
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಐಪಿಎಲ್ 2025 (IPL 2025) ರ ಫೈನಲ್ ತಲುಪಿದೆ. ಕ್ವಾಲಿಫೈಯರ್ 1 ಸುತ್ತಿನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಫೈನಲ್ ತಲುಪಿರುವ ಆರ್‌ಸಿಬಿ ಪ್ರಶಸ್ತಿಯಿಂದ ಒಂದು ಗೆಲುವಿನ ದೂರದಲ್ಲಿದೆ. ಒಂಬತ್ತು ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್ ತಲುಪಿದೆ. ಈ ಹಿಂದೆ 2016 ರಲ್ಲಿ ಫೈನಲ್ ತಲುಪಿದ್ದ ಆರ್‌ಸಿಬಿ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಇದೀಗ ಮತ್ತೊಮ್ಮೆ ಫೈನಲ್ ತಲುಪಿರುವುದರಿಂದ ಆರ್‌ಸಿಬಿ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. ಈ ಪ್ರಶಸ್ತಿ ಪಂದ್ಯ ಜೂನ್ 3 ರಂದು ನಡೆಯಲಿದ್ದು, ಈ ಪಂದ್ಯಕ್ಕೆ ತಂಡ ತಯಾರಿ ನಡೆಸುತ್ತಿದೆ. ಈ ನಡುವೆ ತಂಡದ ಮಾರ್ಗದರ್ಶಕ ದಿನೇಶ್ ಕಾರ್ತಿಕ್ (Dinesh Karthik) ಹಾಗೂ ನಾಯಕ ರಜತ್ ಪಾಟಿದರ್ (Rajat Patidar) ಒಂದೇ ದಿನ ತಮ್ಮ ಜನ್ಮ ದಿನವನ್ನು ಆಚರಿಸಿಕೊಂಡಿದ್ದಾರೆ.
ಆರ್‌ಸಿಬಿ ತಂಡದ ಮಾರ್ಗದರ್ಶಕ ಹಾಗೂ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ 1 ಜೂನ್ 1985 ರಂದು ಚೆನ್ನೈನಲ್ಲಿ ಜನಿಸಿದರು. ಅದೇ ದಿನ, 1 ಜೂನ್ 1993 ರಂದು, ನಾಯಕ ರಜತ್ ಪಾಟಿದಾರ್ ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನಿಸಿದರು. ಇಂದು ಅಂದರೆ ಭಾನುವಾರ, ಕಾರ್ತಿಕ್ ತಮ್ಮ 40 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರೆ, ಪಾಟೀದಾರ್ ತಮ್ಮ 32 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಇಬ್ಬರ ಜನ್ಮ ದಿನವನ್ನು ಆರ್‌ಸಿಬಿ ಶಿಬಿರದಲ್ಲಿ ಆಚರಿಸಲಾಗಿದೆ. ಫ್ರಾಂಚೈಸಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಇಬ್ಬರಿಗೂ ಶುಭ ಹಾರೈಸಿದೆ. ಕಳೆದ ಸೀಸನ್ವರೆಗೂ ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಫಿನಿಷರ್ ಪಾತ್ರವನ್ನು ನಿರ್ವಹಿಸುತ್ತಿದ್ದರು.
Captain-coach celebrating their special day 𝙩𝙬𝙤𝙜𝙚𝙩𝙝𝙚𝙧! 🤝🥳
Join us in wishing our mentor and batting coach – Dinesh Karthik, and the leader of our pack – Rajat Patidar, a very happy birthday! 🎂🙌#PlayBold #ನಮ್ಮRCB pic.twitter.com/HpEnffFt5i
— Royal Challengers Bengaluru (@RCBTweets) June 1, 2025
ಆದರೆ ರಜತ್ ಪಾಟಿದಾರ್ ಆಟಗಾರನಾಗಿ ಮಧ್ಯಮ ಕ್ರಮಾಂಕದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಆದರೆ ಇಬ್ಬರೂ ತಮ್ಮ ತಂಡವನ್ನು ಫೈನಲ್‌ಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಪ್ರಸ್ತುತ ಸೀಸನ್‌ನಲ್ಲಿ ಈ ಜೋಡಿ ಆರ್‌ಸಿಬಿಗೆ ಯಶಸ್ಸನ್ನು ತಂದುಕೊಟ್ಟಿದೆ. ಈ ಜೋಡಿ ಬ್ಯಾಟಿಂಗ್ ಕೋಚ್ ಮತ್ತು ನಾಯಕನಾಗಿ ಸೂಪರ್ ಹಿಟ್ ಎಂದು ಸಾಬೀತಾಗಿದೆ ಮತ್ತು ನಾಲ್ಕನೇ ಬಾರಿಗೆ ಐಪಿಎಲ್ ಫೈನಲ್ ಆಡಲು ಸಿದ್ಧವಾಗಿದೆ.
ಆರ್‌ಸಿಬಿ ತಂಡದ ಹೆಸರಲ್ಲಿ ಪೂಜೆ: ವಿಶೇಷ ಅಭಿಮಾನ ಮೆರೆದ ಕೊಡಗಿನ ಬಾಲಕ
ನಾಯಕ ರಜತ್ ಪಾಟಿದಾರ್ ಮತ್ತು ದಿನೇಶ್ ಕಾರ್ತಿಕ್ ಆರ್‌ಸಿಬಿಯನ್ನು ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಮಾಡಲು ತಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಜೂನ್ 3 ರಂದು ನಡೆಯಲಿರುವ ಪ್ರಶಸ್ತಿ ಪಂದ್ಯಕ್ಕಾಗಿ ಇಡೀ ತಂಡ ಅಹಮದಾಬಾದ್ ತಲುಪಿದೆ. ಜೂನ್ 1 ರ ಭಾನುವಾರದಂದು ರಜತ್ ಪಡೆ 3 ಗಂಟೆಗಳ ಕಾಲ ಅಭ್ಯಾಸ ನಡೆಸಿದೆ. ಈ ಸಮಯದಲ್ಲಿ, ನಾಯಕ ಪಾಟಿದಾರ್ ಮತ್ತು ತಂಡದ ಉಳಿದ ಆಟಗಾರರು ನೆಟ್‌ನಲ್ಲಿ ಅಭ್ಯಾಸ ಮಾಡಿದ್ದಾರೆ. ಅದೇ ಸಮಯದಲ್ಲಿ, ಕಾರ್ತಿಕ್ ಸೇರಿದಂತೆ ಇತರ ತರಬೇತುದಾರ ಸಿಬ್ಬಂದಿಗಳು ಕೂಡ ಆಟಗಾರರಿಗೆ ಎಲ್ಲಾ ರೀತಿಯ ಬೆಂಬಲ ನೀಡುತ್ತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ