Ravindra Jadeja Injury: ಸೋಲಿನ ಬೆನ್ನಲ್ಲೇ ಭಾರತಕ್ಕೆ ಕೆಟ್ಟ ಸುದ್ದಿ: ರೋಹಿತ್ ಪಡೆಗೆ ಮತ್ತೊಂದು ಶಾಕ್
India vs England Test: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಸೋಲಿನ ನಡುವೆ ಟೀಮ್ ಇಂಡಿಯಾ ಮತ್ತೊಂದು ಹಿನ್ನಡೆ ಅನುಭವಿಸಿದೆ. ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಇಂಜುರಿಗೆ ತುತ್ತಾಗಿದ್ದು, ಇಂಡೋ-ಇಂಗ್ಲೆಂಡ್ ಎರಡನೇ ಟೆಸ್ಟ್ನಲ್ಲಿ ಆಡುವುದು ಅನುಮಾನವಾಗಿದೆ.
ಹೈದರಾಬಾದ್ನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ (India vs England) ಸೋಲು ಕಾಣುತ್ತೆ ಎಂದು ಯಾರುಕೂಡ ಊಹಿಸಿರಲಿಲ್ಲ. ಸುಲಭ ಟಾರ್ಗೆಟ್ ಅನ್ನು ಕೂಡ ಬೆನ್ನಟ್ಟಲು ಸಾಧ್ಯವಾಗದೆ ಟೀಮ್ ಇಂಡಿಯಾ 28 ರನ್‌ಗಳಿಂದ ಸೋಲು ಕಂಡಿದೆ. ಇದರೊಂದಿಗೆ ಸರಣಿಯಲ್ಲಿ 0-1 ರಿಂದ ಹಿನ್ನಡೆಯಾಯಿತು. ಈ ಸೋಲಿನ ನಡುವೆ ಟೀಮ್ ಇಂಡಿಯಾ ಮತ್ತೊಂದು ಹಿನ್ನಡೆ ಅನುಭವಿಸಿದೆ. ಇದರ ಪರಿಣಾಮ ಮುಂದಿನ ಟೆಸ್ಟ್ನಲ್ಲಿ ಎದ್ದು ಕಾಣುವುದು ಖಚಿತ. ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಇಂಜುರಿಗೆ ತುತ್ತಾಗಿದ್ದು, ಮುಂದಿನ ಟೆಸ್ಟ್ನಲ್ಲಿ ಆಡುವುದು ಅನುಮಾನವಾಗಿದೆ.
ಮೊದಲ ಟೆಸ್ಟ್ನಲ್ಲಿ ಭಾರತ ತಂಡಕ್ಕೆ ಗೆಲ್ಲಲು 231 ರನ್‌ಗಳ ಅಗತ್ಯವಿತ್ತು. ಆದರೆ ಪಂದ್ಯದ ನಾಲ್ಕನೇ ದಿನದಂದು ಎರಡು ಸೆಷನ್‌ಗಳಲ್ಲಿ ಭಾರತದ ಎಲ್ಲಾ 10 ವಿಕೆಟ್‌ಗಳು ಪತನಗೊಂಡವು. ಕೇವಲ 202 ರನ್ ಗಳಿಸಲು ಸಾಧ್ಯವಾಯಿತು. ಟೀಮ್ ಇಂಡಿಯಾದ ಬ್ಯಾಟರ್ಗಳು ವಿಕೆಟ್ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ಟೆನ್ಷನ್ ಹೆಚ್ಚಿಸಿದ್ದು ಜಡೇಜಾ ಇಂಜುರಿ.
CCL 2024: ಸಿಸಿಎಲ್ನಲ್ಲಿ ಅಬ್ಬರಿಸಲು ಸಜ್ಜಾದ ಪಂಜಾಬ್ ದಿ ಶೇರ್; ಮೊದಲ ಪಂದ್ಯ ಯಾವಾಗ ಗೊತ್ತಾ?
ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ಜಡೇಜಾ ಗಾಯಗೊಂಡರು. ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ, ಜಡೇಜಾ ವೇಗವಾಗಿ ರನ್ ಗಳಿಸಲು ಪ್ರಯತ್ನಿಸಿದರು. ಆದರೆ ಅದು ಯಶಸ್ವಿಯಾಗಲಿಲ್ಲ ಮತ್ತು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್, ಅತ್ಯುತ್ತಮ ಫೀಲ್ಡಿಂಗ್ನಿಂದಾಗಿ ರನೌಟ್ ಆದರು. ಜಡೇಜಾ ರನೌಟ್ ಟೀಮ್ ಇಂಡಿಯಾಕ್ಕೆ ದೊಡ್ಡ ಹೊಡೆತವಾಯಿತು. ಏಕೆಂದರೆ ಇಲ್ಲಿಂದ ಮುಂದೆ ಗೆಲ್ಲುವ ಸಾಧ್ಯತೆಗಳು ಕಡಿಮೆಯಾಗುತ್ತಾ ಬಂದವು ಮತ್ತು ಅಂತಿಮವಾಗಿ ಸೋಲನ್ನು ಎದುರಿಸಬೇಕಾಯಿತು.
ಜಡೇಜಾ ಔಟಾಗಿ ಪೆವಿಲಿಯನ್ನತ್ತ ಸಾಗುತ್ತಿರುವಾಗ ಕಾಲು ನೋವಿರುವುದು ಕಂಡುಬಂದಿದೆ. ಜಡೇಜಾ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಪಂದ್ಯದ ನಂತರ ಕೋಚ್ ರಾಹುಲ್ ದ್ರಾವಿಡ್ ಕೂಡ ಈ ವಿಚಾರದಲ್ಲಿ ಸ್ಪಷ್ಟ ಉತ್ತರ ನೀಡಲಿಲ್ಲ. ಪಿಟಿಐ ವರದಿಯ ಪ್ರಕಾರ, ದ್ರಾವಿಡ್ ಈ ಬಗ್ಗೆ ತಂಡದ ಫಿಸಿಯೋ ಜೊತೆ ಇನ್ನೂ ಮಾತನಾಡಿಲ್ಲ ಮತ್ತು ಇದು ಎಷ್ಟು ಗಂಭೀರವಾಗಿದೆ ಎಂದು ಏನನ್ನೂ ಹೇಳಲಾಗುವುದಿಲ್ಲ ಎಂದು ಹೇಳಿದರು.
ವರದಿಯ ಪ್ರಕಾರ, ಮಂಡಿರಜ್ಜು ಗಾಯವು ಎಷ್ಟು ಗಂಭೀರವಾಗಿದೆ ಎಂಬುದರ ಮೇಲೆ ಜಡೇಜಾ ಯಾವಾಗ ಮತ್ತು ಎಷ್ಟು ಸರಣಿಯಲ್ಲಿ ಆಡಲು ಸಾಧ್ಯವಾಗುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಗಾಯವು ಚಿಕ್ಕದಾಗಿದೆ ಎಂದು ಸಾಬೀತಾದರೂ, ಸಂಪೂರ್ಣವಾಗಿ ಗುಣಮುಖರಾಗಲು ಸಾಮಾನ್ಯವಾಗಿ ಒಂದು ವಾರದ ವಿಶ್ರಾಂತಿ ನೀಡಲಾಗುತ್ತದೆ. ಮುಂದಿನ ಪಂದ್ಯ ಫೆಬ್ರವರಿ 2 ರಿಂದ ವಿಶಾಖಪಟ್ಟಣಂನಲ್ಲಿ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಜಡೇಜಾ ಎರಡನೇ ಟೆಸ್ಟ್ನಿಂದ ಹೊರಗುಳಿಯಬಹುದು. ಜಡ್ಡು ಮೊದಲ ಇನ್ನಿಂಗ್ಸ್‌ನಲ್ಲಿ 87 ರನ್ ಗಳಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 2 ರನ್ ಗಳಿಸಿದರು. ಅಲ್ಲದೆ ಎರಡೂ ಇನ್ನಿಂಗ್ಸ್‌ಗಳಲ್ಲಿ ಒಟ್ಟು 5 ವಿಕೆಟ್‌ಗಳನ್ನು ಪಡೆದುಕೊಂಡಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ