
16.40 ಕೋಟಿ ರೂ. ಪರ್ಸ್ನೊಂದಿಗೆ 2026 ರ ಐಪಿಎಲ್ ಮಿನಿ ಹರಾಜಿಗೆ (IPL 2026 Auction) ಎಂಟ್ರಿಕೊಟ್ಟಿದ್ದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ತನ್ನ ಬಳಗಕ್ಕೆ 8 ಆಟಗಾರರನ್ನು ಖರೀದಿಸುವ ಮೂಲಕ ತಂಡವನ್ನು ಮತ್ತಷ್ಟು ಬಲಪಡಿಸಿದೆ. 2015 ರ ಆವೃತ್ತಿಯಲ್ಲಿ ತಂಡ ಹಾಲಿ ಚಾಂಪಿಯನ್ ಆಗಿದ್ದರೂ, ತಂಡದ ಪರ ಹೆಚ್ಚು ಪರಿಣಾಮಕಾರಿಯಾಗದ ಆಟಗಾರರನ್ನು ಕೈಬಿಟ್ಟಿದ್ದ ಆರ್‌ಸಿಬಿ, ಈ ಮಿನಿ ಹರಾಜಿನಲ್ಲಿ ಯಾರನ್ನು ಖರೀದಿಸಲಿದೆ ಎಂಬುದು ಎಲ್ಲರ ಕುತೂಹಲ ಮೂಡಿಸಿತ್ತು. ಅದರಂತೆ ತಂಡಕ್ಕೆ ಅವಶ್ಯಕವಿರುವ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿರುವ ಆರ್‌ಸಿಬಿ 6 ಭಾರತೀಯ ಆಟಗಾರರನ್ನು ಮತ್ತು ಇಬ್ಬರು ವಿದೇಶಿ ಆಟಗಾರನನ್ನು ತಂಡಕ್ಕೆ ಸೇರಿಸಿಕೊಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಐಪಿಎಲ್ ಹರಾಜಿನಲ್ಲಿ ವೆಂಕಟೇಶ್ ಅಯ್ಯರ್ ಮೇಲೆ ಅಧಿಕ ಬಂಡವಾಳ ಹಾಕಿತು. ಹಿಂದೆ ಕೆಕೆಆರ್ ಪರ ಆಡಿದ್ದ ವೆಂಕಟೇಶ್ ಅಯ್ಯರ್ ಅವರನ್ನು ಆರ್‌ಸಿಬಿ 7 ಕೋಟಿ ರೂ.ಗೆ ಖರೀದಿಸಿತು. ಅಯ್ಯರ್ ಬಳಿಕ ಎರಡನೇ ಅಧಿಕ ಬೆಲೆಗೆ ಖರೀದಿಯಾದ ಮಧ್ಯಪ್ರದೇಶ ಆಲ್‌ರೌಂಡರ್ ಮಂಗೇಶ್ ಯಾದವ್ ಅವರನ್ನು ಆರ್‌ಸಿಬಿ 5.2 ಕೋಟಿಗೆ ಖರೀದಿಸಿತು. ಹಾಗೆಯೇ ನ್ಯೂಜಿಲೆಂಡ್ ವೇಗಿ ಜಾಕೋಬ್ ಡಫಿ ಅವರನ್ನು 2 ಕೋಟಿ ಮೂಲ ಬೆಲೆಗೆ ಖರೀದಿಸಿತು.
ಆರ್‌ಸಿಬಿ ಪೂರ್ಣ ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ವೆಂಕಟೇಶ್ ಅಯ್ಯರ್, ಕೃನಾಲ್ ಪಾಂಡ್ಯ, ಮಂಗೇಶ್ ಯಾದವ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜಾಕೋಬ್ ಬೆಥೆಲ್, ಜೋಶ್ ಹೇಜಲ್‌ವುಡ್, ಜಾಕೋಬ್ ಡಫಿ, ಯಶ್ ದಯಾಳ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ರಸಿಕ್ ಸಲಾಂ, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೋರ್ಡಾನ್ ಕಾಕ್ಸ್, ಸಾತ್ವಿಕ್ ದೇಸ್ವಾಲ್, ವಿಕ್ಕಿ ಒಸ್ತ್ವಾಲ್, ಕಾನಿಷ್ಕ್ ಚೌಹಾಣ್, ವಿಹಾನ್ ಮಲ್ಹೋತ್ರಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:35 pm, Tue, 16 December 25