ ಓವರ್‌ನ ಕೊನೆಯ ಎಸೆತದಲ್ಲಿ ಇಂಗ್ಲೆಂಡ್‌ನ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಬೆನ್ ಡಕೆಟ್ ಬ್ಯಾಕ್‌ವರ್ಡ್ ಪಾಯಿಂಟ್ ಕಡೆಗೆ ಶಾಟ್ ಆಡಲು ಪ್ರಯತ್ನಿಸಿದರು. ಡಕೆಟ್‌ಗೆ ಈ ಚೆಂಡನ್ನು ಕೆಳಮುಖವಾಗಿ ಆಡಲು ಸಾಧ್ಯವಾಗಲಿಲ್ಲ, ಹೀಗಾಗಿ ಚೆಂಡು ಹೆಚ್ಚಿನ ವೇಗದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರವೀಂದ್ರ ಜಡೇಜಾ ಅವರತ್ತ ಹೋಯಿತು.

ಬೆಂಗಳೂರು (ಜೂ. 22): ಲೀಡ್ಸ್ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಸರಣಿಯ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಂದು, ಟೀಮ್ ಇಂಡಿಯಾದ (Team India) ಮೊದಲ ಇನ್ನಿಂಗ್ಸ್ 471 ರನ್‌ಗಳಿಗೆ ಸೀಮಿತವಾಗಿತ್ತು. ಬಳಿಕ ಬ್ಯಾಟಿಂಗ್ಗೆ ಬಂದ ಇಂಗ್ಲೆಂಡ್ ತಂಡದ ಇನ್ನಿಂಗ್ಸ್ ಉತ್ತಮವಾಗಿ ಆರಂಭವಾಗಲಿಲ್ಲ, ಜ್ಯಾಕ್ ಕ್ರೌಲಿ 4 ರನ್ ಗಳಿಸಿದ್ದಾಗ ಆಂಗ್ಲರ ಮೊದಲ ವಿಕೆಟ್ ಪತನಗೊಂಡಿತು, ಅವರನ್ನು ಜಸ್ಪ್ರೀತ್ ಬುಮ್ರಾ ಪೆವಿಲಿಯನ್‌ಗೆ ಕಳುಹಿಸಿದರು. ಇದರ ನಂತರ, 7 ನೇ ಓವರ್‌ನ ಕೊನೆಯ ಎಸೆತದಲ್ಲಿ ಟೀಮ್ ಇಂಡಿಯಾ ಎರಡನೇ ವಿಕೆಟ್ ಪಡೆಯುವ ಸುಲಭ ಅವಕಾಶವಿತ್ತು. ಆದರೆ ರವೀಂದ್ರ ಜಡೇಜಾ ಅವರು ಜಸ್ಪ್ರೀತ್ ಬುಮ್ರಾ ಅವರ ಎಸೆತದಲ್ಲಿ ಬೆನ್ ಡಕೆಟ್ ಅವರ ಸುಲಭ ಕ್ಯಾಚ್ ಅನ್ನು ಕೈಬಿಟ್ಟರು.
ದುಬಾರಿ ಆಗುತ್ತ ಜಡೇಜಾ ಬಿಟ್ಟ ಕ್ಯಾಚ್
ಜಸ್ಪ್ರೀತ್ ಬುಮ್ರಾ ಎಸೆದ ಇನ್ನಿಂಗ್ಸ್‌ನ 7 ನೇ ಓವರ್‌ನ ಕೊನೆಯ ಎಸೆತದಲ್ಲಿ ಇಂಗ್ಲೆಂಡ್‌ನ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಬೆನ್ ಡಕೆಟ್ ಬ್ಯಾಕ್‌ವರ್ಡ್ ಪಾಯಿಂಟ್ ಕಡೆಗೆ ಶಾಟ್ ಆಡಲು ಪ್ರಯತ್ನಿಸಿದರು. ಡಕೆಟ್‌ಗೆ ಈ ಚೆಂಡನ್ನು ಕೆಳಮುಖವಾಗಿ ಆಡಲು ಸಾಧ್ಯವಾಗಲಿಲ್ಲ, ಹೀಗಾಗಿ ಚೆಂಡು ಹೆಚ್ಚಿನ ವೇಗದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರವೀಂದ್ರ ಜಡೇಜಾ ಅವರತ್ತ ಹೋಯಿತು. ಜಡೇಜಾ ಕ್ಯಾಚ್ ಹಿಡಿಯಲು ಬಲಕ್ಕೆ ಡೈವ್ ಮಾಡಿದರೂ ಅದನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಡಕೆಟ್ ಈ ಕ್ಯಾಚ್ ತಪ್ಪಿಸಿಕೊಂಡಾಗ, ಅವರು 15 ರನ್ ಗಳಿಸಿದ್ದರು. ಈ ಕ್ಯಾಚ್ ಬಿಟ್ಟ ನಂತರ ಜಡೇಜಾ ತುಂಬಾ ಶಾಕ್ಗೆ ಒಳಗಾದರು. ಏಕೆಂದರೆ ಅವರು ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಎರಡನೇ ದಿನದ ಎರಡನೇ ಅವಧಿ ಮುಗಿಯುವ ಹೊತ್ತಿಗೆ ಬೆನ್ ಡಕೆಟ್ 53 ರನ್ ಗಳಿಸಿದ್ದರು.
#RavindraJadeja #INDvsENGTest pic.twitter.com/3aMFqrTper
— ABHISHEK PANDEY (@anupandey29) June 21, 2025
ರವೀಂದ್ರ ಜಡೇಜಾ ಬ್ಯಾಟಿಂಗ್‌ನಲ್ಲೂ ಫೇಲ್ ಆದರು
ಲೀಡ್ಸ್‌ನಲ್ಲಿ ನಡೆದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ಮೂರು ಶತಕಗಳನ್ನು ಗಳಿಸಿದ್ದರೂ, ರವೀಂದ್ರ ಜಡೇಜಾ ಬ್ಯಾಟಿಂಗ್‌ನಲ್ಲಿ ವಿಶೇಷವಾದದ್ದೇನೂ ಮಾಡಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್ ವೇಗಿ ಜೋಶ್ ಟಾಂಗ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗಿ ಪೆವಿಲಿಯನ್‌ಗೆ ಮರಳಿದ ಜಡೇಜಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 11 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು. ಈ ಪ್ರವಾಸದಲ್ಲಿ ಜಡೇಜಾ ಅವರ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅವರ ಪ್ರದರ್ಶನ ಭಾರತೀಯ ತಂಡಕ್ಕೆ ಬಹಳ ಮುಖ್ಯವಾಗಲಿದೆ. ಆದರೆ ಜಡ್ಡು ಆರಂಭವು ನಿರೀಕ್ಷಿತ ಮಟ್ಟದಲ್ಲಿಲ್ಲ.
Jasprit Bumrah: ಜಸ್ಪ್ರಿತ್ ಬುಮ್ರಾ ಇಲ್ಲದೆ ಟೀಮ್ ಇಂಡಿಯಾ ಏನಾಗಬಹುದು?: ಇಲ್ಲಿದೆ ಅಂಕಿಅಂಶ
ಟೀಮ್ ಇಂಡಿಯಾ ಹೆಸರಿಗೆ ಕೆಟ್ಟ ದಾಖಲೆ ಸೇರ್ಪಡೆ:
ಈ ಪಂದ್ಯದಲ್ಲಿ, ಟೀಮ್ ಇಂಡಿಯಾದ ಸ್ಕೋರ್ ಒಂದು ಹಂತದಲ್ಲಿ 3 ವಿಕೆಟ್ ನಷ್ಟಕ್ಕೆ 430 ರನ್ ಆಗಿತ್ತು. ಇಲ್ಲಿಂದ ಭಾರತ ಸುಲಭವಾಗಿ 500 ರನ್‌ಗಳ ಗಡಿ ದಾಟುತ್ತದೆ ಎಂದೇ ನಂಬಲಾಗಿತ್ತು. ಆದರೆ ಪಂತ್ ಔಟಾದ ನಂತರ, ಭಾರತದ ಇನ್ನಿಂಗ್ಸ್ ಕುಸಿಯಿತು. ಒಬ್ಬರ ಹಿಂದೆ ಒಬ್ಬರಂತೆ ಬ್ಯಾಟರ್ಗಳು ಪೆವಿಲಿಯನ್ ಸೇರಿಕೊಂಡರು. ಇಡೀ ತಂಡವು 471 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ, ಭಾರತದ ಹೆಸರಿನಲ್ಲಿ ಅನಗತ್ಯ ದಾಖಲೆ ನಿರ್ಮಾಣವಾಗಿದೆ. ವಾಸ್ತವವಾಗಿ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಮೂರು ಶತಕಗಳು ಗಳಿಸಿದ ನಂತರ ದಾಖಲಾದ ಅತ್ಯಂತ ಕಡಿಮೆ ಸ್ಕೋರ್ ಇದಾಗಿದೆ. ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾದ ಹೆಸರಿನಲ್ಲಿ ಕಡಿಮೆ ಸ್ಕೋರ್ ದಾಖಲಾಗಿತ್ತು.
ಈ ಹಿಂದೆ 2016 ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 475 ರನ್‌ಗಳಿಗೆ ಆಲೌಟ್ ಆಗಿತ್ತು. ಆ ಪಂದ್ಯದಲ್ಲಿ, ಆಫ್ರಿಕನ್ ತಂಡದಿಂದ ಸ್ಟೀಫನ್ ಕಾಕ್, ಹಾಶಿಮ್ ಆಮ್ಲಾ ಮತ್ತು ಕ್ವಿಂಟನ್ ಡಿ ಕಾಕ್ ಶತಕಗಳನ್ನು ಗಳಿಸಿದ್ದರು. ಸದ್ಯ ಲೀಡ್ಸ್‌ನಲ್ಲಿ ನಡೆಯುತ್ತಿರುವ ಈ ಟೆಸ್ಟ್ ಪಂದ್ಯದಲ್ಲಿ, ಭಾರತವು 41 ರನ್‌ಗಳಿಗೆ ಕೊನೆಯ ಏಳು ವಿಕೆಟ್‌ಗಳನ್ನು ಕಳೆದುಕೊಂಡಿತು ಮತ್ತು ಇಡೀ ತಂಡವು 471 ರನ್‌ಗಳಿಗೆ ಆಲೌಟ್ ಆಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




