ಹಳ್ಳಿ ಹುಡುಗಿಯರ ಥ್ರೋಬಾಲ್ ಸಾಧನೆ; ದೇಶಕ್ಕೆ ಚಿನ್ನದ ಪದಕ ತಂದು ಕೊಟ್ಟ ದಾವಣಗೆರೆ ರೈತರ ಮಕ್ಕಳು

ಬಾಲ್ಯದಲ್ಲಿ ಅಂದರೆ ಹೈಸ್ಕೂಲ್​ನಲ್ಲಿ ಇವರ ಗ್ರಾಮದ ಶಾಲೆಯಲ್ಲಿ ಸಿದ್ದಲಿಂಗಪ್ಪ ಎಂಬ ಶಿಕ್ಷಕರಿದ್ದರು. ಅವರು ಖೋಖೋ ಕಲಿಸುತ್ತದ್ದರು. ಜೊತೆಗೆ ಥ್ರೋಬಾಲ್ ಕೂಡಾ ಹೇಳಿಕೊಟ್ಟರು.

ಹಳ್ಳಿ ಹುಡುಗಿಯರ ಥ್ರೋಬಾಲ್ ಸಾಧನೆ; ದೇಶಕ್ಕೆ ಚಿನ್ನದ ಪದಕ ತಂದು ಕೊಟ್ಟ ದಾವಣಗೆರೆ ರೈತರ ಮಕ್ಕಳು
ಥ್ರೋಬಾಲ್​ ಆಟದಲ್ಲಿ ಸಾಧನೆ ಮಾಡಿದ ರೂಪಾ, ಸುಜಾತಾ
Follow us
TV9 Web
| Updated By: sandhya thejappa

Updated on: Jun 02, 2022 | 8:45 AM

ದಾವಣಗೆರೆ: ಥ್ರೋಬಾಲ್ (Throw Ball) ಸ್ಪರ್ಧೆಯಲ್ಲಿ ಹಳ್ಳಿಯ ಇಬ್ಬರು ಯುವತಿಯರು ಸಾಧನೆ ಮಾಡಿ, ದೇಶಕ್ಕೆ ಚಿನ್ನದ ಪದಕ (Gold Medal) ತಂದು ಕೊಟ್ಟಿದ್ದಾರೆ. ಇತ್ತೀಚಿಗೆ ನೇಪಾಳದಲ್ಲಿ ನಡೆದ ಇಂಡೋ-ನೇಪಾಳ್ ಥ್ರೋಬಾಲ್ ಚಾಂಪಿಯನ್ ಶೀಪ್ನಲ್ಲಿ ಭಾರತದ ಮಹಿಳಾ ತಂಡ ಚಿನ್ನದ ಪದಕ ಗೆದ್ದಿದೆ. ಇದರಲ್ಲಿ ದಾವಣಗೆರೆ ಜಿಲ್ಲೆಯ ಇಬ್ಬರು ಯುವತಿಯರು ಪ್ರಮುಖ ಪಾತ್ರ ವಹಿಸಿದ್ದು, ಭಾರತಕ್ಕೆ ಚಿನ್ನ ತರುವಲ್ಲಿ ಯಶಸ್ವಿ ಆಗಿದ್ದಾರೆ. ಒಬ್ಬ ಯುವತಿ ರೂಪಾ ಕೃಷ್ಣಪ್ಪ. ಇವರು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದವರು. ತಂದೆ ಕೃಷ್ಣಪ್ಪ, ರೈತ. ನಾಲ್ಕು ಹೆಣ್ಣು ಹಾಗೂ ಓರ್ವ ಗಂಡು ಮಗ ಇರುವ ಕುಟುಂಬದಲ್ಲಿ ರೂಪಾ ಮೂರನೇ ಮಗಳು.

ಬಾಲ್ಯದಲ್ಲಿ ಅಂದರೆ ಹೈಸ್ಕೂಲ್​ನಲ್ಲಿ ಇವರ ಗ್ರಾಮದ ಶಾಲೆಯಲ್ಲಿ ಸಿದ್ದಲಿಂಗಪ್ಪ ಎಂಬ ಶಿಕ್ಷಕರಿದ್ದರು. ಅವರು ಖೋಖೋ ಕಲಿಸುತ್ತದ್ದರು. ಜೊತೆಗೆ ಥ್ರೋಬಾಲ್ ಕೂಡಾ ಹೇಳಿಕೊಟ್ಟರು. ಬಳಿಕ ರಾಜ್ಯ ತಂಡಕ್ಕೆ ಆಯ್ಕೆ ಆಗಿ ಪಂಜಾಬ್ ಹಾಗೂ ತಮಿಳುನಾಡಿನ ಥ್ರೋಬಾಲ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿ ಗೆದ್ದು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಿದ್ದರು ರೂಪಾ. ಬಿಬಿಎಂ ಓದಿರುವ ರೂಪಾ ಪೊಲೀಸ್ ಅಧಿಕಾರಿ ಆಗಬೇಕು ಎಂದು ಹಟಕ್ಕೆ ಬಿದ್ದು ಈಗಾಗಲೇ ಪಿಎಸ್ಐ ಹುದ್ದೆಗಾಗಿ ಧಾರವಾಡದಲ್ಲಿ ಕೋಚಿಂಗ್ ಪಡೆಯುತ್ತಿದ್ದಾರೆ.

ಇನ್ನೊಬ್ಬರು ಸುಜಾತಾ ಬಸವರಾಜಪ್ಪ. ಸುಜಾತಾ ತಂದೆ ಕೂಡಾ ರೈತ. ಚನ್ನಗಿರಿ ತಾಲೂಕಿನ ಕಗತೂರು ಗ್ರಾಮದ ನಿವಾಸಿ. ಎಂಎ ಬಿಇಡಿ ಓದಿ ಕೆಲ ವರ್ಷ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ. ಇವರು ಸಹ ಧಾರವಾಡದಲ್ಲಿ ಪಿಎಸ್ಐ ಹುದ್ದೆಗಾಗಿ ಕೋಚಿಂಗ್ ಪಡೆಯುತ್ತಿದ್ದಾರೆ. ಇವರ ತಂದೆ ಮಕ್ಕೆಜೋಳ ಬೆಳೆಯುತ್ತಾರೆ.

ಇದನ್ನೂ ಓದಿ
Image
Asia Cup Hockey ಏಷ್ಯಾ ಕಪ್ ಹಾಕಿ: ಜಪಾನ್ ತಂಡವನ್ನು ಮಣಿಸಿ ಕಂಚು ಗೆದ್ದ ಭಾರತ
Image
ಅಯೋಧ್ಯೆ ರಾಮ ಮಂದಿರ ಸುತ್ತಮುತ್ತ ಮದ್ಯ ಮಾರಾಟ ನಿಷೇಧಿಸಿದ ಉತ್ತರ ಪ್ರದೇಶ ಸರ್ಕಾರ
Image
ರಾಜ್ಯ ಬಿಜೆಪಿ ಘಟಕದಲ್ಲಿ ನಾಚಿಕೆ, ಮಾನ-ಮರ್ಯಾದೆ ಇಲ್ಲದ ಒಕ್ಕಲಿಗ ನಾಯಕರಿದ್ದಾರೆ: ಲಕ್ಷ್ಮಣ್, ಕೆಪಿಸಿಸಿ ವಕ್ತಾರ
Image
Running: ಹೆಚ್ಚು ಓಡುವುದರಿಂದ ನಿಮ್ಮನ್ನು ಈ ಸಮಸ್ಯೆಗಳು ಕಾಡಬಹುದು

ಇದನ್ನೂ ಓದಿ: May GST Collection: ಮೇ  ತಿಂಗಳಲ್ಲಿ ₹1.40 ಲಕ್ಷ ಕೋಟಿ ಜಿಎಸ್‌ಟಿ ಆದಾಯ ಸಂಗ್ರಹ; ಅಂಕಿ ಅಂಶ ಪ್ರಕಟಿಸಿದ ಕೇಂದ್ರ ಸರಕಾರ

ನಿರಂತರ ಪರಿಶ್ರಮದಿಂದ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಿ ಪ್ರಶಸ್ತಿ ಗೆದ್ದ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಈ ಇಬ್ಬರು ಯುವತಿಯರು ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಂಡರು ನಿರಂತರ ಪ್ರಶಸ್ತಿ ಗೆದ್ದು ಕೊಂಡು ಬರುತ್ತಿದ್ದರು. ಜೊತೆಗೆ ಎನ್ಸಿಸಿಯಲ್ಲೂ ಸಹ ಹೆಸರು ಮಾಡಿದ್ದರು.

ಇವರಿಬ್ಬರು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆದ ಹಿನ್ನೆಲೆ ಸ್ಪರ್ಧೆಗೆ ಹೋಗಲು ಹಣಕಾಸಿನ ತೊಂದರೆ ಇತ್ತು. ಚನ್ನಗಿರಿಯ ತುಮ್ಕೋಸ್ ಸಂಸ್ಥೆ ಹಾಗೂ ಸ್ಥಳೀಯ ಶಾಸಕ ಮಾಡಾಳ್ ವಿರುಪಾಕ್ಷಪ್ಪ ತಲಾ ಹತ್ತು ಸಾವಿರ ಹಣ ಕೊಟ್ಟಿದ್ದು ಬಿಟ್ಟರೇ ಯಾರು ಸಹಾಯ ಮಾಡಲಿಲ್ಲ. ಪ್ರಶಸ್ತಿಗೆ ಗೆದ್ದುಕೊಂಡು ಬಂದರೆ ಸಹಾಯ ಮಾಡುವುದಾಗಿ ಕೆಲವರು ಹೇಳಿದ್ದರು. ಆದರೆಈಗ ಯಾರು ಎನು ಹೇಳುತ್ತಿಲ್ಲ ಎನ್ನುತ್ತಿದ್ದಾರೆ ಈ ಯುವತಿಯರು.

ವರದಿ: ಬಸವರಾಜ ದೊಡ್ಡಮನಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್