IPL 2022, RCB: ಐಪಿಎಲ್ 2023ಕ್ಕೂ ಮುನ್ನ ಈ 5 ಆಟಗಾರರನ್ನು ರಿಲೀಸ್ ಮಾಡಲಿದೆ ಆರ್​ಸಿಬಿ

| Updated By: Vinay Bhat

Updated on: Jun 02, 2022 | 9:34 AM

IPL 2023, RCB: ಐಪಿಎಲ್ 2022 ರಲ್ಲಿ ಕೆಲ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ನಾಯಕ ಹಾಗೂ ಆರ್​ಸಿಬಿ ಮ್ಯಾನೇಜ್ಮೆಂಟ್ 5 ಆಟಗಾರರನ್ನು ಮುಂದಿನ ಸೀಸನ್​ಗೂ ಮುನ್ನ ಕೈಬಿಡುವುದು ಖಚಿತ ಎನ್ನಲಾಗುತ್ತಿದೆ. ಅವರು ಯಾರು?, ಇಲ್ಲಿದೆ ನೋಡಿ ಮಾಹಿತಿ

IPL 2022, RCB: ಐಪಿಎಲ್ 2023ಕ್ಕೂ ಮುನ್ನ ಈ 5 ಆಟಗಾರರನ್ನು ರಿಲೀಸ್ ಮಾಡಲಿದೆ ಆರ್​ಸಿಬಿ
RCB IPL 2023
Follow us on

ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore) ನೂತನ ತಂಡ, ನೂತನ ನಾಯಕನೊಂದಿಗೆ ಕಣಕ್ಕಿಳಿದರೂ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಅಂತಿಮ ಹಂತದವರೆಗೆ ತಲುಪಿದರೂ ಕ್ವಾಲಿಫೈಯರ್ – 2 ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತ ಕಾರಣ ಐಪಿಎಲ್ 2022 (IPL 2022) ಫೈನಲ್​ಗೇರಲು ವಿಫಲವಾಯಿತು. ಹಿಂದಿನ ಸೀಸನ್​ಗಳಿಗೆ ಹೋಲಿಸಿದರೆ ಆರ್​ಸಿಬಿ ಕೆಲವು ವಿಭಾಗಗಳಲ್ಲಿ ಈ ಬಾರಿ ಅದ್ಭುತ ಪ್ರದರ್ಶನ ತೋರಿತು. ಫಿನಿಶಿಂಗ್ ಕೊರತೆ ಅನುಭವಿಸುತ್ತಿದ್ದ ಬೆಂಗಳೂರಿಗೆ ದಿನೇಶ್ ಕಾರ್ತಿಕ್​ರಂತಹ (Dinesh Karthik) ಅನುಭವಿ ಫಿನಿಶರ್ ಸಿಕ್ಕರು. ಅಂತೆಯೆ ಡೆತ್ ಓವರ್​ಗಳಲ್ಲಿ ಹರ್ಷಲ್ ಪಟೇಲ್ ಹಾಗೂ ಜೋಶ್ ಹ್ಯಾಜ್ಲೆವುಡ್ ಪ್ರದರ್ಶನ ಕೂಡ ಅತ್ಯುತ್ತಮವಾಗಿತ್ತು. ಇದಾಗಿಯು ಬಹುಸಮಯದಿಂದ ಆರ್​ಸಿಬಿ ಅನುಭವಿಸುತ್ತಿದ್ದ ಸಮಸ್ಯೆ ಈ ಬಾರಿ ಕೂಡ ಮುಂದುವರೆಯಿತು. ಮೊಹಮ್ಮದ್ ಸಿರಾಜ್ ದುಬಾರಿ ಆಗುತ್ತಾ ಸಾಗಿಸಿದರೆ, ಆರಂಭಿಕರ ವೈಫಲ್ಯ ಎದ್ದು ಕಂಡಿತು. ಇದಕ್ಕಾಗಿ ಕೆಲ ಪ್ರಯೋಗ ನಡೆಸಿದರೂ ಯಶಸ್ಸು ಸಿಗಲಿಲ್ಲ.

  1. ಇದೀಗ ಐಪಿಎಲ್ 2022 ರಲ್ಲಿ ಕೆಲ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ನಾಯಕ ಹಾಗೂ ಮ್ಯಾನೇಜ್ಮೆಂಟ್ 5 ಆಟಗಾರರನ್ನು ಮುಂದಿನ ಸೀಸನ್​ಗೂ ಮುನ್ನ ಕೈಬಿಡುವುದು ಖಚಿತ ಎನ್ನಲಾಗುತ್ತಿದೆ. ಹಾಗಾದ್ರೆ ಐಪಿಎಲ್ 2023ರ ವೇಳೆಗೆ ಆರ್​ಸಿಬಿ ತಂಡದಿಂದ ರಿಲೀಸ್ ಮಾಡಬಹುದಾದ ಐದು ಆಟಗಾರರು ಯಾರೆಲ್ಲ ಎಂಬುದನ್ನು ನೋಡೋಣ.
  2. ಶೆರ್ಫನ್ ರುಥರ್​​ಫಾರ್ಡ್: ಐಪಿಎಲ್ 2022 ಟೂರ್ನಿ ಆರಂಭದಲ್ಲಿ ಆರ್​ಸಿಬಿ ತಂಡಕ್ಕೆ ಗ್ಲೆನ್ ಮ್ಯಾಕ್ಸ್​ವೆಲ್ ಅಲಭ್ಯರಾಗಿದ್ದ ಕಾರಣ ವೆಸ್ಟ್ ಇಂಡೀಸ್ ಆಲ್ರೌಂಡರ್ ಶೆರ್ಫನ್ ರುಥರ್​​ಫಾರ್ಡ್ ಸ್ಥಾನ ಪಡೆದುಕೊಂಡಿದ್ದರು. ಆದರೆ, ಇವರು ಆಡಿದ ಮೂರು ಪಂದ್ಯಗಳಿಂದ ನಿರೀಕ್ಷೆಗೆ ತಕ್ಕ ಪ್ರದರ್ಶನ ಬರಲಿಲ್ಲ. ಗಳಿಸಿದ್ದು ಕೇವಲ 33 ರನ್​ಗಳನ್ನಷ್ಟೆ. ಹೀಗಾಗಿ ಇವರನ್ನು ಕೈಬಿಡುವುದು ಬಹುತೇಕ ಖಚಿತ.
  3. ಡೇವಿಡ್ ವಿಲ್ಲೆ: ಐಪಿಎಲ್ 2022 ರಲ್ಲಿ ಇಂಗ್ಲೆಂಡ್ ಆಟಗಾರ ಡೇವಿಡ್ ವಿಲ್ಲೆಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲವಾದರೂ ಸಿಕ್ಕಾಗ ಕೂಡ ಸರಿಯಾಗಿ ಉಪಯೋಗಿಸಿಕೊಂಡಿಲ್ಲ. 11 ಓವರ್ ಬೌಲಿಂಗ್ ಮಾಡಿ ಇವರು ಪಡೆದುಕೊಂಡಿದ್ದು 1 ವಿಕೆಟ್ ಮಾತ್ರ. ಜೋಶ್ ಹ್ಯಾಜ್ಲೆವುಡ್ ತಂಡ ಸೇರಿಕೊಂಡ ಬಳಿಕ ಇವರಿಗೆ ಸ್ಥಾನ ಸಿಗಲಿಲ್ಲ.
  4. ಅನುಜ್ ರಾವತ್: ಫಾಫ್ ಜೊತೆ ಓಪನರ್ ಕಣಕ್ಕಿಳಿದ ಅನುಜ್ ರಾವತ್ ಆರಂಭದ ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೂ ನಂತರ ಸಂಪೂರ್ಣ ವೈಫಲ್ಯ ಅನುಭವಿಸಿದರು. ಮುಂಬೈ ಇಂಡಿಯನ್ಸ್ ವಿರುದ್ಧ 47 ಎಸೆತಗಳಲ್ಲಿ 66 ರನ್ ಗಳಿಸಿದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಕಳಪೆ ಆಟವಾಡಿದರು. ಪರಿಣಾಮ ಇವರನ್ನು ಕೈಬಿಟ್ಟು ಕೊಹ್ಲಿ ಓಪನರ್ ಆಗಿ ಕಣಕ್ಕಿಳಿದರು. ಹೀಗಾಗಿ ಇವರನ್ನು ಕೂಡ ಆರ್​ಸಿಬಿ ರಿಲೀಸ್ ಮಾಡಬಹುದು.
  5. ಇದನ್ನೂ ಓದಿ
    ಹಳ್ಳಿ ಹುಡುಗಿಯರ ಥ್ರೋಬಾಲ್ ಸಾಧನೆ; ದೇಶಕ್ಕೆ ಚಿನ್ನದ ಪದಕ ತಂದು ಕೊಟ್ಟ ದಾವಣಗೆರೆ ರೈತರ ಮಕ್ಕಳು
    Sourav Ganguly: ಸೌರವ್ ಗಂಗೂಲಿ ಹೊಸ ಯೋಜನೆ ಯಾವುದು?: ಎಲ್ಲ ಗೊಂದಲಗಳಿಗೆ ಸ್ಪಷ್ಟನೆ ನೀಡಿದ ಬಿಸಿಸಿಐ ಅಧ್ಯಕ್ಷ
    Deepak Chahar Wedding: ಹರಿಶಿಣ ಕಾರ್ಯಕ್ರಮದಲ್ಲಿ ಮಿಂಚಿದ ದೀಪಕ್- ಜಯಾ; ಫೋಟೋ ನೋಡಿ
    Virat Kohli: ಒಬ್ಬ ಪಾಕಿಸ್ತಾನಿಯಾಗಿ ಹೇಳುತ್ತಿದ್ದೇನೆ, ಕೊಹ್ಲಿ ಒಬ್ಬ ಸಾರ್ವಕಾಲಿಕ ಶ್ರೇಷ್ಠ ಆಟಗಾರ; ಶೋಯೆಬ್ ಅಖ್ತರ್
  6. ಸಿದ್ಧಾರ್ಥ್​​ ಕೌಲ್: ಸಿದ್ಧಾರ್ಥ್ ಕೌಲ್ ಐಪಿಎಲ್ 2022 ರಲ್ಲಿ ಆಡಿದ್ದು ಒಂದು ಪಂದ್ಯ ಮಾತ್ರ. ಗುಜರಾತ್ ಟೈಟಾನ್ಸ್ ವಿರುದ್ಧ ಮೊಹಮ್ಮದ್ ಸಿರಾಜ್ ಜಾಗದಲ್ಲಿ ಆಡಿದರು. ಆದರೆ, 4 ಓವರ್​ಗೆ 43 ರನ್ ನೀಡಿದ ಇವರುಕೂಡ ದುಬಾರಿ ಆದರು. ವಿಕೆಟ್ ಕೂಡ ಪಡೆಯಲಿಲ್ಲ.
  7. ಜೇಸನ್ ಬೆಹ್ರೆನ್​​ಡಾರ್ಫ್​: ಈ ಸೀಸನ್​ನಲ್ಲಿ ಜೇಸನ್ ಬೆಹ್ರೆನ್​​ಡಾರ್ಫ್​ ಒಂದೇ ಒಂದು ಪಂದ್ಯವನ್ನು ಆಡಲಿಲ್ಲ. ಮುಂದಿನ ಸೀಸನ್​ ವೇಳೆಗೆ ಇವರನ್ನು ಕೂಡ ಆರ್​ಸಿಬಿ ಕೈಬಿಡಲಿದೆ. ಇವರ ಜೊತೆಗೆ ಮಹಿಪಾಲ್ ಲುಮ್ರೂರ್ ಹಾಗೂ ಆಕಾಶ್ ದೀಪ್ ಅವರನ್ನು ಕೈಬಿಟ್ಟರೂ ಅಚ್ಚರಿ ಪಡಬೇಕಿಲ್ಲ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:34 am, Thu, 2 June 22