IND vs NZ: ಫೈನಲ್ ಪಂದ್ಯದ ಬಳಿಕ ರವೀಂದ್ರ ಜಡೇಜಾ ನಿವೃತ್ತಿ? ಕೊಹ್ಲಿ ಅಪ್ಪುಗೆಯ ಹಿಂದಿನ ಮರ್ಮವೇನು?
Ravindra Jadeja Retirement: ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಅವರ ಅದ್ಭುತ ಬೌಲಿಂಗ್ ನಂತರ ವಿರಾಟ್ ಕೊಹ್ಲಿ ಅವರನ್ನು ಅಪ್ಪಿಕೊಂಡ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಿಂದ ಜಡೇಜಾ ಅವರು ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಹೊಂದಬಹುದು ಎಂಬ ಊಹಾಪೋಹಗಳು ಹಬ್ಬಿವೆ.ಆದರೆ ಈ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

2025 ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ (Champions Trophy 2025) ಪಂದ್ಯದ ಫೋಟೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಭಾರತ ಕ್ರಿಕೆಟ್ನಲ್ಲಿ ಸಂಚಲನ ಸೃಷ್ಟಿಸಿದೆ. ವಾಸ್ತವವಾಗಿ, ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ತಂಡದ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ಅಪ್ಪಿಕೊಂಡರು. ಅಂದಿನಿಂದ ಈ ಪಂದ್ಯದ ಬಳಿಕ ರವೀಂದ್ರ ಜಡೇಜಾ (Ravindra Jadeja) ಏಕದಿನ ಮಾದರಿಗೆ ನಿವೃತ್ತಿ ಘೋಷಿಸಬಹುದು ಎಂದು ಹೇಳಲಾಗುತ್ತಿದೆ. ಇವರಿಬ್ಬರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರೊಂದಿಗೆ ನಿವೃತ್ತಿಯ ಬಗ್ಗೆಯೂ ಸಾಕಷ್ಟು ಚರ್ಚೆಯಾಗುತ್ತಿದೆ.
ಈ ನಿವೃತ್ತಿಯ ಬಗ್ಗೆ ಇಷ್ಟೊಂದು ಚರ್ಚೆ ನಡೆಯಲು ಪ್ರಮುಖ ಕಾರಣ, ಜಡೇಜಾ ಅವರ ಬೌಲಿಂಗ್ ಖೋಟಾ ಮುಗಿದ ಕೂಡಲೇ ಕೊಹ್ಲಿ, ಜಡೇಜಾರನ್ನು ಅಪ್ಪಿಕೊಂಡರು. ಅದಕ್ಕಾಗಿಯೇ ಜಡೇಜಾ ನಿವೃತ್ತಿ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಅಲ್ಲದೆ ಜಡೇಜಾ ಇನ್ನು ಮುಂದೆ ಟೀಂ ಇಂಡಿಯಾ ಪರ ಆಡುವುದಿಲ್ಲ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಆದಾಗ್ಯೂ, ಈ ವಿಷಯಗಳಲ್ಲಿ ಎಷ್ಟು ಸತ್ಯವಿದೆ ಎಂಬುದನ್ನು ಕಾಲವೇ ಹೇಳಬೇಕು, ಏಕೆಂದರೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
It's last match for Ravindra Jadeja in the ODIs Happy Retirement ❤️ pic.twitter.com/78eIxKwSWL
— Ahmed Says (@AhmedGT_) March 9, 2025
‘ಧನ್ಯವಾದಗಳು’ ಎಂದ ಫ್ಯಾನ್ಸ್
ರವೀಂದ್ರ ಜಡೇಜಾ ನಿವೃತ್ತರಾಗುತ್ತಾರೋ ಇಲ್ಲವೋ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಆದರೆ ಅಭಿಮಾನಿಗಳು ಇದು ಅವರ ಕೊನೆಯ ಪಂದ್ಯ ಎಂದು ಒಪ್ಪಿಕೊಂಡಿದ್ದಾರೆ. ಅನೇಕ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಟೀಂ ಇಂಡಿಯಾ ಪರ ಇಷ್ಟು ದಿನ ಆಡಿದ್ದಕ್ಕಾಗಿ ಮತ್ತು ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಜಡೇಜಾಗೆ ಧನ್ಯವಾದ ಅರ್ಪಿಸಿದ್ದಾರೆ. ಜಡೇಜಾ ಅವರ ನಿವೃತ್ತಿಗೆ ಅಭಿಮಾನಿಗಳು ಈಗಾಗಲೇ ಶುಭ ಹಾರೈಸಲು ಪ್ರಾರಂಭಿಸಿದ್ದಾರೆ.
Thank you Ravindra jadeja, It's been a privilege to watch you bowl.❤ pic.twitter.com/AJ21aqhCjQ
— S. (@ThodaSaSanskari) March 9, 2025
ಇದನ್ನೂ ಓದಿ: IND vs AUS: ಲಬುಶೇನ್ ರನ್ ಓಡದಂತೆ ತಡೆದ ಜಡೇಜಾ; ಐಸಿಸಿಯಿಂದ ಬೀಳುತ್ತಾ ದಂಡ? ವಿಡಿಯೋ
ಫೈನಲ್‌ನಲ್ಲಿ ಅದ್ಭುತ ಬೌಲಿಂಗ್
ರವೀಂದ್ರ ಜಡೇಜಾ ಪ್ರತಿಯೊಂದು ಪ್ರಮುಖ ಸಂದರ್ಭದಲ್ಲೂ ಅದ್ಭುತ ಪ್ರದರ್ಶನ ನೀಡುವಲ್ಲಿ ಹೆಸರುವಾಸಿಯಾಗಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲೂ ಅವರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರು. ಜಡೇಜಾ ಕಿವೀಸ್ ಬ್ಯಾಟ್ಸ್‌ಮನ್‌ಗಳಿಗೆ ರನ್ ಗಳಿಸಲು ಯಾವುದೇ ಅವಕಾಶ ನೀಡಲಿಲ್ಲ. ಪಂದ್ಯದುದ್ದಕ್ಕೂ ಕೇವಲ 3 ರನ್‌ಗಳ ಎಕಾನಮಿಯಲ್ಲಿ 10 ಓವರ್ ಬೌಲ್ ಮಾಡಿದ ಜಡೇಜಾ 30 ರನ್‌ಗಳನ್ನು ನೀಡಿದರು. ಇದರ ಜೊತೆಗೆ ಜಡೇಜಾ ಟಾಮ್ ಲ್ಯಾಥಮ್ ಅವರ ಪ್ರಮುಖ ವಿಕೆಟ್ ಅನ್ನು ಸಹ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:34 pm, Sun, 9 March 25