AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾ ತಂಡಗಳ ಪಟ್ಟಿಯಲ್ಲಿ ಐಪಿಎಲ್​ನ ಎರಡು ಟೀಮ್..!

IPL 2022: ಇನ್ನು ಕಳೆದ ವರ್ಷ ಯುಟ್ಯೂಬ್​ನಲ್ಲಿನ ಅತ್ಯಂತ ಜನಪ್ರಿಯ ಟಾಪ್ ಕ್ರೀಡಾ ತಂಡಗಳಲ್ಲಿ ಸಿಎಸ್​ಕೆ ಹಾಗೂ ಆರ್​ಸಿಬಿ ಕಾಣಿಸಿಕೊಂಡಿತ್ತು ಎಂಬುದು ಇಲ್ಲಿ ಮತ್ತೊಂದು ವಿಶೇಷ.

IPL 2022: ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾ ತಂಡಗಳ ಪಟ್ಟಿಯಲ್ಲಿ ಐಪಿಎಲ್​ನ ಎರಡು ಟೀಮ್..!
IPL 2022
TV9 Web
| Edited By: |

Updated on:Jan 13, 2022 | 3:23 PM

Share

ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆ ಯಾವುದೆಂದು ಕೇಳಿದ್ರೆ ಥಟ್ಟನೆ ಬರುವ ಉತ್ತರ ಫುಟ್​ಬಾಲ್. ಇದಾಗ್ಯೂ ಏಷ್ಯಾ ಖಂಡದಲ್ಲಿ ಕ್ರಿಕೆಟ್​ ಅತ್ಯಂತ ನೆಚ್ಚಿನ ಕ್ರೀಡೆಯಾಗಿ ಮಾರ್ಪಟ್ಟಿದೆ. ಇದೀಗ ಕ್ರಿಕೆಟ್​ನಲ್ಲಿ ಐಪಿಎಲ್​ನಂತಹ ರಂಜಿತ ಟೂರ್ನಿ ಸೇರ್ಪಡೆಯಾಗಿರುವುದು ಇದರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದೀಗ ಜನಪ್ರಿಯತೆಯ ಫಲವಾಗಿ ಸೋಷಿಯಲ್​ ಮೀಡಿಯಾದಲ್ಲಿ ವಿಶ್ವದ ಅತ್ಯಂತ ಜನಪ್ರಿಯ ತಂಡಗಳ ಟಾಪ್​ ಪಟ್ಟಿಯಲ್ಲಿ ಇದೀಗ ಐಪಿಎಲ್​ನ​ ತಂಡಗಳು ಕೂಡ ಕಾಣಿಸಿಕೊಂಡಿದೆ.

ಜನವರಿ 1 ರಿಂದ ಡಿಸೆಂಬರ್ 31 ರ ಅವಧಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಎಂಗೇಜ್​ಮೆಂಟ್ ಹೊಂದಿದ್ದ ತಂಡಗಳ ಪೈಕಿ ಇಂಗ್ಲೆಂಡ್​ನ ಫುಟ್​ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ತಂಡವು 2.6 ಬಿಲಿಯನ್ ಎಂಗೇಜ್‌ಮೆಂಟ್‌ಗಳೊಂದಿಗೆ ನಂಬರ್ 1 ಸ್ಥಾನವನ್ನು ಅಲಂಕರಿಸಿದೆ. 2ನೇ ಸ್ಥಾನದಲ್ಲಿ ಬಾರ್ಸಿಲೋನಾ ಫುಟ್​ಬಾಲ್​ ಕ್ಲಬ್, 3ನೇ ಸ್ಥಾನದಲ್ಲಿ ರಿಯಲ್ ಮ್ಯಾಡ್ರಿಡ್ ಫುಟ್​ಬಾಲ್​ ಕ್ಲಬ್, 4ನೇ ಸ್ಥಾನದಲ್ಲಿ ಪ್ಯಾರಿಸ್ ಸೇಂಟ್ ಜರ್ಮೈನ್ ಫುಟ್​ಬಾಲ್​ ಕ್ಲಬ್ ಮತ್ತು 5ನೇ ಸ್ಥಾನದಲ್ಲಿ ಚೆಲ್ಸಿ ಫುಟ್​ಬಾಲ್​ ಕ್ಲಬ್ ತಂಡಗಳಿವೆ.

6ನೇ ಸ್ಥಾನದಲ್ಲಿ ಲಿವರ್​ಪೂಲ್ ಫುಟ್​ಬಾಲ್​ ಕ್ಲಬ್ ಇದ್ದರೆ, 7ನೇ ಸ್ಥಾನವನ್ನು ಗಲಾಟಸಾರೆ ಫುಟ್​ಬಾಲ್ ಕ್ಲಬ್ ಅಲಂಕರಿಸಿದೆ. ಇನ್ನು 8ನೇ ಸ್ಥಾನದಲ್ಲಿ 82 ಕೋಟಿ ಎಂಗೇಜ್​ಮೆಂಟ್​ನೊಂದಿಗೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಇರುವುದು ವಿಶೇಷ. ಹಾಗೆಯೇ 9ನೇ ಸ್ಥಾನವನ್ನು 75.2 ಕೋಟಿ ಎಂಗೇಜ್​ಮೆಂಟ್​ನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಲಂಕರಿಸಿದೆ. 10ನೇ ಸ್ಥಾನವನ್ನು ಫ್ಲಮೆಂಗೊ ಫುಟ್​ಬಾಲ್ ಕ್ಲಬ್ ಪಡೆದುಕೊಂಡಿದೆ.

ಅಂದರೆ ಇಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಕಳೆದ ವರ್ಷ ಅತೀ ಹೆಚ್ಚು ಎಂಗೇಜ್​ಮೆಂಟ್​ನಲ್ಲಿದ್ದ ಟಾಪ್ 10 ತಂಡಗಳ ಪೈಕಿ 8 ತಂಡಗಳು ಫುಟ್​ಬಾಲ್​ ಟೀಮ್​ಗಳು ಎಂಬುದು ವಿಶೇಷ. ಇದಾಗ್ಯೂ ಈ ಪಟ್ಟಿಯಲ್ಲಿ ಆರ್​ಸಿಬಿ ಹಾಗೂ ಸಿಎಸ್​ಕೆ ಎಂಟ್ರಿ ಕೊಡುವ ಮೂಲಕ ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾ ತಂಡಗಳಾಗಿ ಗುರುತಿಸಿಕೊಂಡಿದೆ.

ಇನ್ನು ಕಳೆದ ವರ್ಷ ಯುಟ್ಯೂಬ್​ನಲ್ಲಿನ ಅತ್ಯಂತ ಜನಪ್ರಿಯ ಟಾಪ್ ಕ್ರೀಡಾ ತಂಡಗಳಲ್ಲಿ ಸಿಎಸ್​ಕೆ ಹಾಗೂ ಆರ್​ಸಿಬಿ ಕಾಣಿಸಿಕೊಂಡಿತ್ತು ಎಂಬುದು ಇಲ್ಲಿ ಮತ್ತೊಂದು ವಿಶೇಷ. ಈ ಪಟ್ಟಿಯಲ್ಲೂ ಫುಟ್​ಬಾಲ್​ ತಂಡಗಳೇ ಮುಂಚೂಣಿಯಲ್ಲಿದ್ದು ಬಾರ್ಸಿಲೋನಾ ಅಗ್ರಸ್ಥಾನವನ್ನು ಹೊಂದಿದ್ದರೆ, ಮ್ಯಾಂಚೆಸ್ಟರ್ ಯುನೈಟೆಡ್ 2ನೇ ಸ್ಥಾನದಲ್ಲಿದೆ. ಇನ್ನು ರಾಯಲ್ ಚಾಲೆಂಜರ್ಸ್​ ಬೆಂಗಳೂರು ಈ ಪಟ್ಟಿಯಲ್ಲಿ 7ನೇ ಸ್ಥಾನ ಅಲಂಕರಿಸುವ ಮೂಲಕ ಗಮನ ಸೆಳೆದಿದೆ. ಹಾಗೆಯೇ ಟಾಪ್ 10ನ ಕೊನೆಯ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಕೂಡ ಕಾಣಿಸಿಕೊಂಡಿದೆ. ಈ ಮೂಲಕ ಐಪಿಎಲ್​ ಎರಡು ತಂಡಗಳು ವಿಶ್ವದ ಜನಪ್ರಿಯ ಕ್ರೀಡಾ ತಂಡಗಳಾಗಿ ಗುರುತಿಸಿಕೊಳ್ಳುತ್ತಿರುವುದು ವಿಶೇಷ.

ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್

ಇದನ್ನೂ ಓದಿ:  Sachin Tendulkar: ಆಲ್‌ ಟೈಮ್ ಬೆಸ್ಟ್‌ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(RCB, CSK now in top 10 most popular teams on social media in the world)

Published On - 3:21 pm, Thu, 13 January 22

Follow Us
Web contact
Web contact

TV9 Kannada

Read More
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್