ಪ್ರತಿಭೆಯನ್ನು ಗುರುತಿಸುವಲ್ಲಿ ಧೋನಿ (Dhoni) ನಿಪುಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರಂತೆ ಈ ವಿಷಯದಲ್ಲಿ ನುರಿತವರಿಲ್ಲ. ಆದರೆ, ನಾರಾಯಣ್ ಜಗದೀಸನ್ (narayan jagadeesan) ವಿಚಾರದಲ್ಲಿ ಧೋನಿ ಕೊಂಚ ಎಡವಿದರು ಎಂತಲೇ ಹೇಳಬಹುದು. ಏಕೆಂದರೆ ದೇಶೀ ಟೂರ್ನಿಗಳಲ್ಲಿ ಶತಕಗಳ ಮೇಲೆ ಶತಕ ಸಿಡಿಸಿ, ಹಲವಾರು ದಾಖಲೆಗಳನ್ನು ಬರೆದಿರುವ ಜಗದೀಸನ್ ಅವರನ್ನು ಐಪಿಎಲ್ ಮಿನಿ ಹರಾಜಿಗೂ (IPL 2023 auction) ಮೊದಲೇ ಧೋನಿ ನಾಯಕತ್ವದ ಫ್ರಾಂಚೈಸಿ ಈ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿತ್ತು. ಆದರೆ ಸಿಎಸ್‌ಕೆ (CSK) ತಂಡದಿಂದ ಹೊರಬಿದ್ದ ಜಗದೀಸನ್ ದೇಶೀ ಟೂರ್ನಿಯಲ್ಲಿ ರನ್ಗಳ ಶಿಖರ ಕಟ್ಟಿದ್ದಾರೆ. ಹೀಗಾಗಿ ಒಂದರ್ಥದಲ್ಲಿ ಜಗದೀಸನ್ರನ್ನು ಸಿಎಸ್‌ಕೆ ತಂಡದಿಂದ ಕೈಬಿಟ್ಟಿದ್ದು ಒಳ್ಳೇಯದ್ದೇ ಆಗಿದೆ. ಕಳೆದ ಬಾರಿ ಜಗದೀಸನ್ ಅವರನ್ನು ಸಿಎಸ್‌ಕೆ ಫ್ರಂಚೈಸಿ ಕೇವಲ 20 ಲಕ್ಷ ಮೂಲ ಬೆಲೆಗೆ ಸೇರಿಸಿಕೊಂಡಿತ್ತು. ಆದರೆ ಈ ಬಾರಿ ತಂಡದಿಂದ ಬಿಡುಗಡೆಗೊಂಡು ಐಪಿಎಲ್ ಮಿನಿ ಹರಾಜಿಗೆ ಎಂಟ್ರಿಕೊಡುತ್ತಿರುವ ಈ ದೇಶೀ ಸೂಪರ್ಸ್ಟಾರ್ಗೆ ಬಂಪರ್ ಆಫರ್ ಸಿಗುವುದಂತೂ ಖಚಿತ. ಅಲ್ಲದೆ ಭಾರತದಲ್ಲಿಯೇ ಐಪಿಎಲ್ ನಡೆಯುತ್ತಿರುವುದರಿಂದ ದೇಶೀ ಟೂರ್ನಿಯಲ್ಲಿ ಮಿಂಚುವುದರೊಂದಿಗೆ ಉತ್ತಮ ಪ್ರದರ್ಶನ ನೀಡಿರುವ ಜಗದೀಸನ್ ಖರೀದಿಗೆ ಹಲವು ಫ್ರಾಂಚೈಸಿಗಳು ಮುಂದಾಗುವುದಂತೂ ಖಚಿತ. ಈಗ ಹೊರಬಿದ್ದಿರುವ ಮಾಹಿತಿ ಪ್ರಕಾರ ಈ ತಮಿಳುನಾಡು ಸೂಪರ್ಸ್ಟಾರ್ ಖರೀದಿಸಲು ಆರ್ಸಿಬಿ (RCB) ಮಾಸ್ಟರ್ ಪ್ಲಾನ್ ಮಾಡಿದೆ.
ನಾರಾಯಣ್ ಜಗದೀಸನ್ಗೆ ಇಷ್ಟು ಬೇಡಿಕೆ ಹೆಚ್ಚಾಗಲು ಕಾರಣವೂ ಇದ್ದು, ಅವರು ಇದೇ ವರ್ಷ ಏಕದಿನ ಮಾದರಿಯಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ಸಾಕಷ್ಟು ರನ್ ಗಳಿಸಿದ್ದರು. ಐಪಿಎಲ್ 2023 ರ ಹರಾಜಿಗೂ ಮೊದಲು ಆಡಿದ ಈ ವೈಟ್ ಬಾಲ್ ಪಂದ್ಯಾವಳಿಯ 8 ಪಂದ್ಯಗಳಲ್ಲಿ ಅವರು 830 ರನ್ ಗಳಿಸಿದರು, ಇದರಲ್ಲಿ ಕೇವಲ 5 ಪಂದ್ಯಗಳಲ್ಲಿ 794 ರನ್ ಬಂದವು.
ವಿಜಯ್ ಹಜಾರೆ ಟ್ರೋಫಿಯಲ್ಲಿ ಶತಕಗಳ ಸರಮಾಲೆ ಕಟ್ಟಿದ ನಾರಾಯಣ್ ಜಗದೀಸನ್ ಒಂದರ ಹಿಂದೆ ಒಂದರಂತೆ ಐದು ಪಂದ್ಯಗಳಲ್ಲಿ ಐದು ಶತಕ ಸಿಡಿಸಿದರು. ಈ 5 ಪಂದ್ಯಗಳಲ್ಲಿ ಅವರ ಸ್ಕೋರ್‌ಗಳು 114*, 107, 168, 128 ಮತ್ತು 277 ಆಗಿವೆ. ಈ ಮೂಲಕ ಲಿಸ್ಟ್ ಎ ಪಂದ್ಯಗಳಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಬರೆದರು. ಇದೀಗ ಈ ಪ್ರದರ್ಶನಕ್ಕಾಗಿ ಪ್ರತಿಫಲವನ್ನು ಸಂಗ್ರಹಿಸುವ ಸರದಿಯಾಗಿದೆ.
RCB IPL Auction: ಮಿನಿ ಹರಾಜಿನಲ್ಲಿ ಈ ಇಬ್ಬರು ವಿದೇಶಿ ಆಟಗಾರರ ಖರೀದಿಗೆ ಆರ್ಸಿಬಿ ಮಾಸ್ಟರ್ ಪ್ಲಾನ್..!
ಈ ಬಾರಿಯ ಮಿನಿ ಹರಾಜಿನಲ್ಲಿ ಹಲವು ದೇಶೀ ಸ್ಟಾರ್ಗಳಿಗೆ ಭಾಗ್ಯದ ಬಾಗಿಲು ತೆರೆಯುವ ಸಾಧ್ಯತೆಗಳಿವೆ. ಅದರಲ್ಲೂ ಭಾರತದ ಟೂರ್ನಿಗಳಲ್ಲಿ ರನ್ ಸರದಾರನೆನಿಸಿಕೊಂಡಿರುವ ಜಗದೀಸನ್ ಖರೀದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂದಾಗಿದೆ ಎಂದು ವರದಿಯಾಗಿದೆ. ಮಧ್ಯಮ ಕ್ರಮಾಂಕವನ್ನು ಬಲಪಡಿಸಲು ಮತ್ತು ವಿಕೆಟ್ ಕೀಪಿಂಗ್ಗೆ ಆಯ್ಕೆಯಾಗಿ ನೋಡುತ್ತಿರುವ ಆರ್ಸಿಬಿಗೆ ಜಗದೀಸನ್ ಉತ್ತಮ ಆಯ್ಕೆಯಾಗಲಿದ್ದಾರೆ.
ಮಧ್ಯಮ ಕ್ರಮಾಂಕ ಮಾತ್ರವಲ್ಲದೆ, ಕಳೆದ ಸೀಸನ್ನಲ್ಲಿ ತಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಿದ್ದ ಆರ್‌ಸಿಬಿಯ ಓಪನಿಂಗ್ಸಮಸ್ಯೆಯನ್ನೂ ಜಗದೀಸನ್ ಪರಿಹರಿಸಬಹುದಾಗಿದೆ. ಆದರೆ, ಹರಾಜಿನಲ್ಲಿ ಇನ್ನೂ ಹಲವು ತಂಡಗಳ ಆಯ್ಕೆ ಜಗದೀಸನ್ ಅವರೇ ಆಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಧೋನಿಯಿಂದ ತಿರಸ್ಕರಿಸಲ್ಪಟ್ಟ ಈ ಬ್ಯಾಟ್ಸ್‌ಮನ್ ಅನ್ನು ಖರೀದಿಸಲು ಆರ್ಸಿಬಿ ಇತರ ತಂಡಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಬೇಕಾಗುತ್ತದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:23 am, Thu, 22 December 22