ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆ ಯಾವುದೆಂದು ಕೇಳಿದ್ರೆ ಥಟ್ಟನೆ ಬರುವ ಉತ್ತರ ಫುಟ್ಬಾಲ್. ಇದಾಗ್ಯೂ ಏಷ್ಯಾ ಖಂಡದಲ್ಲಿ ಕ್ರಿಕೆಟ್ ಅತ್ಯಂತ ನೆಚ್ಚಿನ ಕ್ರೀಡೆಯಾಗಿ ಮಾರ್ಪಟ್ಟಿದೆ. ಇದೀಗ ಕ್ರಿಕೆಟ್ನಲ್ಲಿ ಐಪಿಎಲ್ನಂತಹ ರಂಜಿತ ಟೂರ್ನಿ ಸೇರ್ಪಡೆಯಾಗಿರುವುದು ಇದರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದೀಗ ಜನಪ್ರಿಯತೆಯ ಫಲವಾಗಿ ಸೋಷಿಯಲ್ ಮೀಡಿಯಾದಲ್ಲಿ ವಿಶ್ವದ ಅತ್ಯಂತ ಜನಪ್ರಿಯ ತಂಡಗಳ ಟಾಪ್ ಪಟ್ಟಿಯಲ್ಲಿ ಇದೀಗ ಐಪಿಎಲ್ನ ತಂಡಗಳು ಕೂಡ ಕಾಣಿಸಿಕೊಂಡಿದೆ.
ಜನವರಿ 1 ರಿಂದ ಡಿಸೆಂಬರ್ 31 ರ ಅವಧಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಎಂಗೇಜ್ಮೆಂಟ್ ಹೊಂದಿದ್ದ ತಂಡಗಳ ಪೈಕಿ ಇಂಗ್ಲೆಂಡ್ನ ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ತಂಡವು 2.6 ಬಿಲಿಯನ್ ಎಂಗೇಜ್‌ಮೆಂಟ್‌ಗಳೊಂದಿಗೆ ನಂಬರ್ 1 ಸ್ಥಾನವನ್ನು ಅಲಂಕರಿಸಿದೆ. 2ನೇ ಸ್ಥಾನದಲ್ಲಿ ಬಾರ್ಸಿಲೋನಾ ಫುಟ್ಬಾಲ್ ಕ್ಲಬ್, 3ನೇ ಸ್ಥಾನದಲ್ಲಿ ರಿಯಲ್ ಮ್ಯಾಡ್ರಿಡ್ ಫುಟ್ಬಾಲ್ ಕ್ಲಬ್, 4ನೇ ಸ್ಥಾನದಲ್ಲಿ ಪ್ಯಾರಿಸ್ ಸೇಂಟ್ ಜರ್ಮೈನ್ ಫುಟ್ಬಾಲ್ ಕ್ಲಬ್ ಮತ್ತು 5ನೇ ಸ್ಥಾನದಲ್ಲಿ ಚೆಲ್ಸಿ ಫುಟ್ಬಾಲ್ ಕ್ಲಬ್ ತಂಡಗಳಿವೆ.
6ನೇ ಸ್ಥಾನದಲ್ಲಿ ಲಿವರ್ಪೂಲ್ ಫುಟ್ಬಾಲ್ ಕ್ಲಬ್ ಇದ್ದರೆ, 7ನೇ ಸ್ಥಾನವನ್ನು ಗಲಾಟಸಾರೆ ಫುಟ್ಬಾಲ್ ಕ್ಲಬ್ ಅಲಂಕರಿಸಿದೆ. ಇನ್ನು 8ನೇ ಸ್ಥಾನದಲ್ಲಿ 82 ಕೋಟಿ ಎಂಗೇಜ್ಮೆಂಟ್ನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇರುವುದು ವಿಶೇಷ. ಹಾಗೆಯೇ 9ನೇ ಸ್ಥಾನವನ್ನು 75.2 ಕೋಟಿ ಎಂಗೇಜ್ಮೆಂಟ್ನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಲಂಕರಿಸಿದೆ. 10ನೇ ಸ್ಥಾನವನ್ನು ಫ್ಲಮೆಂಗೊ ಫುಟ್ಬಾಲ್ ಕ್ಲಬ್ ಪಡೆದುಕೊಂಡಿದೆ.
ಅಂದರೆ ಇಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಕಳೆದ ವರ್ಷ ಅತೀ ಹೆಚ್ಚು ಎಂಗೇಜ್ಮೆಂಟ್ನಲ್ಲಿದ್ದ ಟಾಪ್ 10 ತಂಡಗಳ ಪೈಕಿ 8 ತಂಡಗಳು ಫುಟ್ಬಾಲ್ ಟೀಮ್ಗಳು ಎಂಬುದು ವಿಶೇಷ. ಇದಾಗ್ಯೂ ಈ ಪಟ್ಟಿಯಲ್ಲಿ ಆರ್ಸಿಬಿ ಹಾಗೂ ಸಿಎಸ್ಕೆ ಎಂಟ್ರಿ ಕೊಡುವ ಮೂಲಕ ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾ ತಂಡಗಳಾಗಿ ಗುರುತಿಸಿಕೊಂಡಿದೆ.
United, United top of the league – of total engagement on social media. Maybe no more need for the sentiment graphs pic.twitter.com/fL2p834UdM
— Samuel Luckhurst (@samuelluckhurst) January 7, 2022
ಇನ್ನು ಕಳೆದ ವರ್ಷ ಯುಟ್ಯೂಬ್ನಲ್ಲಿನ ಅತ್ಯಂತ ಜನಪ್ರಿಯ ಟಾಪ್ ಕ್ರೀಡಾ ತಂಡಗಳಲ್ಲಿ ಸಿಎಸ್ಕೆ ಹಾಗೂ ಆರ್ಸಿಬಿ ಕಾಣಿಸಿಕೊಂಡಿತ್ತು ಎಂಬುದು ಇಲ್ಲಿ ಮತ್ತೊಂದು ವಿಶೇಷ. ಈ ಪಟ್ಟಿಯಲ್ಲೂ ಫುಟ್ಬಾಲ್ ತಂಡಗಳೇ ಮುಂಚೂಣಿಯಲ್ಲಿದ್ದು ಬಾರ್ಸಿಲೋನಾ ಅಗ್ರಸ್ಥಾನವನ್ನು ಹೊಂದಿದ್ದರೆ, ಮ್ಯಾಂಚೆಸ್ಟರ್ ಯುನೈಟೆಡ್ 2ನೇ ಸ್ಥಾನದಲ್ಲಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಪಟ್ಟಿಯಲ್ಲಿ 7ನೇ ಸ್ಥಾನ ಅಲಂಕರಿಸುವ ಮೂಲಕ ಗಮನ ಸೆಳೆದಿದೆ. ಹಾಗೆಯೇ ಟಾಪ್ 10ನ ಕೊನೆಯ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಕಾಣಿಸಿಕೊಂಡಿದೆ. ಈ ಮೂಲಕ ಐಪಿಎಲ್ ಎರಡು ತಂಡಗಳು ವಿಶ್ವದ ಜನಪ್ರಿಯ ಕ್ರೀಡಾ ತಂಡಗಳಾಗಿ ಗುರುತಿಸಿಕೊಳ್ಳುತ್ತಿರುವುದು ವಿಶೇಷ.
ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್
ಇದನ್ನೂ ಓದಿ: Sachin Tendulkar: ಆಲ್ ಟೈಮ್ ಬೆಸ್ಟ್ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
(RCB, CSK now in top 10 most popular teams on social media in the world)
Published On - 3:21 pm, Thu, 13 January 22